ಕರಾವಳಿ

ಪುತ್ತೂರಿನ ವ್ಯಕ್ತಿಯಲ್ಲಿ ಕೊರೋನಾ ಪತ್ತೆ ➤ ಮಾರ್ಚ್ 20 ರಂದು ವಿದೇಶದಿಂದ ಆಗಮಿಸಿದ್ದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.01. ಕೊರೋನಾ ಅಟ್ಟಹಾಸವು ಮಿತಿ ಮೀರುತ್ತಿದ್ದು, ಬುಧವಾರದಂದು ಪುತ್ತೂರು ನಿವಾಸಿಯೋರ್ವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಚ್ 20 ರಂದು ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 49 ವರ್ಷಸ ನಿವಾಸಿಯೋರ್ವರು ಗಂಟು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಗಂಟಲಿನ ದ್ವರ ಪರೀಕ್ಷೆ ಮಾಡಲಾಗಿ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ.

ಪುತ್ತೂರಿನ ವ್ಯಕ್ತಿಯಲ್ಲಿ ಕೊರೋನಾ ಪತ್ತೆ ➤ ಮಾರ್ಚ್ 20 ರಂದು ವಿದೇಶದಿಂದ ಆಗಮಿಸಿದ್ದ ವ್ಯಕ್ತಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಇಂದಿನಿಂದಲೇ ಎರಡು ತಿಂಗಳ ಪಡಿತರ ವಿತರಣೆ

ಬೆಂಗಳೂರು, ಎ.1: ದೇಶಾದ್ಯಂತ ಕೊರೋನ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ವಿತರಣೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು  ಸಚಿವ ಕೆ .ಗೋಪಾಲಯ್ಯ ಹೇಳಿದ್ದಾರೆ. ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಎ.1ರಿಂದಲೆ ವಿತರಣೆಯಾಗಲಿದೆ. ಎಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ‌ ಇದೆ ಎಂದರು. ಕಡುಬಡವರ ಅಂತ್ಯೋದಯ ಕಾರ್ಡು ದಾರರಿಗೆ ಎರಡು ತಿಂಗಳ 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ

ಇಂದಿನಿಂದಲೇ ಎರಡು ತಿಂಗಳ ಪಡಿತರ ವಿತರಣೆ Read More »

ಕರಾವಳಿ, ಕರ್ನಾಟಕ

ಮಂಗಳೂರು: ಡೆಂಗ್ಯೂ ಜ್ವರಕ್ಕೆ ವಿದ್ಯಾರ್ಥಿನಿ ಬಲಿ

ಉಳ್ಳಾಲ, ಎ.1: ಡೆಂಗ್ಯು ಜ್ವರಕ್ಕೆ ತುತ್ತಾದ ಉಳ್ಳಾಲ ಉಳಿಯ ನಿವಾಸಿ ವಿದ್ಯಾರ್ಥಿನಿ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಕಿನ್ಯಾ ಮೀನಾದಿ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಉಳ್ಳಾಲ ಉಳಿಯ ನಿವಾಸಿ ಟೈಟಸ್ ಡಿಸೋಜ ಎಂಬವರ ಪುತ್ರಿ ಸ್ಟೆನಿಟಾ ಡಿಸೋಜ(15) ಮೃತ ವಿದ್ಯಾರ್ಥಿನಿ. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ಈಕೆ ಮಾ. 16 ಕ್ಕೆ ಅಸೌಖ್ಯಕ್ಕೆ ಒಳಗಾಗಿದ್ದಳು. ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಆಕೆ ಹೆಚ್ಚಿನ

ಮಂಗಳೂರು: ಡೆಂಗ್ಯೂ ಜ್ವರಕ್ಕೆ ವಿದ್ಯಾರ್ಥಿನಿ ಬಲಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದ.ಕ. ಸೇರಿ ರಾಜ್ಯದ 4 ಜಿಲ್ಲೆಗಳು ಕೊರೋನ ‘ರೆಡ್ ಝೋನ್’ ಆಗಿ ಘೋಷಣೆ

ಬೆಂಗಳೂರು, ಎ.1: ಕೊರೋನ ವೈರಸ್ ನಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಅಲ್ಲದೆ ಮೈಸೂರು, ಉತ್ತರ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರಾಜ್ಯ ಸರ್ಕಾರ ರೆಡ್ ಝೋನ್ ಎಂದು ಘೋಷಣೆ ಮಾಡಿದೆ. ಕೊರೋನ ಸೋಂಕನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರ್ಕಾರ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ರೆಡ್ ಝೋನ್ ಘೋಷಣೆಯಾಗಿರುವ ನಗರ ಹಾಗೂ ಜಿಲ್ಲೆಗಳ ಮೇಲೆ ಹೆಚ್ಚಿನ

ದ.ಕ. ಸೇರಿ ರಾಜ್ಯದ 4 ಜಿಲ್ಲೆಗಳು ಕೊರೋನ ‘ರೆಡ್ ಝೋನ್’ ಆಗಿ ಘೋಷಣೆ Read More »

ಕರಾವಳಿ, ಕರ್ನಾಟಕ

ದೆಹಲಿಯ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗಿ ➤ ವೆನ್ಲಾಕ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.01. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿಯೋರ್ವರು ಭಾಗವಹಿಸಿದ್ದಾರೆ ಎಂಬ ಶಂಕೆಯಿಂದ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಆ ವ್ಯಕ್ತಿಯನ್ನು ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವರು ಈಗಾಗಲೇ ಕೊರೋನಾ ಪೀಡಿತರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ನಿವಾಸಿಯಾಗಿರುವ ವ್ಯಕ್ತಿಯು ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದು, ವಿಚಾರ ತಿಳಿದ ಉಪ್ಪಿನಂಗಡಿ ಪೊಲೀಸರು ಅವರ

ದೆಹಲಿಯ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗಿ ➤ ವೆನ್ಲಾಕ್ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಮಧ್ಯಾಹ್ನದವರೆಗೆ ತೆರೆಯಲಿದೆ ದಿನಸಿ, ತರಕಾರಿ ಅಂಗಡಿಗಳು ➤ ಜನರಲ್ಲಿ ಯಾವುದೇ ಗೊಂದಲ ಬೇಡ: ಎಸಿ ಡಾ| ಯತೀಶ್ ಉಳ್ಳಾಲ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿ, ತರಕಾರಿ, ಹಾಲು ಮೊದಲಾದ ದಿನಬಳಕೆಯ ಸಾಮಾಗ್ರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಡಬ ಪೇಟೆಯಲ್ಲೂ ನಾಳೆ ಅಂಗಡಿ ಮುಂಗಟ್ಟು ತೆರೆದಿರಲಿದೆ. ಈಗಾಗಲೇ ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅದು ಹಾಗೆಯೇ ಮುಂದುವರಿಯಲಿದೆ. ಜೊತೆಗೆ ವಿವಿಧ ಗ್ರಾಮಗಳಿಂದ ದಿನಬಳಕೆಯ ವಸ್ತುಗಳಿಗೆ ಕಡಬಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್

ಕಡಬದಲ್ಲಿ ಮಧ್ಯಾಹ್ನದವರೆಗೆ ತೆರೆಯಲಿದೆ ದಿನಸಿ, ತರಕಾರಿ ಅಂಗಡಿಗಳು ➤ ಜನರಲ್ಲಿ ಯಾವುದೇ ಗೊಂದಲ ಬೇಡ: ಎಸಿ ಡಾ| ಯತೀಶ್ ಉಳ್ಳಾಲ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಳೆಯಿಂದ ದ.ಕ. ಜಿಲ್ಲೆಯಲ್ಲಿ7ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ   ಅಮಂಗಳೂರು, ಮಾ. 31: ದ.ಕ. ಜಿಲ್ಲೆಯ ಜನರಿಗೆ ಎಲ್ಲ  ಅಗತ್ಯ ವಸ್ತುಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಲಭ್ಯವಾಗಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.   ಎರಡು ದಿನಗಳ ಸಂಪೂರ್ಣ ಬಂದ್ ಬಳಿಕ ಮಂಗಳವಾರದಂದು ದ.ಕ. ಜಿಲ್ಲೆಯಲ್ಲಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬುಧವಾರದ ಬಳಿಕ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನು

ನಾಳೆಯಿಂದ ದ.ಕ. ಜಿಲ್ಲೆಯಲ್ಲಿ7ರಿಂದ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ Read More »

ಕರಾವಳಿ

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು 12 ಗಂಟೆಯವರೆಗೆ ಓಪನ್

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಓಪನ್ ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಪೆಟ್ರೋಲ್ ಪಂಪ್ ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ 7 ರಿಂದ 12 ರವರೆಗೆ ಮಾತ್ರ ಸೇವೆ. ಗೂಡ್ಸ್ ವಾಹನಗಳಿಗೆ ಇಡೀ ದಿನ ಸೇವೆ. ಮಧ್ಯಾಹ್ನ 12 ಗಂಟೆಯ ನಂತರ ಸಂಚರಿಸುವ ಖಾಸಗೀ ವಾಹನಗಳು ಸೀಝ್

ದ.ಕ. ಜಿಲ್ಲೆ: ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು 12 ಗಂಟೆಯವರೆಗೆ ಓಪನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ ಪೇಟೆ ನಾಳೆ ಸಂಪೂರ್ಣ ಬಂದ್ ➤ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ

ಕಡಬ, ಮಾ.30. ದ.ಕ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮಾ.31ರಂದು ಬೆಳಿಗ್ಗೆ 6 ಗಂಟೆಯಿಂದ 3 ಗಂಟೆಯವರೆಗೆ ದಿನಸಿ ಸಾಮಾಗ್ರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಕಡಬ ಕೋಡಿಂಬಾಳ ಗ್ರಾಮದಲ್ಲಿ ಈ ಆದೇಶ ಅನ್ವಯವಾಗುವುದಿಲ್ಲ, ಈ ಬಗ್ಗೆ ಮಾ.29ರಂದು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಾಲೂಕು ಪಂಚಾಯತ್ ಕಾರ‍್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾ.31ರಿಂದ ಕಡಬ ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ

ಕಡಬ ಪೇಟೆ ನಾಳೆ ಸಂಪೂರ್ಣ ಬಂದ್ ➤ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.30. ನೇಣುಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ನೆಲ್ಯಾಡಿಯ ಕೌಕ್ರಾಡಿ ಗ್ರಾಮದ ಭೂತಲಡ್ಕ ನಿವಾಸಿ ಬಾಬು ಮುಗೇರ(65) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಬು ಮುಗೇರ ಜುಗುಪ್ಸೆಗೊಂಡು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೆಲ್ಯಾಡಿ: ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top