ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ➤ ಮಾದಕ ವಸ್ತುಗಳ ಸಹಿತ ಮೂವರು ಅರೆಸ್ಟ್



(ನ್ಯೂಸ್ ಕಡಬ) newskadaba.com ವಿಟ್ಲ, ಜು. 02. ಅಕ್ರಮ ಗಾಂಜಾ ಸಾಗಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ.







ಬಂಧಿತ ಆರೋಪಿಗಳನ್ನು ಡ್ರಗ್ ಪೆಡ್ಲರ್ ರಹಿಮಾನ್, ಜಲಾಲುದ್ದೀನ್ ಹಾಗೂ ಪೈಝಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸಾವಿರಾರು ರೂ ಮೌಲ್ಯದ ಎಂಡಿಎಮ್ಎ, ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ಒಂದು ತಲವಾರನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಕರ್ನಾಟಕ ಭಾಗಗಳಿಗೆ ಮಾದಕ ವಸ್ತುಗಳನ್ನು ಸಾಗಾಟ ಮಾಡುವ ಇವರು ಅಂತರಾಜ್ಯ ಡ್ರಗ್ ಪೆಡ್ಲರ್ ಗಳಾಗಿದ್ದಾರೆ ಎಂದೂ ಹೇಳಲಾಗಿದೆ.






error: Content is protected !!
Scroll to Top