ಕರಾವಳಿ

ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಮುಂದುವರಿಕೆ ➤ ಮನೆಯಿಂದ ಹೊರ ಬಂದವರಿಗೆ ಕಾದಿದೆ ಶಿಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.28. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೂಡಾ ಸಾರ್ವಜನಿಕ ಓಡಾಟ ನಿರ್ಬಂಧಿಸಿ, ಎಲ್ಲಾ ಚಟುವಟಿಕೆ, ವಾಣಿಜ್ಯ, ವ್ಯವಹಾರಗಳನ್ನು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ. ಶುಕ್ರವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಶನಿವಾರದಂದು […]

ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಮುಂದುವರಿಕೆ ➤ ಮನೆಯಿಂದ ಹೊರ ಬಂದವರಿಗೆ ಕಾದಿದೆ ಶಿಕ್ಷೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕೆಸಿಸಿ ಟ್ರಸ್ಟ್‌ನಿಂದ ವಾಟ್ಸ್‌ಆ್ಯಪ್ ಮೂಲಕ ಟೆಲಿ ಮೆಡಿಸಿನ್ ಸೇವೆ

ಮಂಗಳೂರು, ಮಾ.28: ವ್ಯಾಪಕವಾಗಿ ಹರಡುವ COVID-19 ಸೋಂಕು ಮೂರನೇ ಹಂತಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಜನರಿಗೆ ಎಂದಿನಂತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕೆಸಿಸಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆನ್ಲೈನ್ ಚಿಕಿತ್ಸಾ ಸೇವೆ ಆರಂಭಿಸಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ, ಗುಜರಾತಿ ಸಹಿತ ಎಲ್ಲಾ ಸ್ಥಳೀಯ ಭಾಷೆಯ ಜನರಿಗೆ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಟ್ರಸ್ಟ್‌ನ ಸುಮಾರು 14 ವಿಭಾಗಗಳ ವೈದ್ಯರುಗಳು ಈ ಸೇವೆಯಲ್ಲಿ ಲಭ್ಯವಿರಲಿದ್ದಾರೆ ಎಂದು

ಮಂಗಳೂರು: ಕೆಸಿಸಿ ಟ್ರಸ್ಟ್‌ನಿಂದ ವಾಟ್ಸ್‌ಆ್ಯಪ್ ಮೂಲಕ ಟೆಲಿ ಮೆಡಿಸಿನ್ ಸೇವೆ Read More »

ಕರಾವಳಿ, ಕರ್ನಾಟಕ

ಹಾಲು ಡೈರಿ, ಆಸ್ಪತ್ರೆ ಬಿಟ್ಟು ಮಿಕ್ಕಿದ್ದೆಲ್ಲಾ ಬಂದ್ ➤ ಬೆಳ್ಳಂಬೆಳಗ್ಗೆ ಪೇಟೆಗೆ ಬಂದವರಿಗೆ ಕಡಬ ಪೊಲೀಸರಿಂದ ತರಾಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.28. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಯಾರೂ ಪೇಟೆಗೆ ಕಾಲಿಡದಂತೆ ಪೊಲೀಸರು ತಡೆಯುತ್ತಿದ್ದಾರೆ. ಆಸ್ಪತ್ರೆ, ಹಾಲು ಡೈರಿಯನ್ನು ಬಿಟ್ಟು ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದ್ದು, ಅನಗತ್ಯವಾಗಿ ಕಡಬ ಪೇಟೆಗೆ ಆಗಮಿಸಿದ್ದವರನ್ನು ತರಾಟೆಗೆ ತೆಗೆದುಕೊಂಡ ಕಡಬ ಪೊಲೀಸರು ಹಿಂದಕ್ಕೆ ಕಳುಹಿಸುವುದು ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಮಾಡಲಾಗಿರುವುದರಿಂದ ಯಾರೂ ಮನೆಯಿಂದ ಹೊರಬಾರದೆ ಸಂಯಮ ಪಾಲಿಸಬೇಕು. ರಸ್ತೆಯಲ್ಲಿ ತಿರುಗಾಡುವುದು ಕಂಡುಬಂದರೆ ಕಾನೂನು ಕ್ರಮ‌ ಕೈಗೊಳ್ಳುವುದಾಗಿ ಕಡಬ

ಹಾಲು ಡೈರಿ, ಆಸ್ಪತ್ರೆ ಬಿಟ್ಟು ಮಿಕ್ಕಿದ್ದೆಲ್ಲಾ ಬಂದ್ ➤ ಬೆಳ್ಳಂಬೆಳಗ್ಗೆ ಪೇಟೆಗೆ ಬಂದವರಿಗೆ ಕಡಬ ಪೊಲೀಸರಿಂದ ತರಾಟೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಳೆ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ➤ ಯಾರೂ ಮನೆಯಿಂದ ಹೊರಬರದಂತೆ ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.27. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಓಡಾಟ ನಿರ್ಬಂಧಿಸಿ, ಎಲ್ಲಾ ಚಟುವಟಿಕೆ, ವಾಣಿಜ್ಯ, ವ್ಯವಹಾರಗಳನ್ನು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.     ಶುಕ್ರವಾರದಂದು ನಡೆದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದಿನೇ ದಿನೇ ಕೊರೋನಾ ಅಟ್ಟಹಾಸ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ

ನಾಳೆ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ➤ ಯಾರೂ ಮನೆಯಿಂದ ಹೊರಬರದಂತೆ ಜಿಲ್ಲಾಧಿಕಾರಿ ಆದೇಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿಗೂ ಕಾಲಿಟ್ಟ ಕೊರೋನಾ ➤ ಉಪ್ಪಿನಂಗಡಿ‌ ಕರಾಯದ ಯುವಕನಲ್ಲಿ ಕೊರೋನಾ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಬೆಳ್ತಂಗಡಿ ತಾಲೂಕಿಗೂ ಕೊರೋನಾ ಕಾಲಿಟ್ಟಿದ್ದು, ವಿದೇಶದಿಂದ ಆಗಮಿಸಿದ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದ್ದು, ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏಳಕ್ಕೇರಿದೆ. ದುಬೈಯಲ್ಲಿದ್ದ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ 21 ವರ್ಷ ಪ್ರಾಯದ ಯುವಕ ಮಾರ್ಚ್ 21ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಊರಿಗೆ ಬಂದಿದ್ದ ಯುವಕನಿಗೆ ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಪುತ್ತೂರಿನ ಸರಕಾರಿ

ಬೆಳ್ತಂಗಡಿಗೂ ಕಾಲಿಟ್ಟ ಕೊರೋನಾ ➤ ಉಪ್ಪಿನಂಗಡಿ‌ ಕರಾಯದ ಯುವಕನಲ್ಲಿ ಕೊರೋನಾ ಸೋಂಕು ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

Breaking News ಕಾಸರಗೋಡು: ಶುಕ್ರವಾರ ಒಂದೇ ದಿನ 34 ಮಂದಿಗೆ ಕೊರೋನ ಸೋಂಕು ದೃಢ

ಕಾಸರಗೋಡು, ಮಾ.27: ಕೊರೋನ ವೈರಸ್ ಕೇರಳದ್ಯಾದಂತ ಭಾರೀ ಆತಂಕ ಸೃಷ್ಟಿಸುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ಒಂದೇ ದಿನದಲ್ಲಿ 34 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 81ಕ್ಕೇರಿದೆ. ಕೇರಳದಲ್ಲಿ ಇಂದು ಒಟ್ಟು 39 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 34 ಮಂದಿಯೂ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಇದರಿಂದ ಜಿಲ್ಲೆಯ ಜನರು ಭಾರೀ ಆತಂಕಗೊಳಗಾಗಿದ್ದಾರೆ.

Breaking News ಕಾಸರಗೋಡು: ಶುಕ್ರವಾರ ಒಂದೇ ದಿನ 34 ಮಂದಿಗೆ ಕೊರೋನ ಸೋಂಕು ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ; ಕೊರೋನ ಹರಡುವ ಭೀತಿ: ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ, ಮಾ.27: ಕೊರೋನ ವೈರಸ್ ಆತಂಕದಿಂದ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಬೆಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ನಿವಾಸಿ ಸದಾಶಿವ ಶೆಟ್ಟಿ (55)ಎಂದು ಗುರುತಿಸಲಾಗಿದೆ. ಕೊರೋನ ವೈರಸ್ ಹರಡುತ್ತಿರುವ ಬಗ್ಗೆ ಚಿಂತೆಗೀಡಾಗಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಾ.26ರ ರಾತ್ರಿ ಮನೆಯ ಗೋಡೆ ಮೇಲೆ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೆಟ್ರೋಲ್ ಬಂಕೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಕಳೆದ ಎರಡು ದಿನಗಳ ಹಿಂದೆಯೂ

ಬಂಟ್ವಾಳ; ಕೊರೋನ ಹರಡುವ ಭೀತಿ: ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಬಂಟ್ವಾಳ: ಸ್ನಾನಕ್ಕೆಂದು ಹೋದ ಯುವಕ ನೀರುಪಾಲು

ಬಂಟ್ವಾಳ, ಮಾ.27: ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ಹೋಗಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಾಣಿಯಲ್ಲಿ ನಡೆದಿದೆ. ಮೃತ ಯುವಕನನ್ನು ಪಾಲ್ಕೆ ನಿವಾಸಿ ರಹೀಂ (29) ಎಂದು ಗುರುತಿಸಲಾಗಿದೆ. ನೇತ್ರಾವತಿ ನದಿಯ ದಡಕ್ಕೆ ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ರಹೀಂ ತೆರಳಿದ್ದು ಮೂವರು ಸ್ನೇಹಿತರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ರಹೀಂ ಕೂಡಾ ನೀರಿಗೆ ಇಳಿದಿದ್ದು ನೀರಿನಲ್ಲಿ ಮುಳುಗಿ ಕಾಪಾಡುವಂತೆ ಕೂಗಿದ್ದಾರೆ. ಆದರೆ ಉಳಿದ ಸ್ನೇಹಿತರು ಯಾರಿಗೂ ಆಳವಾದ ನೀರಿನ ಈಜಲು ತಿಳಿಯದ ಕಾರಣದಿಂದಾಗಿ ಅವರನ್ನು ಉಳಿಸಲಾಗಲಿಲ್ಲ.

ಬಂಟ್ವಾಳ: ಸ್ನಾನಕ್ಕೆಂದು ಹೋದ ಯುವಕ ನೀರುಪಾಲು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸಂಪೂರ್ಣ ಕೊರೋನ ಚಿಕಿತ್ಸಾ ಆಸ್ಪತ್ರೆಯಾಗಿ ವೆನ್ಲಾಕ್ ಪರಿವರ್ತನೆ: ಸಚಿವ ಕೋಟ

ಮಂಗಳೂರು, ಮಾ.26: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನ ಚಿಕಿತ್ಸಾ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಗುರುವಾರ ಕೊರೋನ ಸೋಂಕಿನ ಮುಂಜಾಗ್ರತೆ ಕ್ರಮಗಳ ಬಗ್ಗೆ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಮತ್ತು ವೈದ್ಯರುಗಳೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚರ್ಚಿಸಿ ಈ ಬಗ್ಗೆ ಮಾಹಿತಿ ನೀಡಿದರು. ವೆನ್ಲಾಕ್ ಆಸ್ಪತ್ರೆಯ 20 ಹಾಸಿಗೆಗಳ ಆಯುಷ್ ಕಟ್ಟಡದಲ್ಲಿ ಕೊರೋನ ಶಂಕಿತರನ್ನು ದಾಖಲಿಸಿಲಾಗುತ್ತದೆ. ಅವರಲ್ಲಿ ಯಾರಿಗಾದರೂ ಪಾಸಿಟಿವ್ ಕಂಡು ಬಂದಲ್ಲಿ

ಸಂಪೂರ್ಣ ಕೊರೋನ ಚಿಕಿತ್ಸಾ ಆಸ್ಪತ್ರೆಯಾಗಿ ವೆನ್ಲಾಕ್ ಪರಿವರ್ತನೆ: ಸಚಿವ ಕೋಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಬಾಲಕ ಸೇರಿ ಇಬ್ಬರು ಫಲ್ಗುಣಿ ನದಿಯಲ್ಲಿ ಮುಳುಗಿ ಮೃತ್ಯು

ಬೆಳ್ತಂಗಡಿ, ಮಾ.26: ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ. ಮೃತರನ್ನು ಶಿರ್ತಾಡಿ ಬಳಿಯ ಪಣಪಿಲ್ ದರ್ಖಾಸು ನಿವಾಸಿ ಮಹಾಬಲ ಪೂಜಾರಿ ಎಂಬವರ ಪುತ್ರ ವಾಸುದೇವ (22) ಮತ್ತು ಶಿರ್ತಾಡಿ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಎಂಬವರ ಪುತ್ರ ಇಶಾನ್ (8) ಎಂದು ಗುರುತಿಸಲಾಗಿದೆ. ಅವರು ಹೊಸಂಗಡಿ ಗ್ರಾಮದ ಸುನೀಲ್ ಎಂಬವರ ಮನೆಗೆ ಹೋಗಿದ್ದು, ಇಂದು ಬೆಳಿಗ್ಗೆ ಸುನೀಲ್ ಹುಲ್ಲು ಕೀಳಲು ತೋಟದ

ಬೆಳ್ತಂಗಡಿ: ಬಾಲಕ ಸೇರಿ ಇಬ್ಬರು ಫಲ್ಗುಣಿ ನದಿಯಲ್ಲಿ ಮುಳುಗಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top