ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನೇ ಬಿಡದ ಬೀದಿನಾಯಿಗಳು ► ಬೀದಿನಾಯಿಗಳ ಹಾವಳಿಯಿಂದ ಬೈಕ್ ಪಲ್ಟಿ

(ನ್ಯೂಸ್ ಕಡಬ) newskadaba.com ಕಡಬ, ಫೆ.01. ಬೀದಿನಾಯಿಗಳ ಕಾಟವನ್ನು ಜನಸಾಮಾನ್ಯರು ಅನುಭವಿಸುತ್ತಿರುವ ಮಧ್ಯೆಯೇ ಬೀದಿನಾಯಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸುಮ್ಮನೆ ಬಿಟ್ಟಿಲ್ಲ.

ನಾಯಿ ಅಡ್ಡ ಬಂದಿದ್ದರಿಂದಾಗಿ ಕಡಬ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಯವರ ಬೈಕ್ ರಸ್ತೆಗುರುಳಿದ ಘಟನೆ ಗುರುವಾರದಂದು ಕಡಬ ಪೇಟೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಕಡಬ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೈಕ್ ಬಿಟ್ಟು ಆಟೋರಿಕ್ಷಾದಲ್ಲಿ ಮನೆಗೆ ತೆರಳಿದರು.

Scroll to Top