ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ
(ನ್ಯೂಸ್ ಕಡಬ) newskadaba.com ಬೈಂದೂರು, ಜು. 22. ಅನ್ಯಕೋಮಿನ ಜೋಡಿಯೊಂದು ಉಪ್ಪುಂದ ನಂದನವನ ವಸತಿ ಗೃಹಕ್ಕೆ ತೆರಳಿದ ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಳ್ಳಾಲದ ನಿವಾಸಿ ಅಮೀರ್ (45) ಎಂಬಾತ 28 ವರ್ಷದ ಯುವತಿಯೊಂದಿಗೆ ಬೈಂದೂರು ಲಾಡ್ಜ್ ಗೆ ತೆರಳಿದ್ದಾರೆ ಎಂದೆನ್ನಲಾಗಿದೆ. ಅಮೀರ್ ಗುಜರಿ ವ್ಯಾಪಾರಿಯಾಗಿದ್ದು, ಯುವತಿಯು ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದೀಗ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ Read More »
ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್





