ಕರಾವಳಿ

ಬೆಳ್ಳಾರೆ: ಯುವಕ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ.21. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ಎಂಬಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಯ್ಯನಕಟ್ಟೆ ನಿವಾಸಿ ಶಾಫಿ ಎಂದು ಗುರುತಿಸಲಾಗಿದೆ. ಉದ್ಯೋಗಕ್ಕೆಂದು ಬೆಂಗಳೂರಿಗೆ ತೆರಳಿದ್ದ ಈತ ಮಂಗಳವಾರದಂದು ಊರಿಗೆ ಬಂದಿದ್ದನೆನ್ನಲಾಗಿದ್ದು, ಬುಧವಾರ ಮಧ್ಯಾಹ್ನವಾದರೂ ಹೊರ ಬರದೆ ಇದ್ದುದರಿಂದ ಕಿಟಕಿಯ ಮೂಲಕ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಶಾಫಿ ಇತ್ತೀಚೆಗೆ ಯಮಹಾ ಎಫ್ ಝಡ್ ಬೈಕನ್ನು ಖರೀದಿಸಿದ್ದು, ಅದಕ್ಕಾಗಿ ಸಾಲ‌ ನೀಡಿದವರು ಕೇಳುತ್ತಿದ್ದರೆನ್ನಲಾಗಿದೆ. […]

ಬೆಳ್ಳಾರೆ: ಯುವಕ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಮತ್ತೆ ಮುಂದೂಡಲ್ಪಟ್ಟ ನೂತನ ಕಡಬ ತಾಲೂಕು ಉದ್ಘಾಟನೆ ► ಕಾರಣವೇನು ಗೊತ್ತೇ…?

(ನ್ಯೂಸ್ ಕಡಬ) newskadaba.com ಕಡಬ, ಮಾ.21. ನಾಳೆ ಮಾ.22 ರಂದು ನಡೆಯಬೇಕಿದ್ದ ಕಡಬ ತಾಲೂಕು ಉದ್ಘಾಟನಾ ಕಾರ್ಯಕ್ರಮವು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ ಎಂದು ಕಡಬ ಜಿ.ಪಂ.ಸದಸ್ಯ ಪಿ. ಪಿ. ವರ್ಗೀಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಒಂದು ಬಾರಿ ದಿನ‌ ನಿಗದಿಯಾಗಿದ್ದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಆದರೆ ಈ ಬಾರಿಯೂ ಮುಂದೂಡಲಾಗಿದ್ದು, ಕಡಬ ಪರಿಸರದ ಜನತೆಗೆ ಇದರಿಂದಾಗಿ ನಿರಾಶೆ ಕಾದಿದೆ. ಮಾರ್ಚ್ ತಿಂಗಳೊಳಗಾಗಿ ಅಧಿಕೃತವಾಗಿ ಉದ್ಘಾಟನೆಗೆ ದಿನ ನಿಗದಿ ಪಡಿಸಲಾಗುವುದು ಎಂದು ಪಿ.ಪಿ. ವರ್ಗೀಸ್ ತಿಳಿಸಿದ್ದಾರೆ.

ಮತ್ತೆ ಮುಂದೂಡಲ್ಪಟ್ಟ ನೂತನ ಕಡಬ ತಾಲೂಕು ಉದ್ಘಾಟನೆ ► ಕಾರಣವೇನು ಗೊತ್ತೇ…? Read More »

ಕರಾವಳಿ

ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸಿದ ರಾಜ್ಯ ಸರ್ಕಾರಕ್ಕೆ ಮುಖಭಂಗ ► ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮಾ.21. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದ್ದು,  ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಯಲಿದ್ದಾರೆ. ಅವಧಿಗಿಂತಲು ಮೊದಲೇ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಮಾ.8 ರಂದು ರೋಹಿಣಿ ಸಿಂಧೂರಿ ಯವರು ಸಿಎಟಿ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಸಿಎಟಿಯು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ  ನೀಡಿತ್ತು. ಮಾ.13ಕ್ಕೆ ನಡೆಯಬೇಕಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದ್ದು, ಇದರ ಬಗ್ಗೆ ವಿಚಾರಣೆಯು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ನಡೆದಿದೆ. ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಯುವಂತೆ ನ್ಯಾಯಮಂಡಳಿಯು

ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸಿದ ರಾಜ್ಯ ಸರ್ಕಾರಕ್ಕೆ ಮುಖಭಂಗ ► ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಕೆ Read More »

ಕರಾವಳಿ

ಬಿಜೆಪಿಯು ಜನರನ್ನು ವಂಚಿಸಿ ಅಧಿಕಾರ ಹಿಡಿಯುತ್ತಿದೆ: ರಾಹುಲ್ ಗಾಂಧಿ ► ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.21. ಹಿಂಸೆ ಮತ್ತು ಹಣ ಬಲದ ಮೂಲಕ ಬಿಜೆಪಿಯು ಅಧಿಕಾರವನ್ನು ಹಿಡಿಯುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅವರು ಮಂಗಳವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಸಿದ ಜನಾಶೀರ್ವಾದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಬಿಜೆಪಿಯು ಹಣಕೊಟ್ಟು ನಾಯಕರನ್ನು ಖರೀದಿಸಿ ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಅಧಿಕಾರ ನಡೆಸುತ್ತಿದೆ. ಅಧಿಕಾರಕ್ಕಾಗಿ ಸುಳ್ಳು ಹೇಳುತ್ತಾ ಬಿಜೆಪಿಯು ಜನರನ್ನು ವಂಚಿಸುತ್ತಿದ್ದು, ಕಾಂಗ್ರೆಸ್ ಸತ್ಯದ ಹಾದಿಯಲ್ಲಿ ಸಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ

ಬಿಜೆಪಿಯು ಜನರನ್ನು ವಂಚಿಸಿ ಅಧಿಕಾರ ಹಿಡಿಯುತ್ತಿದೆ: ರಾಹುಲ್ ಗಾಂಧಿ ► ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ Read More »

ಕರಾವಳಿ

ಸುಳ್ಶ ಶಾಸಕರನ್ನು ಅಭಿನಂದಿಸಿದ ಕುದಲೂರು ಮುಸ್ಲಿಮ್ ಮುಖಂಡರು

(ನ್ಯೂಸ್ ಕಡಬ) newskadaba.com ಮಾ.20. ಕುದುಲೂರಿಗೆ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಯಲ್ಲಿ ರಸ್ತೆ ಕಾಂಕ್ರೀಟೀಕರಣಗೊಳಿಸಿ ಸಹಕರಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು ಸ್ಥಳೀಯ ಅಲ್ಪಸಂಖ್ಯಾತ ಮುಖಂಡರು ಭಾನುವಾರ ರಸ್ತೆ ಉದ್ಘಾಟನೆ ಬಳಿಕ ಅಭಿನಂದಿಸಿದರು. ಸ್ಥಳೀಯ ಧರ್ಮಗುರು ಅಬೂಬಕ್ಕರ್ ಹಾಜಿ, ಇಬ್ರಾಹಿಂ ಹಾಜಿ ಸೇರಿದಂತೆ, ಐದಾರು ಮುಸ್ಲಿಮ್ ಮುಖಂಡರುಗಳು ಶಾಸಕರನ್ನು ಹಾರ ಹಾಕಿ ಗೌರವಿಸಿ ಅಭಿನಂದಿಸಿದರು. ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುಸ್ಲಿಮ್ ಮುಖಂಡರು ಹತ್ತಿರದಲ್ಲೇ ಇರುವ ಅಬೂಬಕ್ಕರ್ ಅವರ ಮನೆಗೆ ಆಹ್ವಾನಿಸಿ ಲಘು ಪಾನೀಯ ನೀಡಿ ಉಪಚರಿಸಿದರು. ಈ ಸಂದರ್ಭದಲ್ಲಿ

ಸುಳ್ಶ ಶಾಸಕರನ್ನು ಅಭಿನಂದಿಸಿದ ಕುದಲೂರು ಮುಸ್ಲಿಮ್ ಮುಖಂಡರು Read More »

ಕರಾವಳಿ

ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.21. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಯುವಕರ ತಂಡವೊಂದು ಹಣ ಸಂಗ್ರಹಿಸಿದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೆರಿಯಶಾಂತಿ ಎಂಬಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದ್ದು, ಈ ಮರವನ್ನು ತೆರವುಗೊಳಿಸಿದ ಕೆಲವು ಮುಸ್ಲಿಂ ಯುವಕರು, ಅದೇ ರಸ್ತೆಯಲ್ಲಿ ಬರುತ್ತಿದ್ದ ಅನೇಕ ವಾಹನ ಚಾಲಕರಿಂದ ಹೆಚ್ಚುವರಿ ಹಣ ಸಂಗ್ರಹಣೆ ಮಾಡಿದ್ದಾರೆ.

ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್ Read More »

ಕರಾವಳಿ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ► “ಎಗ್ರಿಕಲ್ಚರಿಸ್ಟ್” ಫೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.20. ಅನೇಕ ವರ್ಷಗಳಿಂದ ಸರಕಾರಗಳು ರೈತರಿಗೆ ಸಾಲಮನ್ನಾ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದರೂ, ರೈತರ ಅನೇಕ ಬೇಡಿಕೆಗಳು ಇನ್ನೂ ಬಾಕಿಯಾಗಿವೆ. ಅದು ಜನಪ್ರತಿನಿಧಿಗಳನ್ನು ತಲಪದೇ ಇದ್ದುದರಿಂದ ಎಗ್ರಿಕಲ್ಚರಿಸ್ಟ್ ಫೇಸ್‌ಬುಕ್‌ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ರೈತರ ಬೇಡಿಕೆಯನ್ನು ಪರಿಗಣಿಸಿ ಮುಂದೆ ಬರುವ ಸರಕಾರಗಳು ಜಾರಿ ಮಾಡಬೇಕೆಂದು ಹಾಗೂ ವಿವಿಧ ಪಕ್ಷಗಳು ಈ ಕುರಿತು ಮುಂಬರುವ ಚುನಾವಣೆಯ ದೃಷ್ಟಿಯಿಂದ ತಮ್ಮ ಪ್ರಣಾಳಿಕೆಯಲ್ಲಿ ಅದನ್ನು

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ► “ಎಗ್ರಿಕಲ್ಚರಿಸ್ಟ್” ಫೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ Read More »

ಕರಾವಳಿ

ಅನುದಾನ ಬಿಡುಗಡೆಗೆ ಸಚಿವ ರೈ ಅವರಿಂದ ತಡೆ ► ಶಾಸಕ ಅಂಗಾರ ಆರೋಪ

(ನ್ಯೂಸ್ ಕಡಬ) newskadaba.com ಮಾ.20. ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆಗೊಂಡಿದ್ದ ಎರಡು ಕೋಟಿ ಅನುದಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರು ಇಲಾಖಾಧಿಕಾರಿಗಳಿಗೆ ಒತ್ತಡ ಹಾಕಿ ತಡೆ ಹಿಡಿದು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಆರೋಪಿಸಿದರು. ಅವರು ಭಾನುವಾರ ಕಡಬ ತಾಲೂಕಿನ ಕೊೖಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುಲೂರು ಎಂಬಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ಹತ್ತು ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟಿಕರಣವನ್ನು ಉದ್ಘಾಟನೆಗೊಳಿಸಿ

ಅನುದಾನ ಬಿಡುಗಡೆಗೆ ಸಚಿವ ರೈ ಅವರಿಂದ ತಡೆ ► ಶಾಸಕ ಅಂಗಾರ ಆರೋಪ Read More »

ಕರಾವಳಿ

ದೇವರಿಗೆ ಇಟ್ಟ ದೀಪದಿಂದಾಗಿ ಪೈಂಟ್‌ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com .ಉಡುಪಿ, ಮಾ.20. ದೇವರಿಗೆ ಇಟ್ಟ ದೀಪ ಮಗುಚಿ ಬಿದ್ದ ಪರಿಣಾಮ ಪೈಂಟ್‌ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಉಡುಪಿಯಲ್ಲಿ ಮಂಗಳವಾರದಂದು ನಡೆದಿದೆ. ಉಡುಪಿಯ ಈಶ್ವರನಗರದ ನಾಲ್ಕು ಮಹಡಿಯ ಕಟ್ಟಡವೊಂದರಲ್ಲಿ ಈ ಅಗ್ನಿ ಅವಘಡ ಸಂಭವಿದ್ದರಂದಾಗಿ ಲಕ್ಷಾಂತರ ರುಪಾಯಿಯ ನಷ್ಟ ಸಂಭವಿದೆ . ಪೈಂಟ್‌ ಅಂಗಡಿಯಲ್ಲಿ ದೇವರಿಗೆ ಇಟ್ಟ ದೀಪ ಬಿದ್ದು ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಅಪಾರ ಪ್ರಮಾಣದ ಪೈಂಟ್‌ ಡಬ್ಬಗಳು ಸುಟ್ಟು ಹೋಗಿವೆ. ಕಟ್ಟಡ ಪೂರ್ತಿ ದಟ್ಟ ಹೊಗೆ ಆವರಿಸಿದ್ದರಿಂದಾಗಿ ಅಗ್ನಿ

ದೇವರಿಗೆ ಇಟ್ಟ ದೀಪದಿಂದಾಗಿ ಪೈಂಟ್‌ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಮಾ.23 ರಿಂದ ಎ.06 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ► ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಾ.20.ಮಾರ್ಚ್ 23 ರಿಂದ ಎಪ್ರಿಲ್ 6 ರವರೆಗೆ ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಸದ್ರಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಕೆಂದ್ರಗಳನ್ನು ಮುಚ್ಚಿಸಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯಲ್ಲಿ ಪೊಲೀಸು ಕಮಿಷನರೇಟ್ ವ್ಯಾಪ್ತಿಯನ್ನು

ಮಾ.23 ರಿಂದ ಎ.06 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ► ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ Read More »

ಕರಾವಳಿ
Scroll to Top