ಉಪ್ಪಿನಂಗಡಿ: ಕಲಿತರೂ ಕೆಲಸ ಸಿಗಲಿಲ್ಲವೆಂಬ ಚಿಂತೆ ► ಯುವತಿಯಿಂದ ನೇತ್ರಾವತಿ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಯತ್ನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.06. ಕಲಿತರೂ ಕೆಲಸ ಸಿಕ್ಕಿಲ್ಲವೆಂದು ಮನನೊಂದ ಯುವತಿಯೋರ್ವಳು ನದಿಯಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗೆ ಇಳಿದ ಯುವತಿಯು ಮುಳುಗಲು ಸಿದ್ಧವಾಗುತ್ತಿರುವುದನ್ನು ಕಂಡು ತಕ್ಷಣವೇ ಕಾರ್ಯಪ್ರವೃತರಾದ ಜೀವರಕ್ಷಕ ವೃತ್ತಿಯ ಚೆನ್ನಪ್ಪರು ಯುವತಿಯನ್ನು ರಕ್ಷಿಸಿ ವಿಚಾರಿಸಿದಾಗ ಕಲಿತರೂ ಉದ್ಯೋಗ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಯುವತಿಗೆ ಬುದ್ದಿ ಹೇಳಿ ಕಳುಹಿಸಿಕೊಡಲಾಯಿತೆಂದು ತಿಳಿದುಬಂದಿದೆ.

Scroll to Top