ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಹುತಾತ್ಮರ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 14. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದ ಭಾನುವಾರದಂದು “ಹುತಾತ್ಮರ ದಿನಾಚರಣೆ” ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಸಾಲು ಮರದ ತಿಮ್ಮಕ್ಕ ಪಾರ್ಕ್ ನಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ -ಯತೀಶ್ ಆರ್ವಾರ್ ಬೌದ್ಧಿಕ್ ಅವರು ನೆರವೇರಿಸಿದರು ಹಾಗೂ ಪುತ್ತೂರು ಜಿಲ್ಲಾ ಸಂಚಾಲಕರಾದ -ಹಿತೇಶ್ ಕಟ್ರಮನೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೋಹಿತ್ ಮುಚ್ಚಾರ ಅವರು ನಿರೂಪಣೆ ಮಾಡಿ, ಧನ್ಯವಾದಗಳನ್ನು -ಸೌಮ್ಯ ರವರು ನೆರವೇರಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ನಗರ ಕಾರ್ಯದರ್ಶಿಯಾದ -ಇಲೈ ಅರಸ್, ಹಿರಿಯ ಕಾರ್ಯಕರ್ತರಾದ -ಭುಕ್ಷಿತ್ ನೇರ್ಪಾಲ, ಶ್ರೀ ಕುಮಾರ ಬಿಲದ್ವಾರ ಮೊದಲಾದವರು ಉಪಸ್ಥಿತರಿದ್ದರು.

Scroll to Top