ಕರಾವಳಿ

ಮಾರ್ಚ್ 28ರಂದು ಹಜ್ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com ಮಾ. 16. 2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮವು ಮಾರ್ಚ್ 28ರಂದು ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಯೆನೆಪೋಯ ಶಾಲಾ ಆವರಣದಲ್ಲಿ ನಡೆಯಲಿದೆ. ಈ ವೇಳೆ ಯಾತ್ರಾರ್ಥಿಗಳು ಇತ್ತೀಚೆಗೆ ಭಾರತ ಸರ್ಕಾರದಿಂದ ನೀಡಲಾದ ಮೆಡಿಕಲ್ ಕಾರ್ಡ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿ ಯೆನೆಪೋಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 28ರಂದು ಹಜ್ ಯಾತ್ರಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮ Read More »

ಕರಾವಳಿ

ರಕ್ತದಾನವೇ ಶ್ರೇಷ್ಟ ದಾನ- ಡಾ ಚೂಂತಾರು

(ನ್ಯೂಸ್‌ ಕಡಬ) newskadaba.com ಮಾ. 16. ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಭಾನುವಾರದಂದು ಜರುಗಿತು. ಪೋಲಿಸ್ ಇಲಾಖೆಯ  ಶ್ರೀ ಬಾಲಕೃಷ್ಣ ಭಟ್ ಕೊಂಚಾಡಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಚೂಂತಾರು ಸರೋಜಿನಿ ಪ್ರತಿಷ್ಟಾನದ ಕಾರ್ಯದರ್ಶಿ ಡಾ ಮುರಲೀ ಮೋಹನ್ ಚೂಂತಾರು ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಟ ದಾನ. ಅದಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ನಿರಂತರವಾಗಿ ಮೂರು ತಿಂಗಳಿಗೊಮ್ಮೆ

ರಕ್ತದಾನವೇ ಶ್ರೇಷ್ಟ ದಾನ- ಡಾ ಚೂಂತಾರು Read More »

ಕರಾವಳಿ

ಕಡಬ: ನಾಟಿವೈದ್ಯ, ಮುಟ್ಟಾಳ ತಯಾರಕ ಕಾಂತಪ್ಪ ಕಲ್ಲುಗುಡ್ಡೆ ನಿಧನ

(ನ್ಯೂಸ್‌ ಕಡಬ) newskadaba.com ಮಾ. 16. ಅಸೌಖ್ಯದಿಂದಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ನಿವಾಸಿ ಕಾಂತಪ್ಪ ಕಲ್ಲುಗುಡ್ಡೆ (63) ಅವರು ಮಾ.15ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.   ಕಾಂತಪ್ಪ ಅವರು ಕಟ್ಟಡ ಕಾರ್ಮಿಕರಾಗಿದ್ದು, ಅಡಿಕೆ ಹಾಳೆಯಲ್ಲಿ ಮುಟ್ಟಾಳೆ ಕಟ್ಟುವ ಕಾಯಕವನ್ನೂ ಮಾಡುತ್ತಿದ್ದರು. ನಾಟಿ ವೈದ್ಯರೂ ಗಿದ್ದ ಅವರು ಮೂಲವ್ಯಾಧಿ  ಹಾಗೂ ಹಲ್ಲು ನೋವಿಗೆ ಔಷಧಿಯನ್ನು ನೀಡುತ್ತಿದ್ದರು.   ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪಾ, ಭವಿತಾ, ಪುತ್ರರಾದ ಪ್ರಸಾದ್, ನಿತಿನ್, ಸಹೋದರರಾದ ದೈವ ನರ್ತಕ

ಕಡಬ: ನಾಟಿವೈದ್ಯ, ಮುಟ್ಟಾಳ ತಯಾರಕ ಕಾಂತಪ್ಪ ಕಲ್ಲುಗುಡ್ಡೆ ನಿಧನ Read More »

ಕರಾವಳಿ

ಇಂದು ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಮಾ.16: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 45 ರೂ. ಇಳಿಕೆಯಾಗಿ 14,590 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 49 ರೂ. ಇಳಿಕೆಯಾಗಿ 15,917 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,16,720 ರೂ. ಆದರೆ, 10 ಗ್ರಾಂಗೆ ನೀವು 1,45,900 ರೂ. ಹಾಗೂ 100 ಗ್ರಾಂ

ಇಂದು ಚಿನ್ನದ ದರದಲ್ಲಿ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು

 (ನ್ಯೂಸ್‌ ಕಡಬ) newskadaba.com,  ಮಾ.16: ಎಸ್ಸೆಸ್ಸೆಲ್ಸಿ ಬಳಿಕ ದೂರದ ಪ್ರದೇಶಗಳಲ್ಲಿರುವ ಕಾಲೇಜುಗಳಿಗೆ ತೆರಳಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ವಿದ್ಯಾರ್ಥಿನಿಯರಿಗೆ ಸರಕಾರ ಹೊಸ ಯೋಜನೆ ಮೂಲಕ ಸಿಹಿ ಸುದ್ದಿ ನೀಡಿದೆ. ರಾಜ್ಯದ 50 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಪರಿವರ್ತಿಸಲು ಅನುಮೋದನೆ ನೀಡಿದೆ. ಈ ಬಾರಿ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣಗೊಳಿಸಿರುವ ಸರಕಾರ ಈಗ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ನೀಡಿದೆ. ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳ ಆಯ್ದ 50 ಪ್ರೌಢಶಾಲೆಗಳಲ್ಲಿ ಮೊದಲ ಹಂತದಲ್ಲಿ ಒಂದೆರಡು

ಕರ್ನಾಟಕದ 50 ಸರ್ಕಾರಿ ಹೈಸ್ಕೂಲ್‌ಗಳಿಗೆ ಪಿಯುಸಿ ಸ್ಟೇಟಸ್‌! 40 ವಿದ್ಯಾರ್ಥಿಗಳಿದ್ದರೆ ಸಾಕು, ಪ್ರೌಢಶಾಲೆ ಇನ್ಮುಂದೆ ಪಿಯು ಕಾಲೇಜು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ

 (ನ್ಯೂಸ್‌ ಕಡಬ) newskadaba.com,  ಮಾ.16: ದೇಶದಲ್ಲೇ ಪ್ರಥಮವಾಗಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಘಟಕವನ್ನು ಆರಂಭಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದ್ದು, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಉಪಯೋಗಿಸಿ ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯ ಮೂಲಕ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಪರ್ಯಾಯ ಇಂಧನ ಉತ್ಪಾದನೆಗೂ

ದೇಶದಲ್ಲೇ ಮೊಟ್ಟಮೊದಲು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನಿಲ ಸಿಲಿಂಡರ್ ಕೊರತೆ ಹಿನ್ನೆಲೆ: ಗ್ಯಾಸ್ ಕಂಪನಿಗಳ ಜೊತೆ ಇಂದು ಸಭೆ – ಸಚಿವ ಕೆ.ಎಚ್. ಮುನಿಯಪ್ಪ

(ನ್ಯೂಸ್‌ ಕಡಬ) newskadaba.com,  ಮಾ.16:  ರಾಜ್ಯದಲ್ಲಿ ಉಂಟಾಗಿರುವ ಅನಿಲ ಸಿಲಿಂಡರ್ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೋಮವಾರ ಅನಿಲ ಕಂಪನಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ 4 ಗಂಟೆಗೆ ಮುಖ್ಯ ಕಾರ್ಯದರ್ಶಿ Shalini Rajneesh ಅವರ ನೇತೃತ್ವದಲ್ಲಿ ಗ್ಯಾಸ್ ಕಂಪನಿಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ ಎಂದರು. ಈ ಸಭೆಯಲ್ಲಿ ಹೋಟೆಲ್‌ಗಳಿಗೆ ಅಗತ್ಯವಿರುವಷ್ಟು ಅನಿಲ ಸಿಲಿಂಡರ್ ಪೂರೈಕೆ ಮಾಡುವ ಬಗ್ಗೆ

ಅನಿಲ ಸಿಲಿಂಡರ್ ಕೊರತೆ ಹಿನ್ನೆಲೆ: ಗ್ಯಾಸ್ ಕಂಪನಿಗಳ ಜೊತೆ ಇಂದು ಸಭೆ – ಸಚಿವ ಕೆ.ಎಚ್. ಮುನಿಯಪ್ಪ Read More »

ಕರಾವಳಿ

ಕಡಬದ ಯುವಕ ಐರ್ಲೆಂಡ್ ನಲ್ಲಿ ನಿಗೂಢವಾಗಿ ಮೃತಪಟ್ಟ ಪ್ರಕರಣ ನ್ಯಾಯಕ್ಕಾಗಿ ಆಗ್ರಹಿಸಿ ಮೊಂಬತ್ತಿ ಮೆರವಣಿಗೆ

(ನ್ಯೂಸ್‌ ಕಡಬ) newskadaba.com ಮಾ. 16. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಕೇವಲ 28 ದಿನಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಡಬ ಮೂಲದ ಯುವಕನ ಸಾವಿನ ಹಿಂದಿರುವ ರಹಸ್ಯ ಬಯಲಾಗಬೇಕು ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಭಾನುವಾರದಂದು ಕಡಬದಲ್ಲಿ ಮೊಂಬತ್ತಿ ಮೆರವಣಿಗೆಯ ಮೂಲಕ ಪ್ರತಿಭಟಿಸಲಾಯಿತು.   ಕಡಬ ತಾಲೂಕಿನ ಕುಟ್ರುಪಾಡಿ ನಿವಾಸಿ ಸ್ಯಾಂಜೋ ಸುನಿಲ್ (31) ಎಂಬಾತ ಕಳೆದ ಫೆಬ್ರವರಿ ತಿಂಗಳಲ್ಲಿ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಮೃತದೇಹವು ಕಳೆದ ವಾರವಷ್ಟೇ ತಾಯ್ನಾಡಿಗೆ ತಲುಪಿ ಅಂತ್ಯಕ್ರಿಯೆ ನಡೆದಿದ್ದರೂ,

ಕಡಬದ ಯುವಕ ಐರ್ಲೆಂಡ್ ನಲ್ಲಿ ನಿಗೂಢವಾಗಿ ಮೃತಪಟ್ಟ ಪ್ರಕರಣ ನ್ಯಾಯಕ್ಕಾಗಿ ಆಗ್ರಹಿಸಿ ಮೊಂಬತ್ತಿ ಮೆರವಣಿಗೆ Read More »

ಕರಾವಳಿ

ಸುಳ್ಯ–ಕಡಬ ಭಾಗದಲ್ಲಿ ಮಳೆಗಾಳಿ ತೀವ್ರತೆ: ಬಾಳುಗೋಡು, ಐನೆಕಿದು ಪ್ರದೇಶದಲ್ಲಿ ಭಾರೀ ಗಾಳಿ

(ನ್ಯೂಸ್‌ ಕಡಬ) newskadaba.com,  ಮಾ.16: ನಿನ್ನೆ((ಮಾ.15) ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಸುಬ್ರಹ್ಮಣ್ಯ, ಐನೆಕಿದು ಸೇರಿದಂತೆ ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಭಾಗಗಳಲ್ಲಿ ಸಂಜೆಯ ವೇಳೆಗೆ ಮಳೆಯಾಗಿದ್ದು, ಬಾಳುಗೋಡು ಹಾಗೂ ಐನೆಕಿದು ಪರಿಸರದಲ್ಲಿ ಮಳೆಯ ಜೊತೆಗೆ ಬಾರೀ ಪ್ರಮಾಣದಲ್ಲಿ ಗಾಳಿ ಕೂಡ ಬೀಸಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ತಿಳಿದುಬಂದಿದ್ದು, ಹಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ ಎಂದು ತಿಳಿದುಬಂದಿದೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ

ಸುಳ್ಯ–ಕಡಬ ಭಾಗದಲ್ಲಿ ಮಳೆಗಾಳಿ ತೀವ್ರತೆ: ಬಾಳುಗೋಡು, ಐನೆಕಿದು ಪ್ರದೇಶದಲ್ಲಿ ಭಾರೀ ಗಾಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ 24/7 ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ

(ನ್ಯೂಸ್‌ ಕಡಬ) newskadaba.com ಮಾ. 16. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ನಿಲ್ದಾಣದ ಸೌಮ್ಯ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಪ್ರಯಾಣಿಕರಿಗೆ ಇನ್ನು ಮುಂದೆ ಡಿಜಿಟಲ್ ಮತ್ತು ಸ್ವಯಂಚಾಲಿತ ಲಗೇಜ್ ಲಾಕರ್ ಸೌಲಭ್ಯ ಲಭ್ಯವಿರಲಿದೆ. ಇದರಿಂದ ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಆಧುನಿಕ ಮಾದರಿಯ ಸುರಕ್ಷಿತ ಲಗೇಜ್ ಶೇಖರಣಾ ವ್ಯವಸ್ಥೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಲಾಕರ್ ವ್ಯವಸ್ಥೆಯು ಮಧ್ಯಮ, ದೊಡ್ಡದು ಮತ್ತು ಅತಿ ದೊಡ್ಡ ಗಾತ್ರಗಳಲ್ಲಿ ಲಭ್ಯವಿರಲಿದೆ. ಆರಂಭಿಕ ದರವು ಆರು ಗಂಟೆಗಳ

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ 24/7 ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ Read More »

ಕರಾವಳಿ
Scroll to Top