ಮೂರು ಕಾರುಗಳ ನಡುವೆ ಸರಣಿ ಅಪಘಾತ ➤ ಚಾಲಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.29. ಸ್ವಿಫ್ಟ್, ಮಾರುತಿ 800 ಹಾಗೂ ಸ್ವಿಫ್ಟ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಚಾಲಕರು ಗಾಯಗೊಂಡ ಘಟನೆ ಸುಳ್ಯದ ಪರಿವಾರಕಾನ ಎಂಬಲ್ಲಿ ಭಾನುವಾರದಂದು ನಡೆದಿದೆ.

ಘಟನೆಯಲ್ಲಿ ಮೂರು ಕಾರುಗಳೂ ಜಖಂಗೊಂಡಿದ್ದು, ಅತಿಯಾದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top