ಕರಾವಳಿ

9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ➤ ಪೊಲೀಸರಿಂದ ಲುಕ್ಔಟ್ ನೋಟೀಸ್

(ನ್ಯೂಸ್ ಕಡಬ) newskadaba.com ಉಡುಪಿ, ಜು.25. ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ 9ನೇ ತರಗತಿ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ಪೆರಂಪಳ್ಳಿ ನಿವಾಸಿ ಅವೀನಾ (16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ. 2021ರ ಏಪ್ರಿಲ್ 13 ರಂದು ಪೆರಂಪಲ್ಲಿಯಲ್ಲಿರುವ ತನ್ನ ಮನೆಯಿಂದ ಅವೀನಾ ಕಾಣೆಯಾಗಿದ್ದಳು. ಒಂಬತ್ತನೆಯ ತರಗತಿ ಓದುತ್ತಿದ್ದ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಅವೀನಾ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಾಲಕಿಯ ಬಗ್ಗೆ ಸುಳಿವು […]

9ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ➤ ಪೊಲೀಸರಿಂದ ಲುಕ್ಔಟ್ ನೋಟೀಸ್ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಹುಚ್ಚು ನಾಯಿ ಕಡಿತ ➤ ವ್ಯಕ್ತಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜು.23. ಹುಚ್ಚು ನಾಯಿಯೊಂದು ವ್ಯಕ್ತಿಯೋರ್ವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಿಂದ ವರದಿಯಾಗಿದೆ. ಕಲ್ಲುಗುಡ್ಡೆ ಪೇಟೆಯಲ್ಲಿ ಗುರುವಾರ ರಾತ್ರಿಯಿಂದಲೇ ಹುಚ್ಚು ನಾಯಿಯೊಂದು ಓಡಾಟ ನಡೆಸುತ್ತಿದ್ದು, ಪೇಟೆ, ಕಾಲೋನಿ ಸಹಿತ ಇತರೆಡೆ ಓಡಾಟ ನಡೆಸಿ ಆತಂಕ ಸೃಷ್ಟಿ ಮಾಡಿತ್ತು. ಮನೆಯಲ್ಲಿನ ಸಾಕು ನಾಯಿಗಳ ಮೇಲೆಯೂ ದಾಳಿ ನಡೆಸಿದ್ದು, ಶುಕ್ರವಾರ ಬೆಳಗ್ಗೆ ಹುಚ್ಚು ನಾಯಿಯು ಪೇಟೆಯಲ್ಲಿ ಸುತ್ತಾಡುತ್ತಾ ವ್ಯಕ್ತಿಯೋರ್ವರ ಕಾಲಿಗೆ ಕಚ್ಚಿದ ಪರಿಣಾಮ ಗಾಯಗೊಂಡ ವ್ಯಕ್ತಿಯು ಚಿಕಿತ್ಸೆಗಾಗಿ ಆಸ್ಪತ್ರೆಗೆ

ಕಡಬ: ಹುಚ್ಚು ನಾಯಿ ಕಡಿತ ➤ ವ್ಯಕ್ತಿಗೆ ಗಾಯ Read More »

ಕರಾವಳಿ

ಸುಳ್ಯ: ಮರ ಬಿದ್ದು ರಸ್ತೆ ತಡೆ- ವಿದ್ಯುತ್ ಕಂಬಗಳಿಗೆ ಹಾನಿ

(ನ್ಯೂಸ್ ಕಡಬ) Newskadaba.com ಅರಂತೋಡು, ಜು. 23. ಬೃಹತ್ ಮರವೊಂದು ರಸ್ತೆಗೆ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಪೆತ್ತಾಜೆ ಎಂಬಲ್ಲಿ ನಡೆದಿದೆ. ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ವೇಣು, ತೊಡಿಕಾನ ದೇವಸ್ಥಾನ ಮ್ಯಾನೇಜರ್ ಆನಂದ ಕಲ್ಲಗದ್ದೆ, ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಗುರು ನಾರ್ಕೋಡು ಸೇರಿದಂತೆ ಕಲ್ಲಗದ್ದೆ ಜನರು ಸಹಕರಿಸಿದರು.

ಸುಳ್ಯ: ಮರ ಬಿದ್ದು ರಸ್ತೆ ತಡೆ- ವಿದ್ಯುತ್ ಕಂಬಗಳಿಗೆ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ – ಬೈಕ್ ನಡುವೆ ಢಿಕ್ಕಿ ➤ ಖ್ಯಾತ ಜಾದೂಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು.22. ಲಾರಿ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಬೇಕಲ ಸೇತುವೆ ಬಳಿ ನಡೆದಿದೆ. ಮೃತ ಸವಾರನನ್ನು ಬೇಕಲ ಸಮೀಪದ ಚಿರಮ್ಮಲ್ ನಿವಾಸಿ ಬಾಬುರಾಜ್ (45) ಎಂದು ಗುರುತಿಸಲಾಗಿದೆ. ಜಾದೂಗಾರರಾಗಿ ಹೆಸರು ಗಳಿಸಿದ್ದ ಬಾಬುರಾಜ್ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೊಂಡವನ್ನು ತಪ್ಪಿಸುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರುವುದಾಗಿ ಎಂದು ತಿಳಿದುಬಂದಿದೆ. ಈ

ಲಾರಿ – ಬೈಕ್ ನಡುವೆ ಢಿಕ್ಕಿ ➤ ಖ್ಯಾತ ಜಾದೂಗಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕೆಎಸ್ಸಾರ್ಟಿಸಿ ಬಸ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಜು.20. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಸಮೀಪ ಮಂಗಳವಾರದಂದು ನಡೆದಿದೆ. ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಹಾಸನ ಮೂಲದವರಿದ್ದ ಕಾರು ಕೈಕಂಬ ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹಾಸನದ ಚಾಲಕ ಪುಟ್ಟರಾಜು, ಜಯಂತಿ, ಲೀಲಾ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು

ಕೆಎಸ್ಸಾರ್ಟಿಸಿ ಬಸ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ತರಕಾರಿ, ಹಣ್ಣು ಹಂಪಲು ಮಾರಾಟ ಸಂಸ್ಥೆ ‘ರಿಯೋ ಫ್ರೆಶ್‌’ ಶುಭಾರಂಭ ➤ ಗ್ರಾಹಕರೇ ನೇರವಾಗಿ ಆಯ್ದುಕೊಳ್ಳುವ ವಿಭಿನ್ನ ಸೆಟಪ್

(ನ್ಯೂಸ್ ಕಡಬ) newskadaba.com ಕಡಬ, ಜು.18. ಇಲ್ಲಿನ ಮುಖ್ಯ ರಸ್ತೆಯ ಅನುಗ್ರಹ ಸಭಾಭವನದ ಮುಂಭಾಗದ ಜಾನ್ಸನ್ ಬಿಲ್ಡಿಂಗ್ ನಲ್ಲಿ ತಾಜಾ ತರಕಾರಿ, ಹಣ್ಣು ಹಾಗೂ ಡ್ರೈ ಫ್ರುಟ್ಸ್ ಮಾರಾಟ ಸಂಸ್ಥೆ ‘ರಿಯೋ ಫ್ರೆಶ್’ ಸೋಮವಾರದಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯಲ್ಲಿ ಪಟ್ಟಣದ ಬೇಡಿಕೆಗೆ ಅನುಗುಣವಾಗಿ ಗ್ರಾಹಕರು ನೇರವಾಗಿ ತಮಗೆ ಬೇಕಾದ ತರಕಾರಿ, ಹಣ್ಣು ಹಂಪಲುಗಳನ್ನು ಆಯ್ದುಕೊಳ್ಳುವ ರೀತಿ ವಿಭಿನ್ನ ಪರಿಕಲ್ಪನೆಯೊಂದಿಗೆ ಯೋಜಿಸಲಾಗಿದ್ದು, ಗ್ರಾಹಕರನ್ನು ಆಕರ್ಷಿಸುವಂತಿದೆ. ಡ್ರೈಫ್ರುಟ್ಸ್ ಸೇರಿದಂತೆ ಎಲ್ಲಾ ಬಗೆಯ ಹಣ್ಣುಗಳು, ತರಕಾರಿಗಳು ಮಿತ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ

ಕಡಬ: ತರಕಾರಿ, ಹಣ್ಣು ಹಂಪಲು ಮಾರಾಟ ಸಂಸ್ಥೆ ‘ರಿಯೋ ಫ್ರೆಶ್‌’ ಶುಭಾರಂಭ ➤ ಗ್ರಾಹಕರೇ ನೇರವಾಗಿ ಆಯ್ದುಕೊಳ್ಳುವ ವಿಭಿನ್ನ ಸೆಟಪ್ Read More »

ಕರಾವಳಿ

ಕೊಕ್ಕಡ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 19. ಅಪ್ರಾಪ್ತೆಯನ್ನು ಕಾರಿನಲ್ಲಿ ಕೂರಿಸಿ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ಆರೋಪಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೊಕ್ಕಡ ನಿವಾಸಿ ರುಕ್ಮಯ್ಯ ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಾರಿನಲ್ಲಿ ಯುವತಿಯ ಮನೆಗೆ ಬಂದು ಬಾಲಕಿಯನ್ನು ಕಾರಿನಲ್ಲಿ ಬರಬೇಕು ಎಂದು ಬಲವಂತ ಮಾಡಿದ್ದಾನೆ. ಬಾಲಕಿ ಒಪ್ಪದೇ ಇದ್ದಾಗ ಕೊನೆಗೆ ಬೆದರಿಸಿ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಹಿಂಸೆ

ಕೊಕ್ಕಡ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು ➤ ಚಾಲಕ ಮೃತ್ಯು

(ನ್ಯೂಸ್ ಕಡಬ) Newskadaba.com ಉಡುಪಿ, ಜು. 19. ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಬಿದ್ದ ಪರಿಣಾಮ ಗ್ಯಾರೇಜ್ ಮಾಲಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ-ಮುದರಂಗಡಿ ರಸ್ತೆಯ ಎಲ್ಲೂರು ಸಮೀಪದ ಪಣಿಯೂರು ಪೆಜತ್ತಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಕಾಪು ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಎಂದು ಗುರುತಿಸಲಾಗಿದೆ. ಉದ್ಯಾವರದ ಬಲಾಯಿಪಾದೆ ಎಂಬಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಇವರು ಆದಿತ್ಯವಾರದಂದು ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ

ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು ➤ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಶಾಲೆಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಪರೀಕ್ಷಾ ಮೊದಲ ದಿನವಾದ ಇಂದು ಭೇಟಿ ನೀಡಿ, ಪರೀಕ್ಷಾ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಡಿಡಿಪಿಐ ಮಲ್ಲೆಸ್ವಾಮಿ ಅವರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಗಮನಕ್ಕೆ ತರಬೇಕು, ಕೇರಳದಿಂದ ಪರೀಕ್ಷೆ ಬರೆಯಲು ಬಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದನ್ನು ಖಾತ್ರಿ ಪಡಿಸಿಕೊಂಡರು.

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ Read More »

ಕರಾವಳಿ, ಕರ್ನಾಟಕ

ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಫಾಗಿಂಗ್ ಸಿಂಪಡಿಕೆ

(ನ್ಯೂಸ್ ಕಡಬ) newskadaba.com ರಾಮಕುಂಜ, ಜು. 19. ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗು ಕೊಯಿಲ, ಆತೂರು, ರಾಮಕುಂಜ ಮತ್ತು ಗೋಳಿತ್ತಡಿ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ಕಾರ್ಯವು ಶುಕ್ರವಾರದಂದು ನಡೆಯಿತು. ಎಸ್ ಕೆ ಎಸ್ ಎಸ್ ಎಫ್ ಆತೂರು ಕಸ್ಟರ್ ವಿಖಾಯ ತಂಡ ಬೆಳಿಗ್ಗೆ ಮೆಸ್ಕಾಂ ಇಲಾಖೆಯವರ ಅಪೇಕ್ಷೆಯಂತೆ ಮರದ ಕೊಂಬೆಗಳು ವಿದ್ಯುತ್ ತಂತಿಗಳಿಗೆ ಬಿಳುವುದನ್ನು ಕಡಿದು ಲೈನ್ ಮ್ಯಾನ್ ಜೊತೆ ಕೈಜೋಡಿಸಿದರು. ಕೊಯಿಲ ಹಾಗು ರಾಮಕುಂಜ ಗ್ರಾಮ

ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗೂ ಫಾಗಿಂಗ್ ಸಿಂಪಡಿಕೆ Read More »

ಕರಾವಳಿ, ಕರ್ನಾಟಕ
Scroll to Top