ಕರಾವಳಿ

ಪಂಜಿಕಲ್ಲು ಪದವು: ಜುಗಾರಿ ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.14. ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, 5060 ರೂಪಾಯಿ, ಎರಡು ಸ್ಕೂಟರ್ ಹಾಗೂ ಐದು ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಪಂಜಿಕಲ್ಲುಪದವು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯ ಪಂಜಿಕಲ್ಲುಪದವಿನ ಮಬ್ಬರಿಯ ಬೈಲು ಎಂಬಲ್ಲಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಡಾ.ರವಿಕಾಂತೇಗೌಡರವರ ನಿರ್ದೆಶನದಲ್ಲಿ ಬಂಟ್ವಾಳ ಗ್ರಾಮಾಂತರ […]

ಪಂಜಿಕಲ್ಲು ಪದವು: ಜುಗಾರಿ ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ Read More »

ಕರಾವಳಿ

ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಎ.13. ನಕ್ಸಲ್ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿವಿಧೆಡೆಯ ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶುಕ್ರವಾರದಂದು ಜಂಟಿಯಾಗಿ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ನಕ್ಸಲ್ ಸೂಕ್ಷ್ಮ ಪ್ರದೇಶಗಳಾದ ಕೊಣಾಜೆ, ಕೊಂಬಾರು, ಬಿಳಿನೆಲೆ ಹಾಗೂ ಕೈಕಂಬ ಮತಗಟ್ಟೆಗಳಿಗೆ‌ ಭೇಟಿ‌ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮುಂಬರುವ ವಿಧಾನಸಭಾ ಚುನಾವಣೆಯು ಸುಗಮ ರೀತಿಯಲ್ಲಿ ನಡೆಯಲು ಸರ್ವ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ.

ನಕ್ಸಲ್ ಸೂಕ್ಷ್ಮ ಪ್ರದೇಶವಾದ ಬಿಳಿನೆಲೆ, ಕೈಕಂಬಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ ► ಸಾರ್ವಜನಿಕರೊಂದಿಗೆ ಸಂವಾದ Read More »

ಕರಾವಳಿ

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಕಡಬ, ಎ.13. ರಾಮಕುಂಜ ಗ್ರಾಮ ಪಂಚಾಯಿತಿಯ 9 ನೇ ಬೂತ್ ಮಟ್ಟದಲ್ಲಿ ಬಿಜೆಪಿ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಸಂಪ್ಯಾಡಿಯಲ್ಲಿ ನಡೆಯಿತು. ಪೂವಪ್ಪ ಗೌಡ ಸಂಪ್ಯಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಸಾಮಜಿಕ ಜಾಲತಾಣ ಮುಖ್ಯಸ್ಥ ಸದಾಶಿವ ಶೆಟ್ಟಿ ಮಾರಂಗ, ಮುಖಂಡರಾದ ಯಶವಂತ ಸಂಪ್ಯಾಡಿ, ರಮೇಶ್ ಗೋಳಿತೊಟ್ಟು, ದೇರಣ್ಣ ಸಂಪ್ಯಾಡಿ, ಮಾಧವ ಪೆರಿಯಡ್ಕ, ಮೋನಪ್ಪ ಸಂಪ್ಯಾಡಿ , ಅಂಗಾರ ಗೌಡ ಮೊದಲಾದವರು ಇದ್ದರು.

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ Read More »

ಕರಾವಳಿ

ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.13. ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಥಮ ಬಿ.ಇ. ವಿದ್ಯಾರ್ಥಿನಿ, ಬೆಟ್ಟಂಪಾಡಿ ನಿವಾಸಿ ವಿಶ್ವನಾಥ ಆಚಾರ್ಯ ಎಂಬವರ ಪುತ್ರಿ ಶಿವಾನಿ ಎನ್.ವಿ‌. ಎಂದು ಗುರುತಿಸಲಾಗಿದೆ. ಈಕೆ ಗುರುವಾರದಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪುತ್ತೂರು ಪೊಲೀಸರು

ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ/ ಶಾಲೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಎ.13. ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಮೌಲಾನಾ ಆಜಾದ್ ಮಾದರಿ ಶಾಲೆ ಕುದ್ರೋಳಿ/ ಮಂಜನಾಡಿ/ ಮೂಲರಪಟ್ನ/ ಪುತ್ತೂರು/ಉಲಾಯಿಬೆಟ್ಟು/ ಗುರುಕಂಬಳಗಳಲ್ಲಿ 6ನೇ ತರಗತಿಗೆ ಸರ್ಕಾರಿ ಮುಸ್ಲಿಂ ವಸತಿ ಶಾಲೆ ನಾಟೇಕಲ್/ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ದೇರಳೆಕಟ್ಟೆ ಇಲ್ಲಿಗೆ 6ನೇ ತರಗತಿಯಿಂದ 8 ನೇ ತರಗತಿಯವರೆಗೆ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜು ದೇರಳೆಕಟ್ಟೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ

ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ/ ಶಾಲೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಎಪ್ರಿಲ್ 14ರಂದು `ಬಿಸುತ ಪೊಲಬು’

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಎ.13  ನಮ್ಮೂರು – ನೆಕ್ಕಿಲಾಡಿ ಸಂಘಟನೆಯ ವತಿಯಿಂದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕದ ಸಾರ್ವಜನಿಕ ಮೈದಾನದಲ್ಲಿ ಎ.14ರಂದು `ಬಿಸುತ ಪೊಲಬು’ ಸೌಹಾರ್ದಯುತವಾಗಿ ವಿಷು ಆಚರಣೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಸಾಮೂಹಿಕವಾಗಿ ಕಣಿಯಿಟ್ಟ ಬಳಿಕ ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, `ನಮ್ಮೂರು- ನೆಕ್ಕಿಲಾಡಿ’ಯ ಗೌರವಾಧ್ಯಕ್ಷ ರಾಧಾಕೃಷ್ಣ ನಾೖಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ 34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಶ್ರೀಮತಿ ರತಿ ಎಸ್. ನಾಯ್ಕ, ಉದ್ಯಮಿ

ಎಪ್ರಿಲ್ 14ರಂದು `ಬಿಸುತ ಪೊಲಬು’ Read More »

ಕರಾವಳಿ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್

(ನ್ಯೂಸ್ ಕಡಬ) newskadaba.com ಕಡಬ, ಎ.13. ತುಳುನಾಡಿನ ದೈವಾರಧನೆ, ನಾಗಾರಾಧನೆ, ದೇವತಾರಾಧನೆ ಕಾರ್ಯಗಳಲ್ಲಿ ಭಕ್ತಿ ಶೃದ್ಧೆಗಳಿಂದ ಭಾಗವಹಿಸುವುದರಿಂದ ಕೌಟುಂಬಿಕ ಮೌಲ್ಯವೃದ್ಧಿಗೆ ಮೂಲ ಪ್ರೇರಣೆಯಾಗುತ್ತದೆ ಎಂದು ತುಳುವ ಬೊಳ್ಳಿ, ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಬುಧವಾರ ರಾತ್ರಿ ಬಲ್ಯ-ಪಡ್ನೂರು ಶ್ರೀರಾಜನ್ ದೈವ ಹಾಗೂ ಪರಿವಾರ ದೈವಗಳ ನವೀಕರ, ಪುನರ್ಪ್ರತಿಷ್ಠೆ, ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ತುಳುನಾಡು ದೈವದೇವರುಗಳ ನೆಲೆವೀಡು, ದೈವ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್ Read More »

ಕರಾವಳಿ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಆಲಂಕಾರು, ಎ.13. ಯಾತ್ರಿಕ ಬದುಕಿಗೆ ಪ್ರೇರಣೆ ನೀಡುವ ಯಂತ್ರಮಾನವನೆಡೆಗೆ ಸಾಗುವ ಶಿಕ್ಷಣದಿಂದ ದೂರ ಸರಿದು ವಿಶ್ವಮಾನವನೆಡೆಗೆ ಕೊಂಡೊಯ್ಯುವ ಶಿಕ್ಷಣ ಇಂದು ಬೇಕಾಗಿದೆ ಎಂದು ಹೊರನಾಡು ಅನ್ನಪುರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು. ಅವರು ಬುಧವಾರ ಆಲಂಕಾರು ಶ್ರೀ ಭಾರತೀ ಶಾಲಾ ರಜತಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ರಜತ ಸಂಭ್ರಮದ ಹಿನ್ನೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳ ಕಾಮಗಾರಿಗಳಿಗೆ ಶಿಲ್ಯಾಸ ನೆರವೇರಿಸಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ನಾವು ಇಂದು ಬದಲಾವಣೆಯ ಯುಗದಲ್ಲಿದ್ದೇವೆ, ಬದಲಾವಣೆ ಜಗದ ನಿಯಮವಾದರೂ ನಾವು ನಮ್ಮ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ Read More »

ಕರಾವಳಿ

ಕಡಬ: ಮನೆಯ ಪರಿಸರ ಸ್ವಚ್ಛತೆಗೆ ಹಾಕಿದ ಬೆಂಕಿಗೆ ಹುಣಸೆ ಮರ ಆಹುತಿ ► ಅಗ್ನಿಶಾಮಕ ದಳದವರ ಆಗಮನದಿಂದ ತಪ್ಪಿತು ಸಂಭಾವ್ಯ ಅನಾಹುತ

(ನ್ಯೂಸ್ ಕಡಬ) newskadaba.com ಕಡಬ, ಎ.13. ಮನೆಯ ಪಕ್ಕದಲ್ಲಿ ಕಾಡುಹುಲ್ಲುಗಳು ಬೆಳೆದಿರುವುದನ್ನು ಉರಿಸಲೆಂದು ಹಾಕಿದ ಬೆಂಕಿಯು ಮರಕ್ಕೆ ಹಿಡಿದಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ ಘಟನೆ ಶುಕ್ರವಾರದಂದು ಬೆಳಿಗ್ಗೆ ನಡೆದಿದೆ. ಎರಡು ದಿನಗಳ ಹಿಂದೆ ಪರಿಸರವನ್ನು ಸ್ವಚ್ಚಗೊಳಿಸಲೆಂದು ಹಾಕಿದ ಬೆಂಕಿಯು ಹುಣಸೆ ಮರಕ್ಕೆ ಹಿಡಿದಿದ್ದು, ಆ ಬಳಿಕ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದರು. ಆದರೆ ಶುಕ್ರವಾರದಂದು ಬೆಳಿಗ್ಗೆ ಮರದಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು, ಬಳಿಕ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡನೇ ಬಾರಿಗೆ

ಕಡಬ: ಮನೆಯ ಪರಿಸರ ಸ್ವಚ್ಛತೆಗೆ ಹಾಕಿದ ಬೆಂಕಿಗೆ ಹುಣಸೆ ಮರ ಆಹುತಿ ► ಅಗ್ನಿಶಾಮಕ ದಳದವರ ಆಗಮನದಿಂದ ತಪ್ಪಿತು ಸಂಭಾವ್ಯ ಅನಾಹುತ Read More »

ಕರಾವಳಿ

ಸ್ವಚ್ಛ ಗ್ರಾಮ ಖ್ಯಾತಿಯ ಕಡಬದಲ್ಲಿ ಮರೀಚಿಕೆಯಾದ ಸ್ವಚ್ಚತೆ ► ರಸ್ತೆಯಲ್ಲೇ ಹರಿಯುತ್ತಿದೆ ಹೊಟೇಲ್ ಗಳ ಹೊಲಸು ನೀರು

(ನ್ಯೂಸ್ ಕಡಬ) newskadaba.com ಕಡಬ, ಎ.12. ಕಡಬ ಪೇಟೆಯಲ್ಲಿ ಹೊಟೇಲ್ ಗಳ ದ್ರವ ತಾಜ್ಯ ಹರಿಯುವ ಪೈಪ್ ಒಡೆದು ಹೊಲಸು ನೀರು ರಸ್ತೆಯ ಬದಿಯಲ್ಲಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಿಪರೀತ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಬ ಪೇಟೆಯ ಹೊಟೇಲ್ ಗಳು ಹಾಗೂ ರೆಸ್ಟೋರೆಂಟ್ ಗಳ ದ್ರವತ್ಯಾಜ್ಯವನ್ನು ದ್ರವತ್ಯಾಜ್ಯ ವಿಲೇವಾರಿ ಘಟಕಕ್ಕೆ ಹರಿಸಲು ಅಳವಡಿಸಲಾಗಿರುವ ಪೈಪ್ ಒಡೆದ ಪರಿಣಾಮ ಕಳೆದ ಆರು ದಿನಗಳಿಂದ ದುರ್ಗಂಧಪೂರಿತ ಹೊಲಸು ನೀರು ರಸ್ತೆಯ ಪಕ್ಕದಲ್ಲಿಯೇ

ಸ್ವಚ್ಛ ಗ್ರಾಮ ಖ್ಯಾತಿಯ ಕಡಬದಲ್ಲಿ ಮರೀಚಿಕೆಯಾದ ಸ್ವಚ್ಚತೆ ► ರಸ್ತೆಯಲ್ಲೇ ಹರಿಯುತ್ತಿದೆ ಹೊಟೇಲ್ ಗಳ ಹೊಲಸು ನೀರು Read More »

ಕರಾವಳಿ
Scroll to Top