ಉಪ್ಪಿನಂಗಡಿ: ಮೊಬೈಲ್ ಅಂಗಡಿಯಿಂದ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.10. ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಬಾಲಾಜಿ ಮೊಬೈಲ್ ಅಂಗಡಿಯ ಹಂಚು ತೆಗೆದು ಒಳನುಗ್ಗಿದ ಕಳ್ಳರು 5 ಸಾವಿರ ನಗದಿನೊಂದಿಗೆ ದುರಸ್ತಿಗೆ ಬಂದಿದ್ದ ಎರಡು ಹಳೆಯ ಮೊಬೈಲ್ ಪೋನ್ ಗಳನ್ನು ಕದ್ದೊಯ್ದ ಘಟನೆ ಕಳೆದ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಅಂಗಡಿಯಲ್ಲಿದ್ದ 5 ಸಾವಿರ ರೂಪಾಯಿ ನಗದು ಹಾಗೂ ದುರಸ್ತಿಗೆ ಬಂದಿದ್ದ ಎರಡು ಹಳೆಯ ಮೊಬೈಲ್ ಪೋನ್ಗಳನ್ನು ಕದ್ದೊಯ್ದಿದ್ದಾರೆ. ಕಳವಾದ ಮೊಬೈಲ್ ಪೋನ್ಗಳ ಮೌಲ್ಯ ಆರು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಶನಿವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್ಐ ನಂದಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Scroll to Top