ಕರಾವಳಿ

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.26. ಸ್ವಿಫ್ಟ್, ಇಂಡಿಕಾ ಮತ್ತು ವ್ಯಾಗನಾರ್ ಕಾರುಗಳ ನಡುವೆ ಸರಣಿ ಅಪಘಾತವಾಗಿ ಇಬ್ಬರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ನರಹರಿ ಪರ್ವತದ ಬಳಿ ಭಾನುವಾರ ಸಂಜೆ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಾಣಿ ಕಡೆಗೆ ತೆರಳುತ್ತಿದ್ದ ಇಂಡಿಕಾ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಇದೇ ವೇಳೆ ಇಂಡಿಕಾ ಕಾರಿನ ಹಿಂದಿನಿಂದ ಬರುತ್ತಿದ್ದ ವ್ಯಾಗನಾರ್ ಕಾರಿನ ಚಾಲಕ ಏಕಾಏಕಿ ಬ್ರೇಕ್ […]

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ Read More »

ಕರಾವಳಿ

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ವೆಂಕಟೇಶ್ ಪಾಡ್ಲ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.26. ಪ್ರತಿಷ್ಠಿತ ಜೇಸಿಐ ಕಡಬ ಕದಂಬ ಘಟಕದ ನೂತನ ಘಟಕಾಧ್ಯಕ್ಷರಾಗಿ ವೆಂಕಟೇಶ್ ಪಾಡ್ಲರವರು ಆಯ್ಕೆಯಾಗಿದ್ದಾರೆ. ನಿಕಟಪೂರ್ವಾಧ್ಯಕ್ಷರಾಗಿ ತಸ್ಲೀಂ ಮರ್ದಾಳ, ಕಾರ್ಯದರ್ಶಿಯಾಗಿ ಮೋಹನ ಕೋಡಿಂಬಾಳ,  ಉಪಾಧ್ಯಕ್ಷರಾಗಿ ರಮೇಶ್ ಕೊಠಾರಿ, ಝಫೀರ್ ಮಹಮ್ಮದ್, ಪ್ರಕಾಶ್ ಎನ್.ಕೆ., ತಿರುಮಲೇಶ್ ಭಟ್‌ ಹೊಸ್ಮಠ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್, ಜತೆ ಕಾರ್ಯದರ್ಶಿಯಾಗಿ ಜಯರಾಮ ಮೂರಾಜೆ, ನಿರ್ದೇಶಕರಾಗಿ ನಿಖಿಲ್ ಶೆಟ್ಟಿ ಕೇಪು, ಮಹೇಶ್ ರೈ ಕುಂಟೋಡಿ, ವೇಣುಗೋಪಾಲ ಕೊಲ್ಲಡ್ಕ, ಡಾ.ರಾಮ್‌ಪ್ರಕಾಶ್, ಯುವ ಜೇಸಿ ಸಂಯೋಜಕರಾಗಿ ರವಿಚಂದ್ರ ಪಡುಬೆಟ್ಟು, ಜೇಸಿರೆಟ್ ಸಂಯೋಜಕರಾಗಿ

ಜೇಸಿಐ ಕಡಬ ಕದಂಬ ಅಧ್ಯಕ್ಷರಾಗಿ ವೆಂಕಟೇಶ್ ಪಾಡ್ಲ ಆಯ್ಕೆ Read More »

ಕರಾವಳಿ

ಕುದ್ಮಾರು: ಡಿ.ಸಿ.ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಲು ಪ್ರಸ್ತಾವನೆ ► 15 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸಲು ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ನ.26. ಕುದ್ಮಾರು ಗ್ರಾಮದ ಸರ್ವೇ ನಂ. 167-3 ರಲ್ಲಿ 3.02 ಎಕರೆ ಡಿ.ಸಿ.ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡುವಂತೆ ಕಡಬ ಹೋಬಳಿಯ ಕಂದಾಯ ನಿರೀಕ್ಷಕರು ಪ್ರಸ್ತಾವನೆ ತಯಾರಿಸಿ ಉಲ್ಲೇಖ(2) ರಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುತ್ತಾರೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳೇನಾದರೂ ಇದ್ದಲ್ಲಿ 15 ದಿನಗಳ ಒಳಗಾಗಿ ಲಿಖಿತವಾಗಿ ಕಡಬ ವಿಶೇಷ ತಹಶಿಲ್ದಾರರ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ. ನಿಗದಿತ ಸಮಯದೊಳಗೆ ಸಾರ್ವಜನಿಕರಿಂದ ಯಾವುದೇ ಅಭಿಪ್ರಾಯ ಬರದಿದ್ದಲ್ಲಿ

ಕುದ್ಮಾರು: ಡಿ.ಸಿ.ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಲು ಪ್ರಸ್ತಾವನೆ ► 15 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸಲು ಅವಕಾಶ Read More »

ಕರಾವಳಿ

ಮಂಗಳೂರು: ಅಕ್ರಮವಾಗಿ ಮಾದಕ ಔಷಧ ಮಾರುತ್ತಿದ್ದ ಮೆಡಿಕಲ್ ಸೆಂಟರ್ ► ಕೇಂದ್ರ ರೌಡಿ ನಿಗ್ರಹ ದಳದಿಂದ ದಿಢೀರ್ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಅಕ್ರಮವಾಗಿ ಮಾದಕ ಔಷಧವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ನಗರದ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರು ಮಾಧಕ ಔಷಧಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರದಂದು ನಗರದ ಯೆಯ್ಯಾಡಿಯಲ್ಲಿ ನಡೆದಿದೆ. ಯೆಯ್ಯಾಡಿ ಜಂಕ್ಷನ್ ನಲ್ಲಿರುವ ಪ್ರಜ್ವಲ್ ಮೆಡಿಕಲ್ಸ್ ನಲ್ಲಿ ‌ಯಾವುದೇ ಪರವಾನಿಗೆ ಇಲ್ಲದೆ ಮತ್ತು ಕಾನೂನು ಬಾಹಿರವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ NITROSUN ಎಂಬ ಮಾಧಕ ಔಷಧವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರದ ಕೇಂದ್ರ ರೌಡಿ

ಮಂಗಳೂರು: ಅಕ್ರಮವಾಗಿ ಮಾದಕ ಔಷಧ ಮಾರುತ್ತಿದ್ದ ಮೆಡಿಕಲ್ ಸೆಂಟರ್ ► ಕೇಂದ್ರ ರೌಡಿ ನಿಗ್ರಹ ದಳದಿಂದ ದಿಢೀರ್ ದಾಳಿ Read More »

ಕರಾವಳಿ

ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟ ಗ್ರಾಮೀಣ ಪ್ರತಿಭೆ ► ರಾಮಕುಂಜದ ಹಾಸ್ಯ ಕಲಾವಿದ ರವಿ

(ನ್ಯೂಸ್ ಕಡಬ) newskadaba.com ಕಡಬ, ನ.25. ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯ ನಾಟಕದ ಹಾಸ್ಯ ಕಲಾವಿದ ರವಿ ರಾಮಕುಂಜ ಕೋಸ್ಟಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಇವರು ತುಳು ಚಿತ್ರ ರಂಗದ ‘ಅಮ್ಮೆರ್ ಪೊಲೀಸ್’ ಚಿತ್ರದಲ್ಲಿ ಪ್ರಧಾನ ಹಾಸ್ಯ ಪಾತ್ರಕ್ಕೆ ಜೀವ ತುಂಬಿ ತನ್ನ ಕಲಾ ಜೀವನದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ. ವಿವಿಧ ಗೆಟಪ್ಪಿನ ಹಾಸ್ಯಭರಿತ ಪಾತ್ರದಲ್ಲಿ ಅಧ್ಬುತವಾಗಿ ನಟಿಸುವ ಉದಯೋನ್ಮುಕ ಕಲಾವಿದ ರವಿ ಹಲವಾರು ನಾಟಕದಲ್ಲಿ ಹಾಸ್ಯ ನಟನೆಯ ಮೂಲಕ

ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟ ಗ್ರಾಮೀಣ ಪ್ರತಿಭೆ ► ರಾಮಕುಂಜದ ಹಾಸ್ಯ ಕಲಾವಿದ ರವಿ Read More »

ಕರಾವಳಿ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ನ.25. ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ 4 ತ್ರಿಚಕ್ರ ವಾಹನ, 3 ಚತುರ್‍ಚಕ್ರ ವಾಹನ ಮತ್ತು 1 ದ್ವಿಚಕ್ರ ವಾಹನಗಳನ್ನು ನವೆಂಬರ್ 27 ರಂದು ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ 3 ತ್ರಿಚಕ್ರ ವಾಹನಗಳು, 6 ದ್ವಿಚಕ್ರ ವಾಹನಗಳು ಹಾಗೂ ಚತುರ್‍ಚಕ್ರ 1 ನವೆಂಬರ್ 28 ರಂದು ಬಹಿರಂಗ ಹರಾಜಿಗೆ ಒಳಪಡಿಸಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹರಾಜು ನಿರ್ವಾಹಣಾ ಅಧಿಕಾರಿಗಳಾದ

ಅಬಕಾರಿ ಇಲಾಖೆಯ ಪುತ್ತೂರು ಹಾಗೂ ಬಂಟ್ವಾಳ ಉಪ ವಿಭಾಗ ► ನ.27 ಮತ್ತು 28 ರಂದು ಮುಟ್ಟುಗೋಲು ವಾಹನಗಳ ಹರಾಜು Read More »

ಕರಾವಳಿ

ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ► 200 ಗೋಣಿ ಅಕ್ಕಿ, ಲಾರಿ ಮತ್ತು ಟೆಂಪೋ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.25. ಬಿ.ಸಿ.ರೋಡಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಬಿ.ಮೂಡ ಗ್ರಾಮದ ಶಾಂತಿಯಂಗಡಿ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ಪಡಿತರ ಅಕ್ಕಿಯನ್ನು ಒಂದು ಲಾರಿಯಿಂದ ಟೆಂಪೋವೊದಕ್ಕೆ ಲೋಡ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಅರುಣ್ ಕುಮಾರ್ ನೇತೃತ್ವದ ತಂಡವು ದಾಳಿ ನಡೆಸಿ 50 ಕೆ.ಜಿ.ಯ 200 ಗೋಣಿ ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ

ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ► 200 ಗೋಣಿ ಅಕ್ಕಿ, ಲಾರಿ ಮತ್ತು ಟೆಂಪೋ ವಶಕ್ಕೆ Read More »

ಕರಾವಳಿ

ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ► ಕೆಲವರ ಬಂಧನ, ಹಲವರು ಪರಾರಿ

(ನ್ಯೂಸ್ ಕಡಬ) newskadaba.com ವಿಟ್ಲ, ನ.24. ಇಲ್ಲಿಯ ಶಾಲಾ ರಸ್ತೆ ಬಳಿ ನಡೆಯುತ್ತಿದ್ದ ಅಂದರ್-ಬಾಹರ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರು ಆರೋಪಿಗಳ ಸಹಿತ ಒಂದು ಪಿಕಪ್ ವಾಹನ, ನಾಲ್ಕು ಬೈಕ್ ಗಳು ಹಾಗೂ ನಗದುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಇನ್ನುಳಿದ ಎಂಟಕ್ಕೂ ಅಧಿಕ ಆರೋಪಿಗಳು ಪರಾರಿಯಾಗಿದ್ದಾರೆ. ಚಂದ್ರಶೇಖರ್ ಚಂದಳಿಕೆ, ರಮೇಶ್ ಕಡಂಬು, ಮುರಳೀಧರ ಅಪ್ಪರಿಪಾದೆ ಬಂಧಿತ ಆರೋಪಿಗಳು. ರಫೀಕ್ ಕಡಂಬು, ಅಶ್ರಪ್ ಕಡಂಬು, ಪದ್ಮನಾಭ ಬಸವನಗುಡಿ, ಸುರೇಶ್ ನೆಕ್ಕರೆಕಾಡು, ಪ್ರಶಾಂತ್ ಗೌಡ ಕಡಂಬು, ಅಂತೋನಿ

ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ► ಕೆಲವರ ಬಂಧನ, ಹಲವರು ಪರಾರಿ Read More »

ಕರಾವಳಿ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.24. ಏಳು ವರ್ಷದ ಬಾಲಕನೋರ್ವ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲ್ಲಡ್ಕ ಸಮೀಪದ ಉಮಾಶಿವಕ್ಷೇತ್ರ ದೇವಳದ ಸಮೀಪ ಶುಕ್ರವಾರದಂದು ನಡೆದಿದೆ. ನೇರಳಕಟ್ಟೆ ಭಗವತಿಕೋಡಿ ನಿವಾಸಿ ಸತ್ಯನಾರಾಯಣ ಎಂಬವರ ಪುತ್ರ ಶ್ರೀರಾಮ್(7) ಮೃತ ದುರ್ದೈವಿ ಬಾಲಕ. ಉಮಾಶಿವ ಕ್ಷೇತ್ರದ ಸಭಾಂಗಣದಲ್ಲಿ ತನ್ನ ಅಜ್ಜನ ಶ್ರಾದ್ದಕ್ಕೆಂದು ಶ್ರೀರಾಮ್ ತನ್ನ ಮನೆಯವರ ಜೊತೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಟವಾಡಲು ಇತರರ ಜೊತೆ ಕ್ಷೇತ್ರದ ಕೆರೆಯ ಬಳಿಗೆ ತೆರಳಿದ್ದ ಈತ ಹಠಾತ್ತನೆ ಆಯತಪ್ಪಿ

ಕಲ್ಲಡ್ಕ: ಕೆರೆಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಗುರುವಾಯನ ಕೆರೆ: ಯುವಕನ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.24. ರಾಡ್ ನಿಂದ ಹೊಡೆದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆಯಲ್ಲಿ ಶುಕ್ರವಾರದಂದು ನಡೆದಿದೆ. ಮೃತರನ್ನು ಗುರುವಾಯನಕೆರೆ ಹವ್ಯಕ ಭವನ ನಿವಾಸಿ ಪ್ರದೀಪ್(35) ಎಂದು ಗುರುತಿಸಲಾಗಿದೆ. ಎರಡು ತಂಡಗಳ ಮಧ್ಯೆ ಹೊಡೆದಾಟ ಸಂಭವಿಸಿದ್ದು, ಈ ವೇಳೆ ತಂಡವೊಂದು ಪ್ರದೀಪ್ ಅವರನ್ನು ರಾಡ್ ನಿಂದ ಹೊಡೆದು ಕೊಲೆಗೈದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾಯನ ಕೆರೆ: ಯುವಕನ ಬರ್ಬರ ಕೊಲೆ Read More »

ಕರಾವಳಿ
Scroll to Top