ಮಂಗಳೂರು: ಸಿಲಿಂಡರ್ ಸಾಗಾಟದ ಟ್ರಕ್ ಗೆ ಬೆಂಕಿ ➤ ಸ್ಥಳೀಯರ ಸಹಕಾರದಿಂದ ತಪ್ಪಿದ ದುರಂತ



(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 13. ಮಂಗಳೂರಿನಿಂದ ಉಡುಪಿಗೆ ಹೆಚ್ ಪಿ ಅಡುಗೆ ಅನಿಲದ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಟ್ರಕ್ ವೊಂದರಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರದಂದು ರಾತ್ರಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆದಿದೆ.







ಟ್ರಕ್ ಚಾಲಕನು ಟ್ರಕ್ ನ್ನು ಟೋಲ್ ಪ್ಲಾಜಾ ಬಳಿ ನಿಲ್ಲಿಸಿ ಟೀ ಕುಡಿಯಲೆಂದು ಸಮೀಪದ ಸ್ಟಾಲ್ ಗೆ ತೆರಳಿದ್ದು, ಈ ವೇಳೆ ಚಾಲಕನ ಸೀಟಿನ ಕೆಳಗಡೆ ಆಕಸ್ಮಿಕವಾಗಿ ಬೆಂಕಿ  ಹೊತ್ತಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದ ಅಂಗಡಿ ಸಿಬ್ಬಂದಿಗಳು ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಸಿಬ್ಬಂದಿಗಳು ಹಾಗೂ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ವಾಹನದಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬಂದಿದೆ.






 

error: Content is protected !!
Scroll to Top