ಕರಾವಳಿ

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ.02. ಅಂಗಡಿಗೆ ಸಾಮಾನು ತರಲೆಂದು ಹೋದ ಮಹಿಳೆಯೊರ್ವಳು ನಾಪತ್ತೆಯಾಗಿರುವ ಘಟನೆ ಜು.29ರಂದು ನಡೆದಿದ್ದು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಕುಡಾಲ ನಿವಾಸಿ ಸಿ. ರವಿಚಂದ್ರನ್ ಎಂಬವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ರವಿಚಂದ್ರನ್ ಪತ್ನಿ ಹಾಗೂ 2 ವರ್ಷದ ಮಗುವಿನೊಂದಿಗೆ ಕುಡಾಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ರವಿಚಂದ್ರನ್ ಅವರ ಅಕ್ಕ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಕಾರಣ ಜು.24ರಿಂದ ಮಂಗಳೂರಿನ ಆಸ್ಪತ್ರೆಯಲ್ಲೇ ಇದ್ದು, ಜು.29ರಂದು ಸಂಜೆ ಮನೆಯ […]

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕಟ್ಟಡ ಪರವಾನಗಿ ನೀಡಲು ಲಂಚ ಕೇಳಿದ್ದಾರೆ ಎಂದು ಉದ್ಯಮಿ ಕೆ.ಟಿ. ತೋಮ್ಸನ್ ಮಾಡಿರುವ ಅರೋಪ ಆಧಾರ ರಹಿತವಾಗಿದ್ದು, ಈ ವಿಚಾರದಲ್ಲಿ ಯಾವುದೇ ಸತ್ಯ ಪ್ರಮಾಣಕ್ಕೆ ಸಿದ್ದ ಎಂದು ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶಾರದ ದಿನೇಶ್ ಹೇಳಿದರು. ಅವರು ಬುಧವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪಂಚಾಯಿತಿ ಸದಸ್ಯಳಾಗಿ ಅಧ್ಯಕ್ಷಳಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪುರಕವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಉತ್ತಮ ರೀತಿಯಲ್ಲಿ ಸಮಾಜ ಸೇವೆ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ Read More »

ಕರಾವಳಿ

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.02. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ನೆಲ್ಯಾಡಿಯಲ್ಲಿ ಮದ್ಯದಂಗಡಿಯೊಂದಕ್ಕೆ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ನೆಲ್ಯಾಡಿಯಲ್ಲಿಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯ, ನೆಲ್ಯಾಡಿ-ಕೌಕ್ರಾಡಿ ಗ್ರಾಮಗಳ ಎಲ್ಲ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಸಂಘಟಿಸಲಾಗಿರುವ ಈ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ 220 ಮೀಟರ್ ಅಂತರದಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳನ್ನು

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಕರಾವಳಿ

ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.01. ಇಲ್ಲಿನ ಪಂಜ ರಸ್ತೆಯ ಅಜ್ಜಿಕಟ್ಟೆ ಎಂಬಲ್ಲಿ ಸೇರಿದ ಆಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಾಳುಗಳನ್ನು 102 ನೇ ನೆಕ್ಕಿಲಾಡಿ ಗ್ರಾಮದ N.Coop ನಿವಾಸಿಗಳಾದ ವಿಶ್ವನಾಥ್(18) ಹಾಗೂ ಅಲಗರಾಜ್(48) ಎಂದು ಗುರುತಿಸಲಾಗಿದೆ. ಅಲಗರಾಜ್ ರವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಕಡಬಕ್ಕೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ತೂಫಾನ್

ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ Read More »

ಕರಾವಳಿ

ಪುತ್ತಿಗೆ: ಬಾವಿಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ ► ಭಾನುವಾರದಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅವಿವಾಹಿತ ಯುವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.01. ನವಜಾತ ಶಿಶುವಿನ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ನೀರಪಲ್ಕೆ ಎಂಬಲ್ಲಿ ಮಂಗಳವಾರದಂದು ಬೆಳಿಗ್ಗೆ ನಡೆದಿದೆ. ಪುತ್ತಿಗೆ ಗ್ರಾಮದ ಅವಿವಾಹಿತ ಯುವತಿಯೊಬ್ಬಳು ಭಾನುವಾರದಂದು ಇದೇ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಾವಿಗೆ ಹಾರಿರುವುದನ್ನು ತಿಳಿದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ‌ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದ್ದರು. ಅಕೆ ಗರ್ಭಿಣಿಯಾಗಿದ್ದು ಇದೇ ಕಾರಣಕ್ಕಾಗಿ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿರಬಹುದೆಂದು‌ ಅಂದಾಜಿಸಲಾಗಿದೆ. ಬಾವಿಗೆ ಹಾರಿದ ಸಂದರ್ಭದಲ್ಲಿ ಗರ್ಭಪಾತವಾಗಿರಬಹುದೆಂದು ಅಂದಾಜಿಸಲಾಗಿದೆ.

ಪುತ್ತಿಗೆ: ಬಾವಿಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ ► ಭಾನುವಾರದಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅವಿವಾಹಿತ ಯುವತಿ Read More »

ಕರಾವಳಿ

ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಕಾಂಗ್ರೇಸಿಗೆ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಡಬ ಬ್ಲಾಕ್ ಕಾಂಗೇಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಅವರ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜಿನಾಮೆ ನೀಡಿದ ಘಟನೆ ಸೋಮವಾರದಂದು ನಡೆದಿದೆ. ಪಕ್ಷದ ಸಮಾವೇಶಕ್ಕೆ ಆಗಮಿಸಿದ್ದ ಪಕ್ಷದ ನೂತನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಗುರುವಪ್ಪನವರು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದರು. ತಾನು ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದಿದ್ದು, ಎರಡು ಎಸ್ಸಿ ಘಟಕದ

ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಕಾಂಗ್ರೇಸಿಗೆ ರಾಜೀನಾಮೆ Read More »

ಕರಾವಳಿ

ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.31. ಬಿಳಿನೆಲೆ ಗ್ರಾಮ ಪಂಚಾಯತ್ಗೆ ಕಟ್ಟಡ ಪರವಾನಿಗೆ ಪಡೆಯಲು ಸರಿಯಾದ ದಾಖಲೆಗಳನ್ನು ನೀಡಿದ್ದರೂ ಪಂಚಾಯತಿಯಲ್ಲಿ ಪರವಾನಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರಲ್ಲದೆ ಬೇರೆಯವರ ವೈಯಕ್ತಿಯ ವಿಚಾರದಲ್ಲಿ ನನಗೆ ವಿನಾಃ ಕಾರಣ ಬಡಾವಣೆ ನಿರ್ಮಾಣ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕೆ.ಟಿ. ತೋಮ್ಸನ್ ಆರೋಪಿಸಿದ್ದಾರೆ. ಅವರು ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಸ.ನಂ. 9/4ಎರಲ್ಲಿ 0/07 ಎಕ್ರೆ ಜಾಗವು ನನ್ನ ಪಟ್ಟಾ ಜಾಗವಾಗಿರುತ್ತದೆ. ಈ ಜಾಗವು ನೆಟ್ಟಣದಿಂದ ಸುಮಾರು 750 ಮೀಟರ್ ದೂರದಲ್ಲಿರುತ್ತದೆ.

ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ Read More »

ಕರಾವಳಿ

ಜಿಲ್ಲೆಯಲ್ಲಿ ಎಂಟು ಕ್ಷೇತ್ರದಲ್ಲೂ ಕಾಂಗ್ರೇಸ್ ಗೆಲುವು ನಮ್ಮ ಗುರಿ ► ಕಡಬ ಕಾಂಗ್ರೇಸ್ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್

(ನ್ಯೂಸ್ ಕಡಬ) newskadaba.com ಕಡಬ, ಜು.31. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ ನೀಡಿರುವ ಭರವಸೆಯನ್ನು ಈಡೇರಿಸಿ ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ ಆಧಿಕಾರಕ್ಕೆ ಬರುವುದು ಖಚಿತವಾಗಿದ್ದು ದ.ಕ. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಈಗಾಗಲೇ ಏಳು ಕ್ಷೇತ್ರ ನಮ್ಮ ಕೈಯಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಎಂಟರಲ್ಲಿ ಎಂಟು ಕ್ಷೇತ್ರವೂ ಕಾಂಗ್ರೇಸ್ ತೆಕ್ಕೆಗೆ ತರುವುದು ನಮ್ಮಲ್ಲೆರ ಗುರಿಯಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಕರೆ ನೀಡಿದರು. ಅವರು ಸೋಮವಾರದಂದು ಕಡಬ ಅನುಗ್ರಹ ಸಭಾಭವನದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ ನಡೆದ

ಜಿಲ್ಲೆಯಲ್ಲಿ ಎಂಟು ಕ್ಷೇತ್ರದಲ್ಲೂ ಕಾಂಗ್ರೇಸ್ ಗೆಲುವು ನಮ್ಮ ಗುರಿ ► ಕಡಬ ಕಾಂಗ್ರೇಸ್ ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ Read More »

ಕರಾವಳಿ

ನದಿಗೆ ಹಾರಿ ಆತ್ಮಹತ್ಯೆ ಮಾಡಿದವರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.31. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತದೇಹ ಸೋಮವಾರದಂದು ಸೇತುವೆಯ ಸುಮಾರು 300 ಮೀಟರ್ ಕೆಳಗಡೆ ಕಂಡುಬಂದಿದೆ. ಮೂಲತಃ ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ದಿ.ಕುಶಾಲಪ್ಪ ಗೌಡರ ಪುತ್ರ ಧರ್ಮಪಾಲ(43ವ.) ಎಂಬವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಪತ್ನಿ ವಿಶಾಲಾಕ್ಷಿಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟ್ಟಿದ್ದ ಅವರು ಕಡಬಕ್ಕೆ ಬಂದು ಅಲ್ಲಿಂದ

ನದಿಗೆ ಹಾರಿ ಆತ್ಮಹತ್ಯೆ ಮಾಡಿದವರ ಮೃತದೇಹ ಪತ್ತೆ Read More »

ಕರಾವಳಿ

ಇದು ಬಸ್ಸು ನಿಲ್ದಾಣವೋ…? ಅಲ್ಲ ಕಸದ ತೊಟ್ಟಿಯೋ…? ► ಅಸಹ್ಯ ಹುಟ್ಟಿಸುವ ನೆಟ್ಟಣ ಸಾರ್ವಜನಿಕ ಬಸ್ಸು ತಂಗುದಾಣ

(ನ್ಯೂಸ್ ಕಡಬ) newskadaba.com ಕಡಬ, ಜು.31. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮ ಪಂಚಾಯತ್ ಅಧೀನದಲ್ಲಿರುವ ನೆಟ್ಟಣ ಪೇಟೆಯಲ್ಲಿನ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಕಸ ಕಡ್ಡಿಗಳು ತುಂಬಿದ್ದು, ನೋಡೋದಕ್ಕೆ ಅಸಹ್ಯ ಅನಿಸುತ್ತಿದೆ. ದಕ್ಷಿಣ ಭಾರತದ ಪ್ರಮುಖ ದೇವಸ್ಥಾನವಾದ ಕುಕ್ಕೇ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣವು ಇದೇ ನೆಟ್ಟಣದಲ್ಲಿದೆ. ರೈಲಿನಲ್ಲಿ ಆಗಮನಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯಬೇಕೆಂದರೆ ಇದೇ ಬಸ್ಸು ನಿಲ್ದಾಣವನ್ನೇ ಆಶ್ರಯಿಸಬೇಕಾಗಿದೆ‌. ಇಲ್ಲಿ ಕಸಕಡ್ಡಿಗಳು ಸೇರಿದಂತೆ ಮದ್ಯದ ಬಾಟಲಿಗಳನ್ನು ಹಾಕಿರುವುದರಿಂದ ಪ್ರಜ್ಞಾವಂತರನ್ನು ಮುಜುಗರಕ್ಕೀಡುಮಾಡುತ್ತಿದೆ‌. ತಕ್ಷಣವೇ

ಇದು ಬಸ್ಸು ನಿಲ್ದಾಣವೋ…? ಅಲ್ಲ ಕಸದ ತೊಟ್ಟಿಯೋ…? ► ಅಸಹ್ಯ ಹುಟ್ಟಿಸುವ ನೆಟ್ಟಣ ಸಾರ್ವಜನಿಕ ಬಸ್ಸು ತಂಗುದಾಣ Read More »

ಕರಾವಳಿ
Scroll to Top