ಕ್ರೈಮ್ ನ್ಯೂಸ್

ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 03. ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳ ಮೊಬೈಲ್ ಸ್ಫೋಟಗೊಂಡು ಯುವತಿ ಅದೃಷ್ಟವಶಾತ್ ಪಾರಾದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಇಲ್ಲಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಎರಡು ವರ್ಷದ ಹಿಂದೆ ಆನ್ ಲೈನ್ ನಲ್ಲಿ ರೆಡ್ ಮಿ ನೋಟ್ 8 ಮೊಬೈಲ್ ಖರೀದಿಸಿದ್ದರು. ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಮೊಬೈಲ್ ಶಾಪ್ ಒಂದರಲ್ಲಿ ರಿಪೇರಿ ಮಾಡಿಸಿಕೊಂಡಿದ್ದರು. ಗುರುವಾರದಂದು ಮಧ್ಯಾಹ್ನ ಯುವತಿಯು ಹೋಟೆಲ್ ಗೆ ಊಟಕ್ಕೆಂದು […]

ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೊಬೈಲ್ ಕೊಡಿಸಲಿಲ್ಲವೆಂದು ತಾಯಿಯನ್ನೇ ಕತ್ತು ಹಿಸುಕಿ ಕೊಂದ ಮಗ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 03. ಮೊಬೈಲ್ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ತತಃ ಮಗನೇ ತಾಯಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಬೇಗೂರಿನ ಮೈಲಸಂದ್ರ ಎಂಬಲ್ಲಿ ನಡೆದಿದೆ. ಒಂದು ವಾರದಿಂದ ಮೊಬೈಲ್ ಕೊಡಿಸುವಂತೆ ಪೀಡಿಸುತ್ತಿದ್ದ ಮಗನಿಗೆ ಕೈಯಲ್ಲಿ ಹಣವಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಮಗ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಕೊಡಿಸಲಿಲ್ಲವೆಂದು ತಾಯಿಯನ್ನೇ ಕತ್ತು ಹಿಸುಕಿ ಕೊಂದ ಮಗ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೌತಡ್ಕ ದೇವಸ್ಥಾನದಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು ➤ ಆರೋಪಿ ಮಹಿಳೆ ಅಂದರ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 03. ಶ್ರೀಕ್ಷೇತ್ರ ಸೌತಡ್ಕ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದ ಮಹಿಳೆಯೋರ್ವರ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಬಂಧಿಸಿ ಆಕೆಯಿಂದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ನಡೆದಿದೆ. ಬಂಧಿತ ಮಹಿಳೆಯನ್ನು ಗದಗ ಬೆಟಗೇರಿ ನಿವಾಸಿ ಭೀಮವ್ವ ಯಾನೆ ನಾಗಮ್ಮ (63) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಬಂದ ಬೆಳ್ತಂಗಡಿ ಮೂಲದ ಮುಂಬೈ ನಿವಾಸಿ ಬಾಲಚಂದ್ರ ಡಿ ಎಂಬವರು

ಸೌತಡ್ಕ ದೇವಸ್ಥಾನದಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು ➤ ಆರೋಪಿ ಮಹಿಳೆ ಅಂದರ್..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಾಟ ➤ ಓರ್ವ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 03. ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಪೈಕಿ ಓರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ ಘಟನೆ ಬೋಳಂತೂರು ಗ್ರಾಮದ ನಾರ್ಶ ಎಂಬಲ್ಲಿ ನಡೆದಿದೆ. ಆರೋಪಿಗಳನ್ನು ಬೋಳಂತೂರು ಗ್ರಾಮದ ಕಲ್ಪನೆ ನಿವಾಸಿ ಅಬೂಬಕ್ಕರ್ ಬಿ, ನಾರ್ಶ ನಿವಾಸಿ ಹಮೀದ್ ನಾರ್ಶ ಎಂದು ಗುರುತಿಸಲಾಗಿದೆ. ವಿಟ್ಲ ಹೋಬಳಿಯ ಬೋಳಂತೂರು ಗ್ರಾಮದ ಎನ್ ಸಿ ರೋಡ್ ಎಂಬಲ್ಲಿ ನಾರ್ಶದಿಂದ ಬೋಳಂತೂರು ಕಡೆಗೆ ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿದ್ದ ಮಾಹಿತಿ

ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಾಟ ➤ ಓರ್ವ ಆರೋಪಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಕಿಡ್ನಿ ಫೈಲ್ಯೂರ್ ➤ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಮೃತ್ಯು..!!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮೇ. 31. ಎರಡೂ ಕಿಡ್ನಿ ವಿಫಲಗೊಂಡಿದ್ದ ಯುವತಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ನೆಲ್ಯಾಡಿ ತಲುಪುತ್ತಿದ್ದಂತೆಯೇ ದಾರಿ ಮಧ್ಯೆ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಪರಿಸರದಲ್ಲಿ ವಾಸವಾಗಿರುವ ರಮೇಶ್ ನಾಯ್ಕ್ ಹಾಗೂ ರೇವತಿ ದಂಪತಿಯ ಹಿರಿಯ ಮಗಳು ತೇಜಸ್ವಿನಿ(15) ಎಂದು ಗುರುತಿಸಲಾಗಿದೆ. ಎರಡೂ ಕಿಡ್ನಿಗಳು ವೈಫಲ್ಯಕ್ಕೊಳಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈಕೆಗೆ ಡಯಾಲಿಸಿಸ್ ನಡೆಸಲಾಗುತ್ತಿದ್ದು ಅಲ್ಲದೇ

ಮಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಕಿಡ್ನಿ ಫೈಲ್ಯೂರ್ ➤ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಮೃತ್ಯು..!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಧೀರಜ್ ಮೆದುಳು ನಿಷ್ಕ್ರಿಯ ➤ ಕುಟುಂಬದಿಂದ ಅಂಗಾಂಗ ದಾನಕ್ಕೆ ನಿರ್ಧಾರ..!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 31. ರವಿವಾರದಂದು ಬಿಕರ್ನಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಧೀರಜ್ ಎಂಬವರ ಮೆದುಳು ನಿಷ್ಕ್ರಿಯಗೊಂಡಿದ್ದು, ಈ ಹಿನ್ನೆಲೆ ಕುಟುಂಬದ ಅನುಮತಿ ಮೇರೆಗೆ ಅಂಗಾಂಗ ದಾನ ಪ್ರಕ್ರಿಯೆಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆಯಲಿದೆ. ಚೆನ್ನೈನ ತಂಡವು ಖಾಸಗಿ ವಿಮಾನ್ ಮೂಲಕ ಮಂಗಳೂರಿಗೆ ಆಗಮಿಸಿ ಅಂಗಾಂಗಗಳನ್ನು ಕೊಂಡೊಯ್ಯಲಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ

ಮಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಧೀರಜ್ ಮೆದುಳು ನಿಷ್ಕ್ರಿಯ ➤ ಕುಟುಂಬದಿಂದ ಅಂಗಾಂಗ ದಾನಕ್ಕೆ ನಿರ್ಧಾರ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ..!

(ನ್ಯೂಸ್ ಕಡಬ) newskadaba.com ಕಡಬ, ಮೇ. 31. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯೋರ್ವಳಿಗೆ ಸ್ಕಾರ್ಫಿಯೋ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಕೆಮ್ಮಾರ ಬಡ್ಡಮೆ ನಿವಾಸಿ ಮುನಾಝ್ ಎಂಬವರ ಪುತ್ರಿ ಎರಡನೇ ತರಗತಿ ವಿದ್ಯಾರ್ಥಿ ರಿಝಾ ಫಾತಿಮಾ ಎಂದು ಗುರುತಿಸಲಾಗಿದೆ. ಈಕೆ ಮುಂಜಾನೆ ಮದ್ರಸಾಕ್ಕೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ

ಕಡಬ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೂರು ಕಾರುಗಳ ನಡುವೆ ಸರಣಿ ಅಪಘಾತ ➤ ಚಾಲಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.29. ಸ್ವಿಫ್ಟ್, ಮಾರುತಿ 800 ಹಾಗೂ ಸ್ವಿಫ್ಟ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಚಾಲಕರು ಗಾಯಗೊಂಡ ಘಟನೆ ಸುಳ್ಯದ ಪರಿವಾರಕಾನ ಎಂಬಲ್ಲಿ ಭಾನುವಾರದಂದು ನಡೆದಿದೆ. ಘಟನೆಯಲ್ಲಿ ಮೂರು ಕಾರುಗಳೂ ಜಖಂಗೊಂಡಿದ್ದು, ಅತಿಯಾದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂರು ಕಾರುಗಳ ನಡುವೆ ಸರಣಿ ಅಪಘಾತ ➤ ಚಾಲಕರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ಳಂಬೆಳಗ್ಗೆ ಲಾರಿ-ಬಸ್ ನಡುವೆ ಭೀಕರ ಅಪಘಾತ ➤ ಎಂಟು ಮಂದಿ ಮೃತ್ಯು, 27 ಮಂದಿ ಗಂಭೀರ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಮೇ.24. ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಚಾಲಕರಿಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟ ಘಟನೆ ಹುಬ್ಬಳ್ಳಿ- ಧಾರವಾಡ ಬೈಪಾಸ್ ನ ರೇವಡಿಹಾಳ ಕ್ರಾಸ್ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಬೆಂಗಳೂರಿನಿಂದ ಪುಣೆ ಕಡೆ ಹೊರಟಿದ್ದ ಲಾರಿ ನಡುವೆ ರೇವಡಿಹಾಳ ಕ್ರಾಸ್ ಬಳಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು

ಬೆಳ್ಳಂಬೆಳಗ್ಗೆ ಲಾರಿ-ಬಸ್ ನಡುವೆ ಭೀಕರ ಅಪಘಾತ ➤ ಎಂಟು ಮಂದಿ ಮೃತ್ಯು, 27 ಮಂದಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವಜೋಡಿ ಆತ್ಮಹತ್ಯೆ ➤ ಬೆಂಕಿಯ ಜ್ವಾಲೆಗೆ ಇಬ್ಬರೂ ಸಜೀವ ದಹನ

ಉಡುಪಿ, ಮೇ.22. ಬೆಂಗಳೂರು ಮೂಲದ ಯುವ ಜೋಡಿಯೊಂದು ಕಾರಿನೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯನ್ನು ಬೆಂಗಳೂರಿನ ಆರ್.ಟಿ. ನಗರ ನಿವಾಸಿಗಳಾದ ಯಶವಂತ್ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಾರು ಬೆಂಕಿಗಾಹುತಿಯಾಗಿರುವುದು ಕಂಡುಬಂದಿದ್ದು, ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ, ಯುವತಿ ಸಜೀವ ದಹನವಾಗಿರುವುದು ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಜೋಡಿ ಕಾಣೆಯಾಗಿರುವ

ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವಜೋಡಿ ಆತ್ಮಹತ್ಯೆ ➤ ಬೆಂಕಿಯ ಜ್ವಾಲೆಗೆ ಇಬ್ಬರೂ ಸಜೀವ ದಹನ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top