ಕರಾವಳಿ

ಕೆಯ್ಯೂರಿನ ಪ್ರದೀಪ್ ಕಾರ್ಯಕ್ಕೆ ಪ್ರಶಂಸೆ ➤ ವೃದ್ಧ ದಂಪತಿಗೆ ಮಗ ನಾದ ವಿಶ್ವನಾಥಪುರ ಎಸ್ಐ

(ನ್ಯೂಸ್ ಕಡಬ) newskadaba.com  ಪುತ್ತೂರು ,ಜೂ.19:  ವೃದ್ದ ದಂಪತಿಗೆ ಆಸರೆಯಾಗುವ ಮೂಲಕ ಕೆಯ್ಯೂರಿನ ಸಬ್ ಇನ್‍ಸ್ಪೆಕ್ಟರ್ ಪ್ರದೀಪ್ ಪೂಜಾರಿಯವರು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪುತ್ತೂರು ತಾಲೂಕಿನ ಕೆಯ್ಯೂರಿನ ಕಣಿಯಾರು ನಿವಾಸಿಯಾಗಿರುವ, ಪ್ರಸ್ತುತ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಆಗಿರುವ ಪ್ರದೀಪ್ ಪೂಜಾರಿ ಅವರು ತನ್ನ ಕರ್ತವ್ಯ ವ್ಯಾಪ್ತಿಯಲ್ಲಿ ಯಾರೂ ಇಲ್ಲದ, ವಂಚನೆಗೆ ಒಳಗಾದ ವೃದ್ದ ದಂಪತಿಯ ಜೀವನ ಕಥೆ ಆಲಿಸಿ, ಅವರಿಗೆ ಜೀವನ ಪರ್ಯಾಂತ ಆಸರೆ ನೀಡಲು ನಿರ್ಧರಿಸಿರುವ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ […]

ಕೆಯ್ಯೂರಿನ ಪ್ರದೀಪ್ ಕಾರ್ಯಕ್ಕೆ ಪ್ರಶಂಸೆ ➤ ವೃದ್ಧ ದಂಪತಿಗೆ ಮಗ ನಾದ ವಿಶ್ವನಾಥಪುರ ಎಸ್ಐ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19:ಮಾಂಸದ ಅಂಗಡಿಯ ಮಾಲಿಕನೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮಾಂಸದ ಅಂಗಡಿ ಮಾಲಿಕ ಹಳೆಕೋಟೆ ನಿವಾಸಿಯಾಗಿರುವ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರಿನಿಂದ ನಝೀರ್ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ನಝೀರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ Read More »

ಕರಾವಳಿ

ನಿಮ್ಮ ಪ್ರೀತಿ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ

ನೀವು ಇಷ್ಟಪಟ್ಟಿರುವ ಪ್ರೀತಿಯು ನಿಮ್ಮಂತೆ ಸೆಳೆಯಲು ಆದಷ್ಟು ನೀವು ಆಕರ್ಷಕ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಹಾಗೂ ಅವರಿಗೆ ಆಕರ್ಷಣೀಯವಾಗಿ ಕಾಣಬೇಕು. ಅದಕ್ಕಾಗಿ ಬೇವು, ಸಮಿತ್ತು, ಉತ್ತರಾಣಿ, ಒಣಗಿರುವ ಗಿಡದ ಭಾಗವನ್ನು ದಹನ ಮಾಡಿಕೊಂಡು ಅಂಜನ ತಯಾರಿ ಮಾಡಿಕೊಳ್ಳಿ, ಇದನ್ನು 21 ದಿನ ಹಣೆಗೆ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಆಕಾಂಕ್ಷೆಗಳು ಈಡೇರುತ್ತದೆ. ಶ್ರೀ ತ್ರಿಪುರ ಸುಂದರಿ ಭೈರವಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ,

ನಿಮ್ಮ ಪ್ರೀತಿ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕಡಬ: ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.18, ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ಯುವತಿಯೋರ್ವಳು ಕಾಣೆಯಾದ ಘಟನೆ ಗುರುವಾರದಂದು ನಡೆದಿದೆ. ನಾಪತ್ತೆಯಾದವರನ್ನು ಕುಟ್ರುಪ್ಪಾಡಿ ಗ್ರಾಮದ ಕುಂಟಿನಡ್ಕ ನಿವಾಸಿ ಪಾಸಿ ಎಂಬವರ ಪುತ್ರಿ ಕುಮಾರಿ ಪೂರ್ಣಿಮಾ (19) ಎಂದು ಗರುರುತಿಸಲಾಗಿದೆ. ಬುಧವಾರ ರಾತ್ರಿ ಮಲಗಿದ್ದ ಈಕೆ ಬಟ್ಟೆ-ಬರೆಗಳೊಂದಿಗೆ ಮನೆಯಿಂದ ಹೊರಹೋಗಿ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಈಕೆಯ ತಂದೆ ಪಾಸಿ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಯುವತಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಾನಸಿಕ-ದೈಹಿಕವಾಗಿ ಹಿಂಸೆ ➤ ಕಾನ್ ಸ್ಟೇಬಲ್ ವಿರುದ್ಧ ಪತ್ನಿ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.18:  ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಪತ್ನಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಇನ್ನು, 5 ತಿಂಗಳ ಹಿಂದೆಯಷ್ಟೆ ಸಬ್ ರಿ ಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ನಡೆದಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ (27) ಅವರು, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ

ಮಾನಸಿಕ-ದೈಹಿಕವಾಗಿ ಹಿಂಸೆ ➤ ಕಾನ್ ಸ್ಟೇಬಲ್ ವಿರುದ್ಧ ಪತ್ನಿ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೃತ ಯೋಧನಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ. ಜೂ. 18, ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ(34) ಅವರಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಎದುರು ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಲಾಯಿತು. ರಜೆಯ ನಿಮಿತ್ತ ಊರಿಗೆ ಬಂದಿದ್ದ ಇವರು ಸೋಮವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇದ್ದ ಇವರು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆನ್ನಲಾಗಿದೆ.

ಮೃತ ಯೋಧನಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ Read More »

ಕರಾವಳಿ, ಕ್ರೈಮ್ ನ್ಯೂಸ್

ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ತರಕಾರಿ ಟೆಂಪೋ ➤ ಸ್ಥಳದಲ್ಲೇ ಇಬ್ಬರ ದುರ್ಮರಣ..!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ.18., ಕುಂದಾಪುರದಿಂದ ಉಡುಪಿಗೆ ತರಕಾರಿ ಹೊತ್ತು ತರುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಅಂಬಾಗಿಲು ಬಳಿ ಗುರುವಾರ ನಡೆದಿದೆ. ಅಪಘಾತದ ರಭಸಕ್ಕೆ ಚಾಲಕ ಮತ್ತು ಸಹಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ಯಾವರದಲ್ಲಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದ ದಿನೇಶ್ (35) ಮತ್ತು ಮಂಜು (30) ಮೃತಪಟ್ಟ ದುರ್ಧೈವಿಗಳು. ಕುಂದಾಪುರದಿಂದ ಉದ್ಯಾವರಕ್ಕೆ ಟೆಂಪೋ ಟ್ರಾಕ್ಸ್ ನಲ್ಲಿ ತರಕಾರಿ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ

ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ತರಕಾರಿ ಟೆಂಪೋ ➤ ಸ್ಥಳದಲ್ಲೇ ಇಬ್ಬರ ದುರ್ಮರಣ..!! Read More »

ಕರಾವಳಿ

ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್ ಕ್ಯಾರ್

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.18:ಮಂಗಳೂರಿನಲ್ಲಿ ಪಿಯುಸಿ ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ , ಕೇರಳ ಗಡಿ ಭಾಗ ತಲಪಾಡಿಯಲ್ಲಿ ವಿದ್ಯಾರ್ಥಿಗಳು ಡೋಂಟ್ ಕ್ಯಾರ್ ಎಂದಿದ್ದಾರೆ. ಕೇರಳ ಗಡಿ ಭಾಗ ತಲಪಾಡಿಯಲ್ಲಿ ನೂರಾರು ವಿದ್ಯಾರ್ಥಿಗಳು ,ಮಂಗಳೂರಿಗೆ ಪರೀಕ್ಷೆ ಬರೆಯಲು ಆಗಮಿಸಿದ್ದು  ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನ ಮರೆತು ಗುಂಪುಗೂಡಿದ್ದರು. ತಲಪಾಡಿ ಮರಿಯಾಶ್ರಮ ಸಂಸ್ಥೆ ಬಳಿ ವಿದ್ಯಾರ್ಥಿಗಳಿಗೆ.  ಆಯಾ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಸರ್ಕಾರಿ ಬಸ್  ವ್ಯವಸ್ಥೆ ಮಾಡಲಾಗಿತ್ತು.    

ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್ ಕ್ಯಾರ್ Read More »

ಕರಾವಳಿ, ಕರ್ನಾಟಕ

ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ

(ನ್ಯೂಸ್ ಕಡಬ)newskadaba.com ಕಡಬ. ಜೂ. 18, ಕಡಬ ತಾಲೂಕು ಆಡಳಿತ ವತಿಯಿಂದ ಇಂದು ಮಾಸ್ಕ್ ಡೇ ಆಚರಿಸಲಾಯಿತು. ಕಡಬ ತಾಲುಕು ಕಛೇರಿಯಿಂದ ಪಂಜ ಕ್ರಾಸ್ ತನಕ ಜನ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಕೊರೋನಾ ಹೋಗಲಾಡಿಸುವಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಹಕರಿಸಬೇಕು ಎಂದರು. ಕಡಬ ತಾಲೂಕು ಕಛೇರಿಯಿಂದ ಪಂಜ ಕ್ರಾಸ್ ತನಕ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ ಪ್ಲೇ ಕಾರ್ಡ್ ಹಿಡಿದು ಪಾದಯಾತ್ರೆ ಮಾಡಲಾಯಿತು.

ಕಡಬ: ಮಾಸ್ಕ್ ಡೇ ಆಚರಣೆ ಮತ್ತು ಜನಜಾಗೃತಿ ಜಾಥಾ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನಾ ಜತೆ ಡೆಂಗ್ಯೂ ಹಾವಳಿ ➤ ಉಪ್ಪಿನಂಗಡಿ, ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.18:  ಕೊರೋನಾ ಸೋಂಕು ಈಗಾಗಲೇ, ಕರಾವಳಿಯ ಜರನ ನಿದ್ದೆಗೆಡಿಸಿದೆ. ಇದರ ಜೊತೆಗೆ ಕರಾಔಳಿಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಪುತ್ತೂರು ತಾಲೂಕಿನಲ್ಲಿ ಡೆಂಗ್ಯೂ ಜ್ವರ ಬಾಧಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಗ್ರಾ. ಪಂ, ಸದಸ್ಯರೋರ್ವರ ಸಹಿತ ಶಂಕಿತ ಡೆಂಗ್ಯೂ ಬಾಧಿತರು  143 ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.   ಡೆಂಗ್ಯೂ ಜ್ವರ ಕೊರೋನಾದಿಂದಲೂ ಅಪಾಯಕಾರಿಯಾಗಿದ್ದು, ತಾಲೂಕಿನಲ್ಲಿ ಇಲಾಖೆ ವರದಿಯ ಪ್ರಕಾರ ಮೂರು ಕೇಸ್ ಮಾತ್ರ ಡೆಂಗ್ಯೂ ಆ ಗಿದ್ದು. ಉಳಿದಂತೆ ಎಲ್ಲವೂ

ಕೊರೋನಾ ಜತೆ ಡೆಂಗ್ಯೂ ಹಾವಳಿ ➤ ಉಪ್ಪಿನಂಗಡಿ, ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ, ಕರ್ನಾಟಕ
Scroll to Top