ಶಾಂತಿಮೊಗರು: ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು ► ಕಡಬ ಕುಟ್ರುಪ್ಪಾಡಿ ನಿವಾಸಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.05.  ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಯುವಕರಿಬ್ಬರು ಮುಳುಗಿ ನೀರುಪಾಲಾದ ಘಟನೆ ಮಂಗಳವಾರ ಅಪರಾಹ್ನ ಇಲ್ಲಿಗೆ ಸಮೀಪದ ಶಾಂತಿಮೊಗರು ದೇವಸ್ಥಾನ ಸಮೀಪ ನಡೆದಿದೆ.

ಶಾಂತಿಮೊಗರು ದೇವಸ್ಥಾನಕ್ಕೆಂದು ಮೂವರು ಯುವಕರು ತೆರಳಿದ್ದು, ಅದರಲ್ಲಿ ಕಡಬ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಹರಿ, ಸತ್ಯ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆನ್ನಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ ಇವರಿಬ್ಬರು ನೀರುಪಾಲಾಗಿದ್ದು, ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ.

Scroll to Top