ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19:ಮಾಂಸದ ಅಂಗಡಿಯ ಮಾಲಿಕನೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.


ಮಾಂಸದ ಅಂಗಡಿ ಮಾಲಿಕ ಹಳೆಕೋಟೆ ನಿವಾಸಿಯಾಗಿರುವ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರಿನಿಂದ ನಝೀರ್ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ನಝೀರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Scroll to Top