ಕರಾವಳಿ

ಕಲ್ಲುಗುಂಡಿ: ಸಚಿವ ಅಂಗಾರರಿಗೆ ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 15. ಕರ್ನಾಟಕದ ಅತ್ಯಂತ ಸರಳ ಸಜ್ಜನಿಕೆಯ ಪ್ರಮಾಣಿಕ ಶಾಸಕರೆಂದು ಜನ ಮನ್ನಡೆ ಗಳಿಸಿ ಸತತ ಆರನೇ ಬಾರಿಗೆ ಶಾಸಕರಾಗಿ ಇದೀಗ ಕರ್ನಾಟಕ ಘನ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ರವರಿಗೆ ಸಂಪಾಜೆ ದಕ್ಷಿಣ ಕನ್ನಡ ಮತ್ತು ಕೊಡಗು ಹಾಗೂ ಚೆಂಬು ಗ್ರಾಮದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮವು ಭಾನುವಾರದಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಸುಳ್ಯ ಬಿಜೆಪಿ ಮಂಡಲ […]

ಕಲ್ಲುಗುಂಡಿ: ಸಚಿವ ಅಂಗಾರರಿಗೆ ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಬೆಳಂದೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯ ಚಿಕಿತ್ಸೆಗೆ ಧನಸಹಾಯ

(ನ್ಯೂಸ್ ಕಡಬ) newskadaba.com ಬೆಳಂದೂರು, ಫೆ. 14. ಕಡಬ ತಾಲೂಕು ಬೆಳಂದೂರು ಗ್ರಾಮದ ಬನಾರಿ ಜನಾರ್ದನ ಶೆಟ್ಟಿಗಾರ್ ರವರ ಪತ್ನಿಯು ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದು, ಇವರ ಚಿಕಿತ್ಸೆಗೆ ಪಳ್ಳತ್ತಾರು ಹಾಗೂ ಬೆಳಂದೂರಿನ ಮುಸ್ಲಿಂ ಯುವಕರ ತಂಡದ ವತಿಯಿಂದ 10,000 ರುಪಾಯಿ ಧನಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನವಾಝ್ ಸಖಾಫಿ ಬೆಳಂದೂರು, ಅಬೂಬಕರ್ ಫಾಳಿಲಿ, ಪಳ್ಳತ್ತಾರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಶಾಫಿ, ಯೂಸುಫ್ ಬನಾರಿ ಮೊದಲಾದವರು

ಬೆಳಂದೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯ ಚಿಕಿತ್ಸೆಗೆ ಧನಸಹಾಯ Read More »

ಕರಾವಳಿ, ಕರ್ನಾಟಕ

ಸುಳ್ಯ: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 14. ಸುಳ್ಯ ಬಿಜೆಪಿ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸಭೆಯು ಸುಳ್ಯದ ಬಿಜೆಪಿ ಕಛೇರಿಯಲ್ಲಿ ಭಾನುವಾರದಂದು ನಡೆಯಿತು. ಫೆ.28ರಂದು ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಜಿಲ್ಲಾ ಕಾರ್ಯಕಾರಿಣಿ ಸಭೆಯ ಪೂರ್ವಭಾವಿ ಸಭೆಯು ಈ ಸಂದರ್ಭದಲ್ಲಿ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಅಜಿತ್ ಉಳ್ಳಾಲ್, ಸಹ ಸಂಚಾಲಕ ದೀರಜ್ ಮಂಗಳೂರು, ಅಕ್ಷಯ್, ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಸದಸ್ಯರಾದ ರವಿವರ್ಮ ಅಲೆಕ್ಕಾಡಿ, ಸುಳ್ಯ ಮಂಡಲ

ಸುಳ್ಯ: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಭೆ Read More »

ಕರಾವಳಿ, ಕರ್ನಾಟಕ

ಸುಳ್ಯ: ಯುವ ಸಾಹಿತಿ ಸಮ್ಯಕ್ತ್ ಹೆಚ್. ಜೈನ್ ಗೆ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 14. ಇಲ್ಲಿನ ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಹಾಗೂ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸುಳ್ಯ ಎಪಿಎಂಸಿ ಸಭಾಭವನದಲ್ಲಿ ಭಾನುವಾರದಂದು ನಡೆದ ಕವಿ ಸಂಗಮ- ಕವಿ ಸಂಭ್ರಮ ಕಾರ್ಯಕ್ರಮದಲ್ಲಿ 2021ನೇ ಸಾಲಿನ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಸಮ್ಯಕ್ತ್ ಜೈನ್ ಅವರಿಗೆ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ  ಸನ್ಮಾನಿಸಲಾಯಿತು.   ಈ ಸಂದರ್ಭ ಹಿರಿಯ ಸಾಹಿತಿಗಳಾದ ನಾರಾಯಣ ರೈ

ಸುಳ್ಯ: ಯುವ ಸಾಹಿತಿ ಸಮ್ಯಕ್ತ್ ಹೆಚ್. ಜೈನ್ ಗೆ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ Read More »

ಕರಾವಳಿ, ಕರ್ನಾಟಕ

ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ರವರಿಗೆ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 14. ಅರಂತೋಡು ಸಾಮಾಜಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್ ರವರನ್ನು ಮಂಗಳೂರು ಶಾರದಾ ವಿಧ್ಯಾಲಯದಲ್ಲಿ ನಡೆದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನಿಸಲಾಯಿತು.   ಈ ಸಮಾರಂಭದಲ್ಲಿ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಹರಿಕೃಷ್ಣ ಪುನರೂರು, ಚಲನಚಿತ್ರ ನಟ ಗುರುಕಿರಣ್, ಪ್ರೊಫೆಸರ್ ವಿವೇಕ್ ರೈ, ಇತಿಹಾಸ ಸಂಶೋಧಕ ಪುಂಡಿಕ್ಕಾ ಗಣಪತಿ ಭಟ್, ಡಾ. ಪ್ರಭಾಕರ ಜೋಶಿ ಸೇರಿದಂತೆ ಗಣ್ಯ

ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ರವರಿಗೆ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ Read More »

ಕರಾವಳಿ, ಕರ್ನಾಟಕ

ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಹುತಾತ್ಮರ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 14. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದ ಭಾನುವಾರದಂದು “ಹುತಾತ್ಮರ ದಿನಾಚರಣೆ” ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಸಾಲು ಮರದ ತಿಮ್ಮಕ್ಕ ಪಾರ್ಕ್ ನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ -ಯತೀಶ್ ಆರ್ವಾರ್ ಬೌದ್ಧಿಕ್ ಅವರು ನೆರವೇರಿಸಿದರು ಹಾಗೂ ಪುತ್ತೂರು ಜಿಲ್ಲಾ ಸಂಚಾಲಕರಾದ -ಹಿತೇಶ್ ಕಟ್ರಮನೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೋಹಿತ್ ಮುಚ್ಚಾರ ಅವರು ನಿರೂಪಣೆ ಮಾಡಿ, ಧನ್ಯವಾದಗಳನ್ನು -ಸೌಮ್ಯ ರವರು ನೆರವೇರಿಸಿದರು.

ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಹುತಾತ್ಮರ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 14. ರೈಲು ಢಿಕ್ಕಿ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. ಮೃತರನ್ನು ಕೋಟೆಕಾರು, ಬೀರಿ ಭಂಡಾರಮನೆ ಬಳಿಯ ನಿವಾಸಿ ಸತೀಶ್ಚಂದ್ರ ನಾಯ್ಕ್ (28) ಎಂದು ಗುರುತಿಸಲಾಗಿದೆ. ಮೃತದೇಹವು ರೈಲು ಹಳಿಯಿಂದ ದೂರಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿದ್ದು, ಮೃತದೇಹದ ಮೈಯಲ್ಲಿದ್ದ ಬಟ್ಟೆ ಹರಿದು ಚಿಂದಿಯಾಗಿದೆ. ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು, ಎಳೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇವರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಸಾಲೆತ್ತೂರು ಶಾಖೆಯಿಂದ

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಮರ್ಧಾಳ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮರ್ಧಾಳ, ಫೆ. 14. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರೊಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಮರ್ಧಾಳ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣವೆನ್ನಲಾಗಿದೆ. ಕಾರಿನಲ್ಲಿದ್ದವರು ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂ

? ಮರ್ಧಾಳ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ದ ಸುಹಾನಾ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 14. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಪುತ್ತೂರಿನ ಸುಹಾನಾ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಹಾನಾಳು ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ವಿಶೇಷ ಝೀರೋ ಟ್ರಾಫಿಕ್ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ಆಕೆಯ ಚಿಕಿತ್ಸೆಯ ವೆಚ್ಚವನ್ನೂ ಕೂಡಾ ವಹಿಸಿಕೊಂಡಿತ್ತು. ಸುಹಾನಳಿಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಕಾಲಾವಕಾಶವನ್ನು ಕೂಡ ನೀಡಿದ್ದರಾದರೂ ಇಂದು

ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ದ ಸುಹಾನಾ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

? ಮಂಗಳೂರು: ಕೋಕೇನ್ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಕೋಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ವಿಭಾಗದ ಪೊಲೀಸರು ಬಿಜೈ ಕೆಎಂಸಿ ಕಾಲೇಜು ಆಸುಪಾಸಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೋಳಾರ ಮಾರಿಗುಡಿ ನಿವಾಸಿ ಸುಪ್ರೀತ್ (35) ಎಂದು ಗುರುತಿಸಲಾಗಿದೆ. ಆತನಿಂದ 2 ಲಕ್ಷ ರೂ. ಬೆಲೆಬಾಳುವ 21.13 ಗ್ರಾಂ ಕೊಕೇನ್ ಸಹಿತ ಎರಡು ಮೊಬೈಲ್ ಫೋನ್ ಹಾಗೂ ಎರಡು ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

? ಮಂಗಳೂರು: ಕೋಕೇನ್ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಸಿನಿಮಾ
Scroll to Top