ಭಾವಿ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ

(ನ್ಯೂಸ್‌ ಕಡಬ) newskadaba.com,  ಅ.17 ಶಿಕ್ಷಕರ ಅರ್ಹತಾ ಪರೀಕ್ಷೆ ಅಂದರೆ ಟಿಇಟಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ನಡೆಯಲಿದೆ. ಆಫ್‌ಲೈನ್ ಪರೀಕ್ಷೆಗೆ ವಿದಾಯ ಹೇಳಿ, ಪಾರದರ್ಶಕತೆ ಮತ್ತು ವೇಗಕ್ಕಾಗಿ ಈ ಬದಲಾವಣೆಯನ್ನು ಮಾಡಲಾಗುತ್ತಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆಗೆ ಸರಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಪರೀಕ್ಷೆ ನಡೆಸುವ ಏಜೆನ್ಸಿಯನ್ನು ಅಂತಿಮಗೊಳಿಸಲಾಗುತ್ತದೆ. ಇದರಿಂದ ಅರ್ಹ ಪ್ರತಿಭಾವಂತರು ಆಯ್ಕೆಯಾಗಲು ಅನುಕೂಲ ಆಗಲಿದೆ.

 

ಬಿ.ಎಡ್‌ ಪದವೀಧರರು ಇನ್ಮುಂದೆ ಆನ್‌ಲೈನ್‌ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕಿದೆ. ಆಫ್‌ಲೈನ್‌ ಪರೀಕ್ಷೆಗೆ ವಿದಾಯ ಹೇಳುವ ಮೂಲಕ ಮೊದಲ ಬಾರಿ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಕಂಪ್ಯೂಟರ್‌ ಆಧರಿತ ಪರೀಕ್ಷೆ ನಡೆಸಲು ಸರಕಾರದಿಂದ ಅಗತ್ಯ ಒಪ್ಪಿಗೆ ಸಿಕ್ಕಿದ್ದು, ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.

ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಬೇಕಿರುವ ಹಿನ್ನೆಲೆಯಲ್ಲಿ, ಟಿಇಟಿ ಹೊಣೆಯನ್ನು ಏಜೆನ್ಸಿಗೆ ನೀಡಲು ಯೋಜಿಸಲಾಗಿದೆ. ಪರೀಕ್ಷೆ ನಡೆಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾರ್ಯಚಟುವಟಿಕೆಗಳು ಶುರುವಾಗಲಿವೆ. ಟಿಇಟಿ ಪರೀಕ್ಷೆಯನ್ನು ಏಜೆನ್ಸಿ ನಡೆಸಿದರೂ ನೇತೃತ್ವ, ನೋಂದಣಿ, ಪರೀಕ್ಷಾ ಪ್ರಕ್ರಿಯೆ ಹಾಗೂ ಫಲಿತಾಂಶ, ಅಂಕ ಪರಿಗಣನೆ ಪ್ರಕ್ರಿಯೆಯನ್ನು ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವೇ ನಿರ್ವಹಿಸಲಿದೆ.

 

Scroll to Top