ಕರಾವಳಿ

ದಂತ ಚಿಕಿತ್ಸೆಯಲ್ಲಿ ಲೇಸರ್ ► ಡಾ| ಮುರಲೀ ಮೋಹನ್ ಚೂಂತಾರು ರವರ ಲೇಖನ

(ನ್ಯೂಸ್ ಕಡಬ) newskadaba.com.ಜ.2 ಇತ್ತೀಚಿನ ದಿನಗಳಲ್ಲಿ ದಂತ ವೈದ್ಯಕೀಯ ರಂಗದಲ್ಲಿ ಚಿಕಿತ್ಸೆಗಾಗಿ ಲೇಸರ್ ಬಳಕೆ ಹೆಚ್ಚುತ್ತಿದೆ. ಲೇಸರ್ ಕಿರಣ ಬಳಸಿ ದೇಹದಲ್ಲಿನ ಜೇವಕೋಶಗಳ ಬೆಳವಣಿಗೆಯನ್ನುನಿಯಂತ್ರಿಸಲಾಗುತ್ತದೆ. ಮತ್ತು ಕೆಲವೊಮ್ಮೆ ಅನಗತ್ಯವಾದ ಜೀವಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲಾಗುತ್ತದೆ. ದಂತ ಚಿಕಿತ್ಸೆಯಲ್ಲಿ ಸೌಂದರ್ಯಕ್ಕೆ ಹೆಚ್ಚು ಗಮನ ನೀಡುವುದರಿಂದ ಹಲ್ಲಿನ ವಸಡಿನ ಸೌಂದರ್ಯವನ್ನು ಹೆಚ್ಚಿಸಲೂ ಇತ್ತೀಚಿಗೆ ಲೇಸರ್ ಕಿರಣಗಳ ಬಳಕೆಯನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಾರೆ. ದಂತ ವೈದ್ಯಕೀಯದಲ್ಲಿ ಬಳಸುವ ಲೇಸರ್‍ಗಳನ್ನು ಎರಡು ನಿಧಾನಗಳಾಗಿ ವಿಂಗಡಿಸಲಾಗಿದೆ. 1. ಗಟ್ಟಿಯಾದ ವಸ್ತುಗಳ ಮೇಲೆ ಬಳಸುವ ಲೇಸರ್:- ಇಂತಹ ಲೇಸರ್‍ಗಳನ್ನು […]

ದಂತ ಚಿಕಿತ್ಸೆಯಲ್ಲಿ ಲೇಸರ್ ► ಡಾ| ಮುರಲೀ ಮೋಹನ್ ಚೂಂತಾರು ರವರ ಲೇಖನ Read More »

ಕರಾವಳಿ

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡ್ಗಿಚ್ಚು ► ಅಪಾರ ಪ್ರಮಾಣದ ಅರಣ್ಯ ಪ್ರದೇಶ ಅಗ್ನಿಗಾಹುತಿ

(ನ್ಯೂಸ್ ಕಡಬ) newskadaba.com.ಮೂಡಿಗೆರೆ,ಜ.2. ಚಾರ್ಮಾಡಿ ಘಾಟ್‌ನ ಮಾಳೂರು ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಗಿಡಮರಗಳು ಹಾಗೂ ವನ್ಯಜೀವಿಗಳು ಅಗ್ನಿಗಾಹುತಿ ಆಗಿರಬಹುದೆಂದು ಶಂಕಿಸಲಾಗಿದೆ. ಕಳೆದ 5 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈಗನೂರಾರು ಎಕರೆಗೆ ವ್ಯಾಪಿಸಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚುಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಸಣ್ಣದಾಗಿ ಬೆಂಕಿ ಉರಿಯುತ್ತಲೇ ಇದ್ದು ಬೆಂಕಿ ಜೋರಾದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳಿವೆ. ಕಾಡ್ಗಿಚ್ಚಿನಿಂದಾಗಿ ಹುಲ್ಲುಗಾವಲು ಸಂಪೂರ್ಣ ಸುಟ್ಟು ಬೂದಿಯಾಗಿದ್ದು, ಹುಲ್ಲಿನ ಪೊದೆಗಳಲ್ಲಿ ಗೂಡುಕಟ್ಟಿದ್ದ ಪಕ್ಷಿಗಳು, ಪೊದೆಗಳ ನಡುವೆ ಇರುವ ಕಾಡುಕುರಿ, ಮೊಲಗಳಂತಹ ಪ್ರಾಣಿಗಳ ಮರಿಗಳು, ಚಿಟ್ಟೆ ಮತ್ತಿತರ ಕೀಟಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.  

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡ್ಗಿಚ್ಚು ► ಅಪಾರ ಪ್ರಮಾಣದ ಅರಣ್ಯ ಪ್ರದೇಶ ಅಗ್ನಿಗಾಹುತಿ Read More »

ಕರಾವಳಿ

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ ► ಜನವರಿ 12 ಮತ್ತು 13ರಂದು ಮೂರು ಕಿನಾರೆಗಳಲ್ಲಿ ರಿವರ್ ಫೆಸ್ಟಿವಲ್

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ಹಾಗೂ ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರವಾಸೋದ್ಯಮ ತಾಣವಾಗಿ ಆಕರ್ಷಿಸಲು ರಿವರ್ ಫೆಸ್ಟಿವಲ್ ನಡೆಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನದಿ ಉತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನವರಿ 12 ಮತ್ತು 13ರಂದು ಉತ್ಸವ ಮೂರು ಕಿನಾರೆಗಳಲ್ಲಿ ನಡೆಯಲಿದೆ.  ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ಮಾಡಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾದರಿಯಾಗಿರಲಿ ಎಂದು

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ ► ಜನವರಿ 12 ಮತ್ತು 13ರಂದು ಮೂರು ಕಿನಾರೆಗಳಲ್ಲಿ ರಿವರ್ ಫೆಸ್ಟಿವಲ್ Read More »

ಕರಾವಳಿ

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ, ಜ.1. ವರ್ಷದ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದ ಯುವತಿ ವಿಷ ಸೇವಿಸಿ ಸಾವನ್ನಪ್ಪಿದ್ದ ಘಟನೆ ಜ.1 ರಂದು ಮಂಗಳವಾರ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿ ನಡೆದಿದೆ. ತವರು ಮನೆಯಲ್ಲಿದ್ದ ದಿವ್ಯಾ ಪೂಜಾರಿ ಉಪ್ಪಿನಂಗಡಿಯ ಹಿರೇಬಂಡಾಡಿಯಲ್ಲಿರುವ ಗಂಡನ ಮನೆಗೆ ಡಿ.31 ರಂದು ತೆರಳಿದ್ದರು. ಆದರೆ ಜ.1 ರಂದು ಮುಂಜಾನೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಸುಮಾರು 10 ಗಂಟೆ ವೇಳೆಗೆ ತಾವು ವಿಷ ಸೇವನೆ ಮಾಡಿರುವುದಾಗಿ ಗಂಡನ ಮನೆಯವರಿಗೆ ತಿಳಿಸಿದ್ದು ತಕ್ಷಣ ಮನೆ ಮಂದಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಪ್ಪಿನಂಗಡಿ: ವರ್ಷದ ಹಿಂದೆ ಪ್ರೇಮಿಸಿ ವಿವಾಹವಾಗಿದ್ದ ತರುಣಿ ವಿಷಸೇವಿಸಿ ಆತ್ಮಹತ್ಯೆ Read More »

ಕರಾವಳಿ

ಇಂದಿನಿಂದ ಬ್ಯಾಕಿಂಗ್ ಕ್ಷೇತ್ರದಲ್ಲಾದ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ

(ನ್ಯೂಸ್ ಕಡಬ) newskadaba.com.ಆರ್‌ಬಿಐ,  ಜ.1. ಆರ್‌ಬಿಐ ಸೂಚನೆ ಪ್ರಕಾರ, ಜನವರಿ 1ರಿಂದ ಚಿಪ್‌ ರಹಿತ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವಂತಿಲ್ಲ. ಯಾಕೆಂದರೆ ಚಿಪ್ಪಿಲ್ಲದ ಕಾರ್ಡಲ್ಲಿ ದುಡ್ಡು ಬರುವುದಿಲ್ಲ. ಈಗಾಗಲೇ ಬ್ಯಾಂಕ್‌ಗಳು ಇಎಂವಿ ಚಿಪ್‌ ಇರುವ ಕಾರ್ಡ್‌ಗಳನ್ನು ವಿತರಿಸುತ್ತಿವೆ. ಒಂದು ವೇಳೆ ಹಳೆಯ ಕಾರ್ಡ್‌ ಬದಲಿಸಿಲ್ಲವಾದರೆ, ತಕ್ಷಣವೇ ಬದಲಾಯಿಸಿಕೊಳ್ಳಿ. ಹೊಸ ವರ್ಷದಿಂದ ಬ್ಯಾಂಕ್‌ಗಳು ಸಿಟಿಎಸ್‌ ತಂತ್ರಜ್ಞಾನ ಹೊಂದಿದ ಚೆಕ್‌ ಬುಕ್‌ ವಿತರಿಸುತ್ತವೆ. ಗ್ರಾಹಕರು ಈಗಿರುವ ಸಿಟಿಎಸ್‌ ರಹಿತ ಚೆಕ್‌ಗಳನ್ನು ಬಳಸಬಹುದಾದರೂ, ಕ್ಲಿಯರಿಂಗ್‌ ವಿಳಂಬ ಆಗಬಹುದು. ಕೂಡಲೇ ಸಿಟಿಎಸ್‌ ಹೊಂದಿದ ಚೆಕ್‌ಬುಕ್‌ಗೆ

ಇಂದಿನಿಂದ ಬ್ಯಾಕಿಂಗ್ ಕ್ಷೇತ್ರದಲ್ಲಾದ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ Read More »

ಕರಾವಳಿ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ► ಸಾಧಕ ಮಹಿಳೆಯರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com.ಮಂಗಳೂರು, ಜ.1.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2018-19 ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸಿರುವ ಸ್ವಯಂಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಸ್ವಯಂ ಸೇವಾ ಸಂಸ್ಥೆಗಳಿಂದ ಹಾಗೂ ಇತರೆ 5 ಕ್ಷೇತ್ರಗಳಾದ ಕ್ರೀಡೆ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವ ಅಪಾಯದಿಂದ ಪಾರು ಮಾಡಿದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತಾವನೆಯನ್ನು ಜನವರಿ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ► ಸಾಧಕ ಮಹಿಳೆಯರಿಂದ ಅರ್ಜಿ ಆಹ್ವಾನ Read More »

ಕರಾವಳಿ

ಸಾವಯವ ಕೃಷಿ ಮತ್ತು ದೃಢೀಕರಣ  ಯೋಜನೆ

(ನ್ಯೂಸ್ ಕಡಬ) newskadaba.com.ಮಂಗಳೂರು, ಜ.1. ಸಾವಯವ ಕೃಷಿ ಪ್ರಮಾಣೀಕೃತ ಪ್ರದೇಶವನ್ನು ಹೆಚ್ಚಿಸುವುದೊಂದಿಗೆ ಮಾರುಕಟ್ಟೆಗೆ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡಲು ‘ಸಾವಯವ ಕೃಷಿ ಮತ್ತು ದೃಢೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕ್ಷೇತ್ರವನ್ನು ಸಾವಯವ ಪ್ರಮಾಣೀಕರಣಕ್ಕೆ ಈಗಾಗಲೇ ಮೊದಲನೇ ವರ್ಷಕ್ಕೆ ನೊಂದಾಯಿಸಲಾಗಿರುವ ಮತ್ತು ನೊಂದಾಯಿಸಲು ಆಸಕ್ತಿ ಇರುವ ಅರ್ಹ ನೊಂದಾಯಿತ ಸಂಘ ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು,ರೈತ ಉತ್ಪಾದನಾ ಸಂಸ್ಥೆಗಳು,ಕೃಷಿಕರು,

ಸಾವಯವ ಕೃಷಿ ಮತ್ತು ದೃಢೀಕರಣ  ಯೋಜನೆ Read More »

ಕರಾವಳಿ

 13 ಹರೆಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ► ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆಗೆ ನ್ಯಾಯಾಲಯ ಆದೇಶ

(ನ್ಯೂಸ್ ಕಡಬ) newskadaba.com. ಕಾಸರಗೋಡು, ಜ.1. 13 ಹರೆಯ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗೆ ನ್ಯಾಯಾಲಯ ಪೋಕ್ಸೊ ಕಾನೂನಿನಂತೆ ಗರಿಷ್ಠ ಶಿಕ್ಷೆಯಾದ ಜೀವಾವಧಿ ಜೈಲು ಶಿಕ್ಷೆಗೆ ಆದೇಶಿಸಿದೆ. ಕುಬಣೂರು ಪಚ್ಚಂಬಳ್ಳ ಪಂಜತೊಟ್ಟಿ ನಿವಾಸಿ ಅಬ್ದುಲ್ ಕರೀಂ (34) ಅಪರಾಧಿ ಎಂದು ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ. ಎಸ್.ಶಶಿಕುಮಾರ್ ಆದೇಶಿಸಿದ್ದು, ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪೋಕ್ಸೊ ಅಡಿ ಗರಿಷ್ಠ ಶಿಕ್ಷೆ ನೀಡಿರುವ ಕೇರಳ ರಾಜ್ಯದ ಮೊದಲ ಪ್ರಕರಣ ಇದಾಗಿದೆ. 2018 ಎಪ್ರಿಲ್ 2 ರಂದು 

 13 ಹರೆಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ► ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆಗೆ ನ್ಯಾಯಾಲಯ ಆದೇಶ Read More »

ಕರಾವಳಿ

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ

(ನ್ಯೂಸ್ ಕಡಬ) newskadaba.com.ಸುಳ್ಯ, ಜ.1. ಸುಳ್ಯತಾಲೂಕಿನ ದುಗಲಡ್ಕದ ಈಶ್ವರಡ್ಕ ಶಿವಕುಮಾರ್ ಎಂಬವರು ದುಗಲಡ್ಕದಲ್ಲಿ ಸುಮಾರು 15 ವರ್ಷ ದಿಂದ ರಿಕ್ಷಾ ಚಾಲಕರಾಗಿರುವ ಹಾಗೂ ಅವರು ಸುಳ್ಯ ಪಟ್ಟಣ ಪಂಚಾಯಿತಿ ದುಗ್ಗಲಡ್ಕ ವಾರ್ಡ್ನ ಪಂಪ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ಅವರೇ ಊಹಿಸಲಾಗದ ಅದೃಷ್ಟ ಘಟನೆ ನಡೆಯಿತು. ದೇವರ ದರ್ಶನಕ್ಕೆಂದು ಗಡಿನಾಡು ಕಾಸರಗೋಡು ಜಿಲ್ಲೆಗೆ ಹೋಗಿದ್ದ ಸಂದರ್ಭದಲ್ಲಿ ಖರೀದಿಸಿದ್ದ ಕೇರಳ ಲಾಟರಿಗೆ 80 ಲಕ್ಷ ರೂ. ಬಂಪರ್ ಬಹುಮಾನ ಹೊಡೆದಿರುವ ಪ್ರಸಂಗ ನಡೆದಿದೆ. ಡಿ.29ರಂದು ಅಡೂರು

ಸುಳ್ಯದ ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ ►ಕೇರಳದ ಲಾಟರಿಯಲ್ಲಿ ಸಿಕ್ಕಿತ್ತು 80 ಲಕ್ಷ ರೂ. ಬಂಪರ್ ಬಹುಮಾನ Read More »

ಕರಾವಳಿ

ಕುಟ್ರುಪಾಡಿ: ಗ್ರಾಮ ಪಂಚಾಯತ್‍ವತಿಯಿಂದ ರಾಮಕೃಷ್ಣ ಮಿಷನ್ ಹಾಗೂ ದ.ಕ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com.ಕಡಬ, ಜ.1.ಕುಟ್ರುಪಾಡಿ ಗ್ರಾಮ ಪಂಚಾಯತಿಯಲ್ಲಿ ದಿನಾಂಕ 30.12.2018ರಂದು ಪೂರ್ವಾಹ್ನ 7.00ಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ.ಕೆ.ಗೋಗಟೆ ಇವರು ಸ್ವಚ್ಚ ಗ್ರಾಮ ಅಭಿಯಾನ_ ಸ್ವಚ್ಚ ಕುಟ್ರುಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಇಂದು ನಮ್ಮೊಂದಿಗೆ ಕೈಜೋಡಿಸಿದ್ದು, ನಮ್ಮ ಗ್ರಾಮ ಸ್ವಚ್ಚ ಗ್ರಾಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ವಿವಿಧ ಕಾಲನಿಯ ಗ್ರಾಮಸ್ಥರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ತಿಂಗಳ

ಕುಟ್ರುಪಾಡಿ: ಗ್ರಾಮ ಪಂಚಾಯತ್‍ವತಿಯಿಂದ ರಾಮಕೃಷ್ಣ ಮಿಷನ್ ಹಾಗೂ ದ.ಕ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ
Scroll to Top