ಕರಾವಳಿ

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ ► ಪತ್ತೆಹಚ್ಚುವುದು, ಚಿಕಿತ್ಸೆ, ತಡೆಗಟ್ಟುವುದು ಹೇಗೆ..?

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಮೇ.22. ನಿಫಾ ವೈರಸ್, ಆರ್.ಯನ್.ಎ(ಖಓಂ) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ […]

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ ► ಪತ್ತೆಹಚ್ಚುವುದು, ಚಿಕಿತ್ಸೆ, ತಡೆಗಟ್ಟುವುದು ಹೇಗೆ..? Read More »

ಕರಾವಳಿ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.22. ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸಿದ್ದು, ಜಿಲ್ಲಾ ಎಸ್ಪಿ ಡಾ.ಬಿ.ಆರ್.ರವೀಕಾಂತೇ ಗೌಡ ಸ್ವಾಗತಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ವಸಂತ ಮಹಲ್ ಹೆಲಿಪ್ಯಾಡಿಗೆ ಬಂದಿಳಿದ ಕುಮಾರಸ್ವಾಮಿ ಅವರನ್ನು ದೇವಸ್ಥಾನದ ವತಿಯಿಂದ ರಸ್ತೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಈ

ಧರ್ಮಸ್ಥಳದಲ್ಲಿ ಬಂದಿಳಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ Read More »

ಕರಾವಳಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಇಲ್ಲಿನ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದು ಇಂದಿಗೆ ಎಂಟು ವರ್ಷ ಸಂದಿದೆ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. 2010 ರ ಮೇ 22 ರಂದು ಮುಂಜಾನೆ ಬಜ್ಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಇಳಿದ ಏರ್ ಇಂಡಿಯಾ ವಿಮಾನ 6:14 ರ ಸಮಯದಲ್ಲಿ ಪೈಲಟ್ ನ ಸಣ್ಣ ತಪ್ಪಿನಿಂದಾಗಿ ಕೆಂಜಾರು ಗುಡ್ಡೆಯಲ್ಲಿ

►► ಮರೆಯಲಾಗದ ನೆನಪು ► ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ ಎಂಟು ವರ್ಷ Read More »

ಕರಾವಳಿ

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಇಲ್ಲಿನ ಕೆದಂಬಾಡಿ ಬೈಲಂಗಡಿ ದಿ.ಪದ್ಯಯ್ಯ ಪೂಜಾರಿಯವರ ಪುತ್ರ ,ಕಡಬ ಗ್ರಾ.ಪಂ.ಸದಸ್ಯ ಕ್ರಷ್ಣಪ್ಪ ಪೂಜಾರಿಯವರ ಸಹೋದರ ಸುರೇಶ್(34ವ) ಸೋಮವಾರದಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಸುರೇಶ್ ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೇ ಮನೆಗೆ ಬಂದಿದ್ದ ಅವರಿಗೆ ಶನಿವಾರ ರಾತ್ರಿ ಮೆದುಳಿನಲ್ಲಿ ತೊಂದರೆ ಉಂಟಾಗಿದ್ದು ಬಳಿಕ ಅವರನ್ನು ಮಂಗಳೂರಿನ ಕೆ.ಎಂ.ಸಿ ಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಮೃತರು ತಾಯಿ ವೆಂಕಮ್ಮ ಸಹೋದರರಾದ ಶೇಖರ, ಕ್ರಷ್ಣಪ್ಪ, ಸಹೋದರಿಯರಾದ ಯಶೋದಾ,

ಕಡಬ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಪೂಜಾರಿಯವರ ಸಹೋದರ ಹೃದಯಾಘಾತದಿಂದ ನಿಧನ Read More »

ಕರಾವಳಿ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.21. ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೇ 22 ಮಂಗಳವಾರದಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 8.30 ಕ್ಕೆ ಧರ್ಮಸ್ಥಳ ವಸಂತ ಮಹಲ್ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ಕುಮಾರಸ್ವಾಮಿ ಶ್ರೀ ಕ್ಷೇತ್ರ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 11.45 ಕ್ಕೆ ವಸಂತ ಮಹಲ್ ಹೆಲಿಪ್ಯಾಡ್ ನಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೆಣಸೆ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಲ್ಲಿ ತೆರಳಿ ಶೃಂಗೇರಿ ಶಾರದಾಂಬಾ ದೇವಿಯ ದರ್ಶನ ಪಡೆದು ವಿಶೇಷ

ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಧರ್ಮಸ್ಥಳಕ್ಕೆ Read More »

ಕರಾವಳಿ

ಡ್ರಾಯಿಂಗ್: ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿಗೆ ಶೇ.100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.21. ಕನ್ನಡ ಪ್ರೌಢಶಿಕ್ಷಣ ಮಂಡಳಿ 2017-18 ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ.  ಪರೀಕ್ಷೆಗೆ ಹಾಜರಾದ 244 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 104 ವಿದ್ಯಾರ್ಥಿಗಳು ದ್ವ್ವಿತೀಯ ಶ್ರೇಣಿ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಲ್ಲಿ ಉತಿರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಡ್ರಾಯಿಂಗ್: ಆಲಂಕಾರು ಶ್ರೀ ದುರ್ಗಾಂಬ ಕಾಲೇಜಿಗೆ ಶೇ.100 ಫಲಿತಾಂಶ Read More »

ಕರಾವಳಿ

ಕಡಬ ಪೇಟೆಯ ರಸ್ತೆಯಲ್ಲಿ ಬೀಡಾಡಿ ಆಡುಗಳ ಓಡಾಟ ► ಮಾಲಕರ ವಿರುದ್ಧ ಕ್ರಮಕ್ಕೆ ಸ್ಥಳಿಯಾಡಳಿತದ ಚೆಲ್ಲಾಟ

(ನ್ಯೂಸ್ ಕಡಬ) newskadaba.com ಕಡಬ, ಮೇ.21.  ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಜಾನುವಾರು , ಆಡು, ನಾಯಿ ಇತ್ಯಾದಿ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ದ ಕ್ರಮಕೈಗೊಳ್ಳಲು ಸ್ಥಳಿಯಾಡಳಿತ ಮುಂದಾಗಿದ್ದರೂ ಮಾಲಕರು ಈ ಬಗ್ಗೆ ಗಮನಹರಿಸುವಂತೆ ಕಂಡುಬರುತ್ತಿಲ್ಲ ಕಡಬ ಪೇಟೆಯ ಹಲವೆಡೆ ಸಾಕು ಪ್ರಾಣಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ಸ್ಥಳಿಯಾಡಳಿತದ ಕಾನೂನನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ. ವಾಹನ ಅಪಘಾತಕ್ಕೆ ರಸ್ತೆಯಲ್ಲಿ ಅಡ್ಡದಿಡ್ಡಿ ಓಡಾಡುವ ಪ್ರಾಣಿಗಳು ಕಾರಣವಾಗುತ್ತವೆ ಎಂದು ಕಡಬ ಗ್ರಾಮ ಪಂಚಾಯಿತಿ ಸಾಕು ಪ್ರಾಣಿಗಳನ್ನು ತಮ್ಮ ಮನೆಯಿಂದ ಹೊರಗೆ

ಕಡಬ ಪೇಟೆಯ ರಸ್ತೆಯಲ್ಲಿ ಬೀಡಾಡಿ ಆಡುಗಳ ಓಡಾಟ ► ಮಾಲಕರ ವಿರುದ್ಧ ಕ್ರಮಕ್ಕೆ ಸ್ಥಳಿಯಾಡಳಿತದ ಚೆಲ್ಲಾಟ Read More »

ಕರಾವಳಿ

ಅಪರಿಚಿತ ವೈರಸ್ ಸೋಂಕಿಗೆ ಮೂರು ಬಲಿ, ಹಲವರು ಗಂಭೀರಾವಸ್ಥೆಯಲ್ಲಿ ► ಬೆಚ್ಚಿಬಿದ್ದ ಕೇರಳ ವೈದ್ಯಕೀಯ ಲೋಕ

(ನ್ಯೂಸ್ ಕಡಬ) newskadaba.com ಕೇರಳ, ಮೇ.21. ವೈರಸ್ ಸೋಂಕಿಗೆ ತುತ್ತಾದ ಒಂದೇ ಕುಟುಂಬದ ಮೂವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದ ಕಲ್ಲಿಕೋಟೆಯ ಪೆರಂಬಾರ ಎಂಬಲ್ಲಿ ನಡೆದಿದೆ. ಮೃತರ ದುರ್ದೈವಿಗಳನ್ನು ಪೆರಂಬಾರ ನಿವಾಸಿಗಳಾದ ಮುಹಮ್ಮದ್ ಸಾದಿಕ್, ಅವರ ಸಹೋದರ ಮುಹಮ್ಮದ್ ಸಾಲಿಹ್ ಹಾಗೂ ಮರಿಯಮ್ಮ ಎಂಮದು ಗುರುತಿಸಲಾಗಿದೆ. ಜ್ವರ ಉಲ್ಬಣಗೊಂಡು ಮೃತಪಟ್ಟಿದ್ದು, ಯಾವ ಕಾರಣದಿಂದಾಗಿ ಮೃತಪಟ್ಟರೆನ್ನುವುದು ಮಾತ್ರ ಇನ್ನೂ ದೃಢಪಟ್ಟಿಲ್ಲದ ಕಾರಣ ಕೇರಳದ ವೈದ್ಯ ಲೋಕವೇ ಬೆಚ್ಚಿಬಿದ್ದಿದೆ. ಅಲ್ಲದೆ ವೈದ್ಯಕೀಯ ತಜ್ಞರನ್ನು ಶೀಘ್ರದಲ್ಲೇ ರಾಜ್ಯಕ್ಕೆ ಕಳುಹಿಸಬೇಕು ಎಂದು

ಅಪರಿಚಿತ ವೈರಸ್ ಸೋಂಕಿಗೆ ಮೂರು ಬಲಿ, ಹಲವರು ಗಂಭೀರಾವಸ್ಥೆಯಲ್ಲಿ ► ಬೆಚ್ಚಿಬಿದ್ದ ಕೇರಳ ವೈದ್ಯಕೀಯ ಲೋಕ Read More »

ಕರಾವಳಿ

ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಗಲಭೆಗೆ ಪ್ರಚೋದನೆ ► ಪಂಜದ ಯುವಕ ಸೇರಿದಂತೆ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21. ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಮತೀಯ ಗಲಭೆಗೆ ಕಾರಣವಾದ ಇಬ್ಬರನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಸುನಿಲ್ ವೈ ನಾಯಕ್‌ ನೇತೃತ್ವದ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಾಡಿ ನಿವಾಸಿ ಸದಾಶಿವ ಗೌಡ ಎಂಬವರ ಪುತ್ರ ದಿನೇಶ ಯಾನೆ ದಯಾನಂದ(31) ಹಾಗೂ ಬಂಟ್ವಾಳ ತಾಲೂಕಿನ ಕೆರಲೆ ನಿವಾಸಿ ಲೋಕೇಶ್ ಎಂಬವರ ಪುತ್ರ ನಿತಿನ್ ಎಂದು ಗುರುತಿಸಲಾಗಿದೆ.

ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿ ಮತೀಯ ಗಲಭೆಗೆ ಪ್ರಚೋದನೆ ► ಪಂಜದ ಯುವಕ ಸೇರಿದಂತೆ ಇಬ್ಬರ ಬಂಧನ Read More »

ಕರಾವಳಿ

ವಿಟ್ಲ: ವಿಜಯೋತ್ಸವದ ನಂತರ‌ ಉಂಟಾದ ಗಲಭೆಯ ಹಿನ್ನೆಲೆ ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.20. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಉಂಟಾದ ಘರ್ಷಣೆಗೆ ಕಾರಣವಾದ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತಮೀಮ್(28), ಇಬ್ರಾಹಿಂ ಎಂಬವರ ಪುತ್ರ ಅಬ್ದುಲ್ ರಹಿಮಾನ್(35), ಅಬ್ದುಲ್ ಅಝೀಝ್ ಎಂಬವರ ಪುತ್ರ ಮಹಮ್ಮದ್ ಝಕರಿಯಾ(25) ಹಾಗೂ ಇಬ್ರಾಹಿಂ ಒಕ್ಕೆತ್ತೂರು ಎಂಬವರ ಪುತ್ರ ಸುಲೈಮಾನ್(38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ವಿಟ್ಲ: ವಿಜಯೋತ್ಸವದ ನಂತರ‌ ಉಂಟಾದ ಗಲಭೆಯ ಹಿನ್ನೆಲೆ ► ನಾಲ್ವರು ಆರೋಪಿಗಳ ಬಂಧನ Read More »

ಕರಾವಳಿ
Scroll to Top