ಕರಾವಳಿ

ಶಾಲೆಗೆಂದು ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಡಬದ ಬಾಲಕಿ ಪತ್ತೆ ➤ ತಮಿಳುನಾಡಿನಿಂದ ಕರೆತಂದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಫೆ.17. ತಿಂಗಳ ಹಿಂದೆ ಕಡಬದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ತಮಿಳುನಾಡಿನಲ್ಲಿ ಪತ್ತೆಹಚ್ಚಿರುವ ಪೊಲೀಸರು ಊರಿಗೆ ಕರೆತಂದಿದ್ದಾರೆ. ಡಿಸೆಂಬರ್ 23 ರಂದು ಮರ್ಧಾಳ ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಐತ್ತೂರು ಗ್ರಾಮದ ಸಿಆರ್ ಸಿ ಕಾಲನಿಯ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿ ತಮಿಳುನಾಡಿನಲ್ಲಿರುವ ಬಗ್ಗೆ ಲೊಕೇಷನ್ ಆಧಾರದಲ್ಲಿ ಪತ್ತೆ ಹಚ್ಚಿರುವ ಸುಳ್ಯ ಆರಕ್ಷಕ ಠಾಣೆಯ ಅಪರಾಧ ವಿಭಾಗದ ಎಸ್‌ಐ ರತನ್‌ಕುಮಾರ್‌ ಹಾಗೂ ಕಡಬ ಠಾಣೆ ಸಿಬ್ಬಂದಿ ಮಂಜುನಾಥ್‌ ಅವರು […]

ಶಾಲೆಗೆಂದು ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಡಬದ ಬಾಲಕಿ ಪತ್ತೆ ➤ ತಮಿಳುನಾಡಿನಿಂದ ಕರೆತಂದ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಯುವಕ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 16. ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದ ಅಂಬಟಡ್ಕ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವನನ್ನು ಉತ್ತರಕಾಂಡ ಮೂಲದ ಸಾದಿಕ್ ಎಂದು ಗುರುತಿಸಲಾಗಿದೆ. ಈತ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಲೂನ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸೋಮವಾರದಂದು ರಾತ್ರಿ 8 ಗಂಟೆಗೆ ಸುಳ್ಯ ಅಂಬಟಡ್ಕ ಬಳಿ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ತಕ್ಷಣವೇ ಸ್ನೇಹಿತರು ಅವನನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ

ಸುಳ್ಯ: ಯುವಕ ಆತ್ಮಹತ್ಯೆಗೆ ಯತ್ನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹೊಂಚು ಹಾಕಿ ಕದಿಯುತ್ತಿದ್ದ ಕಳ್ಳನನ್ನು ಹೊಂಚು ಹಾಕಿ ಹಿಡಿದ ಊರವರು ➤ ಸುಳ್ಯದಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ | ಮುಂದೇನಾಯ್ತು ಗೊತ್ತೇ..⁉️

ನ್ಯೂಸ್ ಕಡಬ newskadaba.com ಸುಳ್ಯ, ಫೆ.16. ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿಯಲು ಹೊಂಚು ಹಾಕಿದ ಊರವರು ಕೊನೆಗೂ ಸಫಲರಾಗಿದ್ದಾರೆ. ಸುಳ್ಯದ ಹಳೇಗೇಟಿನ ನರ್ಸರಿ ಒಂದರಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ರಾತ್ರಿ ವೇಳೆ ನಿರಂತರವಾಗಿ ವ್ಯಾಪಾರಕ್ಕೆಂದು ಇಟ್ಟಿದ್ದ ಸಾಮಗ್ರಿಗಳ ಕಳ್ಳತನ ನಡೆಯುತ್ತಿತ್ತು. ಕಳ್ಳನನ್ನು ಹಿಡಿಯಲು ಹಲವು ಬಾರಿ ಸಂಸ್ಥೆಯ ಮಾಲಕರು ಹೊಂಚುಹಾಕಿ ಕುಳಿತರೂ ಏನೂ ಪ್ರಯೋಜನವಾಗಿರಲಿಲ್ಲ. ಸೋಮವಾರ ತಡರಾತ್ರಿ ಕಳ್ಳತನ ಮಾಡಲೆಂದು ಖತರ್ನಾಕ್ ಕಳ್ಳ ಆಗಮಿಸಿದ್ದು, ನರ್ಸರಿಯ ಶೆಡ್ಡಿನ ಹಿಂಭಾಗದಿಂದ ಒಳ ನುಗ್ಗಿದಾಗ ಕಳ್ಳನನ್ನು ಹಿಡಿಯಲು

ಹೊಂಚು ಹಾಕಿ ಕದಿಯುತ್ತಿದ್ದ ಕಳ್ಳನನ್ನು ಹೊಂಚು ಹಾಕಿ ಹಿಡಿದ ಊರವರು ➤ ಸುಳ್ಯದಲ್ಲಿ ನಡೆಯಿತು ಸ್ವಾರಸ್ಯಕರ ಘಟನೆ | ಮುಂದೇನಾಯ್ತು ಗೊತ್ತೇ..⁉️ Read More »

ಕರಾವಳಿ, ಕ್ರೈಮ್ ನ್ಯೂಸ್

? ಬೆಳ್ತಂಗಡಿ: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 16. ಬೈಕ್ ಹಾಗೂ ನೀರು ಸಾಗಿಸುವ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡದಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಗೋಳಿಯಂಗಡಿ ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ. ಕುಂಡದಬೆಟ್ಟು ಬಳಿ ರಸ್ತೆ ಕಾಮಗಾರಿಯು ನಡೆಯುತ್ತಿದ್ದು ಅದಕ್ಕೆ ನೀರು ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಮತ್ತು ಸಾದಿಕ್ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಪರಸ್ಪರ ಢಿಕ್ಕಿ ಹೊಡೆದು, ಸಾದಿಕ್ ಅವರು ಗಂಭೀರವಾಗಿ

? ಬೆಳ್ತಂಗಡಿ: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 16. ಇಲ್ಲಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದ ಪರಿಣಾಮವಾಗಿ ಮಣ್ಣಿನಡಿ ಕಣ್ಮರೆಯಾದ ಯುವಕನೋರ್ವನ ಮೃತದೇಹವು ಸತತ ಪ್ರಯತ್ನದ ಫಲವಾಗಿ ಕೊನೆಗೂ ಮಂಗಳವಾರದಂದು ಪತ್ತೆಯಾಗಿದೆ. ಮೃತರನ್ನು ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20) ಎನ್ನಲಾಗಿದೆ. ಸನತ್ ಶೆಟ್ಟಿ ಮೃತದೇಹವು ಮಣ್ಣು ಹಾಗೂ ಬಂಡೆಯಡಿ ಸಿಲುಕಿದ್ದರಿಂದ ಸತತ 23 ದಿನಗಳ ಕಾರ್ಯಾಚರಣೆ ಬಳಿಕ ಇದೀಗ ಪತ್ತೆಯಾಗಿದೆ. ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ ಸುಮಾರು

?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಹಿನ್ನೆಲೆ ➤ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಜೂನ್ 30ರ ವರೆಗೆ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com  ಮಂಗಳೂರು, ಫೆ.16.  ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕಿನ ಎಲೆಮಲೆ-ಅರಂತೋಡು ರಸ್ತೆಯ 3.60 ಕಿ.ಮೀ (ಸೇವಾಜೆ) ನ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುವುದರಿಂದ ಫೆಬ್ರವರಿ 15 ರಿಂದ ಜೂನ್ 30 ರವರೆಗೆ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅರಂತೋಡು ಮಾರ್ಗದಿಂದ ಎಲೆಮಲೆಗೆ ಸಂಚರಿಸುವ ವಾಹನಗಳು ಸುಳ್ಯ-ಪೈಚಾರು-ಸೋಂಣಂಗೇರಿ-ದೊಡ್ಡತೋಟ ಮೂಲಕ ಹಾಗೂ ಎಲೆಮಲೆ ಮಾರ್ಗದಿಂದ ಅರಂತೋಡಿಗೆ

ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಹಿನ್ನೆಲೆ ➤ ಎಲಿಮಲೆ-ಅರಂತೋಡು ರಸ್ತೆಯಲ್ಲಿ ಜೂನ್ 30ರ ವರೆಗೆ ಸಂಚಾರ ನಿಷೇಧ Read More »

ಕರಾವಳಿ

ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಗೂನಡ್ಕ, ಫೆ. 15. ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ಸಮುದಾಯ ಭವನವು ಭಾನುವಾರದಂದು ಸಂಜೆ ಉದ್ಘಾಟನೆಗೊಂಡಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ನೂತನ ಸಮುದಾಯ ಭವನವನ್ನು ಉದ್ಘಾಟಿಸಿ, ನೂತನ ಭೋಜನ ಕೊಠಡಿಗೆ ಶಂಕುಸ್ಥಾಪನೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರು ಸಭಾಭವನದ ವೇದಿಕೆಯನ್ನು ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ,

ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟನೆ Read More »

ಕರಾವಳಿ, ಕರ್ನಾಟಕ

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್…!!! ➤ ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!!

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 15. ವಿವಿಧ ಇಲಾಖೆಗಳನ್ನು ಒಗ್ಗೂಡಿಸಿಕೊಂಡು ‘ಭಾಂದವ್ಯ’ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನಗರದ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು. ವಿವಿಧ ಇಲಾಖೆಗಳ ಸುಮಾರು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡು ತಮ್ಮ ಬಲ ಪ್ರದರ್ಶನಗೈದರು. ಈ ಪಂದ್ಯಾ ಕೂಟದ ಮೊದಲ ಸೆಮಿಫೈನಲ್ ಪಂದ್ಯ ಭಾರೀ ರಣರೋಚಕದಿಂದ ಕೂಡಿತ್ತು. ಮೆಸ್ಕಾಂ ಹಾಗೂ ಪ್ರೆಸ್ ಇಲೆವೆನ್ ನಡುವಿನ ಜಿದ್ದಾ ಜಿದ್ದಿನ ಪಂದ್ಯಾಟ ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಪಂದ್ಯಾಟದ ಕೊನೇ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. 4 ಓವರ್

ಭಾಂದವ್ಯ ಟ್ರೋಫಿಗೆ ಮುತ್ತಿಕ್ಕಿದ ಪೊಲೀಸ್ ಇಲೆವೆನ್…!!! ➤ ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!! Read More »

ಕರಾವಳಿ, ಕರ್ನಾಟಕ

ಕಡಬ: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಜಿಲ್ಲಾಧ್ಯಕ್ಷರಾಗಿ ಶಶಿಧರ ಬೊಟ್ಟಡ್ಕ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 15. ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಹಿರಿಯ ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ ಕೊಂಬಾರು ಗ್ರಾಮದ ಶಶಿಧರ ಬೊಟ್ಟಡ್ಕ ಅವರನ್ನು ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಅಚ್ಯುತ ಮಲ್ಕಾಜೆ, ಉಪಾಧ್ಯಕ್ಷರಾಗಿ ಆನಂದ ಹೊಸ್ಮಠ, ದಿನೇಶ್ ಗಾಣಂತಿ, ಕಾನೂನು ಸಲಹೆಗಾರರಾಗಿ ನಾರಾಯಣ ಕಡಲಕೆರೆ, ಗಿರಿಜಾ ಪಿ., ಗೌರವ ಸಲಹೆಗಾರರಾಗಿ ಲಕ್ಷ್ಮೀಶ ಗಬ್ಲಡ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆ.ಪಿ.ಆನಂದ, ರಾಜು ಗೋಳಿಯಡ್ಕ, ಸರೋಜಿನಿ ಶಶಿಧರ, ಸಂತೊಷ್, ದೇವಪ್ಪ, ಸುರೇಶ್ ತೋಟಂತಿಲ, ರಾಮಕೃಷ್ಣ

ಕಡಬ: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಜಿಲ್ಲಾಧ್ಯಕ್ಷರಾಗಿ ಶಶಿಧರ ಬೊಟ್ಟಡ್ಕ ಆಯ್ಕೆ Read More »

ಕರಾವಳಿ, ಕರ್ನಾಟಕ

ಮರ್ಧಾಳ: ಗ್ರಾ.ಪಂ. ಅಧ್ಯಕ್ಷರಾಗಿ ಹರೀಶ್ ಕೋಡಂದೂರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 15. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮರ್ಧಾಳ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಲಾಯಿತು. ಮರ್ಧಾಳ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಹರೀಶ್ ಕೋಡಂದೂರು ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪುರಂದರ ಪಾಲೆತ್ತಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮರ್ಧಾಳ ಪಂಚಾಯತ್ ನಲ್ಲಿ 6 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು 3 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಮರ್ಧಾಳ: ಗ್ರಾ.ಪಂ. ಅಧ್ಯಕ್ಷರಾಗಿ ಹರೀಶ್ ಕೋಡಂದೂರು ಆಯ್ಕೆ Read More »

ಕರಾವಳಿ, ಕರ್ನಾಟಕ
Scroll to Top