ಕ್ರೈಮ್ ನ್ಯೂಸ್

ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕಡತಗಳಿಗೆ ಹಾನಿ

(ನ್ಯೂಸ್ ಕಡಬ)newskadaba.com ಉಡುಪಿ: ಇಲ್ಲಿನ ಜಾಮೀಯ ಮಸೀದಿ ಬಳಿಯಿರುವ ಯೂನಿಯನ್ ಬ್ಯಾಂಕ್ ನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬ್ಯಾಂಕ್ ನ ಹವಾನಿಯಂತ್ರಕದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ಕು ಕಂಪ್ಯೂಟರ್ ಗಳು ಹಾಗೂ ಹಲವು ಕಡತಗಳಿಗೆ ಹಾನಿಯಾಗಿದೆ. ಉಡುಪಿಯ ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ […]

ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕಡತಗಳಿಗೆ ಹಾನಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೇತ್ರಾವತಿ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜು. 08, ಕೆಲವು ದಿನಗಳ ಹಿಂದೆ ನೇತ್ರಾವತಿ ಸೇತುವೆ ಮೇಲೆ ಕೊಡೆಯಿಟ್ಟು ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮೃತರನ್ನು ಹರೇಕಳ ಶಾಲೆ ಬಳಿಯ ನಿವಾಸಿ ಕಿಶೋರ್ ಅಡ್ಯಂತಾಯ ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಂದೆಯೊಂದಿಗೆ ವಾಸವಿದ್ದ ಕಿಶೋರ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ತಡೆಯಲು ಸೇತುವೆಗೆ ಬೇಲಿ ಹಾಕುವ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದ ದಿನವೇ

ನೇತ್ರಾವತಿ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಖ್ಯಾತ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣು!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.08: ಖ್ಯಾತ ಕಿರುತೆರೆ ನಟ, ಅಂತಃಪುರ ಧಾರಾವಾಹಿ ಖ್ಯಾತಿಯ ನಟ ಸುಶೀಲ್​ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಂಡ್ಯದ ಮನೆಯಲ್ಲಿ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಜಯ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸಲಗದಲ್ಲಿ ಸುಶೀಲ್ ಗೌಡ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದಾರೆ.   ಇನ್ನು ಮಂಡ್ಯ ಮೂಲದ ಸುಶೀಲ್​, ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು.

ಖ್ಯಾತ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣು! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಲಕ್ಷ್ಮೀನಗರ ಯೋಗಿಶ್ ಕೊಲೆ ➤ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ…!!!

(ನ್ಯೂಸ್ ಕಡಬ) newskadaba.com ಉಡುಪಿ,ಜು 08. ಲಕ್ಷ್ಮೀನಗರದಲ್ಲಿ ಸೋಮವಾರ ತಡ ರಾತ್ರಿ ಹತ್ಯೆಗೈದಿದ್ದ ಯೋಗಿಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಜಿತ್ ಪಿಂಟೊ,ರೊಹೀತ್ ಪಿಂಟೊ, ಅನ್ನು ಯಾನೆ ಪ್ರದೀಪ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಯೋಗಿಶ್ ಮತ್ತು ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತಾರಕಕ್ಕೇರಿ ಆರೋಪಿಗಳು ಯೋಗೀಶ್ ನನ್ನು ಹತ್ಯೆಗೈದು ಪರಾರಿಯಾಗಿದ್ದರು. ಘಟನೆಯ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಲ್ಪೆ

ಲಕ್ಷ್ಮೀನಗರ ಯೋಗಿಶ್ ಕೊಲೆ ➤ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ…!!! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.07, ಮನೆಯೊಂದರ ಆವರಣಗೋಡೆ ಕುಸಿತಗೊಂಡ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಜುಲೈ 7ರಂದು ಪರ್ಲಡ್ಕದ ಗೋಳಿಕಟ್ಟೆಯಲ್ಲಿ ನಡೆದಿದೆ. ಕಳೆದ ಮೂರು ದಿವಸಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಕಂಪೌಂಡ್ ಕುಸಿದಿದೆ ಎಂದು ತಿಳಿದು ಬಂದಿದೆ.

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ,ಜು.07: ಉಡುಪಿ  ಕ್ಷುಲಕ ಕಾರಣಕ್ಕೆ ಗುಂಪೊಂದು ಯುವಕನನ್ನು ಹತ್ಯೆ ಮಾಡಿದ ಘಟನೆ ಲಕ್ಷ್ಮೀನಗರ ಪ್ರದೇಶದಲ್ಲಿ   ಮಂಗಳವಾರ ನಡೆದಿದೆ. ಹತ್ಯೆಯಾದ ಯುವಕನನ್ನು ಯೋಗೀಶ್ ಎಂದು ಗುರುತಿಸಲಾಗಿದೆ. ಯೋಗೀಶ್ ಮತ್ತು ತಂಡ ನಡುವೆ ಇದ್ದ ವೈಯಕ್ತಿಕ ಮನಸ್ತಾಪವೇ ಈ ಘಟನೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಡುಪಿ: ಕ್ಷುಲಕ ಕಾರಣಕ್ಕೆ ಯುವಕನ ಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.03. ಮೀನು ಹಿಡಿಯಲೆಂದು ತೆರಳಿದ ವ್ಯಕ್ತಿ ನೀರಿ‌ನಲ್ಲಿ ಮುಳುಗಿ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡದಿದೆ. ಮೃತ ಯುವಕನನ್ನು ಎಡಮಂಗಲದ ಪ್ರಕಾಶ್ (25) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.!

(ನ್ಯೂಸ್ ಕಡಬ) newskadaba.com ಮಂಗಳೂರು,ಜು.03: ಕಾವೂರಿನ ಟಿಪ್ಪರ್ ಚಾಲಕ ಗಣೇಶ್ ತನ್ನ ಪತ್ನಿ ಶಾಂತಾ  ಅವರನ್ನು ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಪತಿ-ಪತ್ನಿ ಮಧ್ಯೆ ವಿರಸ ಉಂಟಾದ ಕಾರಣ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು, ಕೆಲವು ಸಮಯ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆತ ಆಕೆಯ ಮನೆಗೆ ತೆರಳಿ ಮಾತುಕತೆ ನಡೆಸಿ ಕಾವೂರಿಗೆ ಕರೆಸಿಕೊಂಡಿದ್ದನು.   ಬುಧವಾರ ಸಂಜೆ ಗಣೇಶ್ ಪತ್ನಿ ಶಾಂತಾಳನ್ನು

ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪೈಲೆಟ್ ತರಬೇತಿ ಪಡೆದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.02: ಪೈಲೆಟ್ ತರಬೇತಿ ಪಡೆದಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮರೋಳಿಯಲ್ಲಿ ಬುಧವಾರ ನಡೆದಿದೆ. ನೂರಾರು ಕನಸುಗಳನ್ನ ಕಟ್ಟಿಕೊಂಡು ಪೈಲೆಟ್ ತರಬೇತಿ ಪಡೆದಿದ್ದ ಯುವಕನೋರ್ವ ಬುಧವಾರದಂದು ನೇಣು ಬಿಗಿದುಕೊಂಡಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ಮೃತ ಯುವಕ 32 ವರುಷದ ಅದ್ವೈತ ಶೆಟ್ಟಿನಗರದ ಮರೋಳಿ ನಿವಾಸಿಯಾಗಿದ್ದು ಪೈಲೆಟ್‌ ತರಬೇತಿ ಮುಗಿಸಿ ಕೆಲಸ ಹುಡುಕುತ್ತಿದ್ದರು. ಮೂರು ದಿನಗಳ ಹಿಂದೆ ಊರಿಗೆ ಮರಳಿದ್ದು ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮಂಗಳೂರು: ಪೈಲೆಟ್ ತರಬೇತಿ ಪಡೆದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ,ಜೂ.30:  ಸುಳ್ಯದ ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕುಮಾರ್ ಬೆಳ್ವಪ್ಪಾಡ ಎಂಬುವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.   ಮೃತರಿಗೆ 62 ವರುಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.  

ಸುಳ್ಯ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top