ಕರಾವಳಿ

ಬೆಳ್ಳಾರೆ: ಮನೆಗೆ ನುಗ್ಗಿ ನಗದು, ಬೆಳ್ಳಿ ನಾಣ್ಯ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ. 05. ಮನೆಯೊಳಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು ಕೋಣೆಯೊಳಗೆ ಲಾಕ್ ಮಾಡಿ ಬೆಳ್ಳಿ ನಾಣ್ಯ ಹಾಗೂ ನಗದು ಕಳ್ಳತನಗೈದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಪರಣೆ ಎಂಬಲ್ಲಿ ರವಿವಾರ ಮುಂಜಾನೆ ನಡೆದಿದೆ. ಪಾಲ್ತಾಡಿ ಗ್ರಾಮದ ಪರಣೆ ನಿವಾಸಿ ಮಿತ್ರಾ ಜೈನ್ ಬಂಬಿಲಗುತ್ತು ಎಂಬವರ ಮನೆಯಿಂದ ಕಳ್ಳತನಗೈಯಲಾಗಿದೆ. ಮನೆಯ ಮಾಡಿನ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕೋಣೆಯೊಂದರಲ್ಲಿ ಮಲಗಿದ್ದ ಮಿತ್ರಾಜೈನ್ ಹಾಗೂ ಅವರ ಪುತ್ರಿ ದಿವ್ಯ ಎಂಬವರನ್ನು ಕೋಣೆಯೊಳಗೆ ಕೂಡಿ‌ಹಾಕಿ […]

ಬೆಳ್ಳಾರೆ: ಮನೆಗೆ ನುಗ್ಗಿ ನಗದು, ಬೆಳ್ಳಿ ನಾಣ್ಯ ದೋಚಿದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮಸೀದಿಗೆ ಕಲ್ಲೆಸೆದು ಹಾನಿಗೈದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 05. ಇಲ್ಲಿನ ಕಾಟಿಪಳ್ಳ ಬಳಿಯ ಕಾನ ಜನತಾ ಕಾಲನಿಯಲ್ಲಿ ಮಸೀದಿಗೆ ಕಿಡುಗೇಡಿಗಳು ಕಲ್ಲೆಸೆದು ಹಾನಿಗೈದ ಘಟನೆ ನಡೆದಿದೆ.‌ ಜನತಾ ಕಾಲನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸಕ್ಕೆ ಶನಿವಾರದಂದು ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಈ ಬಗ್ಗೆ ಮಸೀದಿ ಕಮಿಟಿ ಸದಸ್ಯರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೀದಿಯಲ್ಲಿ ಶನಿವಾರ ರಾತ್ರಿ 1:30ರ ವರೆಗೆ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಬಳಿಕ ಸುಮಾರು 2:30ರ ವೇಳೆಗೆ ದ್ವಿಚಕ್ರ

ಮಂಗಳೂರು: ಮಸೀದಿಗೆ ಕಲ್ಲೆಸೆದು ಹಾನಿಗೈದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ವ್ಯಕ್ತಿಗೆ ಚೂರಿಯಿಂದ ಇರಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 04. ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಿ.ಸಿ ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಬ್ರಹ್ಮರಕೂಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಎಂದು ಗುರುತಿಸಲಾಗಿದೆ. ಮನೋಜ್ ಅವರು ತುಂಬೆಯಿಂದ ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆಯೇ ಅಜ್ಜಿಬೆಟ್ಟು ಕ್ರಾಸ್‌

ಬಂಟ್ವಾಳ: ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ವ್ಯಕ್ತಿಗೆ ಚೂರಿಯಿಂದ ಇರಿದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಎ. 04. ಉಪ್ಪಿನಂಗಡಿ- ಕಡಬ ರಸ್ತೆಯ ಆಲಂಕಾರು ಪೇಟೆ ಸಮೀಪ ರಿಕ್ಷಾವೊಂದು ಸ್ಕಿಡ್ ಆಗಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಆಲಂಕಾರು ಪೇಟೆಯ ನೂಜಿಬೈಲು ಎಂಬಲ್ಲಿ ನಡೆದಿದೆ. ರಿಕ್ಷಾ ರಾಮಕುಂಜದಿಂದ ಆಲಂಕಾರು ಪೇಟೆಗೆ ಬಂದು ಹಿಂದಿರುಗಿ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಚಾಲಕನಿಗೆ ಗಾಯವಾಗಿದೆ ಎನ್ನಲಾಗಿದೆ.  

ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಲಂಕಾರು: 108 ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ‌ನೀಡಿದ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಎ.03. ಇಲ್ಲಿನ ಆಲಂಕಾರಿನ 108 ಅಂಬ್ಯುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರದಂದು ನಡೆದಿದೆ. ಸವಣೂರು ಅಟ್ಟೊಳೆ ನಿವಾಸಿ ವಿದ್ಯಾ(23) ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಲಂಕಾರಿನ ಅಂಬ್ಯುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸವಣೂರಿನಿಂದ ಪುತ್ತೂರು ನಡುವೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸೂತ್ರವಾಗಿ ಹೆರಿಗೆ ನಡೆಯುವಲ್ಲಿ ಇಎಂಟಿ ಚಂದ್ರಶೇಖರ ಎನ್. ಹಾಗೂ

ಆಲಂಕಾರು: 108 ಅಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ‌ನೀಡಿದ ಗರ್ಭಿಣಿ Read More »

ಕರಾವಳಿ

ಕಡಬ: ಕಾರು-ಆ್ಯಕ್ಟಿವಾ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಎ.04. ಕಾರು ಹಾಗೂ ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ರಾಮಕುಂಜದ ವ್ಯಕ್ತಿಯದ್ದು ಎನ್ನಲಾದ ರೆನಾಲ್ಟ್‌ ಕ್ವಿಡ್ ಕಾರು ಹಾಗೂ ಆ್ಯಕ್ಟಿವಾ ನಡುವೆ ಕುಂತೂರು ಸಮೀಪದ‌ ಕೋಚಕಟ್ಟೆ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮುಂದುವರಿದು ಕಾರು ಸಮೀಪದಲ್ಲಿದ್ದ ಕಟ್ಟೆಯೊಂದಕ್ಕೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ

ಕಡಬ: ಕಾರು-ಆ್ಯಕ್ಟಿವಾ ನಡುವೆ ಢಿಕ್ಕಿ ➤ ಕಾರು ಚಾಲಕ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ. 04. ಇಲ್ಲಿನ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆಯಾಗಿದ್ದು, ಆಡಳಿತ ಸಮಿತಿಯು ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆಯಷ್ಟೇ ಉಳ್ಳಾಲ ಭಾಗದಲ್ಲಿನ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದ್ದು, ಮೂರು ದಿನಗಳ ಹಿಂದೆಯಷ್ಟೇ ಇಬ್ಬರು ಆರೋಪಿಗಳ ಬಂಧನವಾಗಿತ್ತು. ಇದೇ ಸಂದರ್ಭದಲ್ಲಿ ಕಾರಣಿಕ ಕ್ಷೇತ್ರ‌ ಕೊಂಡಾಣ ದೇವಸ್ಥಾನದಲ್ಲಿಯೂ ಆರೋಪಿಗಳು ದುಷ್ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು

ಉಳ್ಳಾಲ: ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ Read More »

ಕರಾವಳಿ, ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಗೆ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 04. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಅಗಮಿಸಿದ ಇವರು ನೇರ ಧರ್ಮಸ್ಥಳದ ಸನ್ನಿಧಿ ವಸತಿಗೃಹಕ್ಕೆ ಬಂದು ಅಲ್ಲಿಂದ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಎಮ್.ಎಲ್.ಸಿ ಹರೀಶ್ ಕುಮಾರ್, ವಸಂತ ಬಂಗೇರ, ಗಂಗಾಧರ್ ಗೌಡ, ರಂಜನ್ ಗೌಡ, ಶೈಲೇಶ್ ಕುಮಾರ್, ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಇಂಟಕ್ ಅಧ್ಯಕ್ಷ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಗೆ ಭೇಟಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಬೈಕ್ ಸ್ಕಿಡ್ ➤ ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 04. ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಗಾಯಗೊಂಡ ಘಟನೆ ಮೂರ್ಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವನನ್ನು ಗೇರುಕಟ್ಟೆ ನಿವಾಸಿ ಪದ್ಮನಾಭ ಎಂಬವರ ಮಗ ಸಚಿನ್(21) ಎಂದು ಗುರುತಿಸಲಾಗಿದೆ. ಘಟನೆಯಿಂದ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಎಸ್ಕೆಎಸ್ಸೆಸ್ಸೆಫ್ ಧೂಮಲಿಕೆ ವಿಖಾಯ ತಂಡದ ಚೇರ್ ಮೆನ್ ಫಯಾಝ್ ಎಂಬವರು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಬಂಟ್ವಾಳ: ಬೈಕ್ ಸ್ಕಿಡ್ ➤ ಯುವಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: 12ರ ಬಾಲಕನ ಕೊಲೆ ಪ್ರಕರಣ ➤ ಓರ್ವ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ.04. ಹಾಕಿಬ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಮೊಬೈಲ್ ಗೆ ಕೊನೆಯ ಕರೆಯ ಆಧಾರದಲ್ಲಿ ಸ್ಥಳೀಯವಾಗಿ ವಾಸಿಸುತ್ತಿರುವ ಯುವಕನೋರ್ವನನ್ನು ಪೊಲೀಸರು ತನಿಖೆ ನಡೆಸಲು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.   ಆನ್ ಲೈನ್ ಗೇಮ್ ನಲ್ಲಿ ಸೋತ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಬಾಲಕ ರಾತ್ರಿ ಪೋನ್ ಕರೆಯ ಬಳಿಕ ಮನೆಯಿಂದ ಹೊರಗೆ ಹೋಗಿದ್ದನೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಬಾಲಕ ಮನೆಯ ಸಮೀಪ ವೇಗವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯ

ಮಂಗಳೂರು: 12ರ ಬಾಲಕನ ಕೊಲೆ ಪ್ರಕರಣ ➤ ಓರ್ವ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top