ಕರಾವಳಿ

ವಿಜೃಂಭಣೆಯಿಂದ ನಡೆದ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.24. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವ ನಡೆಯಿತು. ದೇಶದ ವಿವಿಧ ರಾಜ್ಯಗಳಿಂದ ಸಹಸ್ರಾರು ಭಕ್ತರು ಚಂಪಾ ಷಷ್ಠಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಮಡೆಸ್ನಾನದ ಬದಲಿಯಾಗಿ ಎಡೆ ಸ್ನಾನ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದೆ. ಚಂಪಾಷಷ್ಟಿಯ ಮೂರು ದಿನಗಳಲ್ಲೂ ಈ ಸೇವೆಯನ್ನು ನಡೆಸಲಾಗುತ್ತಿದೆ. ಧಾರ್ಮಿಕಧತ್ತಿ ಇಲಾಖೆಯ ನೇತೃತ್ವದಲ್ಲಿ ಈ ಸೇವೆಯನ್ನು […]

ವಿಜೃಂಭಣೆಯಿಂದ ನಡೆದ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ Read More »

ಕರಾವಳಿ

ಧರ್ಮಸ್ಥಳ: ಕೃಷಿಗಾಗಿ ಡ್ರೋನ್ ಯಂತ್ರದ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.24. Aerial Vehicle for Agriculture (ಕೃಷಿಗಾಗಿ ಬಾನ ವಾಹನಗಳು) ಎಂಬ ಸಂಶೋಧನೆಯ ಒಂದು ಮಾಡೆಲ್ ಡ್ರೋನ್ ಅನ್ನು ಇಂದು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ಗುರುವಾರದಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಪ್ರಧಾನಿ ಮೋದಿಯವರ ಕನಸಿನ ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಕರ್ನಾಟಕ ಇವುಗಳ ಅನುದಾನದಿಂದ ಆರಂಭವಾದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸ್ಟಾರ್ಟ್ ಅಪ್ ಸಂಸ್ಥೆ “ISPAGRO”.

ಧರ್ಮಸ್ಥಳ: ಕೃಷಿಗಾಗಿ ಡ್ರೋನ್ ಯಂತ್ರದ ಬಿಡುಗಡೆ Read More »

ಕರಾವಳಿ

ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ನ.24. ತಾ.ಪಂ. ಅನುದಾನದಲ್ಲಿ ಬಿಳಿನೆಲೆ ಗ್ರಾಮದ ಕೈಕಂಬ ಹಿ.ಪ್ರಾ. ಶಾಲಾ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ತಾ.ಪಂ.ಅನುದಾನದಲ್ಲಿ ಮಂಜೂರಾದ ರೂ.70 ಸಾವಿರದಲ್ಲಿ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಅತೀ ಶೀಘ್ರದಲ್ಲಿ ನಡೆದು ಶಾಲೆಗೆ ಸಂಪರ್ಕ ರಸ್ತೆ ಅಭಿವೃದ್ದಿಯಾಗಲಿ ಎಂದು ಆಶಿಸಿದರು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಬಿಳಿನೆಲೆ ಗ್ರಾ.ಪಂ.ಸದಸ್ಯ ಶಿವಪ್ರಸಾದ್ ನಡುತೋಟ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನೀಲಪ್ಪ ಗೌಡ

ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ Read More »

ಕರಾವಳಿ

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.24. ಬೋರ್‍ವೆಲ್ ಲಾರಿಯೊಂದು ಆಯತಪ್ಪಿ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯೊಂದರ ಮೇಲೆ ಬಿದ್ದ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ಗುರುವಾರದಂದು ನಡೆದಿದೆ. ಶಾಫಿ ಎಂಬವರ ಮನೆಯಲ್ಲಿ ಬೋರ್‍ವೆಲ್ ತೆಗೆಯಲೆಂದು ತೆರಳುತ್ತಿದ್ದ ಲಾರಿಯು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೆ ತಲುಪಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ರವಿ ಎಂಬವರ ಕಾಂಪೌಂಡ್ ಕುಸಿದು ಬಿದ್ದು ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ Read More »

ಕರಾವಳಿ

ಕೆಮ್ಮಾರ: ಭೀಕರ ಅಪಘಾತಕ್ಕೆ ಇಬ್ಬರು ಬಲಿ, ಮೂವರು ಗಂಭೀರ ► ಸೇತುವೆಯ ತಡೆಗೋಡೆಗೆ ಗುದ್ದಿದ ಜೀಪ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.23. ಜೀಪೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ಗುರುವಾರ ತಡ ರಾತ್ರಿ ನಡೆದಿದೆ. ಮೃತರನ್ನು ಕಾಣಿಯೂರಿನ ಕಟ್ಟತ್ತಾರು ನಿವಾಸಿಗಳಾದ ಶಿವಪ್ಪ ಮತ್ತು ಸುಶೀಲಾ ಎಂದು ಗುರುತಿಸಲಾಗಿದೆ. ಇವರು ತಮ್ಮದೇ ಜೀಪಿನಲ್ಲಿ ಉಪ್ಪಿನಂಗಡಿಯಿಂದ ಕಾಣಿಯೂರಿಗೆ ಆಲಂಕಾರು ಶಾಂತಿಮೊಗರು ಮೂಲಕ ತೆರಳುತ್ತಿರುವಾಗ ಜೀಪು ಚಾಲಕನ ನಿಯಂತ್ರಣ ತಪ್ಪಿ ಕೆಮ್ಮಾರ

ಕೆಮ್ಮಾರ: ಭೀಕರ ಅಪಘಾತಕ್ಕೆ ಇಬ್ಬರು ಬಲಿ, ಮೂವರು ಗಂಭೀರ ► ಸೇತುವೆಯ ತಡೆಗೋಡೆಗೆ ಗುದ್ದಿದ ಜೀಪ್ Read More »

ಕರಾವಳಿ

ಮರಳು ವಾಹನಗಳಿಗೆ ಜಿಪಿಎಸ್ ಕಡ್ಡಾಯ ► ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.23. ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಲಾರಿ ಹಾಗೂ ಬೋಟುಗಳಿಗೆ ಜಿಪಿಎಸ್ ಮೆಷಿನ್ ಅಳವಡಿಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಳುಗಾರಿಕೆಯಲ್ಲಿ ಬಳಸಲಾಗುವ ಎಲ್ಲಾ ವಿಧದ ಬೋಟುಗಳಿಗೆ ಆಯಾ ನದಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಬಣ್ಣ ಅಳವಡಿಸಬೇಕಾಗುತ್ತದೆ. ಅದೇ ರೀತಿ ಲಾರಿಗಳಿಗೂ “ಮರಳು ಸಾಗಾಟದ ವಾಹನ” ಎಂದು ನಮೂದಿಸಬೇಕಾಗುತ್ತದೆ. ಈಗಾಗಲೇ

ಮರಳು ವಾಹನಗಳಿಗೆ ಜಿಪಿಎಸ್ ಕಡ್ಡಾಯ ► ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್ Read More »

ಕರಾವಳಿ

ಡಿಸೆಂಬರ್ 22 ರಿಂದ ಕರಾವಳಿ ಉತ್ಸವ ಆರಂಭ ► ದ.ಕ. ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.23. ಕರಾವಳಿ ಉತ್ಸವವು ಈ ವರ್ಷ ಡಿಸೆಂಬರ್ 22 ರಿಂದ 31ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್‌ ತಿಳಿಸಿದ್ದಾರೆ. ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವ ವಿವಿಧ ಉಪಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಯ ಸಾಮಾನ್ಯ ಸಂಸ್ಕøತಿಗಳು ಕರಾವಳಿ ಉತ್ಸವದಲ್ಲಿ ಉತ್ಸವದಲ್ಲಿ ಪ್ರತಿಬಿಂಬವಾಗಬೇಕು. ಇಲ್ಲಿನ ಜನತೆಯ ಉತ್ಸವವಾಗಿ ಮಾರ್ಪಾಡಬೇಕು. ಸ್ಥಳೀಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. ಕರಾವಳಿ ಉತ್ಸವ

ಡಿಸೆಂಬರ್ 22 ರಿಂದ ಕರಾವಳಿ ಉತ್ಸವ ಆರಂಭ ► ದ.ಕ. ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್ Read More »

ಕರಾವಳಿ

ಕುಂಡಾಜೆ: ಸ್ಕಿಡ್ ಆಗಿ ರಸ್ತೆಗುರುಳಿದ ದ್ವಿಚಕ್ರ ವಾಹನ ► ಇಬ್ಬರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.23. ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ನೆಲಕ್ಕುರುಳಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರದಂದು ಸಂಜೆ ಆಲಂಕಾರು ಸಮೀಪದ ಕುಂಡಾಜೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಶರವೂರು ಮಿತ್ರಡ್ಕ ನಿವಾಸಿ ಪೂವಪ್ಪ ಮತ್ತು ಸಹ ಸವಾರ ಜನಾರ್ದನ ಮೂಲ್ಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪೂವಪ್ಪರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮತ್ತು ಜನಾರ್ದನ ಮೂಲ್ಯರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ

ಕುಂಡಾಜೆ: ಸ್ಕಿಡ್ ಆಗಿ ರಸ್ತೆಗುರುಳಿದ ದ್ವಿಚಕ್ರ ವಾಹನ ► ಇಬ್ಬರಿಗೆ ಗಂಭೀರ ಗಾಯ Read More »

ಕರಾವಳಿ

ಬಲ್ಯ: ಮರಕ್ಕೆ ಢಿಕ್ಕಿ ಹೊಡೆದ ಕಾರು ► ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.23. ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ದೇರಾಜೆ ಕ್ರಾಸ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಗಾಯಾಳುವನ್ನು ಮಂಗಳೂರಿನ ವಿಶ್ವನಾಥ್ ಎಂದು ಗುರುತಿಸಲಾಗಿದ್ದು, ಇವರು ತನ್ನ ಕುಟುಂಬದೊಂದಿಗೆ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾಕ್ಕೆ ತೆರಳುತ್ತಿದ್ದಾಗ ಬಲ್ಯ ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ವಿಶ್ವನಾಥ್ ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಲ್ಯ: ಮರಕ್ಕೆ ಢಿಕ್ಕಿ ಹೊಡೆದ ಕಾರು ► ಓರ್ವನಿಗೆ ಗಾಯ Read More »

ಕರಾವಳಿ

ಹೋಂಡಾ ಡಿಯೋ – ಲಾರಿ ಢಿಕ್ಕಿ ► ಗಾಯಗೊಂಡ ಡಿಯೋ‌ ಸವಾರ ಆಸ್ಪತ್ರೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.23. ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಿ.ಸಿ.ರೋಡಿನ ಫ್ಲೈ ಓವರ್ ಬಳಿ ಗುರುವಾರದಂದು ನಡೆದಿದೆ.   ಗಾಯಾಳು ದ್ವಿಚಕ್ರ ವಾಹನ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಬಿ.ಸಿ.ರೋಡಿನಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಘಟನೆ ಸಂಬಂಧ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಂಡಾ ಡಿಯೋ – ಲಾರಿ ಢಿಕ್ಕಿ ► ಗಾಯಗೊಂಡ ಡಿಯೋ‌ ಸವಾರ ಆಸ್ಪತ್ರೆಗೆ Read More »

ಕರಾವಳಿ
Scroll to Top