ಕರಾವಳಿ

ಆಸಿಫಾಳ ಹತ್ಯೆಯನ್ನು ಖಂಡಿಸಿ ದೇಶಕ್ಕೇ ಮಾನವೀಯ ಸಂದೇಶವನ್ನು ನೀಡಿದ ಹಿಂದೂ ಬಾಂಧವರು ► ವಿಷು ಹಬ್ಬವನ್ನು ರದ್ದುಗೊಳಿಸಿ ದೇವಸ್ಥಾನದ ಮುಂಭಾಗದಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಎ.15. ದೇಶದಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಧರ್ಮವನ್ನು ಅಮಲೇರಿಸಿ ಕೊಂಡವರಂತೆ ಬದುಕುವವರ ಮಧ್ಯೆ ಇಡೀ ದೇಶಕ್ಕೆ ಮಾನವೀಯತೆಯ ಸಂದೇಶವನ್ನು ನೀಡಿದ ಘಟನೆ ಕಾಸರಗೋಡು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಭಾನುವಾರದಂದು ನಡೆದಿದೆ. ಕೇರಳದಾದ್ಯಂತ ಇಂದು ಹಿಂದೂ ಧಾರ್ಮಿಕ ಹಬ್ಬವಾದ ವಿಷು ಆಚರಣೆಯ ಸಂಭ್ರಮದ ನಡುವೆಯೇ ಜಮ್ಮುವಿನ ಕಥುವಾದಲ್ಲಿ ನಡೆದ 8 ರ ಹರೆಯದ ಅಮಾಯಕ ಬಾಲೆ ಆಸಿಫಾಳನ್ನು 7 ದಿವಸಗಳ ಕಾಲ ಕ್ರೂರವಾಗಿ ಅತ್ಯಾಚಾರಗೈದು ಭೀಕರವಾಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ […]

ಆಸಿಫಾಳ ಹತ್ಯೆಯನ್ನು ಖಂಡಿಸಿ ದೇಶಕ್ಕೇ ಮಾನವೀಯ ಸಂದೇಶವನ್ನು ನೀಡಿದ ಹಿಂದೂ ಬಾಂಧವರು ► ವಿಷು ಹಬ್ಬವನ್ನು ರದ್ದುಗೊಳಿಸಿ ದೇವಸ್ಥಾನದ ಮುಂಭಾಗದಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ Read More »

ಕರಾವಳಿ

ಕರಾವಳಿಯಲ್ಲಿ ಧಾರಾಕಾರ ಮಳೆ ► ಮರ್ಧಾಳ ಸರಕಾರಿ ಶಾಲಾ ಆವರಣ ಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಕಡಬ, ಎ.15. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಮರ್ಧಾಳ ಸರಕಾರಿ ಶಾಲೆಯ ಆವರಣ ಗೋಡೆಯು ಕುಸಿದಿದೆ. ಮರ್ಧಾಳ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದ ಸುತ್ತಲೂ ಮರ್ಧಾಳ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು ಮೂರು ಲಕ್ಷದಷ್ಟು ಅನುದಾನದಲ್ಲಿ ಇತ್ತೀಚೆಗಷ್ಟೇ ಕೆಂಪುಕಲ್ಲಿನ ಆವರಣ ಗೋಡೆ ನಿರ್ಮಿಸಲಾಗಿತ್ತು. ಭಾನುವಾರದಂದು ಸುರಿದ ಭಾರೀ ಗಾಳಿ ಮಳೆಗೆ ಆವರಣ ಗೋಡೆ ಬಿರುಕು ಬಿಟ್ಟು ಕುಸಿದು ಬಿದ್ದಿದೆ‌.

ಕರಾವಳಿಯಲ್ಲಿ ಧಾರಾಕಾರ ಮಳೆ ► ಮರ್ಧಾಳ ಸರಕಾರಿ ಶಾಲಾ ಆವರಣ ಗೋಡೆ ಕುಸಿತ Read More »

ಕರಾವಳಿ

ಖಾಸಗಿ ಸಮಾರಂಭದಲ್ಲಿ ಮದ್ಯ ಸರಬರಾಜು ► ಚುನಾವಣಾ ನೀತಿ ಸಂಹಿತೆ ಅಡ್ಡಿ ಇಲ್ಲ: ಅಬಕಾರಿ ಇಲಾಖೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು ಎ.15. ಮದುವೆ ಹಾಗೂ ಇತರೆ ಸಾಂಪ್ರದಾಯಿಕ ಖಾಸಗಿ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ನಿಯಮಾನುಸಾರ ಅಬಕಾರಿ ಇಲಾಖೆ ಅನುಮತಿ ಪಡೆಯಬೇಕು ಎಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ಕರ್ನಾಟಕ ಅಬಕಾರಿ ನಿಯಮದಂತೆ ಒಬ್ಬ ವ್ಯಕ್ತಿಯು 2.300 ಲೀಟರ್ ಭಾರತೀಯ ತಯಾರಕ ಮದ್ಯ ಹಾಗೂ 18.200 ಲೀಟರ್ ಬಿಯರ್ ದಾಸ್ತಾನು ಹೊಂದಿರಬಹುದಾಗಿದ್ದು, ಲೈಸನ್ಸ್ ಇಲ್ಲದೇ ಇದಕ್ಕಿಂತ ಜಾಸ್ತಿ ದಾಸ್ತಾನು ಇಡುವುದು ಅಬಕಾರಿ ಕಾಯಿದೆಯಂತೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಯಾವುದೇ ಖಾಸಗಿ

ಖಾಸಗಿ ಸಮಾರಂಭದಲ್ಲಿ ಮದ್ಯ ಸರಬರಾಜು ► ಚುನಾವಣಾ ನೀತಿ ಸಂಹಿತೆ ಅಡ್ಡಿ ಇಲ್ಲ: ಅಬಕಾರಿ ಇಲಾಖೆ ಸ್ಪಷ್ಟನೆ Read More »

ಕರಾವಳಿ

ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ► ವಿದ್ಯುತ್, ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಎ.15. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಪರಿಸರದ ಸುಬ್ರಹ್ಮಣ್ಯ, ಕೈಕಂಬ, ಬಿಳಿನೆಲೆ, ನೆಟ್ಟಣ, ಮರ್ಧಾಳ, ಕೊಣಾಜೆ, ಕೋಡಿಂಬಾಳ, ಪಂಜ, ಇಚಿಲಂಪಾಡಿ, ನೆಲ್ಯಾಡಿ, ಹೊಸ್ಮಠ, ಬಲ್ಯ, ಕುಂತೂರು, ಆಲಂಕಾರು ಸೇರಿದಂತೆ ವಿವಿಧೆಡೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದೆ. ವಿದ್ಯುತ್ ಕೈಕೊಟ್ಟಿದ್ದರಿಂದಾಗಿ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಸುಬ್ರಹ್ಮಣ್ಯದ ಬಳ್ಪ, ಗುತ್ತಿಗಾರು ಸೇರಿದಂತೆ ವಿವಿಧೆಡೆ ಭಾನುವಾರ ಬೆಳಗ್ಗಿನ ಜಾವ ಬಹುತೇಕ ಮಳೆಯಾಗಿತ್ತು.

ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ► ವಿದ್ಯುತ್, ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ Read More »

ಕರಾವಳಿ

ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.15. ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ಸಸಂತ್ರ ತುಳುನಾಡು ಪಕ್ಷ ಉದಯಿಸಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್‌. ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಸ್ಥಾಪಕಾಧ್ಯಕ್ಷ ಶೈಲೇಶ್‌ ಆರ್‌. ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡಲು ವಿಫಲವಾಗಿದ್ದು, ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅನುಮೋದನೆ ನೀಡಿ ಪ್ರತಿಭಟನೆಯ ನಾಟಕ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ,

ಪ್ರತ್ಯೇಕ ತುಳುವ ರಾಜ್ಯದ ಬೇಡಿಕೆಯೊಂದಿಗೆ ನೂತನ ಪಕ್ಷ ಅಸ್ತಿತ್ವಕ್ಕೆ ► ಪುತ್ತೂರು ವಿಧಾನಸಭಾ ಕ್ಷೇತ್ರದ ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್. ಕಣಕ್ಕೆ Read More »

ಕರಾವಳಿ

ಲಾಯಿಲ: ಬೈಕ್ ಸ್ಕಿಡ್ ► ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.15. ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಮೃತ ಸವಾರನನ್ನು ಬೆಳ್ತಂಗಡಿ ಕೋರ್ಟ್ ರಸ್ತೆಯ ನಿವಾಸಿ, ಲಾಯಿಲದ ಬ್ರದರ್ಸ್ ಗ್ಯಾರೇಜಿನ ಮಾಲಕ ಮುಹಮ್ಮದ್ ಹನೀಫ್ (48) ಎಂದು ಗುರುತಿಸಲಾಗಿದೆ. ಅವರು ಶನಿವಾರ ತಡರಾತ್ರಿ ತನ್ನ ಸ್ನೇಹಿತನೊಬ್ಬನನ್ನು ಆತನ ಮನೆಗೆ ಬಿಟ್ಟು ಹಿಂದಿರುಗುತ್ತಿದ್ದಾಗ ಲಾಯಿಲ ಗ್ರಾಮದ ಪಡ್ಲಾಡಿ ಸಮೀಪದ ಅಗಳಿ ಎಂಮಬಲ್ಲಿಗೆ ತಲುಪಿದಾಗ ಬೈಕ್‌ ಸ್ಕಿಡ್ ಆಗಿ

ಲಾಯಿಲ: ಬೈಕ್ ಸ್ಕಿಡ್ ► ಸವಾರ ಮೃತ್ಯು Read More »

ಕರಾವಳಿ

ಕೋಡಿಂಬಾಳ: ಕಿರು ಸೇತುವೆಯಿಂದ ಕೆಳಗೆ ಬಿದ್ದ ಸ್ವಿಫ್ಟ್ ಕಾರು ► ಕಾರು ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಎ.15. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ಕಿರು ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ಪಂಜ – ಕಡಬ ರಸ್ತೆಯ ಕೋಡಿಂಬಾಳ ಸಮೀಪದ ಅಜ್ಜಿಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಕೋಡಿಂಬಾಳದ ಉಂಡಿಲ ನಿವಾಸಿ ಕೃಷ್ಣ ಭಟ್ ಎಂಬವರ ಪುತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕೋಡಿಂಬಾಳದಿಂದ ಕಡಬ ಕಡೆಗೆ ಆಗಮಿಸುತ್ತಿದ್ದ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ

ಕೋಡಿಂಬಾಳ: ಕಿರು ಸೇತುವೆಯಿಂದ ಕೆಳಗೆ ಬಿದ್ದ ಸ್ವಿಫ್ಟ್ ಕಾರು ► ಕಾರು ಚಾಲಕ ಅಪಾಯದಿಂದ ಪಾರು Read More »

ಕರಾವಳಿ

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ವಿಶ್ವದಲ್ಲೆಡೆ ಮಿಡಿದ ಕಂಬನಿ ► ನಾಳೆ (ಎ.16) ಮಂಗಳೂರು ಸಮಾನ ಮನಸ್ಕರ ಸಂಘಟನೆಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಮೊಂಬತ್ತಿ ಸ್ಮರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.15. ಇತ್ತೀಚೆಗೆ ಎಂಟು ಮಂದಿ ನರ ರಾಕ್ಷಸರು ಜಮ್ಮು ಕಾಶ್ಮೀರದ ಕಥುವಾದ ಎಂಟು ವರ್ಷದ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ನಡೆಸಿದ್ದಲ್ಲದೆ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಮಂಗಳೂರಿನ ವಿವಿಧ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಎಪ್ರಿಲ್ 16 ರಂದು ಸಂಜೆ 06.30 ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಮೊಂಬತ್ತಿ ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಸಮಾನ ಮನಸ್ಕರ ಸಭೆಯನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ವಿದ್ಯಾ ದಿನಕರ್, ಸೈಫ್ ಸುಲ್ತಾನ್, ರಾಷ್ಟ್ರೀಯ ವಿಚಾರವಾದಿ

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ವಿಶ್ವದಲ್ಲೆಡೆ ಮಿಡಿದ ಕಂಬನಿ ► ನಾಳೆ (ಎ.16) ಮಂಗಳೂರು ಸಮಾನ ಮನಸ್ಕರ ಸಂಘಟನೆಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಮೊಂಬತ್ತಿ ಸ್ಮರಣೆ Read More »

ಕರಾವಳಿ

ಬೆಳ್ತಂಗಡಿ: ಅಕ್ರಮ ಗಾಂಜಾ ಸಾಗಾಟ ► ಆರೋಪಿಗಳಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.14. ಬೆಳ್ತಂಗಡಿ ತಾಲೂಕಿನ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜು ಬಳಿ, ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು ಮೊತ್ತ 1 ಲಕ್ಷ ರೂ. ಮೌಲ್ಯದ ಗಾಂಜಾ ಜಫ್ತು ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಬೆಳ್ತಂಗಡಿಯ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರದಂದು, ಪೊಲೀಸು ಉಪನಿರೀಕ್ಷಕರಾದ ಗಿರೀಶ್‌ ಕುಮಾರ್‌ ಎಸ್‌. ರವರು ತಮ್ಮ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ, ಮಾರುತಿ 800 ಕಾರಿನಲ್ಲಿ ಬಂದ

ಬೆಳ್ತಂಗಡಿ: ಅಕ್ರಮ ಗಾಂಜಾ ಸಾಗಾಟ ► ಆರೋಪಿಗಳಿಬ್ಬರ ಬಂಧನ Read More »

ಕರಾವಳಿ

ಮಂಗಳೂರು: ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,  ಎ.14. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಾರ್ಷಿಕೋತ್ಸವವು ಇತ್ತೀಚೆಗೆ ನೆರವೇರಿತು. ಉದ್ಘಾಟನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಕುಲಪತಿಗಳಾದ ಡಾ. ಹೆಚ್.ಡಿ. ನಾರಾಯಣ ಸ್ವಾಮಿ ನೆರವೇರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶ ಎದುರಿಸುತ್ತಿರುವ ಆಹಾರ ಸಮಸ್ಯೆಗೆ ಮತ್ಸ್ಯೋದ್ಯಮವು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಪೈಪೋಟಿಯ ಈ ಜಗತ್ತಿನಲ್ಲಿ ಶೃದ್ಧೆಯಿಂದ ಓದಿ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಡಾ. ಎನ್. ಕೆ.

ಮಂಗಳೂರು: ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ Read More »

ಕರಾವಳಿ
Scroll to Top