ಕರಾವಳಿ

ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.06, ಮೂಡಬಿದಿರೆ ಘಟಕದ ಗೃಹರಕ್ಷಕರಿಂದ ವನಮಹೋತ್ಸವ ದಿನಾಚರಣೆಯನ್ನು ಮೂಡಬಿದಿರೆ ಘಟಕದ ವತಿಯಿಂದ ಆಚರಿಸಲಾಯಿತು. ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಣೆ ಹಾಗೂ ಪ್ರಾಕೃತಿಕ ವಿಕೋಪಗಳಲ್ಲಿ ನಡೆಯುವ ತೊಂದರೆಯ ಬಗ್ಗೆ ಚರ್ಚಿಸಿದರು. ಪ್ರತಿಯೊಬ್ಬ ಪ್ರಜೆಯು ಗಿಡ ಬೆಳೆಸಿದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮೂಡಬಿದಿರೆ ಘಟಕದ ಘಟಕಾಧಿಕಾರಿ ಶ್ರೀ ಪಾಂಡಿರಾಜ್ ಹಾಗೂ ಮೂಡಬಿದಿರೆ ಘಟಕದ […]

ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ Read More »

ಕರಾವಳಿ

ಉಪ್ಪಿನಂಗಡಿ: ಕಲಿತರೂ ಕೆಲಸ ಸಿಗಲಿಲ್ಲವೆಂಬ ಚಿಂತೆ ► ಯುವತಿಯಿಂದ ನೇತ್ರಾವತಿ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಯತ್ನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.06. ಕಲಿತರೂ ಕೆಲಸ ಸಿಕ್ಕಿಲ್ಲವೆಂದು ಮನನೊಂದ ಯುವತಿಯೋರ್ವಳು ನದಿಯಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗೆ ಇಳಿದ ಯುವತಿಯು ಮುಳುಗಲು ಸಿದ್ಧವಾಗುತ್ತಿರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತರಾದ ಜೀವರಕ್ಷಕ ವೃತ್ತಿಯ ಚೆನ್ನಪ್ಪರು ಯುವತಿಯನ್ನು ರಕ್ಷಿಸಿ ವಿಚಾರಿಸಿದಾಗ ಕಲಿತರೂ ಉದ್ಯೋಗ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಯುವತಿಗೆ ಬುದ್ದಿ ಹೇಳಿ ಕಳುಹಿಸಿಕೊಡಲಾಯಿತೆಂದು

ಉಪ್ಪಿನಂಗಡಿ: ಕಲಿತರೂ ಕೆಲಸ ಸಿಗಲಿಲ್ಲವೆಂಬ ಚಿಂತೆ ► ಯುವತಿಯಿಂದ ನೇತ್ರಾವತಿ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಯತ್ನ Read More »

ಕರಾವಳಿ

ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.05. ಖ್ಯಾತ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ ಅವರನ್ನು ರಾಜಾರಾಜೇಶ್ವರಿ ನಗರದ ಅವರ ಮನೆಯ ಬಳಿಯಲ್ಲೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಇಂದು ರಾತ್ರಿ ನಡೆದಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರು ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಹೊರಗಡೆ ನಿಂತಿದ್ದ ಸಂದರ್ಭದಲ್ಲಿ ಅವರ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಿಂದ ಗೌರಿ ಅವರ ಹಣೆ ಹಾಗೂ ಎದೆಗೆ ಗುಂಡು ತಗಲಿದ್ದು, ಗಂಭೀರ

ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ Read More »

ಕರಾವಳಿ

ಶಾಂತಿಮೊಗರು: ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು ► ಕಡಬ ಕುಟ್ರುಪ್ಪಾಡಿ ನಿವಾಸಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.05.  ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಯುವಕರಿಬ್ಬರು ಮುಳುಗಿ ನೀರುಪಾಲಾದ ಘಟನೆ ಮಂಗಳವಾರ ಅಪರಾಹ್ನ ಇಲ್ಲಿಗೆ ಸಮೀಪದ ಶಾಂತಿಮೊಗರು ದೇವಸ್ಥಾನ ಸಮೀಪ ನಡೆದಿದೆ. ಶಾಂತಿಮೊಗರು ದೇವಸ್ಥಾನಕ್ಕೆಂದು ಮೂವರು ಯುವಕರು ತೆರಳಿದ್ದು, ಅದರಲ್ಲಿ ಕಡಬ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಹರಿ, ಸತ್ಯ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆನ್ನಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ ಇವರಿಬ್ಬರು ನೀರುಪಾಲಾಗಿದ್ದು, ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ.

ಶಾಂತಿಮೊಗರು: ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು ► ಕಡಬ ಕುಟ್ರುಪ್ಪಾಡಿ ನಿವಾಸಿಗಳು Read More »

ಕರಾವಳಿ

ಮಂಗಳೂರು ಚಲೋ ಬೈಕ್ ರ್ಯಾಲಿ ► ಹೆಲ್ಮೆಟ್ ಧರಿಸದೆ ವಿವಾದಕ್ಕೆ ಗುರಿಯಾದ ಬಿಜೆಪಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.05, ಬಿಜೆಪಿ ಕಾರ್ಯಕರ್ತರು ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಸೋಮವಾರ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಹೆಲ್ಮೆಟ್ ಧರಿಸದೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಬೈಕ್’ನಲ್ಲಿ ಪ್ರಯಾಣಿಸುವ ಇಬ್ಬರೂ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿಗೊಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಕಾರ್ಯಕರ್ತರು ಹೆಲಮೆಟ್ ಧರಿಸದೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ರ್ಯಾಲಿ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇನ್ನು ಹಲವವಾರು

ಮಂಗಳೂರು ಚಲೋ ಬೈಕ್ ರ್ಯಾಲಿ ► ಹೆಲ್ಮೆಟ್ ಧರಿಸದೆ ವಿವಾದಕ್ಕೆ ಗುರಿಯಾದ ಬಿಜೆಪಿ Read More »

ಕರಾವಳಿ

ಕುಡಿಯುವ ನೀರಿನ ಅಭಾವ ► ಭೀತಿಯಲ್ಲಿರುವ ಆಲಂಕಾರು ಜನತೆ

(ನ್ಯೂಸ್ ಕಡಬ) newskadaba.com ಕಡಬ,ಸೆ.05, ಆಲಂಕಾರು ಗ್ರಾಮದ ಚಾಮೆತ್ತಡ್ಕ, ಪೊಸೋನಿ, ವ್ಯಾಪ್ತಿಯ ನಿವಾಸಿಗಳಿಗೆ ಈ ವರ್ಷವು ಕುಡಿಯುವ ನೀರಿನ ಯೋಜನೆ ಮರೀಚಿಕೆಯಾಗಲಿದೆ. ಈ ಯೋಜನೆಗಾಗಿ ತಾಲೂಕು ಪಂಚಾಯಿತಿಯಿಂದ 50 ಸಾವಿರ ರೂಪಾಯಿ ಪೈಪ್ ಲೈನಿಗಾಗಿ ಮಾತ್ರ ಅನುದಾನ ಬಿಡುಗಡೆಯಾಗಿದ್ದು ಬೇರೆ ಯಾವುದೇ ಮೂಲಗಳಿಂದ ಅನುದಾನ ಬಿಡುಗಡೆಯಾಗದಿರುವುದು ಯೋಜನೆಗೆ ಹಿನ್ನಡೆಯಾಗಿದೆ. ಈ ಭಾಗದಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕುಡಿಯುವ ನೀರಿಗಾಗಿ ಅಭಾವ ಉಂಟಾಗುತಿದ್ದು, ಕಳೆದ ಬಾರಿ ಜನಪ್ರತಿನಿಧಿಗಳು ನೀಡಿದ್ದ ಭರವಸೆಯ ಆಧಾರದಲ್ಲಿ ಈ ವರ್ಷ ನೀರಿಗಾಗಿ ಜನತೆಯ ಅಲೆದಾಟ ನಿಲ್ಲುವುದೆಂದು ನಿರೀಕ್ಷಿಸಲಾಗಿತ್ತು.

ಕುಡಿಯುವ ನೀರಿನ ಅಭಾವ ► ಭೀತಿಯಲ್ಲಿರುವ ಆಲಂಕಾರು ಜನತೆ Read More »

ಕರಾವಳಿ

ಬಿಜೆಪಿಯ ‘ಮಂಗಳೂರು ಚಲೋ’ಗೆ ಅನುಮತಿ ನಿರಾಕರಣೆ ► ಕಾರ್ಯಕ್ರಮ ಮಾಡಿಯೇ ಸಿದ್ಧ: ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.04. ಬಿಜೆಪಿ ಯುವ ಮೋರ್ಚಾ ಘಟಕವು ಸೆಪ್ಟೆಂಬರ್ 7 ಗುರುವಾರದಂದು ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರಾಲಿಗೆ ಮಂಗಳೂರು ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್ ಅನುಮತಿ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಯುಕ್ತರಾದ ಟಿ. ಆರ್. ಸುರೇಶ್, ರಾಜ್ಯ ಬಿಜೆಪಿ ಯುವ ಮೋರ್ಚಾವು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶದಿಂದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲಿದೆ ಹಾಗೂ ನಗರದಲ್ಲಿ ಶಾಂತಿ ಕದಡುವ ಆತಂಕವಿರುವ ಹಿನ್ನೆಲೆಯಲ್ಲಿ, ಬೈಕ್ ಜಾಥಾ ನಗರ

ಬಿಜೆಪಿಯ ‘ಮಂಗಳೂರು ಚಲೋ’ಗೆ ಅನುಮತಿ ನಿರಾಕರಣೆ ► ಕಾರ್ಯಕ್ರಮ ಮಾಡಿಯೇ ಸಿದ್ಧ: ನಳಿನ್ ಕುಮಾರ್ ಕಟೀಲ್ Read More »

ಕರಾವಳಿ

ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಠಾಣಾ ವ್ಯಾಪ್ತಿಯ ಅಲಂಕಾರು ಎಂಬಲ್ಲಿ ಶಾಲೆಗೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿರುವುದಾಗಿ ವಿದ್ಯಾರ್ಥಿಯ ತಂದೆ ಸೋಮವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿಗೆ ಸಮೀಪದ ಅಲಂಕಾರು ದುರ್ಗಾಂಬಾ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿ ಆಲಂಕಾರು ಗ್ರಾಮದ ಉಜುರ್ಲಿ ನಿವಾಸಿ ಗೋಪಾಲಕೃಷ್ಣ ಉಪಾಧ್ಯಾಯ ಎಂಬವರ ಪುತ್ರ ಶಿವಕುಮಾರ್ ಉಪಾಧ್ಯಾಯ (15) ಕಾಣೆಯಾದ ವಿದ್ಯಾರ್ಥಿ. ಈತ ಶನಿವಾರದಂದು ಶಾಲೆಗೆಂದು ತೆರಳಿದ್ದು, ನಂತರ ನಾಪತ್ತೆಯಾಗಿದ್ದಾನೆನ್ನಲಾಗಿದೆ. ಮನೆಯಲ್ಲಿದ್ದು ಓದಲು ಮನಸ್ಸು ಬರುವುದಿಲ್ಲ. ನನ್ನ

ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ

ಕಡಬ: ರೈಲಿನಿಂದ ನದಿಗೆ ಯುವತಿ ಹಾರಿದ್ದಾಳೆಂಬ ಶಂಕೆ ► ಸುಳ್ಳು ಸುದ್ದಿಯಿಂದ ಹುಡುಕಾಡಿ ಬೇಸ್ತು ಬಿದ್ದ ನಾಗರೀಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ ಯುವತಿಯೋರ್ವಳು ಕೋಡಿಂಬಾಳ ಸಮೀಪದ ನಾಕೂರು ಎಂಬಲ್ಲಿ ಕುಮಾರಧಾರಾ ನದಿಗೆ ಹಾರಿದ್ದಾಳೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನಾಗರೀಕರು ನದಿತಟದಲ್ಲಿ ಹುಡುಕಾಡಿದ ಘಟನೆ ಸೋಮವಾರದಂದು ನಡೆದಿದೆ. ಯುವತಿಯೋರ್ವಳು ರೈಲಿನಿಂದ ಹಾರಿದ್ದು, ತದನಂತರ ಬೋಗಿಯಲ್ಲಿದ್ದ ಯುವಕನು ಚೈನು ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ ಕಾರಣ ನಾಗರೀಕರನ್ನು ಆತಂಕಕ್ಕೀಡುಮಾಡಿದ್ದು, ಊರವರು ಸ್ಥಳದಲ್ಲಿ ಜಮಾಯಿಸಿದ್ದಾರೆ. ವಿಷಯ ತಿಳಿದು ಕಡಬ ಪೊಲೀಸರು, ಮಾಧ್ಯಮದವರು ಸ್ಥಳಕ್ಕೆ ಭೇಟಿ

ಕಡಬ: ರೈಲಿನಿಂದ ನದಿಗೆ ಯುವತಿ ಹಾರಿದ್ದಾಳೆಂಬ ಶಂಕೆ ► ಸುಳ್ಳು ಸುದ್ದಿಯಿಂದ ಹುಡುಕಾಡಿ ಬೇಸ್ತು ಬಿದ್ದ ನಾಗರೀಕರು Read More »

ಕರಾವಳಿ

ಪ್ರಾಥಮಿಕ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ ► ಕೊಣಾಜೆ ಶಾಲೆಯಲ್ಲಿ ತರಗತಿ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಪುತ್ತೂರು ತಾಲೂಕಿನ ಕೊಣಾಜೆ ಗ್ರಾಮದ ಕೊಣಾಜೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷರೊಬ್ಬರು ಥಳಿಸಿರುವ ಹಿನ್ನೆಯಲ್ಲಿ ಪೋಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರ ಬೆಂಬಲದೊಂದಿಗೆ ಶಿಕ್ಷಕನ ವರ್ಗಾವಣೆಗೆ ಪಟ್ಟು ಹಿಡಿದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಕೊಣಾಜೆ ಗ್ರಾಮದ ಮುಚ್ಚುರೋಡಿ ಗಿರೀಶ್ ಎಂಬವರ ಪುತ್ರ ಕೊಣಾಜೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಚೇತನ್ ಎಂಬ ವಿದ್ಯಾರ್ಥಿಗೆ ಅದೇ ಶಾಲಾ

ಪ್ರಾಥಮಿಕ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ ► ಕೊಣಾಜೆ ಶಾಲೆಯಲ್ಲಿ ತರಗತಿ ಬಹಿಷ್ಕಾರ Read More »

ಕರಾವಳಿ
Scroll to Top