ಕ್ರೈಮ್ ನ್ಯೂಸ್

ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ದಿಢೀರ್ ಅಸ್ವಸ್ಥಗೊಂಡು ಮೃತ್ಯು ➤ ಹೃದಯಾಘಾತ ಶಂಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.18. ಒಂಭತ್ತನೆಯ ತರಗತಿಯ ವಿದ್ಯಾರ್ಥಿನಿಯೋರ್ವಳು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರದಂದು ವಿಟ್ಲದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ವಿಟ್ಲದ ಅಳಿಕೆ ಗ್ರಾಮದ ಚಂದಾಡಿ ನಿವಾಸಿ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಏಕೈಕ ಪುತ್ರಿ, ವಿಟ್ಲ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ವಿತ ಹೆಗ್ಡೆ ಎಂದು ಗುರುತಿಸಲಾಗಿದೆ. ಮಂಗಳವಾರದಂದು ದಿಢೀರ್ ಅಸ್ವಸ್ತಗೊಂಡು ಮೃತಪಟ್ಟಿದ್ದು, ಹೃದಯಾಘಾತದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.    

ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ದಿಢೀರ್ ಅಸ್ವಸ್ಥಗೊಂಡು ಮೃತ್ಯು ➤ ಹೃದಯಾಘಾತ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ಸುಟ್ಟು ಕರಕಲು ➤ ಓರ್ವನಿಗೆ ಗಾಯ, ಪ್ರಯಾಣಿಕರು ಪಾರು

ಕಡಬ, ಮೇ.15. ಚಲಿಸುತ್ತಿರುವಾಗಲೇ ಝೈಲೋ ಕಾರು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ಮೇ.14 ರ ರಾತ್ರಿ ನಡೆದಿದೆ. ಪಟ್ರಮೆ ನಿವಾಸಿ ಆನಂದ ಗೌಡ ಎಂಬವರು ತಮ್ಮವರೊಂದಿಗೆ ಕಾರಿನಲ್ಲಿ ಸಂಬಂಧಿಕರಾದ ಕೊಂಬಾರು ಕಟ್ಟೆ ಸೊಮಪ್ಪ ಗೌಡರ ಗೌಡರ ಮನೆಗೆ ಬರುತ್ತಿದ್ದು ಈ ಸಂದರ್ಭದಲ್ಲಿ ಕಾರಿನಲ್ಲಿ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಕಾರಿನ ಬಹುತೇಕ ಭಾಗಗಳು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿ ಇಬ್ಬರು ಗಂಡಸರು, ಓರ್ವ ಮಹಿಳೆ ಹಾಗೂ ಮಗು ಇದ್ದರು ಎಂದು ತಿಳಿದು ಬಂದಿದೆ. ಕಾರು ಹೊತ್ತಿ

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ಸುಟ್ಟು ಕರಕಲು ➤ ಓರ್ವನಿಗೆ ಗಾಯ, ಪ್ರಯಾಣಿಕರು ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಿಲಿಂಡರ್ ಸಾಗಾಟದ ಟ್ರಕ್ ಗೆ ಬೆಂಕಿ ➤ ಸ್ಥಳೀಯರ ಸಹಕಾರದಿಂದ ತಪ್ಪಿದ ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 13. ಮಂಗಳೂರಿನಿಂದ ಉಡುಪಿಗೆ ಹೆಚ್ ಪಿ ಅಡುಗೆ ಅನಿಲದ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಟ್ರಕ್ ವೊಂದರಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರದಂದು ರಾತ್ರಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆದಿದೆ. ಟ್ರಕ್ ಚಾಲಕನು ಟ್ರಕ್ ನ್ನು ಟೋಲ್ ಪ್ಲಾಜಾ ಬಳಿ ನಿಲ್ಲಿಸಿ ಟೀ ಕುಡಿಯಲೆಂದು ಸಮೀಪದ ಸ್ಟಾಲ್ ಗೆ ತೆರಳಿದ್ದು, ಈ ವೇಳೆ ಚಾಲಕನ ಸೀಟಿನ ಕೆಳಗಡೆ ಆಕಸ್ಮಿಕವಾಗಿ ಬೆಂಕಿ  ಹೊತ್ತಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದ ಅಂಗಡಿ ಸಿಬ್ಬಂದಿಗಳು

ಮಂಗಳೂರು: ಸಿಲಿಂಡರ್ ಸಾಗಾಟದ ಟ್ರಕ್ ಗೆ ಬೆಂಕಿ ➤ ಸ್ಥಳೀಯರ ಸಹಕಾರದಿಂದ ತಪ್ಪಿದ ದುರಂತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಮೂರು ತಿಂಗಳ ಹಿಂದೆ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು ಕಳವುಗೈದಿರುವ ಆರೋಪಿಯನ್ನು ಕಡಬ ಪೋಲೀಸರು ಸೋಮವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮರ್ದಾಳ ನಿವಾಸಿ ಹಕೀಂ (23) ಎಂದು ಗುರುತಿಸಲಾಗಿದೆ. ಹಕೀಂಗೆ ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ನನ್ನು ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು, ಅವರನ್ನು ಕಡಬ ಪೋಲಿಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಫೆಬ್ರವರಿ 22 ರಂದು ರಾತ್ರಿ ಪಾಲೆತ್ತಡ್ಕ ನಿವಾಸಿ

ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.07. ನವವಿವಾಹಿತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಸುಳ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಳ್ಯದ ಗಾಂಧಿನಗರ ನಿವಾಸಿ ಆಮಿನಾ ಎಂಬವರ ಪುತ್ರಿ ಆಯಿಷಾ ಎಂದು ಗುರುತಿಸಲಾಗಿದೆ. ಗಾಂಧಿನಗರದ ಕೆರೆಮೂಲೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಆಯಿಷಾ ಮನೆಯ ಫ್ಯಾನ್ ಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಯಿಷಾರವರಿಗೆ ಎಂಟು ತಿಂಗಳ ಹಿಂದೆಯಷ್ಟೇ ಕಾಸರಗೋಡು ಮೂಲದ

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಚರ್ಚ್ ಗೋಪುರದ ಶಿಲುಬೆ ತೆಗೆದು ಕೇಸರಿ ಧ್ವಜ ಹಾಕಿದ ಪ್ರಕರಣ ➤ ದಿನಕ್ಕೊಂದು ತಿರುವು | ರಾಜಕೀಯ ಕೆಸರೆರಚಾಟಕ್ಕೆ ಹಾದಿ ಸುಗಮ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು ಚರ್ಚ್‌ನ ಒಳಗಡೆ ಹನುಮಂತ ದೇವರ ಫೋಟೋ ಇರಿಸಿದ್ದಲ್ಲದೆ ಮೇಲ್ಭಾಗದಲ್ಲಿದ್ದ ಶಿಲುಬೆಯನ್ನು ಒಡೆದು ಕೇಸರಿ ಧ್ವಜವನ್ನು ಅಳವಡಿಸಿರುವ ಘಟನೆ ಕಡಬ ಸಮೀಪದ ಕುಟ್ರುಪ್ಪಾಡಿ ಎಂಬಲ್ಲಿ ಮೇ 01 ರಂದು ನಡೆದಿದ್ದು, ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕುಟ್ರುಪ್ಪಾಡಿ ಗ್ರಾಮದ ಪೇರಡ್ಕ ಎಂಬಲ್ಲಿರುವ ‘ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್’ ಚರ್ಚ್‌ಗೆ ಮೇ 01 ರಂದು ತಡರಾತ್ರಿ ವೇಳೆಗೆ ಅಪರಿಚಿತ ದುಷ್ಕರ್ಮಿಗಳು ಬಾಗಿಲನ್ನು

ಕಡಬ: ಚರ್ಚ್ ಗೋಪುರದ ಶಿಲುಬೆ ತೆಗೆದು ಕೇಸರಿ ಧ್ವಜ ಹಾಕಿದ ಪ್ರಕರಣ ➤ ದಿನಕ್ಕೊಂದು ತಿರುವು | ರಾಜಕೀಯ ಕೆಸರೆರಚಾಟಕ್ಕೆ ಹಾದಿ ಸುಗಮ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾರ್ಮಾಡಿ: ಅಪಘಾತವಾಗಿ ಸಹಾಯದ ನಿರೀಕ್ಷೆಯಲ್ಲಿದ್ದ ಕಾರಿನ ಚಾಲಕನನ್ನು ಬೆದರಿಸಿ ದರೋಡೆ ➤ ಚಿನ್ನ, ಹಣ, ಮೊಬೈಲ್ ಕಸಿದು ಪರಾರಿ

(ನ್ಯೂಸ್ ಕಡಬ) newskadaba.com ಬಣಕಲ್, ಮೇ.06. ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದ ಕಾರಿನ ಪ್ರಯಾಣಿಕರನ್ನು ಬೆದರಿಸಿ ಹಣ, ಚಿನ್ನಾಭರಣ ಹಾಗೂ ಮೊಬೈಲನ್ನು ಎಗರಿಸಿರುವ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಈ ಬಗ್ಗೆ ಬಣಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಿವಾಸ ಮಧುಸೂದನ್ ಎಂಬವರು ಬುಧವಾರದಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ತಡರಾತ್ರಿ ಇವರ ಕಾರು ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕಾಗಮಿಸಿದ ಮೂವರು

ಚಾರ್ಮಾಡಿ: ಅಪಘಾತವಾಗಿ ಸಹಾಯದ ನಿರೀಕ್ಷೆಯಲ್ಲಿದ್ದ ಕಾರಿನ ಚಾಲಕನನ್ನು ಬೆದರಿಸಿ ದರೋಡೆ ➤ ಚಿನ್ನ, ಹಣ, ಮೊಬೈಲ್ ಕಸಿದು ಪರಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಾಣಿ: ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ ➤ ಚಾಲಕ ಗಂಭೀರ, ತಪ್ಪಿದ ದುರಂತ

(ನ್ಯೂಸ್ ಕಡಬ) newskadaba.com ವಿಟ್ಲ, ಮೇ.06. ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೊಡಾಜೆ ಜಂಕ್ಷನ್ ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿಗೆ ಢಿಕ್ಕಿ ಹೊಡೆದು ಆ ಬಳಿಕ ಹೋಟೆಲ್ ಗೆ ನುಗ್ಗಿದೆ. ಘಟನೆಯಲ್ಲಿ

ಮಾಣಿ: ನಿಯಂತ್ರಣ ತಪ್ಪಿ ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ ➤ ಚಾಲಕ ಗಂಭೀರ, ತಪ್ಪಿದ ದುರಂತ Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ ➤ ತಲೆ‌ಕಡಿದ ದನ, ಜಾನುವಾರುಗಳು ವಶಕ್ಕೆ, ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಜಾನುವಾರುಗಳನ್ನು ಮಾಂಸ ಮಾಡಲಾಗುತ್ತಿದೆ ಎಂಬ ದೂರಿ‌ನ ಮೇರೆಗೆ ದಾಳಿ ನಡೆಸಿರುವ ಕಡಬ ಎಸ್ಐ ಆಂಜನೇಯ ರೆಡ್ಡಿ, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳು ಕೊಲ್ಲಲ್ಪಟ್ಟ ಒಂದು ದನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಾರೂಕ್ ಹಾಗೂ ಇನ್ನಿತರರು ಸ್ಥಳದಿಂದ

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ ➤ ತಲೆ‌ಕಡಿದ ದನ, ಜಾನುವಾರುಗಳು ವಶಕ್ಕೆ, ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ವ್ಯಕ್ತಿ ನಾಪತ್ತೆ ➤ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಎ.28. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ವ್ಯಕ್ತಿಯೋರ್ವರು ಎಪ್ರಿಲ್ 21 ರಿಂದ ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಬಿಳಿನೆಲೆ ಗ್ರಾಮದ ಮೆದಪೆರ್ಲ ನಿವಾಸಿ ಕುಮಾರ್ ಎಂಬವರ ಪುತ್ರ ಜಯನ್ ಎಂದು ಗುರುತಿಸಲಾಗಿದೆ. ಸದ್ರಿ ವ್ಯಕ್ತಿಯು ಎಪ್ರಿಲ್ 21 ರಿಂದ ಕಾಣೆಯಾಗಿದ್ದು, ಎಲ್ಲಾದರೂ ಕಂಡುಬಂದಲ್ಲಿ 9480805364, 8431723529, 9632656419 ಸಂಖ್ಯೆಗಳಿಗೆ ಕರೆಮಾಡಿ ತಿಳಿಸುವಂತೆ ಮತ್ತು ಈ ವ್ಯಕ್ತಿಯನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಠಾಣೆಯ ಪ್ರಕಟಣೆ ತಿಳಿಸಿದೆ.

ಕಡಬ: ವ್ಯಕ್ತಿ ನಾಪತ್ತೆ ➤ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top