ಕ್ರೈಮ್ ನ್ಯೂಸ್

ಪುತ್ತೂರು: ರಸ್ತೆಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ..! ➤‌ ಸಹಸವಾರೆಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 01. ನಾಯಿಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್ ಪಲ್ಟಿಯಾದ ಪರಿಣಾಮ ಸಹಸವಾರೆ ಗಾಯಗೊಂಡ ಘಟನೆ ಕಾವೇರಿಕಟ್ಟೆ ಸಮೀಪ ನಡೆದಿದೆ.   ಗಾಯಗೊಂಡವರನ್ನು ಕೆಮ್ಮಿಂಜೆ ಗ್ರಾಮದ ಮಂಜುನಾಥ ಎಂಬವರ ಪತ್ನಿ ಮೀನಾಕ್ಷಿ(62) ಎಂದು ಗುರುತಿಸಲಾಗಿದೆ. ಮೀನಾಕ್ಷಿಯವರು ಪತಿ ಮಂಜುನಾಥ್ ಅವರೊಂದಿಗೆ ಬೈಕ್‌ನಲ್ಲಿ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ, ಕಾವೇರಿಕಟ್ಟೆ ಸಮೀಪ ರಸ್ತೆಗೆ ಅಡ್ಡಲಾಗಿ ಬಂದ ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬೈಕ್ ಪಲ್ಟಿಯಾಗಿದೆ. […]

ಪುತ್ತೂರು: ರಸ್ತೆಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ..! ➤‌ ಸಹಸವಾರೆಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೀದಿನಾಯಿಗಳ ದಾಳಿಗೆ ತುತ್ತಾಗಿ ನಾಲ್ಕೂವರೆ ವರ್ಷದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಭದ್ರಾವತಿ , ಡಿ. 01. ಬೀದಿನಾಯಿಗಳ ದಾಳಿಗೊಳಗಾಗಿ ನಾಲ್ಕುವರೆ ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಭದ್ರಾವತಿ ತಾಲೂಕು ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಸೈಯದ್ ಮದನಿ ಎಂದು ಗುರುತಿಸಲಾಗಿದೆ. ಈತನ ತಂದೆ ಸಂಜೆ ಸುಮಾರು 4 ಗಂಟೆಯ ವೇಳೆಗೆ ಜಮೀನಿಗೆ ಹೋಗಿದ್ದು, ಈ ವೇಳೆ ಬಾಲಕನು ತಂದೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾಗ ಸುಮಾರು 7-8 ಬೀದಿ ನಾಯಿಗಳ ಹಿಂಡೊಂದು ಮಗುವಿನ ಮೇಲೆ ದಾಳಿ ಮಾಡಿ ತಲೆಯನ್ನು ಸೀಳಿ ಎಳೆದಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದರಿಂದ

ಬೀದಿನಾಯಿಗಳ ದಾಳಿಗೆ ತುತ್ತಾಗಿ ನಾಲ್ಕೂವರೆ ವರ್ಷದ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಎಟಿಎಂ ಹಣ ಸಾಗಟದ ವಾಹನ ಡಿಕ್ಕಿ ರಿಕ್ಷಾ ಚಾಲಕ ಸಾವು!

ಉಪ್ಪಿನಂಗಡಿ:  ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಅಟೋ ರಿಕ್ಷಾಕ್ಕೆ ಎಟಿಎಂ ಹಣ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ವಾಸು ಪೂಜಾರಿ(52) ಸಾವನಪ್ಪಿರುವ ಘಟನೆ  ನ.29 ರಂದು ನಡೆದಿದೆ.

ಉಪ್ಪಿನಂಗಡಿ: ಎಟಿಎಂ ಹಣ ಸಾಗಟದ ವಾಹನ ಡಿಕ್ಕಿ ರಿಕ್ಷಾ ಚಾಲಕ ಸಾವು! Read More »

ಕ್ರೈಮ್ ನ್ಯೂಸ್

ಹಾಸನ: ಜಿಂಕೆ ಬೇಟೆ ರೆಸಾರ್ಟ್ ಮಾಲಿಕ ಅಂದರ್

ಹಾಸನ: ಜಿಂಕೆಯನ್ನು ಬೇಟೆಯಾಡಿದ್ದ ರೆಸಾರ್ಟ್ ಮಾಲಿಕ ಶಿಶಿರ್ ಎಂಬಾತನನ್ನು ಅರಣ್ಯ ಸಿಬ್ಬಂದಿಗಳು ಬಂಧಿಸಿರುವ ಘಟನೆ ಸಕಲೇಶಪುರದ ಅಚ್ಚನಹಳ್ಳಿಯಲ್ಲಿ ರೆಸಾರ್ಟ್ ನಲ್ಲಿ ನಡೆದಿದೆ. ರೆಸಾರ್ಟ್ ಮಾಲಿಕ ಶಿಶಿರ್ ಜಿಂಕೆಯನ್ನು ಬೇಟೆಯಾಡಿದ್ದರು. ಶಿಶಿರ್ ಗೆ ಜಿಂಕೆ ಬೇಟೆಯ ವೇಳೆ ಸಾಥ್ ನೀಡಿದ್ದ ಅವಿನಾಶ್, ಜೀವನ್, ಕೀರ್ತನ್ ಎಂಬ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಜಿಂಕೆ ಮಾಂಸ ರೆಸಾರ್ಟ್ ನಲ್ಲಿರಬೇಕಾದರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.  

ಹಾಸನ: ಜಿಂಕೆ ಬೇಟೆ ರೆಸಾರ್ಟ್ ಮಾಲಿಕ ಅಂದರ್ Read More »

ಕ್ರೈಮ್ ನ್ಯೂಸ್

ಕಡಿಮೆ ಬೆಲೆಗೆ ಐಫೋನ್, ಲ್ಯಾಪ್ ಟಾಪ್ ಕೊಡಿಸುವುದಾಗಿ ನಂಬಿಸಿ ಹಣ ದೋಚುತಿದ್ದ ಖತರ್ನಾಕ್ ದಂಪತಿ

ಬೆಂಗಳೂರು: ದೇವನಹಳ್ಳಿ ಏರ್ಪೋರ್ಟ್​ನಲ್ಲಿ​ಕೆಲಸ ಕೊಡಿಸುವುದಾಗಿ ಹಾಗೂ  ಕಡಿಮೆ ಬೆಲೆಗೆ ಚಿನ್ನ, ಐಫೋನ್​, ಲ್ಯಾಪ್​ ಟಾಪ್​ಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪೀಕುತ್ತಿದ್ದ ಖತರ್ನಾಕ್ ದಂಪತಿಯನ್ನು ಪೋಲಿಸರು ಬಂಧಿಸಿದ್ದಾರೆ. ಮೋಹನ್​ ದಾಸ್​, ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಬಂಧಿತ ದಂಪತಿ.  ಈ ದಂಪತಿ ಕಡಿಮೆ ಬೆಲೆಗೆ ಚಿನ್ನ, ಐಫೋನ್​, ಲ್ಯಾಪ್​ ಟಾಪ್​ಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ದೋಚಿಕೊಂಡು ಹೋಗಿದ್ದು, ಈಗ ಪೋಲಿಸರ ಅತಿಥಿಯಾಗಿದ್ದಾರೆ.    

ಕಡಿಮೆ ಬೆಲೆಗೆ ಐಫೋನ್, ಲ್ಯಾಪ್ ಟಾಪ್ ಕೊಡಿಸುವುದಾಗಿ ನಂಬಿಸಿ ಹಣ ದೋಚುತಿದ್ದ ಖತರ್ನಾಕ್ ದಂಪತಿ Read More »

ಕ್ರೈಮ್ ನ್ಯೂಸ್

ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು

ಹುಬ್ಬಳ್ಳಿ: ಪಿಟ್​​ಬುಲ್ ಜಾತಿಯ ಸಾಕು ಶ್ವಾನ ಒಂದು  ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ  ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿ‌ಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ. ಪವನ್ ಅನಿಲ್‌ ದೊಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್​ಗೆ ಹೋಗುತ್ತಿದ್ದ ವೇಳೆ ನಾಯಿ ದಿಢೀರ್ ಅಟ್ಯಾಕ್ ಮಾಡಿದೆ. ಗುರುಸಿದ್ದಪ್ಪ‌ ಚನ್ನೋಜಿ ಎಂಬವರಿಗೆ ಸೇರಿದ ಪಿಟ್ ಬುಲ್ ಶ್ವಾನ ದಾಳಿ ಮಾಡಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು Read More »

ಕ್ರೈಮ್ ನ್ಯೂಸ್

ಬಿಳಿನೆಲೆ: ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ನ. 29. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಕಾಡಿಗೆ ತೆರಳಿ ವಿಷಪದಾರ್ಥ ಸೇವನೆ ಮಾಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬಿಳಿನೆಲೆ ಗ್ರಾಮದಿಂದ ವರದಿಯಾಗಿದೆ.   ಮೃತಪಟ್ಟವರನ್ನು ಬಿಳಿನೆಲೆ ಗ್ರಾಮದ ಕಾಳಪ್ಪಾಡಿ ನಿವಾಸಿ ತಿಲೇಶ್ ಯಾನೆ ತುಕಾರಾಂ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಪತ್ನಿಯೊಂದಿಗೆ ಸಣ್ಣ ಪುಟ್ಟ ಕಾರಣಕ್ಕೆ ಗಲಾಟೆ ಮಾಡಿ ಮನೆಯಿಂದ ಹೊರ ಹೋದವರು ಮರಳಿ ಮನೆಗೆ ಬಾರದೇ ಇದ್ದು, ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು ನೂರು ಮೀಟರ್ ದೂರದ

ಬಿಳಿನೆಲೆ: ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤‌ ಗೋಮಾಂಸ ಸಹಿತ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 28. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಗೋಮಾಂಸ ಹಾಗೂ ಬೈಕ್ ವಶಕ್ಕೆ ಪಡೆದ ಘಟನೆ ತಾಲೂಕಿನ ಪಾಂಡವರಕಲ್ಲು ಸಮೀಪದ ಕುದೂರು ಎಂಬಲ್ಲಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಈತನ ಜೊತೆಗೆ ಒಂದು ಲಕ್ಷ ರೂ. ಮೌಲ್ಯದ ಬೈಕ್ ಹಾಗೂ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ‌. ಆರೋಪಿಯು ತನ್ನ ಮನೆಯ ಹಿಂಬದಿಯ ಅಕ್ರಮ ಕಟ್ಟಡದಲ್ಲಿ ಗೋಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯನ್ನು

ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤‌ ಗೋಮಾಂಸ ಸಹಿತ ಆರೋಪಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಪತ್ನಿಯನ್ನೇ ಕೊಲೆಗೈದ ಪತಿ..! ➤‌ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 28. ಪತಿಯೇ ಪತ್ನಿಯನ್ನು ಕೊಲೆಗೈದ ಹೃದಯ ವಿದ್ರಾವಕ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ ಭಾನುವಾರದಂದು ನಡೆದಿದೆ. ಕೊಲೆಯಾದ ಮಹಿಳೆಯನ್ನು ಸರಿತಾ (35) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪತಿ ದುರ್ಗೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರದಂದು ರಾತ್ರಿ ಪತಿ -ಪತ್ನಿ ನಡುವೆ ಜಗಳವುಂಟಾಗಿದ್ದು, ಈ ಸಂದರ್ಭ ಪತ್ನಿ ಸರಿತಾಳ ಮೇಲೆ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಇದೆಲ್ಲವನ್ನು ಕಂಡ ದಂಪತಿಯ ಹನ್ನೊಂದು ವರ್ಷದ

ಮಂಗಳೂರು: ಪತ್ನಿಯನ್ನೇ ಕೊಲೆಗೈದ ಪತಿ..! ➤‌ ಆರೋಪಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಿತ್ರದುರ್ಗ: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೈನಡು ಗ್ರಾಮದ ಬಳಿ ನಡೆದಿದೆ. ಒಂದೇ ಬೈಕಿನಲ್ಲಿ ತೆರಳುತ್ತಿದ್ದ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಕೈನಡು ಗ್ರಾಮದ ನಿವಾಸಿಗಳಾದ ಉಜ್ಜೀರಪ್ಪ(38), ರವಿಕುಮಾರ್(29), ಗಿರೀಶ್(23) ಮೃತ ದುರ್ದೈವಿಗಳು. ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದ್ದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು Read More »

ಕ್ರೈಮ್ ನ್ಯೂಸ್
Scroll to Top