ಕರಾವಳಿ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.14. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 2017-18ರ ಸಾಲಿಗೆ ಸ್ವಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅಲ್ಪಸಂಖ್ಯಾತ ವರ್ಗಗಳ ಹಾಗೂ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಶೇಕಡಾ 33%ರಷ್ಟು ಮತ್ತು ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇಕಡಾ 3%ರಷ್ಟು ಆದ್ಯತೆ ಮೀಸಲಿರಿಸಲಾಗಿದೆ.    ಅರ್ಜಿದಾರರು ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಸಿಖ್ಖರು, ಬೌದ್ಧ) ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ […]

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಮರ್ಧಾಳ: ಡೆಂಗ್ಯೂ ಮಾಹಿತಿ ಜನಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಜೂ.14. ಸಮುದಾಯ ಆರೋಗ್ಯ ಕೇಂದ್ರ ಕಡಬ, ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ ಮತ್ತು ಗ್ರಾಮ ಪಂಚಾಯತ್ ಮರ್ಧಾಳ ಹಾಗೂ ಸೈಂಟ್ ಮೇರಿಸ್ ಪ್ರೌಢ ಶಾಲೆ ಮರ್ಧಾಳ ಇದರ ಸಹಯೋಗದೊಂದಿಗೆ ಆರೋಗ್ಯ ಮಾಹಿತಿ ಜನಜಾಗೃತಿ ಜಾಥಾವು ಮರ್ಧಾಳದಲ್ಲಿ ನಡೆಯಿತು. ಮರ್ಧಾಳ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಆರೋಗ್ಯ ಮಾಹಿತಿಯ ಕರಪತ್ರ ಬಿಡುಗಡೆ ಮಾಡುವ ಮೂಲಕ ಐತ್ತೂರು ತಾ.ಪಂ. ಸದಸ್ಯರಾದ ಪಿ.ವೈ. ಕುಸುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಡಬ ಸಮುದಾಯ

ಮರ್ಧಾಳ: ಡೆಂಗ್ಯೂ ಮಾಹಿತಿ ಜನಜಾಗೃತಿ ಜಾಥಾ Read More »

ಕರಾವಳಿ

ಕಲ್ಲಡ್ಕ ಗಲಭೆ ಹಿನ್ನೆಲೆ: ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ಕಳೆದ ಹಲವಾರು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕ ಪರಿಸರದಲ್ಲಿ ಮಂಗಳವಾರದಂದು ಸಂಜೆ ನಡೆದ ಗಲಭೆ ಹಿನ್ನೆಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂ.13 ನೇ ಮಂಗಳವಾರ ಮಧ್ಯರಾತ್ರಿಯಿಂದ ಜೂ.14 ನೇ ಬುಧವಾರ ಮಧ್ಯರಾತ್ರಿ 12.00 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ಪ್ರಸ್ತಾವನೆಯಂತೆ ಅಪರ ಜಿಲ್ಲಾಧಿಕಾರಿ ಕುಮಾರ್ ಆದೇಶಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ

ಕಲ್ಲಡ್ಕ ಗಲಭೆ ಹಿನ್ನೆಲೆ: ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Read More »

ಕರಾವಳಿ

ಮೆಲ್ಕಾರ್: ಯುವಕನಿಗೆ ತಲವಾರು ದಾಳಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.14. ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೋರ್ವನಿಗೆ ದುಷ್ಕರ್ಮಿಗಳಿಬ್ಬರ ತಂಡ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಮೆಲ್ಕಾರ್ ಆರ್.ಆರ್. ಮಿಲ್ ಬಳಿ ನಡೆದಿದೆ. ಮೆಲ್ಕಾರ್ ಪೆಟ್ರೋಲ್ ಬಂಕ್ ಮಾಲಕನ ಪುತ್ರ ಪವನ್ (28) ದುಷ್ಕರ್ಮಿಗಳ ದಾಳಿಗೊಳಗಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್ ಪೆಟ್ರೋಲ್ ಬಂಕ್‌ನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮೆಲ್ಕಾರ್ ಆರ್.ಆರ್. ಮಿಲ್ ಬಳಿ ಪೊದೆಯಲ್ಲಿ ಅವಿತು ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಬೈಕನ್ನು ಅಡ್ಡಗಟ್ಟಿ ತಲವಾರಿನಿಂದ ದಾಳಿ

ಮೆಲ್ಕಾರ್: ಯುವಕನಿಗೆ ತಲವಾರು ದಾಳಿ Read More »

ಕರಾವಳಿ

ಬಲ್ಯ: ಸೋಲಾರ್ ಪ್ಯಾನೆಲ್ ಕಳವು

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಇಲ್ಲಿಗೆ ಸಮೀಪದ ಬಲ್ಯ ಗ್ರಾಮದ ಗೋವಿಂದಕಟ್ಟೆಯಲ್ಲಿ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದ್ದ ಸೋಲಾರ್ ದೀಪದ ಪ್ಯಾನೆಲ್ಗಳನ್ನು ಕಿಡಿಗೇಡಿಗಳು ಸೋಮವಾರ ಕಳವುಗೈದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಕುಟ್ರುಪ್ಪಾಡಿ ಗ್ರಾ.ಪಂ. ಹಾಗೂ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಭಾಗದಲ್ಲಿ ಈ ಹಿಂದೆ ಕಳ್ಳರು ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಈ ಬಾರಿ ಮತ್ತೆ ಕಳವಾಗಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಗ್ರಾಮಸ್ಥರಾದ ಶಿಜೋ ಜಾರ್ಜ್, ಜೋಯಲ್, ಭರತ್

ಬಲ್ಯ: ಸೋಲಾರ್ ಪ್ಯಾನೆಲ್ ಕಳವು Read More »

ಕರಾವಳಿ

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಜೂ.13. ಮನೆಗೆ ಹಣ್ಣುಹಂಪಲು ತೆಗೆದುಕೊಂಡು ಹೋಗುತ್ತಿದ್ದ ಯುವಕನಿಗೆ ತಂಡವೊಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ನಿವಾಸಿ ಅಬೂಸಾಲಿ ಎಂಬವರ ಪುತ್ರ ಖಲೀಲ್ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರತ್ನಾಕರ್ ಶೆಟ್ಟಿ ಹಾಗೂ ರವಿಭಂಡಾರಿ ಎಂಬವರು ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ. ರತ್ನಾಕರ ಶೆಟ್ಟಿಯ ಕೈಗಳಿಗೂ ಗಾಯಗಳಾಗಿದ್ದು, ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಕಂಡುಬಂದಿದ್ದು,

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ Read More »

ಕರಾವಳಿ

ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆಗೆ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.13. ಅರಿವು ಯೊಜನೆಯಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂಸಿ.ಎ, ಎಂ.ಟೆಕ್, ಪಿ.ಹೆಚ್.ಡಿ, ಎಂ.ಇ, ಎಂ.ಎಸ್ (ಡಿಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೊಮೊ, ನಸಿರ್ಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ, ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್, ಮಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಿಕಲ್ ಮ್ಯಾನೆಜ್ಮೆಂಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರ ದಿಂದ ರೂ. 75 ಸಾವಿರದವರೆಗೆ

ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆಗೆ ಅರ್ಜಿ ಆಹ್ವಾನ Read More »

ಕರಾವಳಿ

ನಾಳೆ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಅಗೇಲು ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಹಲವು ಕಾರಣಿಕಗಳೊಂದಿಗೆ ಪ್ರಸಿದ್ಧಿಯನ್ನು ಪಡೆದಿರುವ ಪುತ್ತೂರು ತಾಲೂಕಿನ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜೂ.14ನೇ ಬುಧವಾರ ಸಂಕ್ರಾಂತಿಯಂದು ದೇವಾಲಯದ ವಠಾರದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಶ್ರೀ ಹೊಸಮ್ಮ ದೇವಿ ಸನ್ನಿಧಾನದಲ್ಲಿ ಶ್ರೀದೇವಿಗೆ ಅಗೇಲು ಸೇವೆ ನಡೆಯಲಿದೆ. ಅಗೇಲು ಸೇವೆ ಸಲ್ಲಿಸುವ ಭಕ್ತಾಧಿಗಳು ಮುಂಚಿತವಾಗಿ ತಿಳಿಸಬೇಕಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಅಶೋಕ್ ಹೆಗ್ಡೆ: 9449107356 ಹಾಗೂ ರತ್ನಕುಮಾರ್: 9902601639 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ನಾಳೆ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಅಗೇಲು ಸೇವೆ Read More »

ಕರಾವಳಿ

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.13. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಕಡಂಬು ಎಂಬಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತ ಸವಾರನನ್ನು ಕಡೇಶಿವಾಲಯ ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಪುತ್ರ ಗುರುಪ್ರಸಾದ್ ಎಂದ್ ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಹಾಗೂ ಕಡೇಶಿವಾಲಯದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು Read More »

ಕರಾವಳಿ
Scroll to Top