ಪುತ್ತಿಗೆ: ಬಾವಿಯಲ್ಲಿ‌ ನವಜಾತ ಶಿಶುವಿನ ಶವ ಪತ್ತೆ ► ಭಾನುವಾರದಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅವಿವಾಹಿತ ಯುವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.01. ನವಜಾತ ಶಿಶುವಿನ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾದ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ನೀರಪಲ್ಕೆ ಎಂಬಲ್ಲಿ ಮಂಗಳವಾರದಂದು ಬೆಳಿಗ್ಗೆ ನಡೆದಿದೆ.

ಪುತ್ತಿಗೆ ಗ್ರಾಮದ ಅವಿವಾಹಿತ ಯುವತಿಯೊಬ್ಬಳು ಭಾನುವಾರದಂದು ಇದೇ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಾವಿಗೆ ಹಾರಿರುವುದನ್ನು ತಿಳಿದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ‌ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದ್ದರು. ಅಕೆ ಗರ್ಭಿಣಿಯಾಗಿದ್ದು ಇದೇ ಕಾರಣಕ್ಕಾಗಿ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿರಬಹುದೆಂದು‌ ಅಂದಾಜಿಸಲಾಗಿದೆ. ಬಾವಿಗೆ ಹಾರಿದ ಸಂದರ್ಭದಲ್ಲಿ ಗರ್ಭಪಾತವಾಗಿರಬಹುದೆಂದು ಅಂದಾಜಿಸಲಾಗಿದೆ.

Scroll to Top