ಕರಾವಳಿ

ನೇಜಿ ನಾಟಿಗಾಗಿ ಗದ್ದೆಗಿಳಿದ ಪಿಜಕ್ಕಳ ಸರಕಾರಿ ಶಾಲಾ ಮಕ್ಕಳು

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಪಿಜಕ್ಕಳ ಕಿ.ಪ್ರಾ.ಶಾಲಾ ಮಕ್ಕಳಿಗೆ ಪಿಜಕ್ಕಳ ಆನಂದ ನಾಕ್ರವರ ಗದ್ದೆಯಲ್ಲಿ ನೇಜಿ ನಾಟಿಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷತೆ ನಡೆಯಿತು. ಕೃಷಿ, ಬೇಸಾಯದ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಶಿಸುತ್ತಿರುವ ಬೇಸಾಯ ಕೃಷಿಯ ಬಗ್ಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ಸಮಗ್ರ ಮಾಹಿತಿ ನೀಡುವುದೇ ಇದರ ಮುಖ್ಯ ಉದ್ದೇಶ ಎಂದು ಶಾಲಾ ಮುಖ್ಯ ಶಿಕ್ಷಕಿ ಚೇತನಾ ತಿಳಿಸಿದರು. ಸಹ ಶಿಕ್ಷಕಿ ಕವಿತಾ ಸಹಕರಿಸಿದರು.

ನೇಜಿ ನಾಟಿಗಾಗಿ ಗದ್ದೆಗಿಳಿದ ಪಿಜಕ್ಕಳ ಸರಕಾರಿ ಶಾಲಾ ಮಕ್ಕಳು Read More »

ಕರಾವಳಿ

ಆಲಂಕಾರು:ಕೃಷಿ ರೂಪಿಸಿದ ಬದುಕಿನ ಭವಿಷ್ಯ

 (ನ್ಯೂಸ್ ಕಡಬ) newskadaba.com ,ಆಲಂಕಾರು.ಜೂ.12. ಯುವ ಜನತೆ ದೇಶದ ಸಂಪತ್ತು ಎಂಬ ಮಾತಿಗೆ ವೆತಿರಿಕ್ತವಾಗಿಯೇ ನಡೆದುಕೊಳ್ಳುವ ಇಂದಿನ ಯುವ ಜನತೆ, ಸಮಾಜ ವಿರೋಧಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡು ತನ್ನ ಬದುಕಿನ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಮನಸ್ಸಿದ್ದರೆ ಮಾರ್ಗ. ಸಾಧಿಸಿದರೆ ಸಬಳವನ್ನು ನುಂಗಬಹುದು ಎಂಬುವುದನ್ನು ಕಡಬ ತಾಲೂಕು ಕುಂತೂರು ಗ್ರಾಮದ ಕೋಡ್ಲ ನಿವಾಸ ಉಮೇಶ್ ಪೂಜಾರಿ ಎಂಬ ಪ್ರಗತಿಪರ ಕೃಷಿಕ ಸಾಧಿಸಿ ತೋರಿಸಿದ್ದಾರೆ. ಬಡ ಕೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಉಮೇಶ್ ಅಕ್ಷರದ ಗುರುತು ಸಿಗುವಷ್ಟು ವಿದ್ಯಾಬ್ಯಾಸವನ್ನು

ಆಲಂಕಾರು:ಕೃಷಿ ರೂಪಿಸಿದ ಬದುಕಿನ ಭವಿಷ್ಯ Read More »

ಕರಾವಳಿ

ಪಟ್ರಮೆ: ದಾಖಲೆಯಲ್ಲಿದ್ದ ತೋಡನ್ನು ತಿರುಗಿಸಿ ಕೃಷಿಗೆ ಹಾನಿ ► ಕುಸಿಯುವ ಭೀತಿಯಲ್ಲಿ ಮನೆಯ ಕೊಟ್ಟಿಗೆ – ಕಂದಾಯ ಇಲಾಖೆಯಿಂದ ನಿರ್ಲಕ್ಷ್ಯ

 (ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.11. ಸರಕಾರಿ ದಾಖಲೆಯಲ್ಲಿ ಇದು ನಮೂದಿಸಲ್ಪಟ್ಟ ಪರಂಬೋಕು ತೋಡು. ತೋಡು ತಿರುಗಿಸಿ ಬಡ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪಕ್ಕದ ಜಮೀನಿನ ಭೂ ಮಾಲೀಕ. ಇರುವ 40 ಸೆಂಟ್ಸ್ ಸ್ಥಳವೂ ತೋಡು ತಿರುವಿನಿಂದ ಕುಸಿಯುವ ಭೀತಿಯಲ್ಲಿ ಏಕನಾಥ ಭಟ್ಟರ ಕುಟುಂಬ. ಕಂದಾಯ ಇಲಾಖೆ, ಮಾಜಿ ಶಾಸಕರಿಗೆ, ಗ್ರಾ.ಪಂ, ಹಾಲಿ ಶಾಸಕರಿಗೆ, ಪೊಲೀಸ್ ಠಾಣೆಗೆ 2 ವರ್ಷಗಳಿಂದ ದೂರು ನೀಡಲಾಗುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಬೇಸತ್ತು ದಯಾಮರಣಕ್ಕಾಗಿ ಅನುಮತಿ ನೀಡುವಂತೆ ಮನವಿ ಸಲ್ಲಿಸಲು

ಪಟ್ರಮೆ: ದಾಖಲೆಯಲ್ಲಿದ್ದ ತೋಡನ್ನು ತಿರುಗಿಸಿ ಕೃಷಿಗೆ ಹಾನಿ ► ಕುಸಿಯುವ ಭೀತಿಯಲ್ಲಿ ಮನೆಯ ಕೊಟ್ಟಿಗೆ – ಕಂದಾಯ ಇಲಾಖೆಯಿಂದ ನಿರ್ಲಕ್ಷ್ಯ Read More »

ಕರಾವಳಿ

ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ

 (ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ,ಜೂ.11. ಭಾರತ್ ವಿಕಾಸ್ ಪರಿಷದ್,ದಕ್ಷಿಣ ಕನ್ನಡ , ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು ದಿ: 06 , ಜುಲೈ 2018 ರಂದು ನಗರದ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ಭಾರತ್ ವಿಕಾಸ್ ಪರಿಷದ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಸುರೇಶ ಜೈನ ರವರು ನೆರವೇರಿಸಿದರು.ಮಂಗಳಾ ಶಾಖೆ ಯ ನೂತನ ಅಧ್ಯಕ್ಷ ರಾಗಿ ಡಾ. ಸಚ್ಚಿದಾನಂದ ರೈ ರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ

ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ Read More »

ಕರಾವಳಿ

ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ – ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com,ಸುರತ್ಕಲ್.ಜೂ.11. ಇಂದು ಬೆಳಿಗ್ಗೆ 08.00 ಗಂಟೆಗೆ ಸುರತ್ಕಲ್ ಘಟಕದ ಕಛೇರಿಯಲ್ಲಿ ವನಮಹೋತ್ಸವ ಮತ್ತು ಪ್ರವಾಹ ರಕ್ಷಣಾ ನಿರತ ಗೃಹರಕ್ಷಕರಿಗೆ ರೈನ್ಕೋಟ್ ಹಾಗೂ ಬೂಟ್ ಹಸ್ತಾಂತರ ಕಾರ್ಯಕ್ರಮವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು, ಬೆಳೆಸಿದರೆ ಅದೇ ಪ್ರಕೃತಿಗೆ ನಮ್ಮ ಸಣ್ಣ ಕೊಡುಗೆ ಎಂದು ನುಡಿದರು. ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು

ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ – ಡಾ|| ಚೂಂತಾರು Read More »

ಕರಾವಳಿ

ಕುಂತೂರುಪದವು- ಬಿರಂತಡ್ಕ ರಸ್ತೆ ದುರವಸ್ಥೆ

ಪುಣ್ಯ ಕ್ಷೇತ್ರ ಸಂಪರ್ಕಿಸುವ ರಸ್ತೆಯಾಗಿದ್ದರೂ ಕೇಳುವವರಿಲ್ಲ, ನೋಡುವವರಿಲ್ಲ (ನ್ಯೂಸ್ ಕಡಬ) newskadaba.com,ಕಡಬ.ಜೂ.11. ಉಪ್ಪಿನಂಗಡಿ- ಕಡಬ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿಂದ ಟಿಸಿಲೊಡೆದ ಬೀರಂತಡ್ಕ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಕುಂತೂರು ಪದವಿನ ಮುರ ಚಡಾವು ಎಂಬಲ್ಲಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 2.5 ಕಿ.ಮೀ.ಉದ್ದವಿದೆ. ಕುಂತೂರು ಪದವಿನಿಂದ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡರ ಮನೆ ಹಿಂದುಗಡೆಯಿಂದ ಹಾದು ಹೋಗುವ ರಸ್ತೆಯು ಕುಂಡಡ್ಕ ಎಂಬಲ್ಲಿ ಸಂಪರ್ಕಿಸುತ್ತಿದೆ. ಪೆರಾಬೆ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಈ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು

ಕುಂತೂರುಪದವು- ಬಿರಂತಡ್ಕ ರಸ್ತೆ ದುರವಸ್ಥೆ Read More »

ಕರಾವಳಿ

ಕಡಬ: ದನದ ಕೊಟ್ಟಿಗೆ ಕುಸಿತ- ದನ ಪಾರು

(ನ್ಯೂಸ್ ಕಡಬ) newskadaba.com ಕಡಬ,ಜೂ.11.  ದನದ ಕೊಟ್ಟಿಗೆಂಯಿಂದ ವಿಪರೀತ ಮಳೆಯಿಂದ ಕುಸಿದು ಬಿದ್ದು ದನವೊಂದು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ನಡೆದಿದೆ. ನೂಜಿಬಾಳ್ತಿಲ ಗ್ರಾ.ಪಂ ಗೊಳಪಟ್ಟ ರೆಂಜಿಲಾಡಿ ಗ್ರಾಮದ ಎನ್ನಾಜೆ ಕುಸುಮಾದರ ಎಂಬವರ ದನದ ಕೊಟ್ಟಿಗೆಯೊಂದು ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದು ಕೊಟ್ಟಿಗೆಯೊಳಗಿದ್ದ ಹಸುವೊಂದು ಒದ್ದಾಡುತ್ತಿತ್ತು ಮನೆಯಲ್ಲಿ ಯಾರೂ ಇಲ್ಲದ ಕಾರಣ ಕೊಟ್ಟಿಗೆ ಬೀಳುವ ಶಬ್ದ ಕೇಳಿ ಹತ್ತಿರದ ಜಯರಾಮ ಎಂಬವರು ರಕ್ಷಿಸಿದ್ದಾರೆ. ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಕಡಬ: ದನದ ಕೊಟ್ಟಿಗೆ ಕುಸಿತ- ದನ ಪಾರು Read More »

ಕರಾವಳಿ

ನೂಜಿಬಾಳ್ತಿಲ: ಅಪಾಯದ ಅಂಚಿನಲ್ಲಿರುವ ಮರ, ಇನ್ನೂ ಎಚ್ಚೆತ್ತುಕೊಳ್ಳದ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ ಜು.11. ಗ್ರಾ.ಪಂ.ನ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿ ಗರ್ಗಾಸ್ಪಾಲ್ ಎಂಬಲ್ಲಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರದಿಂದ ಸಾರ್ವಜನಿಕರು ಪ್ರಯಾಣಿಕರು ಆತಂಕಗೊಂಡು ಭಯದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಮಸ್ಥಳ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ದಿನನಿತ್ಯ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದು ಜೀವ ಭಯದಿಂದಲೇ ಪ್ರಯಾಣಿಸುತ್ತಿದ್ದಾರೆ. ಕಳೆದ ಅದೆಷ್ಟೋ ವರ್ಷಗಳಿಂದ ಅರಣ್ಯ ಇಲಾಖೆಗೆ, ಪಿಡಬ್ಲ್ಯುಡಿ ಇಲಾಖೆಗೆ ಮನವಿ ಮಾಡಿಕೊಂಡರೂ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು

ನೂಜಿಬಾಳ್ತಿಲ: ಅಪಾಯದ ಅಂಚಿನಲ್ಲಿರುವ ಮರ, ಇನ್ನೂ ಎಚ್ಚೆತ್ತುಕೊಳ್ಳದ ಇಲಾಖೆ Read More »

ಕರಾವಳಿ

ವಿಶ್ವ ಜನಸಂಖ್ಯಾ ದಿನ – ಜುಲೈ 11

 (ನ್ಯೂಸ್ ಕಡಬ) newskadaba.c0m ಕಡಬ,ಜೂ.11. ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ ಜುಲೈ 11, 1989ರಿಂದ ಜಾರಿಗೆ ತರಲಾಯಿತು. ಕ್ಷಣಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು

ವಿಶ್ವ ಜನಸಂಖ್ಯಾ ದಿನ – ಜುಲೈ 11 Read More »

ಕರಾವಳಿ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.11. ಮುಳುಗು ಸೇತುವೆಯೆಂದೇ ಕುಖ್ಯಾತಿಯನ್ನು ಪಡೆದಿರುವ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸ್ಮಠ ಸೇತುವೆಯು ಬುಧವಾರದಂದು ಮತ್ತೆ ಮುಳುಗಡೆಯಾಗಿ ರಸ್ತೆ ತಡೆ ಉಂಟಾಗಿದೆ. ಪ್ರಸಕ್ತ ವರ್ಷದಲ್ಲಿ ಸೇತುವೆಯು ಹಲವು ಬಾರಿ ಮುಳುಗಡೆಗೊಂಡು ಸಂಚಾರದಲ್ಲಿ ವ್ಯತ್ಯಯವುಂಟಾಗಿ ಉಪ್ಪಿನಂಗಡಿ, ಸುಬ್ರಹ್ಮಣ್ಯ ಪರಿಸರಕ್ಕೆ ಸಂಪರ್ಕ ಕಡಿತಗೊಂಡಿತ್ತು. ಹಳೆಯ ಸೇತುವೆಯ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆಯಾದರೂ ಕಾಮಗಾರಿ ಅಪೂರ್ಣದಿಂದಾಗಿ ಈ ವರ್ಷವೂ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಉಪ್ಪಿನಂಗಡಿ – ಕಡಬ ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ
Scroll to Top