ಕಡಬ: ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.18, ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ಯುವತಿಯೋರ್ವಳು ಕಾಣೆಯಾದ ಘಟನೆ ಗುರುವಾರದಂದು ನಡೆದಿದೆ.

ನಾಪತ್ತೆಯಾದವರನ್ನು ಕುಟ್ರುಪ್ಪಾಡಿ ಗ್ರಾಮದ ಕುಂಟಿನಡ್ಕ ನಿವಾಸಿ ಪಾಸಿ ಎಂಬವರ ಪುತ್ರಿ ಕುಮಾರಿ ಪೂರ್ಣಿಮಾ (19) ಎಂದು ಗರುರುತಿಸಲಾಗಿದೆ. ಬುಧವಾರ ರಾತ್ರಿ ಮಲಗಿದ್ದ ಈಕೆ ಬಟ್ಟೆ-ಬರೆಗಳೊಂದಿಗೆ ಮನೆಯಿಂದ ಹೊರಹೋಗಿ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಈಕೆಯ ತಂದೆ ಪಾಸಿ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top