ಕರಾವಳಿ

ಖ್ಯಾತ ಕವಿ, ಕಥೆಗಾರ ಜಯಂತಕಾಯ್ಕಿಣಿ ನಾಳೆ ರಾಮಕುಂಜಕ್ಕೆ ► ರಾಮಕುಂಜೇಶ್ವರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕನ್ನಡದ ಖ್ಯಾತ ಕವಿ, ಕಥೆಗಾರ, ಸಾಹಿತ್ಯದ ಗಣಿ ಜಯಂತಕಾಯ್ಕಿಣಿಯವರು ಜುಲೈ 30 ಸೋಮವಾರದಂದು ರಾಮಕುಂಜಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾಲೇಜಿ‌ನ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಇತರ ವಿಷಯಗಳ ಬಗ್ಗೆ ಸಂವಾದ ನಡೆಸಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಖ್ಯಾತ ಕವಿ, ಕಥೆಗಾರ ಜಯಂತಕಾಯ್ಕಿಣಿ ನಾಳೆ ರಾಮಕುಂಜಕ್ಕೆ ► ರಾಮಕುಂಜೇಶ್ವರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ Read More »

ಕರಾವಳಿ

ಕರಾವಳಿಯಲ್ಲಿ ಹಾಡುಹಗಲೇ ವ್ಯಕ್ತಿಯ ಇರಿದು ಬರ್ಬರ ಕೊಲೆ ► ಪಬ್ ಗೆ ನುಗ್ಗಿದ ತಂಡದಿಂದ ನಡೆಯಿತು ಕೃತ್ಯ

(ನ್ಯೂಸ್ ಕಡಬ) newskadaba.com ಉಡುಪಿ, ಜು.29. ಇಸ್ಪೀಟ್ ಕ್ಲಬ್ ಒಂದರಲ್ಲಿ ತಂಡವೊಂದು ಮಾಲಕನನ್ನು ಹಾಡುಹಗಲೇ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಣಿಪಾಲದಲ್ಲಿ ಭಾನುವಾರದಂದು ನಡೆದಿದೆ. ಮೃತರನ್ನು ‘ಸತ್ಯ ನ್ಯೂಸ್’ ವಾರ ಪತ್ರಿಕೆಯನ್ನು ನಡೆಸುತ್ತಿದ್ದ ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಗುರುಪ್ರಸಾದ್ ಭಟ್(45) ಎಂದು ಗುರುತಿಸಲಾಗಿದೆ. ಹಣಕಾಸಿನ ವ್ಯವಹಾರವನ್ನು ನಡೆಸುತ್ತಿದ್ದ ಗುರುಪ್ರಸಾದ್, ಭಾನುವಾರದಂದು ಕ್ಲಬ್ ನಲ್ಲಿದ್ದ ವೇಳೆ ಓಮ್ನಿಯಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡವೊಂದು ಕ್ಲಬ್ ಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಗುರುಪ್ರಸಾದ್ ರನ್ನು ತಕ್ಷಣವೇ

ಕರಾವಳಿಯಲ್ಲಿ ಹಾಡುಹಗಲೇ ವ್ಯಕ್ತಿಯ ಇರಿದು ಬರ್ಬರ ಕೊಲೆ ► ಪಬ್ ಗೆ ನುಗ್ಗಿದ ತಂಡದಿಂದ ನಡೆಯಿತು ಕೃತ್ಯ Read More »

ಕರಾವಳಿ

ಕುಂತೂರು: ಶಾಲೆಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಶಾಲೆಗೆಂದು ತೆರಳಿದ ವಿದ್ಯಾರ್ಥಿಯೋರ್ವ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕುಂತೂರಿನಲ್ಲಿ ನಡೆದಿದೆ.   ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ರಾಮಕುಂಜೇಶ್ವರ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಂತೂರು ಸಮೀಪದ ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಆಶಿಕ್ ಅಲಿ(16) ಎಂದು ಗುರುತಿಸಲಾಗಿದೆ. ಈತ ಜುಲೈ 26 ರಂದು ಶಾಲೆಗೆಂದು ತೆರಳಿದವನು ಮನೆಗೆ ಬರದೆ ನಾಪತ್ತೆಯಾಗಿರುವುದಾಗಿ ಈತನ ತಾಯಿ ಸಕೀನಾ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5’9″ ಎತ್ತರ ಹೊಂದಿದ್ದು, ಕೋಲು

ಕುಂತೂರು: ಶಾಲೆಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ

ತುಳು ಭಾಷೆ ಉಳಿಯಬೇಕಾದರೆ ತುಳುವರು ಜಾಗೃತರಾಗಬೇಕು: ಎ.ಸಿ.ಭಂಡಾರಿ ► ರಾಮಕುಂಜದಲ್ಲಿ ತುಳು ಕಲಿಯುವ ಮಕ್ಕಳ ರಾಜ್ಯ ಮಟ್ಟದ ರಸಮಂಟಮೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ತುಳು ಭಾಷೆ ನಮ್ಮ ಮಾತೃಭಾಷೆಯಾಗಿದ್ದು, ಇದರಲ್ಲಿ ತುಳು ಸಂಸ್ಕತಿ ಅಡಕವಾಗಿದೆ. ತಾಯಿ ಭಾಷೆಯ ಬಗ್ಗೆ ಮಮಕಾರ ಬೆಳೆಸಿಕೊಂಡು ತುಳುವಿನ ಬಗ್ಗೆ ಜಾಗೃತಿ ಮೂಡಿಸಿ ಅದರ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ಹೇಳಿದರು. ಅವರು ಭಾನುವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ನೇತ್ರಾವತಿ ತುಳುಕೂಟ ರಾಮಕುಂಜ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ

ತುಳು ಭಾಷೆ ಉಳಿಯಬೇಕಾದರೆ ತುಳುವರು ಜಾಗೃತರಾಗಬೇಕು: ಎ.ಸಿ.ಭಂಡಾರಿ ► ರಾಮಕುಂಜದಲ್ಲಿ ತುಳು ಕಲಿಯುವ ಮಕ್ಕಳ ರಾಜ್ಯ ಮಟ್ಟದ ರಸಮಂಟಮೆ Read More »

ಕರಾವಳಿ

ಆಲಂಕಾರು: ಕಳ್ಳರೇ ಎಚ್ಚರಿಕೆ..!! ಕಸಿ ಗೇರು ಸಸಿ ಕದ್ದರೆ ಕಾನತ್ತೂರಿಗೆ ಹರಕೆ…!! ► ದೈವದ ಮೊರೆ ಹೋದ ಗೇರು ಅಭಿವೃದ್ಧಿ ನಿಗಮ

(ನ್ಯೂಸ್ ಕಡಬ) newskadaba.com ಕಡಬ, ಜು.29. ಆಲಂಕಾರು ಗ್ರಾಮದಲ್ಲಿ ಹೊಸದಾಗಿ ಇತ್ತೀಚೆಗೆ ನೆಟ್ಟಿರುವ ಗೇರು ಸಸಿಗಳನ್ನು ಕಳ್ಳರು ರಾತ್ರಿ ವೇಳೆ ಕಳವು ಮಾಡುತ್ತಿರುವುದರಿಂದ ಕಳ್ಳರ ಕಾಟವನ್ನು ನಿಯಂತ್ರಿಸಲು ಕರ್ನಾಟಕ ಗೇರು ಅಭಿವೃದ್ದಿ ನಿಗಮವು ದೈವದ ಮೊರೆ ಹೋಗುವುದಾಗಿ ಕಳ್ಳರಿಗೆ ಎಚ್ಚರಿಕೆಯನ್ನು ಸೂಚಿಸುವ ಎಚ್ಚರಿಕೆಯ ಗಂಟೆಯನ್ನು ಅಲ್ಲಲ್ಲಿ ಅಳವಡಿಸಿದೆ. ಗೇರು ಅಭಿವೃದ್ಧಿ ನಿಗಮವು ಆಲಂಕಾರು ಗ್ರಾಮದಲ್ಲಿ ತನ್ನ ಅಧೀನದ 210 ಎಕ್ರೆ ಜಾಗದಲ್ಲಿ 2000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿತ್ತು. ಮಳೆಗಾಲದ ಆರಂಭದಲ್ಲೇ ಗುಂಡಿಯನ್ನು ನಿರ್ಮಿಸಿ ಗಿಡ ನೆಡುವ

ಆಲಂಕಾರು: ಕಳ್ಳರೇ ಎಚ್ಚರಿಕೆ..!! ಕಸಿ ಗೇರು ಸಸಿ ಕದ್ದರೆ ಕಾನತ್ತೂರಿಗೆ ಹರಕೆ…!! ► ದೈವದ ಮೊರೆ ಹೋದ ಗೇರು ಅಭಿವೃದ್ಧಿ ನಿಗಮ Read More »

ಕರಾವಳಿ

ಮಂಗಳೂರು – ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ತಪ್ಪದ ನಿಲುಗಡೆಯ ಕಿರಿಕಿರಿ ► ನಿಲುಗಡೆ ನೀಡದಕ್ಕೆ ಬಸ್ ಕಂಡಕ್ಟರನ್ನು ತರಾಟೆಗೆತ್ತಿಕೊಂಡ ಸಾರ್ವಜನಿಕರು

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಕಡಬ, ಜು.29. ಮಂಗಳೂರು-ಕಡಬ-ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ನಿಗದಿತ ಸ್ಥಳದಲ್ಲಿ ನಿಲ್ಲಿಸಿಲ್ಲವೆಂದು ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್, ಚಾಲಕರನ್ನು ಕಡಬದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರದಂದು ನಡೆದ ಬಗ್ಗೆ ವರದಿಯಾಗಿದೆ. ಮಂಗಳೂರು-ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಕುಂಡಾಜೆ ಎಂಬಲ್ಲಿ ನಿಲ್ಲಿಸಿಲ್ಲ ಹಾಗೂ ಕಡಬದಲ್ಲಿ ಕಲ್ಲಾಜೆಯ ಪ್ರಯಾಣಿಕರನ್ನು ಅಲ್ಲಿ ನಿಲುಗಡೆಗೊಳಿಸಲು ಸಾಧ್ಯವಿಲ್ಲವೆಂದು ಹತ್ತಲು ನಿರಾಕರಿಸಿದಾಗ ಮಾಹಿತಿ ಅರಿತ ಕಡಬದ ಸಾರ್ವಜನಿಕರು ಹಾಗೂ ಸಂಗಮ ಜೀಪು ಚಾಲಕರು ಕಂಡಕ್ಟರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಮಾತಿನ ಚಕಮಕಿ

ಮಂಗಳೂರು – ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ತಪ್ಪದ ನಿಲುಗಡೆಯ ಕಿರಿಕಿರಿ ► ನಿಲುಗಡೆ ನೀಡದಕ್ಕೆ ಬಸ್ ಕಂಡಕ್ಟರನ್ನು ತರಾಟೆಗೆತ್ತಿಕೊಂಡ ಸಾರ್ವಜನಿಕರು Read More »

ಕರಾವಳಿ

ಕುಸಿತದ ಭೀತಿಯಲ್ಲಿ ಸುರುಳಿ ಕಿರು ಸೇತುವೆ ► 40 ವರ್ಷ ಹಳೆಯದಾದ ಸೇತುವೆ

(ನ್ಯೂಸ್ ಕಡಬ) newskadaba.com ಆಲಂಕಾರು, ಜು.29. ಪೆರಾಬೆ ಗ್ರಾಮದ ಸುರುಳಿ ಎಂಬಲ್ಲಿ ಕಳೆದ 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಿರು ಸೇತುವೆ ಇದೀಗ ಕುಸಿತ ಭೀತಿಯನ್ನು ಎದುರಿಸುತ್ತಿದೆ. ಮೈಸೂರು _ಧರ್ಮಸ್ಥಳ ರಸ್ತೆಯ ಸಂಪರ್ಕ ರಸ್ತೆಯಲ್ಲಿ ಈ ಕಿರು ಸೇತುವೆ ಬರುತ್ತಿದ್ದು, ಆಲಂಕಾರು ನೆಲ್ಯಾಡಿ ಸಂಪರ್ಕದ ಪ್ರಮುಖ ರಸ್ತೆ ಇದಾಗಿರುತ್ತದೆ. ಆಲಂಕಾರಿನಿಂದ ಎರಡು ಕಿ.ಮೀ ದೂರದಲ್ಲಿರುವ ಈ ಕಿರು ಸೇತುವೆ ಕುಸಿದು ಬಿದ್ದಲ್ಲಿ ನೆಲ್ಯಾಡಿ, ಸುರುಳಿ, ಮಾಪಲ, ಕೆಮ್ಮಿಂಜೆ, ಮೊದಲಾದ ಪ್ರಮುಖ ಸ್ಥಳಗಳ ಸಂಪರ್ಕವನ್ನು ಕಳೆದುಕೊಳ್ಳಲಿದೆ. ಈಗಾಗಲೇ ಸೇತುವೆಯ

ಕುಸಿತದ ಭೀತಿಯಲ್ಲಿ ಸುರುಳಿ ಕಿರು ಸೇತುವೆ ► 40 ವರ್ಷ ಹಳೆಯದಾದ ಸೇತುವೆ Read More »

ಕರಾವಳಿ

ತುಂಬೆ: ಆಟವಾಡುತ್ತಾ ಶೌಚಾಲಯದ ಗುಂಡಿಗೆ ಬಿದ್ದ ಮಗು ► ಮೇಲಕ್ಕೆತ್ತುವಷ್ಟರಲ್ಲಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.28. ಸ್ವಚ್ಛ ಮಾಡಿ ತೆರೆದಿಟ್ಟಿದ್ದ ಶೌಚಾಲಯದ ಗುಂಡಿಗೆ ಬಿದ್ದ ಎರಡು ವರ್ಷದ ಮಗುವೊಂದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಮಗುವನ್ನು ತುಂಬೆ ವಳವೂರು ನಿವಾಸಿ ಅಹ್ಮದ್ ಬಾವ ಎಂಬವರ ಪುತ್ರಿ ಆಯಿಶಾ ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿನ ಶೌಚಾಲಯದ ಗುಂಡಿಯನ್ನು ಸ್ವಚ್ಛಗೊಳಿಸಿ ಮುಚ್ಚುವಷ್ಟರಲ್ಲಿ ಮಗು ವಾಕರ್‌ನಲ್ಲಿ ಆಟವಾಡುತ್ತಾ ಆಕಸ್ಮಿಕವಾಗಿ ಜಾರಿ ಶೌಚಾಲಯದ ಗುಂಡಿಗೆ ಬಿದ್ದಿದೆ. ತಕ್ಷಣವೇ ಮಗವನ್ನು ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ

ತುಂಬೆ: ಆಟವಾಡುತ್ತಾ ಶೌಚಾಲಯದ ಗುಂಡಿಗೆ ಬಿದ್ದ ಮಗು ► ಮೇಲಕ್ಕೆತ್ತುವಷ್ಟರಲ್ಲಿ ಮೃತ್ಯು Read More »

ಕರಾವಳಿ

ಬೆಳ್ಳಾರೆ: ಮನೆಯ ಬೀಗ ಮುರಿದು ನಗದು ಸಹಿತ ಚಿನ್ನಾಭರಣ ಕಳ್ಳತನ ► 48 ಗಂಟೆಗಳೊಳಗೆ ಕಳ್ಳನನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.27. ಮನೆಯ ಬೀಗ ಮುರಿದು ನಗದು‌ ಸೇರಿದಂತೆ ಚಿನ್ನಾಭರಣ ಕಳ್ಳತನ ಪ್ರಕರಣವನ್ನು 48 ಗಂಟೆಗಳೊಳಗಾಗಿ ಭೇದಿಸಿರುವ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ ರಾಮಕುಮೇರಿ ನಿವಾಸಿ ಗೋಪಾಲಕೃಷ್ಣ ನಾಯಕ್ ಎಂಬವರ ಪುತ್ರ ಸತ್ಯನಾರಾಯಣ ಎಂಬವರ ಮನೆಯಿಂದ ಬುಧವಾರದಂದು ಮುಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ಹಾಲ್ ನಲ್ಲಿದ್ದ ಬೀರುವಿನ ಬಾಗಿಲನ್ನು ಪಕ್ಕದ ಶೆಲ್ಫ್ ನಲ್ಲಿದ್ದ ಕೀಯಿಂದ ತೆರೆದು ಲಾಕರ್ ನ ಬೀಗವನ್ನು ಮುರಿದು ಅದರೊಳಗಿದ್ದ ನಗದು

ಬೆಳ್ಳಾರೆ: ಮನೆಯ ಬೀಗ ಮುರಿದು ನಗದು ಸಹಿತ ಚಿನ್ನಾಭರಣ ಕಳ್ಳತನ ► 48 ಗಂಟೆಗಳೊಳಗೆ ಕಳ್ಳನನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು Read More »

ಕರಾವಳಿ

ಪುತ್ತೂರು: ಗೂಡ್ಸ್ ಲಾರಿ – ಖಾಸಗಿ ಬಸ್ ಢಿಕ್ಕಿ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.27. ಗೂಡ್ಸ್ ಲಾರಿ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಟ್ಯಾರಿನಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎಸ್ ಆರ್ ಎಸ್ ಕಂಪೆನಿಗೆ ಸೇರಿದ ಖಾಸಗಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಿಜಯಲಕ್ಷ್ಮಿ ಕಾರ್ಗೋ ಸರ್ವೀಸ್ ಸಂಸ್ಥೆಗೆ ಸೇರಿದ ಗೂಡ್ಸ್ ಲಾರಿಯ ನಡುವೆ ಸಂಟ್ಯಾರ್ ಬಳಿ ಮುಖಾಮುಖಿ ಢಿಕ್ಕಿಯಾಗಿ ಲಾರಿ ಚಾಲಕ ರಾಜೇಶ್

ಪುತ್ತೂರು: ಗೂಡ್ಸ್ ಲಾರಿ – ಖಾಸಗಿ ಬಸ್ ಢಿಕ್ಕಿ ► ಇಬ್ಬರಿಗೆ ಗಾಯ Read More »

ಕರಾವಳಿ
Scroll to Top