ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ -ಮೊದಲ ಹಾರಾಟ ಯಶಸ್ಸು – News Kadaba

ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ -ಮೊದಲ ಹಾರಾಟ ಯಶಸ್ಸು

(ನ್ಯೂಸ್‌ ಕಡಬ) newskadaba.com,  ಅ.18 ನಾಸಿಕ್ : ಯುದ್ಧ ವಿಮಾನ ತೇಜಸ್ ಎಂಕೆ1ಎ ಇಂದು ತನ್ನ ಮೊದಲ ಹಾರಾಟ ನಡೆಸಿದೆ. ನಾಸಿಕ್‌ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ವಿಮಾನ ಉತ್ಪಾದನಾ ವಿಭಾಗದಲ್ಲಿ ಈ ಹಾರಾಟ ನಡೆಯಿತು. ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ರಾಜನಾಥ್ ಸಿಂಗ್ ಅವರು LCA ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್‌ಟಿಟಿ-40 ವಿಮಾನದ ಎರಡನೇ ಘಟಕವನ್ನು ಉದ್ಘಾಟಿಸಿದರು.

ತೇಜಸ್ MK1A ಅನ್ನು ವಾಯುಪಡೆಗೆ ಸೇರಿಸುವ ದಿನಾಂಕಗಳನ್ನು ಘೋಷಿಸಿಲ್ಲ. ಆದರೆ ಮುಂದಿನ ನಾಲ್ಕು ವರ್ಷಗಳಲ್ಲಿ 83 ತೇಜಸ್ ಮಾರ್ಕ್ 1A ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಪೂರೈಸಲಾಗುವುದು ಎಂದು ಹೆಚ್‌ಎಎಲ್‌ ಹೇಳಿದೆ.ತೇಜಸ್ Mk-1A ತೇಜಸ್ Mk-1 ಆವೃತ್ತಿಗಿಂತ ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ, ಇದರಲ್ಲಿ ಇಸ್ರೇಲಿ EL/M-2025 AESA ರಾಡಾರ್, ಜಾಮರ್‌ಗಳೊಂದಿಗೆ ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಮತ್ತು ಬಿಯಾಂಡ್ ವಿಷುಯಲ್ ರೇಂಜ್ (BVR) ಸಾಮರ್ಥ್ಯಗಳು ಸೇರಿವೆ.

Scroll to Top