ಕಡಬ ಮುಖ್ಯ ಪೇಟೆಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ನ.06. ಇಲ್ಲಿನ ಮುಖ್ಯ ಪೇಟೆಯ ಅಮ್ಮೂಸ್ ಜನರಲ್‌ ಸ್ಟೋರ್ ಅಂಗಡಿಯ ಮುಂಭಾಗದಲ್ಲಿ ಅಪರಿಚಿತ ಶವವೊಂದು ಪತ್ತೆಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಸುಮಾರು 35 ರಿಂದ 40 ವರ್ಷ ಪ್ರಾಯವನ್ನು ಹೋಲುವ ಅಪರಿಚಿತ ಗಂಡಸಿನ ಶವವು ಇದಾಗಿದ್ದು, ಸ್ಥಳೀಯರು ಗಮನಿಸಿ ಕಡಬ ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯನ್ವಯ ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Scroll to Top