ಕ್ರೈಮ್ ನ್ಯೂಸ್

ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿಹೋದ ಶಾಲಾ ಬಸ್..!! ➤ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 19. ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಹೋಗುತ್ತಿದ್ದ ಶಾಲಾ ಬಸ್ಸೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಉತ್ತರಾಖಂಡದ ಚಂಪಾವತ್ ನಲ್ಲಿ ನಡೆದಿದೆ. ಘಟನೆಯಲ್ಲಿ ಶಾಲಾ ಬಸ್ ಚಾಲಕ ಕಮಲೇಶ್ ಕರ್ಕಿ ಹಾಗೂ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿ ಮಕ್ಕಳಿರದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ನೀರಿನ ಹರಿವು ಹೆಚ್ಚಿರುವುದರಿಂದ ಚಾಲಕನಿಗೆ ಸ್ವಲ್ಪ ಸಮಯ ಕಾಯಲು ಹೇಳಲಾಗಿತ್ತಾದರೂ, ಆತ ನೀರು ತುಂಬಿ ಹರಿಯುತ್ತಿದ್ದ […]

ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿಹೋದ ಶಾಲಾ ಬಸ್..!! ➤ ಇಬ್ಬರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶೋರೂಂ ನಲ್ಲಿ ಬೆಂಕಿ ಅವಘಡ ➤ 7 ಎಲೆಕ್ಟ್ರಿಕ್ ಬೈಕ್ ಗಳು ಸುಟ್ಟು ಭಸ್ಮ..!

(ನ್ಯೂಸ್ ಕಡಬ) newskadaba.com ಮುಂಬೈ, ಜು. 19. ಶೋರೂಂ ನಲ್ಲಿ ಚಾರ್ಜಿಂಗ್ ಮಾಡುತ್ತಿದ್ದ ವೇಳೆ ಏಳು ಎಲೆಕ್ಟ್ರಿಕ್ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ಪುಣೆಯ ಗಂಗಾಧಾಮ್ ಪ್ರದೇಶದಲ್ಲಿ ನಡೆದಿದೆ. ಎಲೆಕ್ಟ್ರಿಕ್ ಬೈಕ್ ನ್ನು ಶೋ ರೂಮ್‌‌ನಲ್ಲಿ ಚಾರ್ಜಿಂಗ್‌ ಮಾಡುತ್ತಿದ್ದ ವೇಳೆ ಬೈಕ್‌‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಶೋರೂಂ ನಲ್ಲಿ ಬೆಂಕಿ ಅವಘಡ ➤ 7 ಎಲೆಕ್ಟ್ರಿಕ್ ಬೈಕ್ ಗಳು ಸುಟ್ಟು ಭಸ್ಮ..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ಬಸ್ಸಿನಿಂದಿಳಿದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ..! ➤ KSRTC ಬಸ್ ಚಾಲಕ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕರೋರ್ವರು ಬಸ್ ನಿಲ್ದಾಣದಲ್ಲಿಯೇ ಮೃತಪಟ್ಟ ಘಟನೆ ಮರ್ಕಂಜ ಎಂಬಲ್ಲಿ ನಡೆದಿದೆ. ಮೃತರನ್ನು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ (56) ಎಂದು ಗುರುತಿಸಲಾಗಿದೆ. ಇವರು ಮರ್ಕಂಜ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯಲು ಹೋದ ವೇಳೆ ತೀವ್ರ ಎದೆನೋವು ಉಂಟಾಗಿ ಉಸಿರಾಟದ ತೊಂದರೆಯಾಗಿದ್ದು, ತಕ್ಷಣವೇ ಬಸ್ಸು ನಿರ್ವಾಹಕ ಸಿದ್ದಪ್ಪರವರು ಮಲ್ಲೇಶ್ ನನ್ನು ಜೀಪಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ

ಸುಳ್ಯ: ಬಸ್ಸಿನಿಂದಿಳಿದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ..! ➤ KSRTC ಬಸ್ ಚಾಲಕ ನಿಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಕಾಡಾನೆ ಹಿಂಡು ದಾಳಿ ➤ ಅಪಾರ ಕೃಷಿ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸೋಮವಾರ ಬೆಳಿಗ್ಗೆ ಮಾವಂಜಿ ಭಾಗದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆಗಳ ಹಿಂಡು ಕೃಷಿ ಹಾನಿ ಮಾಡಿ ಅಪಾರ ನಷ್ಟವುಂಟಾದ ಘಟನೆ ವರದಿಯಾಗಿದೆ. ಒಂದು ಮರಿ ಹಾಗು ಮೂರು ದೊಡ್ಡ ಆನೆಗಳ ಹಿಂಡು ಸೀತಾರಾಮ ಮಣಿಯಾಣಿ ಎಂಬವರ ತೋಟಕ್ಕೆ ನುಗ್ಗಿ ಬಾಳೆ, ತೆಂಗು ಸೇರಿ ಅಪಾರ ಕೃಷಿ ಹಾನಿಗೊಳಿಸಿದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾಳಿ ನಿರಂತರವಾಗಿ ಮುಂದುವರಿದಿದ್ದು ಮಳೆಗಾಲ ಆರಂಭವಾದ ಬಳಿಕ ಆನೆ ಹಾವಳಿ ಇನ್ನಷ್ಟು ತೀವ್ರಗೊಂಡಿದೆ.

ಸುಳ್ಯ: ಕಾಡಾನೆ ಹಿಂಡು ದಾಳಿ ➤ ಅಪಾರ ಕೃಷಿ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ವಿದೇಶದಿಂದ ಮಂಗಳೂರಿಗೆ ಆಗಮಿಸಿದ ಕೇರಳದ ಪ್ರಯಾಣಿಕನೋರ್ವನಲ್ಲಿ ಮಂಕಿಪಾಕ್ಸ್ ಲಕ್ಷಣ ಕಂಡುಬಂದ ಹಿನ್ನೆಲೆ, ವ್ಯಕ್ತಿಯ ಸಂಪರ್ಕಕ್ಕೆ ಬಂದ 35 ಮಂದಿಯನ್ನು ಐಸೋಲೇಷನ್ ಗೆ ಒಳಪಡಿಸಲಾಗಿದೆ. ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆ ಆತನನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿ, ತಪಾಸಣೆ ನಡೆಸಿದಾಗ ಮಂಕಿಫಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಈತನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಮಾತ್ರವಲ್ಲದೆ ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಇನ್ನು

ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿಬಿದ್ದ ಯುವಕ..!! ➤ ಪ್ರಾಣ ರಕ್ಷಣೆಗಾಗಿ ಗೋಗರೆತ

(ನ್ಯೂಸ್ ಕಡಬ) newskadaba.com ಧಾರವಾಡ, ಜು. 19. ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿ ಬಂದ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ಪ್ರಾಣ ಉಳಿಸುವಂತೆ ಗೋಗರೆಯುತ್ತಿದ್ದ ದಯನೀಯ ಘಟನೆಯೊಂದು ಧಾರವಾಡದ ಹೊರವಲಯದಲ್ಲಿ ನಡೆದಿದೆ. ಗಾಯಾಳು ಯುವಕನನ್ನು ಹಾವೇರಿ ಮೂಲದ ನವೀನ್ ದೊಡ್ಡಮನಿ(30) ಎಂದು ಗುರುತಿಸಲಾಗಿದೆ. ಈತ ನುಗ್ಗೆಕೇರಿ ಗುಡ್ಡದಿಂದ ಹೊರಳಿಕೊಂಡು ಕೆಳಕ್ಕೆ ಬಿದ್ದಿದ್ದು, ಈ ವೇಳೆ ಆತ ಕತ್ತು ಕುಯ್ದ ಸ್ಥಿತಿಯಲ್ಲಿದ್ದು ಬಟ್ಟೆಯೆಲ್ಲಾ ರಕ್ತಸಿಕ್ತವಾಗಿತ್ತು. ಗುಡ್ಡದಿಂದ ಬಿದ್ದ ಆತ ಜನರನ್ನು ಕಂಡು ಪ್ರಾಣ ಉಳಿಸುವಂತೆ ಗೋಗರೆದಿದ್ದಾನೆ‌.

ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿಬಿದ್ದ ಯುವಕ..!! ➤ ಪ್ರಾಣ ರಕ್ಷಣೆಗಾಗಿ ಗೋಗರೆತ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಮನೆಯ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ದಂಪತಿಗಳು ಅಂದರ್

(ನ್ಯೂಸ್ ಕಡಬ) newskadaba.com ವಿಟ್ಲ, ಜು. 19. ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ವಿಟ್ಲ ಮುಡ್ನೂರು ಗ್ರಾಮದ ದಂಬೆತಾರು ಎಂಬಲ್ಲಿ ನಡೆದಿದೆ. ಬಂಧಿತರನ್ನು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಪ್ರಮೋದ್ ಹಾಗೂ ಪತ್ನಿ ಸುಮತಿ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ವಿನಯ ಚಂದ್ರನಾಯಕ್ ಎಂಬವರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರಿಗೆ, ವಿನಯ ಚಂದ್ರನಾಯಕ್ ರವರ ಮನೆಯಲ್ಲಿ ಕೂಲಿ ಕೆಲಸಕ್ಕಿದ್ದ ಮಹಿಳೆ ಹಾಗೂ

ವಿಟ್ಲ: ಮನೆಯ ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ದಂಪತಿಗಳು ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಲಾರಿಗೆ ಕಾರು ಢಿಕ್ಕಿ ➤ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ಪಿ ಹಾಗೂ ಪತ್ನಿ ಸ್ಥಳದಲ್ಲೇ ಮೃತ್ಯು..!!

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಜು. 18. ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 4 ರ ಕಸವನಹಳ್ಳಿ ಬಳಿ ನಡೆದಿದೆ. ಮೃತಪಟ್ಟವರನ್ನು ಚಿಕ್ಕಜೋಗಿ ಹಳ್ಳಿ ಮೂಲದ ಅಬಕಾರಿ ಇಲಾಖೆ ನಿವೃತ್ತ ಡಿವೈಎಸ್ ಪಿ ಜಯರಾಂ ನಾಯ್ಕ್ (73) ಹಾಗೂ ಅವರ ಪತ್ನಿ ಲತಾ (63) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ವೇಳೆ ಕಸವನಹಳ್ಳಿ ಬಳಿ ಈ ಅವಘಡ ಸಂಭವಿಸಿದೆನ್ನಲಾಗಿದೆ.

ಲಾರಿಗೆ ಕಾರು ಢಿಕ್ಕಿ ➤ ಅಬಕಾರಿ ಇಲಾಖೆಯ ನಿವೃತ್ತ ಡಿವೈಎಸ್ಪಿ ಹಾಗೂ ಪತ್ನಿ ಸ್ಥಳದಲ್ಲೇ ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಚಾರ್ಮಾಡಿ ಘಾಟ್ ಎರಡನೇ ತಿರುವಿನಲ್ಲಿ ರಸ್ತೆ ಬಿರುಕು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 18. ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನ ರಸ್ತೆಯ ಮೋರಿಯೊಂದು ಬಿರುಕು ಬಿಟ್ಟಿರುವ ಘಟನೆ ವರದಿಯಾಗಿದೆ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ಮರಳು ಮಿಶ್ರಿತ ಕಲ್ಲುಗಳನ್ನು ಹಾಕಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕುಸಿತಗೊಂಡಿರುವ ಇನ್ನೊಂದು ಭಾಗದಲ್ಲಿ ಕಂದಕ ಇರುವ ಕಾರಣ ಬಸ್, ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಚಾರ್ಮಾಡಿ ಘಾಟ್ ಎರಡನೇ ತಿರುವಿನಲ್ಲಿ ರಸ್ತೆ ಬಿರುಕು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 18. ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕುಟೇಲು ಸೇತುವೆ ಬಳಿ ಇಂದು ನಡೆದಿದೆ. ಉಪ್ಪಿನಂಗಡಿಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ 800 ಕಾರು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಸಿಫ್ಟ್ ಡಿಸೈರ್ ಕಾರು ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದಿದ್ದು ಮಾರುತಿ 800 ಕಾರು ಸಂಪೂರ್ಣ ನಜುಗುಜ್ಜಾಗಿ ರಸ್ತೆಯಲ್ಲಿ ತಿರುಗಿ ನಿಂತಿದೆ. ಘಟನೆಯಿಂದ

ಉಪ್ಪಿನಂಗಡಿ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top