ಕ್ರೈಮ್ ನ್ಯೂಸ್

ಪುತ್ತೂರು: ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರ ➤ ವೀಡಿಯೋ ಮಾಡಿ ಮಹಿಳೆಯ ಪತಿಗೆ ಕಳುಹಿಸಿದ ಆರೋಪಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.15. ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಫಾರ್ಮಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೋರ್ವ ಅತ್ಯಾಚಾರಗೈದಿದ್ದಲ್ಲದೆ ವಿಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿರುವ ಬಗ್ಗೆ ಸಂಪ್ಯ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿರುವ ಕೋಳಿ ಫಾರ್ಮ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮ್ಮರ್ ಎಂಬಾತ ಅಲ್ಲೇ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರಗೈದ ಬಳಿಕ ವಿಡಿಯೋ ಚಿತ್ರಿಕರಿಸಿ ಮಹಿಳೆಯ ಪತಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಮೇ 5 ರಂದು ಕೃತ್ಯ ನಡೆದಿದ್ದು, ಆರೋಪಿಯು ಜೀವ […]

ಪುತ್ತೂರು: ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರ ➤ ವೀಡಿಯೋ ಮಾಡಿ ಮಹಿಳೆಯ ಪತಿಗೆ ಕಳುಹಿಸಿದ ಆರೋಪಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆರೋಗ್ಯ ತಪಾಸಣೆಗೆ ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಶಿರ್ವ, ಜೂ. 15. ವೈದ್ಯನೋರ್ವ ಆರೋಗ್ಯ ತಪಾಸಣೆಗೆಂದು ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಮಹಿಳೆಯೋರ್ವರು ಆರೋಗ್ಯ ತಪಾಸಣೆಗಾಗಿ ತನ್ನ ಪತಿಯೊಂದಿಗೆ ಸಮೀಪದ ಕ್ಲಿನಿಕ್‌ ಗೆ ತೆರಳಿದ್ದು, ಈ ಸಂದರ್ಭ ಅಲ್ಲಿನ ವೈದ್ಯ ತಪಾಸಣೆ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಿಳೆಯು ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಗ್ಯ ತಪಾಸಣೆಗೆ ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ ➤ ದೂರು ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಕ್ರಮ ಚಿನ್ನ ಸಾಗಾಟ ➤ 1.36 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1.36 ಕೋಟಿ ರೂ. ಮೌಲ್ಯದ ಚಿನ್ನನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ತಪಾಸಣೆ ನಡೆಸಿದಾಗ 24 ಕ್ಯಾರೆಟ್‌ನ ಸುಮಾರು 964 ಗ್ರಾಂ ತೂಕದ ಚಿನ್ನವನ್ನು ಗುದನಾಳದಲ್ಲಿ ಕ್ಯಾಪ್ಸೂಲ್‌ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ಆಗಮಿಸಿದ ಮಹಿಳೆಯಿಂದ 86,89,440 ರೂ. ಮೌಲ್ಯದ 1.684 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ಅಕ್ರಮ ಚಿನ್ನ ಸಾಗಾಟ ➤ 1.36 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ➤‌ ಧರ್ಮಸ್ಥಳದ ಉದ್ಯಮಿ ಮೃತ್ಯು

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜೂ.15. ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಧರ್ಮಸ್ಥಳದ ಸ್ನಾನಘಟ್ಟ ಸಮೀಪ ಹೊಟೇಲ್ ನಡೆಸುತ್ತಿದ್ದ ಓಡಿಲ್ನಾಲ ಮುಗುಳಿಚತ್ರ ನಿವಾಸಿ ವಸಂತ್ ಕುಮಾರ್ ಜೈನ್(42) ಎಂದು ಗುರುತಿಸಲಾಗಿದೆ. ಇವರು ಧರ್ಮಸ್ಥಳದಿಂದ ಸ್ನಾನಘಟ್ಟದ ಕಡೆಗೆ ತನ್ನ ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರವನ್ನು ಗಮನಿಸದೆ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸದೆ

ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ➤‌ ಧರ್ಮಸ್ಥಳದ ಉದ್ಯಮಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

?? Breaking News ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ➤ ಸವಾರರು ದುರ್ಮರಣ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 14. ಲಾರಿ‌ ಢಿಕ್ಕಿ ಹೊಡೆದು ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಿದ್ದಕಟ್ಟೆ ಸಮೀಪದ ಸೋರ್ನಾಡು ಎಂಬಲ್ಲಿ ಮಂಗಳವಾರದಂದು ಸಂಜೆ ನಡೆದಿದೆ. ಮೃತ ದ್ವಿಚಕ್ರ ವಾಹನ ಸವಾರರನ್ನು ಲೊರೆಟ್ಟೋ ಕಮಲ್ ಕಟ್ಟೆ ನಿವಾಸಿ ನಿತಿನ್ ಹಾಗೂ ಶಶಿರಾಜ್‌ ಎಂದು ಗುರುತಿಸಲಾಗಿದೆ. ಇವರು ಸಿದ್ದಕಟ್ಟೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿಯು ನೇರವಾಗಿ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ

?? Breaking News ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ➤ ಸವಾರರು ದುರ್ಮರಣ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಸಾಂಬಾರು ಪಾತ್ರೆಗೆ ಕಾಲುಜಾರಿ ಬಿದ್ದು ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಶಾಲೆಯ ಬಿಸಿಯೂಟ ಮಾಡುತ್ತಿದ್ದ ಸಂದರ್ಭ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಗ್ನೆಸ್ ಪ್ರಮೀಳಾ ಡಿಸೋಜಾ (37) ಎಂದು ಗುರುತಿಸಲಾಗಿದೆ. ಪ್ರಮೀಳಾ ಡಿಸೋಜಾ ಅವರು ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಮೇ.30 ರಂದು ಮಧ್ಯಾಹ್ನ 12

ಪುತ್ತೂರು: ಸಾಂಬಾರು ಪಾತ್ರೆಗೆ ಕಾಲುಜಾರಿ ಬಿದ್ದು ಮಹಿಳೆ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಮನೆಗೆ ನುಗ್ಗಿದ ಕಳ್ಳರು..! ➤ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್‌ ನ್ನು ಕಳವು ನಡೆಸಿದ ಘಟನೆ ಸಂಪ್ಯದಲ್ಲಿ ನಡೆದಿದೆ.   ಸಂಪ್ಯ ಅದ್ರಾಮ.ಎಸ್ ಮತ್ತು ಅವರ ಪತ್ನಿ ಮೆಹಂದಿ ಕಾರ್ಯಕ್ರಮಕ್ಕೆಂದು ಬೆಳಗ್ಗೆ ತೆರಳಿ ರಾತ್ರಿ ಮನೆಗೆ ಹಿಂತಿರುಗಿದ್ದು, ಇದರ ನಡುವೆ ಕಳ್ಳತನವಾಗಿದೆ ಎಂದೆನ್ನಲಾಗಿದೆ. ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ ಕಳ್ಳರು, ಮನೆಯ ಬೆಡ್‌ರೂಮ್‌ನ ಹಾಸಿಗೆಯೊಳಗಿದ್ದ ಕೀ

ಪುತ್ತೂರು: ಮನೆಗೆ ನುಗ್ಗಿದ ಕಳ್ಳರು..! ➤ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ದೂರು ಹಿಂತೆಗೆಯುವಂತೆ ವಿದೇಶದಿಂದ ಬೆದರಿಕೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ. 14. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಯುವಕ ದೂರು ಹಿಂತೆಗೆಯುವಂತೆ ಧಮ್ಕಿ ಹಾಕುತ್ತಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಗ್ರಾಮದ ಯುವಕನೋರ್ವ ಅತ್ಯಾಚಾರ ನಡೆಸಿದ್ದಲ್ಲದೇ, ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಆದರೆ ಅಪ್ರಾಪ್ತೆಯು ನಡೆದ ವಿಷಯವನ್ನೆಲ್ಲಾ ತನ್ನ ಅಜ್ಜಿಯ ಬಳಿ ಹೇಳಿಕೊಂಡಿದ್ದು, ಈ ಕುರಿತು ಆಕೆಯ ಪೋಷಕರು ಹೊಳೆಹೊನ್ನೂರು ಪೊಲೀಸ್

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ದೂರು ಹಿಂತೆಗೆಯುವಂತೆ ವಿದೇಶದಿಂದ ಬೆದರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 13. ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್‌ನಲ್ಲಿರುವ ಬಸ್ಸು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.   ಮೃತರು ಕಡುನೀಲಿ ಬಣ್ಣದ ಪ್ಯಾಂಟ್‌ ಹಾಗೂ ಆಕಾಶ ನೀಲಿ ಬಣ್ಣದ ಪ್ರಿಂಟೆಡ್ ಟೀ ಶರ್ಟ್‌ ಧರಿಸಿದ್ದಾರೆ. ಅನಾರೋಗ್ಯದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಬೆಳ್ತಂಗಡಿ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಹೋದರಿಯ ಚಿತೆಗೆ ಹಾರಿ ಸಹೋದರ ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ಭೋಪಾಲ್, ಜೂ. 13. ಯುವಕನೋರ್ವ ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.   ಸಾಗರ ಜಿಲ್ಲೆಯ ಮಝಗಾವನ್ ಎಂಬ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರದ ವೇಳೆ‌ ಸಹೋದರ ಕಿರಣ್ ಎಂಬಾತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮ ಪಂಚಾಯತ್ ಸರಪಂಚ ಭರತ್ ಸಿಂಗ್ ಘೋಷಿಸಿದ್ದಾರೆ.

ಸಹೋದರಿಯ ಚಿತೆಗೆ ಹಾರಿ ಸಹೋದರ ಆತ್ಮಹತ್ಯೆ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top