ಕರಾವಳಿ

ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ,  ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಎಂಟು ದಿನಗಳ ಕಾಲ ನಡೆಯಲಿರುವ  ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಆದಿತ್ಯವಾರದಂದು ಶ್ರೀ ಭಾರತಿ ಕಾಲೇಜು, ನಂತೂರುನಲ್ಲಿ ನಡೆಯಿತು. ಶ್ರೀ ನಜೀರ್, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆಯವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರ ಉದ್ಗಾಟನೆಯನ್ನು ಮಾಡಿದರು. ಇವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರು ಚುನಾವಣಾ ಕರ್ತವ್ಯದ ಪ್ರಜಾಪ್ರಭುತ್ವ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಚುನಾವಣಾ ಕರ್ತವ್ಯದ […]

ಜಿಲ್ಲಾ ಗೃಹರಕ್ಷಕ ದಳದ ಮೂಲ ತರಬೇತಿ ಶಿಬಿರದ ಉದ್ಘಾಟನೆ Read More »

ಕರಾವಳಿ

ಹಿಂದಿನ ರೇಡಿಯೋ ಪೆವಿಲಿಯನ್ ಇಂದಿನ ಅಂಚೆ ಕಛೇರಿ ► ಹೊಸಮಠದ ಪಿರಮಿಡ್ ಆಕಾರದ ಆರು ಕೋನಗಳ ಕಟ್ಟಡದ ಸುತ್ತ ಒಂದು ನೋಟ

(ನ್ಯೂಸ್ ಕಡಬ) newskadaba.com ಕಡಬ, ಎ.16. ಅದು ಅರುವತ್ತರ ದಶಕ, ಅಂದಿನ ಕಾಲಕ್ಕೆ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಎನ್ನುವುದು ಅಪರೂಪ. ಆದರೆ ದೇಶದ ಹಳ್ಳಿಹಳ್ಳಿಗೆ ರೇಡಿಯೋ ಮಾಧ್ಯಮ ಮಾತ್ರ ಕಾಲಿಟ್ಟಿತ್ತು. ಆದರೆ ಅದು ಉಳ್ಳವರ ಸೊತ್ತು ಎನ್ನುವ ಮಾತು ಪ್ರಚಲಿತದಲ್ಲಿತ್ತು. ಅಂತದೊಂದು ವಾತಾವರಣದಲ್ಲಿ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೇಡಿಯೋ ಪೆವಿಲಿಯನ್ ಇರುತ್ತಿತ್ತು. ಆದರೆ ಅದೆಲ್ಲಾ ನೇಪೇಥ್ಯಕ್ಕೆ ಸರಿದು ಹಲವು ವರ್ಷಗಳೇ ಸಂದು ಹೋಗಿವೆ. ಅದರ ಕುರುಹು ಎನ್ನುವಂತೆ ಹೊಸಮಠದಲ್ಲೊಂದು ರೇಡಿಯೋ ಪೆವಿಲಿಯನ್ ಕಟ್ಟಡ ಈಗಲೂ ಉಳಿದುಕೊಂಡಿದೆ,

ಹಿಂದಿನ ರೇಡಿಯೋ ಪೆವಿಲಿಯನ್ ಇಂದಿನ ಅಂಚೆ ಕಛೇರಿ ► ಹೊಸಮಠದ ಪಿರಮಿಡ್ ಆಕಾರದ ಆರು ಕೋನಗಳ ಕಟ್ಟಡದ ಸುತ್ತ ಒಂದು ನೋಟ Read More »

ಕರಾವಳಿ

ಆಸಿಫಾಳ ಹತ್ಯೆ ಖಂಡಿಸಿ ಕನ್ಯಾನದಲ್ಲಿ ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲುತೂರಾಟ ► ಬಲಾತ್ಕಾರದ ಬಂದನ್ನು ತಡೆಯಲು ತೆರಳಿದ ವಿಟ್ಲ ಪೊಲೀಸರಿಗೆ ಯುವಕರ ಗುಂಪಿನಿಂದ ದಿಗ್ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಎ.16. ಆಸಿಫಾ ಪ್ರಕರಣದಲ್ಲಿ ನ್ಯಾಯಕ್ಕಾಗ್ರಹಿಸಿ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರಿಗೆ ಸ್ಥಳೀಯ ಯುವಕರು ದಿಗ್ಬಂಧನ ವಿಧಿಸಿದ ಘಟನೆ ಸೋಮವಾರದಂದು ಕರ್ನಾಟಕ – ಕೇರಳ ಗಡಿಯ ಆನೇಕಲ್ ಎಂಬಲ್ಲಿ ನಡೆದಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ಮತಾಂಧ ಶಕ್ತಿಗಳ ಕೈಯಲ್ಲಿ‌ ನಲುಗಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಗೀಡಾದ ಎಂಟರ ಹರೆಯದ ಬಾಲೆ ಆಸಿಫಾ ಪ್ರಕರಣಕ್ಕೆ‌ ನ್ಯಾಯಕ್ಕಾಗ್ರಹಿಸಿ ಸೋಮವಾರದಂದು ಕೇರಳದಾದ್ಯಂತ ಸ್ವಯಂ ಪ್ರೇರಿತ ಬಂದ್

ಆಸಿಫಾಳ ಹತ್ಯೆ ಖಂಡಿಸಿ ಕನ್ಯಾನದಲ್ಲಿ ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲುತೂರಾಟ ► ಬಲಾತ್ಕಾರದ ಬಂದನ್ನು ತಡೆಯಲು ತೆರಳಿದ ವಿಟ್ಲ ಪೊಲೀಸರಿಗೆ ಯುವಕರ ಗುಂಪಿನಿಂದ ದಿಗ್ಬಂಧನ Read More »

ಕರಾವಳಿ

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಬಂಟ್ವಾಳ ತಾಲೂರಿನ ಇರಾ ಗ್ರಾಮದಲ್ಲಿ ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ನಿಶ್ಚಿತಾರ್ಥ್ಥ ನಡೆಯುತ್ತಿದ್ದ ವೇಳೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧ್ಯ ಸಂಗ್ರಹದ ನೆಪದಲ್ಲಿ ಮನೆ ಮಾಲಿಕರಾದ ಸ್ಟೀವನ್ ಡಿ’ಸಿಲ್ವ ಅವರನ್ನು ಬಂಧಿಸಲಾಗಿದೆ. ಶನಿವಾರದಂದು ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ಅವರ ಸಹೋದರನ ಪುತ್ರಿಯ ನಿಶ್ಚಿತಾರ್ಥ್ಥ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಈ ದಾಳಿಯು ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ.

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ Read More »

ಕರಾವಳಿ

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು

(ನ್ಯೂಸ್ ಕಡಬ) newskadaba.com ಕಡಬ, ಎ. 14. ಇಲ್ಲಿನ ಪಿಜಕಳ ಉಜ್ರುಪಾದೆ ಪ್ರದೇಶದ ಅಲ್ಪಸಂಖ್ಯಾತ ಪ್ರಮುಖರು ಸುಳ್ಯ ಶಾಸಕ ಎಸ್.ಅಂಗಾರ ಅವರ ಸಮ್ಮುಖದಲ್ಲಿ  ಬಿಜೆಪಿ ಸುಳ್ಯ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಫಯಾಝ್ ಕಡಬ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡರು. ಉಜ್ರುಪಾದೆ ನಿವಾಸಿಗಳಾದ ಮಹಮ್ಮದ್ ರಫೀಕ್, ಅಬ್ದುಲ್ ರಝಾಕ್ ಪಿಜಕಳ, ಅಬೂಬಕ್ಕರ್, ಸಲೀಮ್, ರಮೀಝ್, ಅಬ್ದುಲ್ ಖಾದರ್, ಆದಂ ಸಾಹೇಬ್, ಉಸ್ಮಾನ್ ಸಾಹೇಬ್, ಮುನ್ನಾ, ಜಲೀಲ್ ಮುಂತಾದ ಪ್ರಮುಖರನ್ನು ಶಾಸಕ ಎಸ್.ಅಂಗಾರ ಹಾಗೂ ಬಿಜೆಪಿ ಮುಖಂಡರು

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು Read More »

ಕರಾವಳಿ

 ಕೊಡಿಮಾರು ಅಬೀರ ಉಳ್ಳಾಕುಲು ಮತ್ತು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ 

(ನ್ಯೂಸ್ ಕಡಬ) newskadaba.com ಸವಣೂರು, ಎ.16. ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಕೊಡಿಮಾರು ಅಬೀರದ ಶ್ರೀ ಉಳ್ಳಾಕುಲು, ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ದಿನಾಂಕ 20-04-2018 ಮತ್ತು 21-04-2018ರಂದು ನಡೆಯಲಿದೆ. ದಿನಾಂಕ 15-04-2018ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಕಾಣಿಯೂರು ಮಠದ ಅರ್ಚಕರಾದ ವೇದಮೂರ್ತಿ ಶ್ರೀ ಬಾಲಕೃಷ್ಣ ಅಸ್ರಣ್ಣರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಗೊನೆ ಕಡಿಯುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ದಿನಾಂಕ 20-04-2018 ಶುಕ್ರವಾರ ಬೆಳಿಗ್ಗೆ ಗಂಟೆ 9-00ರಿಂದ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ದೈವಗಳಿಗೆ

 ಕೊಡಿಮಾರು ಅಬೀರ ಉಳ್ಳಾಕುಲು ಮತ್ತು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ  Read More »

ಕರಾವಳಿ

ಪುಣ್ಚಪ್ಪಾಡಿ: ಚಿನ್ನದ ಟೊಪ್ಪಿ ಕಲಿಕಾ ಕಾವ್ಯದ ಸಮಾರೋಪ

(ನ್ಯೂಸ್ ಕಡಬ) newskadaba.com  ಸವಣೂರು, ಎ.16. ಅನುಭವ, ಅವಕಾಶ, ಪ್ರೀತಿ, ಸಂತಸಗಳು ಕಲಿಕೆಯ ಆಧಾರ ಸ್ತಂಭಗಳು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ರಮೇಶ್ ಉಳಯ ಹೇಳಿದರು. ಅವರು ಪುತ್ತೂರಿನ ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ ನಡೆದ ಚಿನ್ನದ ಟೊಪ್ಪಿ ಕಲಿಕಾ ಕಾವ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡುತಿದ್ದರು. ಅನುಭವ ಜನ್ಯ ಕಲಿಕೆಯಲ್ಲಿ ಬೆಳೆಯಬೇಕಾದ ಮಕ್ಕಳು ಇಂದು ಅಮೂರ್ತ ಸನ್ನಿವೇಶ ರಹಿತ ಕಲಿಕಾ ವ್ಯವಸ್ಥೆಗೆ ಒಳಗಾಗಿರುವುದು ಮಕ್ಕಳ ದುರಂತವೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಲಾವಿದ ನಾಗರಾಜ ನಿಡ್ವಣ್ಣಾಯರು

ಪುಣ್ಚಪ್ಪಾಡಿ: ಚಿನ್ನದ ಟೊಪ್ಪಿ ಕಲಿಕಾ ಕಾವ್ಯದ ಸಮಾರೋಪ Read More »

ಕರಾವಳಿ

ಬೆಳಂದೂರು: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.16. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೋ.ಪಧ್ಮನಾಭರವರು ವಿದ್ಯಾರ್ಥಿಗಳು ಜೀವನದಲ್ಲಿ ಸೇವಾ ಮನೋಭಾವ ಬೆಳಸಿಕೊಂಡು ರಾಷ್ಟ್ರ ನಿಮಾರ್ಣಕ್ಕೆ ಕೈ ಜೋಡಿಸಬೇಕಾಗಿ ಕರೆ ನೀಡಿದರು. ರಾ.ಸೇ.ಯೋ.ಯ ಯೋಜನಾಧಿಕಾರಿಗಳಾದ ಪ್ರೋ.ವೆಂಕಟೇಶ್ ಪ್ರಸನ್ನ ರವರು ಯೋಜನೆ ಪ್ರಾರಂಭದಿಂದ ಇಲ್ಲಿವರೆಗಿನ ಚಟುವಟಿಕೆಗಳನ್ನು ಪುನರ್ ನಮನ ಮಾಡಿಕೊಳ್ಳುತ್ತಾ 2ವಿಶೇಷ ಶಿಬಿರದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳನ್ನು ಸ್ಮರಿಸಿದರು. ವೇದಿಕೆಯಲ್ಲಿ ಎಲ್ಲಾ ಉಪನ್ಯಾಸಕರು ಮತ್ತು

ಬೆಳಂದೂರು: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ Read More »

ಕರಾವಳಿ

ಬೆಳಂದೂರು: ಅಂಬೇಡ್ಕರ್ ಜಯಂತಿ

(ನ್ಯೂಸ್ ಕಡಬ) newskadaba.com ಸವಣೂರು, ಎ.16. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯನ್ನು ಬೆಳಂದೂರು ಗ್ರಾಮ ಪಂಚಾಯತ್ ನಲ್ಲಿ ಅಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಅವರು, ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು.ಭಾರತದ ಸಂವಿಧಾನವನ್ನು ರಚಿಸಿದ ಇವರು ‘ಸಂವಿಧಾನ ಶಿಲ್ಪಿ’ ಎಂದರು. ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗದವರಾದ ಮಮತಾ, ಗೀತಾ, ಹರ್ಷಿತ್, ಸಂತೋಷ್, ಉಪಸ್ಥಿತರಿದ್ದರು.

ಬೆಳಂದೂರು: ಅಂಬೇಡ್ಕರ್ ಜಯಂತಿ Read More »

ಕರಾವಳಿ

ಕಾಣಿಯೂರು: ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಅಂಬೇಡ್ಕರ್ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com  ಸವಣೂರು, ಎ.16. ಸಂವಿಧಾನ ಶಿಲ್ಪಿ ಡಾ.ಭೀಮರಾವ್ ರಾಮ್ ಜೀ ಅಂಬೇಡ್ಕರ್ ರವರ 127 ನೇ ಜನ್ಮದಿನಾಚರಣೆಯನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕಮಂಡಲದ ಆಶ್ರಯದಲ್ಲಿ ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಮಾತನಾಡಿದ ಪುತ್ತೂರು ತಾ.ಪಂ.ಮಾಜಿ ಉಪಾಧ್ಯಕ್ಷ ಬಾಬು ಮಾದೋಡಿ, ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ರಚಿಸಿಕೊಟ್ಟ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಯುವಕ ಮಂಡಲ ಆಚರಿಸಿರುವುದು ಶ್ಲಾಘನೀಯ. ಅವರ ತತ್ವ, ಸಿದ್ಧಾಂತಗಳಂತೆ ಸರಕಾರಿ ಸೌಲಭ್ಯಗಳು ಶೋಷಿತ ವರ್ಗದ ಎಲ್ಲಾ ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಲಕ್ಷ್ಮೀನರಸಿಂಹ ಭಜನಾ ಮಂಡಳಿ

ಕಾಣಿಯೂರು: ಲಕ್ಷ್ಮೀನರಸಿಂಹ ಯುವಕಮಂಡಲದಿಂದ ಅಂಬೇಡ್ಕರ್ ಜನ್ಮದಿನಾಚರಣೆ Read More »

ಕರಾವಳಿ
Scroll to Top