ಕರಾವಳಿ

ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಎ. 05. ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಮರ್ಧಾಳದಿಂದ ನೆಟ್ಟಣ ಮಧ್ಯದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಮುರಿದು ಬಿದ್ದುದರಿಂದ ರಸ್ತೆ ತಡೆ ಉಂಟಾಗಿದೆ. ಮರ್ಧಾಳ ಸನೀಪದ ಕಲ್ಲಾಜೆ ಮತ್ತು ನೆಟ್ಟಣ ನಡುವಿನ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗಡ್ಡವಾಗಿ ಉರುಳಿದ್ದು, ಉಪ್ಪಿನಂಗಡಿಯಿಂದ ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರು ಅರ್ಧ ದಾರಿಯಲ್ಲಿ ಉಳಿಯುವಂತಾಗಿದೆ. ಮರಗಳನ್ನು ತೆರವುಗೊಳಿಸುವಲ್ಲಿ ಸ್ಥಳೀಯರು ನಿರತರಾಗಿದ್ದಾರೆ.

ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್ Read More »

ಕರಾವಳಿ

ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ – ಪತ್ನಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.05. ವಿದ್ಯುತ್ ಆಘಾತಕ್ಕೆ ಒಳಗಾಗಿ ಗಂಡ – ಹೆಂಡತಿ ಮನೆಯಲ್ಲೇ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಗುರುವಾರ ಸಂಭವಿಸಿದೆ. ಮೃತ ದಂಪತಿಯನ್ನು ಕೊಕ್ರಾಡಿಯ ಸಂಜೀವ ಮೂಲ್ಯ (55) ಹಾಗು ಅವರ ಪತ್ನಿ ಸರೋಜಿನಿ ಮೂಲ್ಯ (50) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಜೋರಾಗಿ ಸಿಡಿಲು ಬಡಿಯುತ್ತಿದ್ದ ವೇಳೆ ತಮ್ಮ ಮನೆಯ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಸರಬರಾಜು ನಿಲ್ಲಿಸಲೆಂದು ಸರೋಜಿನಿಯವರು ಫ್ಯೂಸ್ ತೆಗೆಯಲು ಹೋಗಿದ್ದರು. ಈ

ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ – ಪತ್ನಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಈ ಬಾರಿ ದ.ಕ. ಲೋಕಸಭಾ ಚುನಾವಣೆಯಲ್ಲಿ ಮಿಥುನ್‌ ರೈಗೆ ಭರ್ಜರಿ ಗೆಲುವು ➤ ಕಾಂಗ್ರೆಸ್ – ಜೆಡಿಎಸ್ ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ

(ನ್ಯೂಸ್ ಕಡಬ) newskadaba.com ಕಡಬ, ಎ.04. ಇದೇ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ದ.ಕ. ಲೋಕಸಭಾ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅತೀ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತಾ.ಪಂ ಸದಸ್ಯ ಗಣೇಶ್ ಕೈಕುರೆಯವರು ಭವಿಷ್ಯ ನುಡಿದಿದ್ದಾರೆ. ಅವರು ಎ. 3ರಂದು ಕಡಬದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತನ್ನ ಕುಟುಂಬವೇ ವೈದ್ಯಕೀಯ ಸೇವೆ ನೀಡುವ ಮೂಲಕ ಜನರಿಗೆ ಹತ್ತಿರವಾಗಿರುವ ದ.ಕ ಲೋಕಸಭಾ

ಈ ಬಾರಿ ದ.ಕ. ಲೋಕಸಭಾ ಚುನಾವಣೆಯಲ್ಲಿ ಮಿಥುನ್‌ ರೈಗೆ ಭರ್ಜರಿ ಗೆಲುವು ➤ ಕಾಂಗ್ರೆಸ್ – ಜೆಡಿಎಸ್ ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ Read More »

ಕರಾವಳಿ

ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ ಗೆ ಬಿದ್ದ ಮಕ್ಕಳು ➤ ಸಹೋದರಿಯರಿಬ್ಬರ ಸೇರಿದಂತೆ ಮೂವರು ಮಕ್ಕಳ ದುರ್ಮರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.03. ಆಟವಾಡಲೆಂದು ತೆರಳಿದ್ದ ಮೂವರು ಮಕ್ಕಳು ನೀರಿನ‌ ಟ್ಯಾಂಕಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತ ಮಕ್ಕಳನ್ನು ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಉಡ್ಡಂಗಳ ನಿವಾಸಿ ರಮೇಶ್ ಎಂಬವರ ಪುತ್ರಿಯರಾದ ವಿಶ್ಮಿತಾ(13), ಚೈತ್ರಾ (10) ಹಾಗೂ ರವಿ ಎಂಬವರ ಪುತ್ರ ಜಿತೇಶ್(13) ಎಂದು ಗುರುತಿಸಲಾಗಿದೆ. ಇವರು ನೀರಿನಲ್ಲಿ ಆಟವಾಡಲೆಂದು ಟಾಂಕಿಗೆ ಇಳಿದಿರಬಹುದೆಂದು ಶಂಕಿಸಲಾಗಿದ್ದು, ಟ್ಯಾಂಕ್ ನಿರ್ಮಾಣವಾಗಿ ಮೂರು ತಿಂಗಳಾಗಿದ್ದರೂ ಟ್ಯಾಂಕ್

ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ ಗೆ ಬಿದ್ದ ಮಕ್ಕಳು ➤ ಸಹೋದರಿಯರಿಬ್ಬರ ಸೇರಿದಂತೆ ಮೂವರು ಮಕ್ಕಳ ದುರ್ಮರಣ Read More »

ಕರಾವಳಿ

ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರದಂದು ಸಂಜೆ ಸುರಿದ ಮಳೆಗೆ ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ(35) ಎಂದು ಗುರುತಿಸಲಾಗಿದೆ. ಕಾಣಿಯೂರು ಸಮೀಪದ ಪುಣ್ಚತ್ತಾರಿನಲ್ಲಿ ಗ್ಯಾರೇಜು ಹೊಂದಿದ್ದ ಇವರು ತನ್ನ ಪತ್ನಿಯ ಮನೆಯಲ್ಲಿದ್ದರೆನ್ನಲಾಗಿದೆ. ಮಂಗಳವಾರದಂದು ಸುರಿದ ಭಾರೀ ಗಾಳಿ – ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಮರದ

ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು Read More »

ಕರಾವಳಿ

ಮಳೆಗೆ ನೆಲಕ್ಕುರುಳಿದ ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೆಂಡಾಲ್ ➤ ಚೆಲ್ಲಾಪಿಲ್ಲಿಯಾದ ಸಂತೆ ಮಳಿಗೆಗಳು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರ ಸಂಜೆ ವೇಳೆಗೆ ಕರಾವಳಿಯ ಅಲ್ಲಲ್ಲಿ ಸುರಿದ ಭಾರೀ ಗಾಳಿ ಮಳೆಗೆ ವಿವಿಧೆಡೆ ಕೃಷಿ ಸೇರಿದಂತೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಳದ ಜಾತ್ರೋತ್ಸವದ ಶಾಮಿಯಾನವು ಧರಾಶಾಯಿಯಾಗಿದ್ದು, ಈ ವೇಳೆ ಅಲ್ಲಿದ್ದವರು ದೇವಸ್ಥಾನದ ಒಳಗಡೆಗೆ ತೆರಳಿದ್ದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ ಬೀಸಿದ ಭಾರೀ ಗಾಳಿಗೆ ಜಾತ್ರೋತ್ಸವದಲ್ಲಿನ ಸಂತೆ ಮಳಿಗೆಗಳು ಚೆಲ್ಲಾಪಿಲ್ಲಿಯಾಗಿದ್ದು, ಅದನ್ನು

ಮಳೆಗೆ ನೆಲಕ್ಕುರುಳಿದ ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೆಂಡಾಲ್ ➤ ಚೆಲ್ಲಾಪಿಲ್ಲಿಯಾದ ಸಂತೆ ಮಳಿಗೆಗಳು Read More »

ಕರಾವಳಿ

ಕಡಬ: ಗುಡುಗು – ಮಿಂಚು ಮಿಶ್ರಿತ ಭಾರೀ ಗಾಳಿ ಮಳೆ ➤ ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಧರೆಗುರುಳಿ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.02. ಹಠಾತ್ ಸುರಿದ ಸಿಡಿಲು ಮಿಶ್ರಿತ ಭಾರೀ ಗಾಳಿ ಮಳೆಗೆ ಹಲವು ಮರಗಳು ರಸ್ತೆಗುರುಳಿದ್ದು, ಅಪಾರ ಕೃಷಿ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳವಾರ ಸಂಜೆ ಕಡಬದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ಸಂಜೆ‌ ವೇಳೆಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ಸುರಿದಿದೆ. ಪರಿಣಾಮ ಕಟ್ಟಡಗಳ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು, ಅಂಗಡಿಯ ನಾಮಫಲಕಗಳು ಸೇರಿದಂತೆ ಹಲವು ಸ್ವತ್ತುಗಳು ನಾಶವಾಗಿವೆ. ಮರ್ಧಾಳದ ಚಾಕೋಟೆಕೆರೆ,

ಕಡಬ: ಗುಡುಗು – ಮಿಂಚು ಮಿಶ್ರಿತ ಭಾರೀ ಗಾಳಿ ಮಳೆ ➤ ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಧರೆಗುರುಳಿ ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ತಿಮರಡ್ಡ ನಿವಾಸಿ ಹಸೈನಾರ್ ಎಂಬವರ ಪುತ್ರ ಅನ್ಸಾರ್ ಎಂಬವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಅನ್ಸಾರ್ ಅವರು ಮಾ.21ರಂದು ಸುಳ್ಯದ ಉಬರಡ್ಕಕ್ಕೆ ಮರದ ಕೆಲಸಕ್ಕೆ ಹೋದವರು ಸಂಜೆ ವೇಳೆ ಕಡಬಕ್ಕೆ ಬಂದಿದ್ದರು. ಆದರೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಹಸೈನಾರ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ Read More »

ಕರಾವಳಿ

ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ಕುಂತೂರು ಸೈಂಟ್ ಮೇರಿಸ್ ಜಾಕೊಬೈಟ್ ಸಿರಿಯನ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಫಾ| ಪಿ.ಕೆ. ಅಬ್ರಾಹಂ ಸೋಮವಾರದಂದು ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಕಡಬ ನಿವಾಸಿಯಾಗಿರುವ ಇವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚೀಮೇನಿ ಚರ್ಚ್‌ನಿಂದ ಕುಂತೂರಿಗೆ ವರ್ಗಾವಣೆಗೊಂಡಿದ್ದು, ಇವರು ಈ ಮೊದಲು ಜೆಪ್ಪು, ನೆಲ್ಯಾಡಿ, ಶಿರಾಡಿ, ಶಿಬಾಜೆ, ಅಡ್ಡಹೊಳೆ, ಬೆಳುವಾಯಿ, ಇಚ್ಲಂಪಾಡಿ, ರೆಂಜಿಲಾಡಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಥಳೀಯವಾಗಿ ವಿವಿಧ ಧಾರ್ಮಿಕ ಮತ್ತು

ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ Read More »

ಕರಾವಳಿ

ಬೆಳಂದೂರು ಬಿಜೆಪಿ ವತಿಯಿಂದ ಆಲಂಕಾರು ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ➤ ಕೃಷಿ ಉಳಿಸುವುದಕ್ಕಾಗಿ ರಕ್ತ ಕೊಟ್ಟಾದರೂ ವಿದ್ಯುತ್ ಪಡೆಯುತ್ತೇವೆ – ದಯಾನಂದ ಗೌಡ ಆಲಡ್ಕ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಇಲ್ಲಿನ ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 110ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೆಪಿಟಿಸಿಎಲ್ ಮೀನಾಮೇಷಾ ಎಣಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಆಲಂಕಾರು, ಕುಂತೂರು, ಪೆರಾಬೆ ಗ್ರಾಮಗಳ ವ್ಯಾಪ್ತಿಯಲ್ಲಿ ಬಹಳಷ್ಟು ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಗುಣಮಟ್ಟದ ವಿದ್ಯುತ್ ನೀಡದೆ ಇರುವುದರಿಂದಾಗಿ ರೈತಾಪಿ ಜನತೆಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ರೈತ ಬೆಳೆದ ಕೃಷಿಯನ್ನು ಉಳಿಸುವುದಕ್ಕಾಗಿ ರಕ್ತವನ್ನು ಕೊಟ್ಟಾದರು ವಿದ್ಯುತ್ತನ್ನು ಪಡೆದೇ ಪಡೆಯುತ್ತೇವೆ ಎಂದು ಮಾಜಿ ತಾ. ಪಂಚಾಯತ್ ಸದಸ್ಯ ದಯಾನಂದ ಗೌಡ

ಬೆಳಂದೂರು ಬಿಜೆಪಿ ವತಿಯಿಂದ ಆಲಂಕಾರು ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ➤ ಕೃಷಿ ಉಳಿಸುವುದಕ್ಕಾಗಿ ರಕ್ತ ಕೊಟ್ಟಾದರೂ ವಿದ್ಯುತ್ ಪಡೆಯುತ್ತೇವೆ – ದಯಾನಂದ ಗೌಡ ಆಲಡ್ಕ Read More »

ಕರಾವಳಿ
Scroll to Top