ಕರಾವಳಿ

 ಅಡಿಕೆಗೆ ಕೊಳೆರೋಗ ಬಾಧಿಸಿದೆಯೇ…? ಹತೋಟಿಗೆ ಮುಂಜಾಗ್ರತಾ ಕ್ರಮ

(ನ್ಯೂಸ್ ಕಡಬ) newskadaba.com ಮ0ಗಳೂರು ಜೂ.12. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯು ಚುರುಕುಗೊಂಡಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗೆ ಕೊಳೆರೋಗವು ಬಾಧಿಸಿ ಹೆಚ್ಚಿಗೆ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ರೋಗವನ್ನು ಹತೋಟಿ ಮಾಡಲು ರೈತರು ಮುಂಗಾರು ಪ್ರಾರಂಭವಾದಾಗಲೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಇದರ ಭಾಗವಾಗಿ ಎಲ್ಲಾ ರೈತರು ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ತಯಾರಿಸಿ ಸಿಂಪರಣೆ ಮಾಡಲು ಕೋರಲಾಗಿದ್ದು, ವೈಜ್ಞಾನಿಕವಾಗಿ ಬೋರ್ಡೋ ದ್ರಾವಣ ತಯಾರಿಕೆ ವಿಧಾನ ಈ ಕೆಳಗಿನಂತಿದೆ. ಶೇ. […]

 ಅಡಿಕೆಗೆ ಕೊಳೆರೋಗ ಬಾಧಿಸಿದೆಯೇ…? ಹತೋಟಿಗೆ ಮುಂಜಾಗ್ರತಾ ಕ್ರಮ Read More »

ಕರಾವಳಿ

ಮುಂದಿನ ನಾಲ್ಕು ದಿನ ಭಾರೀ ಮಳೆ ಸಂಭವ: ಸಾರ್ವಜನಿಕರು ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.12. ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಜೂನ್ 13 ರಿಂದ 16 ರವರೆಗೆ ಭಾರೀ ಮಳೆ ಬೀಳುವ ಸಂಭವವಿರುವುದರಿಂದ ಭಾರತ ಹವಾಮಾನ ಇಲಾಖೆ, ಬೆಂಗಳೂರು ಇವರು ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಿದ್ದಾರೆ. ತಗ್ಗು ಪ್ರದೇಶದಲ್ಲಿ ಹಾಗೂ ನದಿ ತೀರದಲ್ಲಿ ವಾಸಿಸುವ ಸಾರ್ವಜನಿಕರು ಸಹ ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ನಾಲ್ಕು ದಿನ ಭಾರೀ ಮಳೆ ಸಂಭವ: ಸಾರ್ವಜನಿಕರು ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ಸೂಚನೆ Read More »

ಕರಾವಳಿ

ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಂಗಳೂರಿನ ಪ್ರತಿಷ್ಠಿತ ಸಿಬಿಎಸ್ಸಿ ವಿದ್ಯಾಸಂಸ್ಥೆಯಾದ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಡಬದ ವಿದ್ಯಾರ್ಥಿನಿಯೋರ್ವಳು 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸುವುದರ ಮೂಲಕ ಕಡಬಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಈಕೆಯು ಕಡಬದ ಕಳಾರ ನಿವಾಸಿ ಪ್ರಸ್ತುತ ವಿದೇಶದಲ್ಲಿ ಉದ್ಯಮವನ್ನು ಹೊಂದಿರುವ ಅಬ್ದುಲ್ ನಸೀರ ಹಾಗೂ ಜಮೀಳಾ ದಂಪತಿಯ ಪುತ್ರಿ.

ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ Read More »

ಕರಾವಳಿ

ಮಳೆಗೆ ಕುಸಿದ ಕಳಾರ ಶಾಲೆಗೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ಎರಡು ದಿನಗಳ ಹಿಂದೆ ಕುಸಿದ ಕಳಾರ ಸರಕಾರಿ ರಿಯ ಪ್ರಾಥಮಿಕ ಶಾಲೆಗೆ ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್ ಹಾಗೂ ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಡಬ ಗ್ರಾ.ಪಂ. ಅಧ್ಯಕ್ಷರಾದ ಬಾಬು ಮುಗೇರ, ಸದಸ್ಯರಾದ ಹಾಜಿ ಹನೀಫ್ ಕೆ.ಎಂ., ಶ್ರೀಮತಿ ಶಾಲಿನಿ ಸತೀಶ್, ಮೊದಲಾದವರು ಉಪಸ್ಥಿತರಿದ್ದರು.

ಮಳೆಗೆ ಕುಸಿದ ಕಳಾರ ಶಾಲೆಗೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಭೇಟಿ Read More »

ಕರಾವಳಿ

ಗೋಳಿತ್ತಡಿ: ಭಿನ್ನ ಕೋಮಿನ ಜೋಡಿಗೆ ತಂಡದಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಇಲ್ಲಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಪೇಟೆಯಲ್ಲಿ ಶನಿವಾರ ರಾತ್ರಿ ಅನ್ಯಕೋಮಿನ ವ್ಯಕ್ತಿಯ ಜೊತೆ ಮುಸ್ಲಿಂ ಮಹಿಳೆಯೋರ್ವಳು ಬೈಕಿನಲ್ಲಿ ತೆರಳಿದ್ದನ್ನು ಪ್ರಶ್ನಿಸಿ ಸ್ಥಳೀಯರ ತಂಡವೊಂದು ಹಲ್ಲೆ ನಡೆಸಿದೆ ಎಂದು ಕಡಬ ಠಾಣೆಗೆ ದೂರು ನೀಡಿದ ಘಟನೆ ಭಾನುವಾರದಂದು ನಡೆದಿದೆ. ಕೊೖಲ ಗ್ರಾಮದ ಕುದುಲೂರು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ಸೆಲ್ವಂ ಎಂಬವರ ಪುತ್ರ ಬಾಲರಾಜ್(48) ಶನಿವಾರ ಉಪ್ಪಿನಂಗಡಿಯಿಂದ ಕುದುಲೂರಿಗೆ ಬರುವಾಗ ಸೋಮವಾರಪೇಟೆಯ ಮುಸ್ಲಿಂ ಮಹಿಳೆಯನ್ನು ಬೈಕಿನಲ್ಲಿ

ಗೋಳಿತ್ತಡಿ: ಭಿನ್ನ ಕೋಮಿನ ಜೋಡಿಗೆ ತಂಡದಿಂದ ಹಲ್ಲೆ Read More »

ಕರಾವಳಿ

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಪುಟಾಣಿಗಳಿಗೆ ಮೊಟ್ಟೆ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ವತಿಯಿಂದ ಅಂಗನವಾಡಿ ಪುಟಾಣಿಗಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಪುಟಾಣಿಗಳಿಗೆ ಮೊಟ್ಟೆ ವಿತರಿಸಿ ಮಾತನಾಡಿ, ಸರಕಾರ ಮಕ್ಕಳ ಆರೋಗ್ಯ ಹಾಗೂ ಅವರ ಪೋಷಣೆಗೆ ಸಹಕರಿಸುತ್ತಿದೆ. ಅಗತ್ಯ ಪೋಷಕಾಂಶವುಳ್ಳ ಮೊಟ್ಟೆ ಮಕ್ಕಳ ಆರೋಗ್ಯಪುರ್ಣ ಬೆಳವಣಿಗೆಗೆ ಪುರಕ ಎಂದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಸರಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಪುಟಾಣಿಗಳಿಗೆ ಮೊಟ್ಟೆ ವಿತರಣೆ Read More »

ಕರಾವಳಿ

ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.11. ನದಿಯಲ್ಲಿ ಮುಳುಗಿ ಮೃತಪಟ್ಟ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲಕ್ಕೆತ್ತಿದ ಮುಸ್ಲಿಮರಿಗೆ ಶವವನ್ನು ಆಸ್ಪತ್ರೆಗೆ ಸಾಗಿಸಲು ಕ್ರಿಶ್ಚಿಯನ್ ಸಹೋದರನೋರ್ವ ತನ್ನ ಅಂಬ್ಯುಲೆನ್ಸ್ ನ್ನು ನೀಡಿ ಸಹಕರಿಸಿದ ಮಾನವೀಯ ಘಟನೆಗೆ ಬಂಟ್ವಾಳದ ನಗರ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗೂಡಿನ ಬಳಿ ಶನಿವಾರ ಸಾಕ್ಷಿಯಾಯಿತು. ಸದಾ ಒಂದಿಲ್ಲೊಂದು ಕೋಮು ಪ್ರಚೋದಿತ ಘಟನೆಗಳಿಂದ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಮಾನವೀಯ ಘಟನೆಗಳೂ ನಡೆಯುತ್ತದೆ ಎಂಬುವುದಕ್ಕೆ ಪುಷ್ಟಿ ನೀಡಿತು. ಪುದು

ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್ Read More »

ಕರಾವಳಿ

ಉಪ್ಪಿನಂಗಡಿ: ಮೊಬೈಲ್ ಅಂಗಡಿಯಿಂದ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.10. ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಬಾಲಾಜಿ ಮೊಬೈಲ್ ಅಂಗಡಿಯ ಹಂಚು ತೆಗೆದು ಒಳನುಗ್ಗಿದ ಕಳ್ಳರು 5 ಸಾವಿರ ನಗದಿನೊಂದಿಗೆ ದುರಸ್ತಿಗೆ ಬಂದಿದ್ದ ಎರಡು ಹಳೆಯ ಮೊಬೈಲ್ ಪೋನ್ ಗಳನ್ನು ಕದ್ದೊಯ್ದ ಘಟನೆ ಕಳೆದ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ. ಅಂಗಡಿಯಲ್ಲಿದ್ದ 5 ಸಾವಿರ ರೂಪಾಯಿ ನಗದು ಹಾಗೂ ದುರಸ್ತಿಗೆ ಬಂದಿದ್ದ ಎರಡು ಹಳೆಯ ಮೊಬೈಲ್ ಪೋನ್ಗಳನ್ನು ಕದ್ದೊಯ್ದಿದ್ದಾರೆ. ಕಳವಾದ ಮೊಬೈಲ್ ಪೋನ್ಗಳ ಮೌಲ್ಯ ಆರು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಶನಿವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ

ಉಪ್ಪಿನಂಗಡಿ: ಮೊಬೈಲ್ ಅಂಗಡಿಯಿಂದ ಕಳ್ಳತನ Read More »

ಕರಾವಳಿ

ಕಡಬ: ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ಬಿಜೆಪಿ ಕಾರ್ಯಕರ್ತರು ಅಧಿಕಾರದ ಆಸೆಯಿಲ್ಲದೆ ಪಕ್ಷದ ವಿಚಾರಗಳಿಗೆ ಮಹತ್ವ ನೀಡಿ ಸಂಘಟನೆ ಮೂಲಕ ಪಕ್ಷ ಬೆಳೆಸುತ್ತಿದ್ದಾರೆ. ಅಧುನಿಕ ತಂತ್ರಜ್ಞಾನ ಮೂಲಕ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಚಾರಕ್ಕೆ ಒತ್ತು ಕೊಡುವ ಸರಕಾರ ನಮ್ಮನ್ನಾಳುತ್ತಿದೆ. ಅಭಿವೃದ್ದಿಯೆನ್ನುವುದು ರಾಜ್ಯದಲ್ಲಿ ಮರೀಚಿಕೆಯಾಗಿದೆ. ಅಭಿವೃದ್ದಿಯ ದೂರದೃಷ್ಟಿಯಿಲ್ಲದೆ

ಕಡಬ: ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಸಭೆ Read More »

ಕರಾವಳಿ

ಎಡೆಬಿಡದೆ ಸುರಿಯತ್ತಿರುವ ಮಳೆ: ಕಳಾರ ಶಾಲಾ ಕಟ್ಟಡ ಕುಸಿತ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಳಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೊಂದು ಕುಸಿದಿರುವ ಘಟನೆ ಶನಿವಾರದಂದು ನಡೆದಿದೆ. ಕಟ್ಟಡವು ಶಿಥಿಲಗೊಂಡಿದ್ದರಿಂದ ಪಕ್ಕದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿತ್ತೆನ್ನಲಾಗಿದೆ. ಆದರೆ ಬೇರೆ ತರಗತಿಗಳಿಗೆ ಹೊಂದಿಕೊಂಡ ಈ ಕಟ್ಟಡದ ಬಳಿಯಿಂದಾಗಿ ವಿದ್ಯಾರ್ಥಿಗಳು ಸಾಗುತ್ತಿದ್ದರು. ಶನಿವಾರದಂದು ಬೆಳಗ್ಗಿನ ಜಾವ ಘಟನೆ ನಡೆದಿದ್ದು, ಆ ಸಮಯದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ. 1997ರಲ್ಲಿ ಸ್ಥಾಪಿಸಲಾದ ಕಟ್ಟಡವು ಅಕ್ರಮ ಕಾಮಗಾರಿಯಿಂದಾಗಿ ಶಿಥಿಲಗೊಂಡಿದ್ದು, ಅದನ್ನು

ಎಡೆಬಿಡದೆ ಸುರಿಯತ್ತಿರುವ ಮಳೆ: ಕಳಾರ ಶಾಲಾ ಕಟ್ಟಡ ಕುಸಿತ Read More »

ಕರಾವಳಿ
Scroll to Top