ಕರಾವಳಿ

ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ ರೈತರಿಗೆ ಅನೂಕಲಕಾರಿಯಾಗಿರುವ ಸಾಲ ಯೋಜನೆ

(ನ್ಯೂಸ್‌ ಕಡಬ) newskadaba.com,ಜ.24 ಬೆಂಗಳೂರು: ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲಕ್ಕೆ ನಿರೀಕ್ಷೆಗೂ ಮೀರಿ ಬೇಡಿಕೆ ಹೆಚ್ಚಿದ್ದು, ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. ಕೃಷಿ ಚಟುವಟಿಕೆ ಪ್ರೋತ್ಸಾಹಿಸಲು ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಯ ಜೀವನಾಡಿಯಾದ ಸಹಕಾರ ವಲಯದ ಬಲವರ್ಧನೆಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು 2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಸಹಕಾರ ಸಾಲ ಸಂರಚನೆಯ […]

ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ ರೈತರಿಗೆ ಅನೂಕಲಕಾರಿಯಾಗಿರುವ ಸಾಲ ಯೋಜನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

“ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಮ್ಯಾಕ್ಸ್ ಮಂಜು”

(ನ್ಯೂಸ್‌ ಕಡಬ) newskadaba.com,ಜ,23 : ಉಗ್ರಂ’, ‘ಮ್ಯಾಕ್ಸ್’ ಮುಂತಾದ ಸಿನಿಮಾಗಳಲ್ಲಿ ಅಬ್ಬರಿಸಿರುವ ಮಂಜು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು ಅವರ ವಿವಾಹ ಮಹೋತ್ಸವ ಜರುಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಗ್ರಂ ಮಂಜು – ಸಂಧ್ಯಾ ಅವರ ಕಲ್ಯಾಣ ನೆರವೇರಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಮದುವೆ ಜರುಗಿದ್ದು, ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸಂಧ್ಯಾ ಕೊರಳಿಗೆ ಉಗ್ರಂ ಮಂಜು ಮಾಂಗಲ್ಯಧಾರಣೆ ಮಾಡಿದ್ದಾರೆ…..

“ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಮ್ಯಾಕ್ಸ್ ಮಂಜು” Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಹೆದ್ದಾರಿಯಲ್ಲಿ ಅಪ್ಪಳಿಸಿದ ಸಾವು ಲಾರಿ ಚಕ್ರದಡಿ ಸಿಲುಕಿ ಬ್ರಹ್ಮಾವರದ ಯುವಕ ದಾರುಣ ಸಾವು

(ನ್ಯೂಸ್‌ ಕಡಬ) newskadaba.com,ಜ,23 ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪೂರು ಕೆಜಿ ರಸ್ತೆಯ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸರಕು ಸಾಗಣೆ ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿಕೊಂಡ ಬೈಕ್ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತರನ್ನು ಬ್ರಹ್ಮಾವರದ ಮಟಪಾಡಿ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಸವಾರನ ದೇಹವು ಛಿದ್ರವಾಗಿತ್ತು. ಅಪಘಾತದಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹಾಲಿಂಗ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ

ಹೆದ್ದಾರಿಯಲ್ಲಿ ಅಪ್ಪಳಿಸಿದ ಸಾವು ಲಾರಿ ಚಕ್ರದಡಿ ಸಿಲುಕಿ ಬ್ರಹ್ಮಾವರದ ಯುವಕ ದಾರುಣ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿ ಬಂಧನ ಆಂಧ್ರಪ್ರದೇಶದಲ್ಲಿ ಉರ್ವಾ ಪೊಲೀಸರ ಯಶಸ್ವಿ ಕಾರ್ಯಾಚರಣೆ.

(ನ್ಯೂಸ್‌ ಕಡಬ) newskadaba.com,ಜ,23 ಮಂಗಳೂರು: 1997 ರಲ್ಲಿ ದಾಖಲಾದ ಸಂಚಲನ ಮೂಡಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಭಯಾನಕ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಸದಸ್ಯನನ್ನು ಮಂಗಳೂರು ನಗರದ ಉರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದ ವೆಂಕಟಪ್ಪ ಎಂಬುವರ ಪುತ್ರ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಅಲಿಯಾಸ್ ಕೆ ಕೃಷ್ಣಪ್ಪ ಅಲಿಯಾಸ್ ಕೃಷ್ಣ (55) ಎಂದು ಗುರುತಿಸಲಾಗಿದೆ. ಅವರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಕುಖ್ಯಾತ ಆರೋಪಿ ಬಂಧನ ಆಂಧ್ರಪ್ರದೇಶದಲ್ಲಿ ಉರ್ವಾ ಪೊಲೀಸರ ಯಶಸ್ವಿ ಕಾರ್ಯಾಚರಣೆ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಜ. 24 ರಂದು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿರುವ ʼಕಲಶʼ ಉದ್ಘಾಟನೆ

(ನ್ಯೂಸ್‌ ಕಡಬ) newskadaba.com,ಜ,23   : ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ವೇಳೆ(2016ರಲ್ಲಿ) ತೆರವುಗೊಳಿಸಲಾಗಿದ್ದ ಮಂಗಳೂರಿಗೆ ಮುಕುಟವಾಗಿದ್ದ ಕಲಶವನ್ನು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಮರು ಸ್ಥಾಪಿಸಲಾದ ಕಲಶವನ್ನು ಜನವರಿ 24 ರ ಶನಿವಾರ ಸಂಜೆ 5.30 ಕ್ಕೆ ಉದ್ಘಾಟನೆಗೊಳ್ಳಲಿದೆ… . ಹಿಂದೆ ನಗರದ ಪ್ರಮುಖ ಹೆಗ್ಗುರುತಾಗಿದ್ದ ಪಂಪ್‌ವೆಲ್ ಕಲಶದ ಮರು ಸ್ಥಾಪನೆ ಕಾರ್ಯವು ಕಳೆದ ಕೆಲವು ತಿಂಗಳುಗಳಿಂದ ಪ್ರಗತಿಯಲ್ಲಿತ್ತು. 2016 ರಲ್ಲಿ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ತೆಗೆದುಹಾಕಲ್ಪಟ್ಟ ಈ ಕಲಶವನ್ನು ಮತ್ತೆ ಮರು ಸ್ಥಾಪನೆ ಮಾಡಲಾಗಿದೆ. ಕಳೆದ ವರ್ಷ

ಮಂಗಳೂರು: ಜ. 24 ರಂದು ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿರುವ ʼಕಲಶʼ ಉದ್ಘಾಟನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ- ಸಂಪುಟ ಒಪ್ಪಿಗೆ

(ನ್ಯೂಸ್‌ ಕಡಬ) newskadaba.com,ಜ,23 : ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ… 2027ರ ಡಿಸೆಂಬರ್ 31 ರವರೆಗೆ ಹೊರಡಿಸಲಾಗಿರುವ ಎಲ್ಲಾ ಅಧಿಸೂಚನೆಗಳಿಗೆ ಅನ್ವಯ ಆಗುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾನ್ಯ ವರ್ಗಕ್ಕೆ ಈಗ ಇರುವ 35 ವರ್ಷದ ವಯೋಮಿತಿ ಇದ 40 ವರ್ಷಕ್ಕೆ ಅನ್ವಯ ಆಗುವಂತೆ ವಿಸ್ತರಣೆಯಾಗಿದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಈಗ ಇರುವ 38 ವರ್ಷ ವಯೋಮಿತಿ 43 ವರ್ಷಗಳಿಗೆ ಅನ್ವಯವಾಗುವಂತೆ

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ- ಸಂಪುಟ ಒಪ್ಪಿಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರಿನ ರೀಲ್ಸ್ ಸ್ಟಾರ್ ಇನ್ನಿಲ್ಲ ಹಠಾತ್ ಹೃದಯಾಘಾತದಿಂದ ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ನಿಧನ.

(ನ್ಯೂಸ್‌ ಕಡಬ) newskadaba.com,ಜ,23 ಮಂಗಳೂರು: ಅಭಿಮಾನಿಗಳನ್ನು ಬೈಯುತ್ತಲೇ ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಸೃಷ್ಟಿಸಿದ್ದ ನಾಗುರಿಯ ನಿವಾಸಿ ಆಶಾ ಪಂಡಿತ್, ಜನವರಿ 23 ರ ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಆಶಾ ಪಂಡಿತ್ ತಮ್ಮ ಬೈಗುಳದ ರೀಲ್‌ಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯತೆ ಗಳಿಸಿದ್ದರು. ಅವರು ಪಡೀಲ್ ಬಳಿ ಒಂದು ಸಣ್ಣ ಅಂಗಡಿಯನ್ನೂ ನಡೆಸುತ್ತಿದ್ದರು.ಕುಟುಂಬದ ಮೂಲಗಳ ಪ್ರಕಾರ, ಅವರಿಗೆ ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿತ್ತು. ಶುಕ್ರವಾರ ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದರು ಎಂದು ವರದಿಯಾಗಿದೆ.

ಮಂಗಳೂರಿನ ರೀಲ್ಸ್ ಸ್ಟಾರ್ ಇನ್ನಿಲ್ಲ ಹಠಾತ್ ಹೃದಯಾಘಾತದಿಂದ ಇನ್‌ಸ್ಟಾಗ್ರಾಮ್ ಖ್ಯಾತಿಯ ಆಶಾ ಪಂಡಿತ್ ನಿಧನ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಜ,23 : ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಒಣ ಹವೆ ಇರಲಿದ್ದು, ಚಳಿ ಮುಂದುವರೆಯಲಿದೆ. ಬೆಳಗಿನ ಜಾವ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ…

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಕೋರ್ಟ್‌ನಲ್ಲಿ ಘೋರ ಘಟನೆ ನ್ಯಾಯಾಧೀಶರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನ.

(ನ್ಯೂಸ್‌ ಕಡಬ) newskadaba.com,ಜ.22  :ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಎದುರೇ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಪುತ್ತೂರು ತಾಲೂಕಿನ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು, ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ ಆರೋಪವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ಜಗಳ ಪೊಲೀಸ್ ಠಾಣೆ

ಪುತ್ತೂರು ಕೋರ್ಟ್‌ನಲ್ಲಿ ಘೋರ ಘಟನೆ ನ್ಯಾಯಾಧೀಶರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನ. Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ

(ನ್ಯೂಸ್‌ ಕಡಬ) newskadaba.com,ಜ.22  ಬೆಂಗಳೂರು:. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾಲಿ ಇರುವ ಬರೋಬ್ಬರಿ 572 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ..ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಭಾರತಾದ್ಯಂತ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಫೆಬ್ರವರಿ 4. ವಿದ್ಯಾರ್ಹತೆ ಆರ್‌ಬಿಐ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಪದವಿ ಅಥವಾ ಅದಕ್ಕಿಂತ

ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top