ಕ್ರೈಮ್ ನ್ಯೂಸ್

ಸುಳ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 03. ವೃದ್ದ ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭ ಅವರ ಕುತ್ತಿಗೆಯಿಂದ ಸರ ಕದ್ದೊಯ್ದು ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಲೀಂ ಪಿ.ಎ ಎಂದು ಗುರುತಿಸಲಾಗಿದೆ. ಈತ ನ. 28ರಂದು ಬೆಳಗ್ಗೆ ಜಾಲ್ಸೂರು ಗ್ರಾಮದ ಕಮಲ ಎಂಬವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿ,ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವುದಾಗಿ ಸುಳ್ಯ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಕುರಿತು ತನಿಖೆಗಾಗಿ ವಿಶೇಷ ತಂಡವನ್ನು […]

ಸುಳ್ಯ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ ➤ ಆರೋಪಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಗ್ನಿ ಅವಘಡ- 10 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ನಷ್ಟ

(ನ್ಯೂಸ್ ಕಡಬ) newskadaba.com ಹೈದರಾಬಾದ್‌, ಡಿ, 03. ಇಲ್ಲಿನ ಗಾಂಧಿನಗರದಲ್ಲಿರುವ ಅಸೆಂಬಲ್ ವಾಟರ್ ಫಿಲ್ಟರ್ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ವರದಿಯಾಗಿದೆ. ಈ ಅವಘಢ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದೆ ಎನ್ನಲಾಗಿದ್ದು, ಸುಮಾರು 10 ಲಕ್ಷ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ತಕ್ಷಣವೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿ ಅವಘಡ- 10 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ನಷ್ಟ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಸೂರು ಚಿರತೆ ದಾಳಿಗೆ ಯುವತಿ ಬಲಿ

ಮೈಸೂರು: ಚಿರತೆ ದಾಳಿಗೆ ಯುವತಿ ಬಲಿಯಾಗಿರೋ ಘಟನೆ ಎಸ್ ಕೆಬ್ಬೆಹುಂಡಿ ಗ್ರಾಮದಲ್ಲಿ ಡಿ.1 ರಂದು ನಡೆದಿದೆ. ಸಂಜೆಯ ಸಮಯ ಅಂಗಳದಲ್ಲಿ ಕುಳಿತ್ತಿದ್ದ ಮೇಘನಾ(20) ಮೇಲೆ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಯುವತಿಯ ಕುತ್ತಿಗೆ ಸಂಪೂರ್ಣ ರಕ್ತದ ಮಡುವಿನಲ್ಲಿದು,್ದ ತಕ್ಷಣ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಕೊನೆಯುಸಿರೆಳೆದಿದ್ದಾಳೆ.

ಮೈಸೂರು ಚಿರತೆ ದಾಳಿಗೆ ಯುವತಿ ಬಲಿ Read More »

ಕ್ರೈಮ್ ನ್ಯೂಸ್

ಪುತ್ತೂರು: ಕುಡಿದ ಮತ್ತಿನಲ್ಲಿ ತಮ್ಮನನ್ನು ಕೊಂದ ಅಣ್ಣ ➤ ಆರೋಪಿ ಪರಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 02. ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ.   ಕೊಲೆಗೀಡಾದವರನ್ನು ಹಾವೇರಿ ಜಿಲ್ಲೆಯ ಹೊಸೂರು ಮಾದೇವಪ್ಪ ಎಂದು ಗುರುತಿಸಲಾಗಿದೆ. ಅಣ್ಣ ನಿಂಗನ ಗೌಡ ಕೊಲೆ ಆರೋಪಿ. ಪುತ್ತೂರಿನ ಕೆಮ್ಮಿಂಜೆಯಲ್ಲಿ ಕಾರ್ಮಿಕ ಕೆಲಸ ಮಾಡುತ್ತಿದ್ದ ಸಹೋದರರಿಬ್ಬರು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜಗಳ ನಡೆಸಿದ್ದು, ಈ ವೇಳೆ ನಿಂಗನ ಗೌಡನು ತಮ್ಮ ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಮಾದೇವಪ್ಪ

ಪುತ್ತೂರು: ಕುಡಿದ ಮತ್ತಿನಲ್ಲಿ ತಮ್ಮನನ್ನು ಕೊಂದ ಅಣ್ಣ ➤ ಆರೋಪಿ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪಾರಿವಾಳ ಹಿಡಿಯಲು ಹೋಗಿ ಇಬ್ಬರು ಮಕ್ಕಳು ಗಂಭೀರ!

ಬೆಂಗಳೂರು ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ಹೈಟೆಕ್ಷನ್ ವೈಯರ್ ತಗುಲಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರು ನಗರದ ವಿಜಯನಂದ ನಗರದಲ್ಲಿ ಡಿ.1 ರಂದು ನಡೆದಿದೆ. ವಿದ್ಯುತ್ ಶಾಕ್​ ತಗುಲಿದ ಪರಿಣಾಮ 11 ವರ್ಷದ ಸುಪ್ರೀತ್ ಹಾಗೂ 10 ವರ್ಷದ ಚಂದನ್ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಮಕ್ಕಳಿಬ್ಬರು ವಿಕ್ಟೋರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರಿವಾಳ ಹಿಡಿಯಲು ಹೋಗಿ ಇಬ್ಬರು ಮಕ್ಕಳು ಗಂಭೀರ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮಕ್ಕಳ ಕಳ್ಳನೆಂದು ಶಂಕಿಸಿ ಅಪರಿಚಿತ ವ್ಯಕ್ತಿಗೆ ಸಾರ್ವಜನಿಕರಿಂದ ಗೂಸಾ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 02. ಮಕ್ಕಳನ್ನು ಕದಿಯುತ್ತಿದ್ದ ಶಂಕೆ ಹಿನ್ನಲೆ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ವೆನ್ಲಾಕ್ ಆಸ್ಪತ್ರೆ ಬಳಿ ತಾಯಿಯೊಂದಿಗೆ ನಿಂತಿದ್ದ ಮಗುವನ್ನು ವ್ಯಕ್ತಿಯೊಬ್ಬ ಎಳೆದಾಡುತ್ತಿದ್ದು, ತಾಯಿ ಕಿರುಚಾಡಿದ್ದನ್ನು ಕಂಡು ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿದ್ದಾರೆ. ಇನ್ನು ವ್ಯಕ್ತಿಯನ್ನು ಅಲ್ಲಿಯೇ ಹಿಡಿದು ವಿಚಾರಣೆ ನಡೆಸಿ, ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು: ಮಕ್ಕಳ ಕಳ್ಳನೆಂದು ಶಂಕಿಸಿ ಅಪರಿಚಿತ ವ್ಯಕ್ತಿಗೆ ಸಾರ್ವಜನಿಕರಿಂದ ಗೂಸಾ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೀನು ಖಾಲಿ ಮಾಡುತ್ತಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಮೀನುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಗಂಗೊಳ್ಳಿ, ಡಿ. 02. ಆಳ ಮೀನುಗಾರಿಕೆ ನಡೆಸಿ ಬಂದು ಮೀನು ಖಾಲಿ ಮಾಡುತ್ತಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಮೀನುಗಾರನೋರ್ವ ಮೃತಪಟ್ಟ ಘಟನೆ ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.   ಮೃತ ಮೀನುಗಾರನನ್ನು ಒರಿಸ್ಸಾ ಮೂಲದ ಪ್ರಮೋದ್ ಮಿನ್ಜ್ (32) ಎಂದು ಗುರುತಿಸಲಾಗಿದೆ. ಪ್ರಭಾಕರ ಖಾರ್ವಿ ಮಾಲಕತ್ವದ ಶ್ರೀ ಯಕ್ಷೇಶ್ವರಿ ಬೋಟ್‌ನಲ್ಲಿ ಆನಂದ ತರಕ್ಕಿ, ಪ್ರಮೋದ್ ಮಿನ್ನ, ಪ್ರಮೋದ್ ತೋಪು ಮೊದಲಾದವರು ಆಳ ಮೀನುಗಾರಿಕೆಗೆ ತೆರಳಿದ್ದರು. ಬಳಿಕ ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಬಂದರು

ಮೀನು ಖಾಲಿ ಮಾಡುತ್ತಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಮೀನುಗಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಿಜವಾದ ಆರೋಪಿಯ ಬದಲು ಅದೇ ಹೆಸರಿನ ಮತ್ತೋರ್ವನ ಬಂಧನ ➤ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 02. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಯನ್ನು ಬಂಧಿಸದೇ ಅದೇ ಹೆಸರಿನ ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿ ಸುಮಾರು ಒಂದು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸದ ಇಬ್ಬರು ಮಹಿಳಾ ಪೊಲೀಸರು ಸಂತ್ರಸ್ತರಿಗೆ ತಮ್ಮ ಜೇಬಿನಿಂದಲೇ 5 ಲಕ್ಷ ರೂ. ಪರಿಹಾರ ನೀಡುವಂತೆ ಮಂಗಳೂರು ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ಪೊಕ್ಸೋ ನ್ಯಾಯಾಲಯವು ಆದೇಶಿಸಿದೆ.   ಮಂಗಳೂರು ಮಹಿಳಾ ಪೊಲೀಸ್‌ ಠಾಣಾ ನಿರೀಕ್ಷಕಿ ರೇವತಿ ಮತ್ತು ಉಪನಿರೀಕ್ಷಕಿ ರೋಸಮ್ಮ ಪಿ.ಪಿ. ದಂಡ ವಿಧಿಸಲ್ಪಟ್ಟ ಪೊಲೀಸ್

ನಿಜವಾದ ಆರೋಪಿಯ ಬದಲು ಅದೇ ಹೆಸರಿನ ಮತ್ತೋರ್ವನ ಬಂಧನ ➤ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಮದ್ಯ ಸೇವಿಸಿ ಜೀಪು ಚಲಾಯಿಸಿದ ಚಾಲಕ ➤ ವಾಹನಗಳು ಜಖಂ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 02. ಕುಡಿದು ಜೀಪು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿಗೆ ಡಿಕ್ಕಿಯಾಗಿ ವಾಹನಗಳು ಜಖಂಗೊಂಡ ಘಟನೆ ಅಂಬಟೆಡ್ಕ ಬಳಿ ನಡೆದಿದೆ.   ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪೊಂದು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ನಂತರ ಅಲ್ಲಿಂದ ಅಂಬಟಡ್ಕದ ಹೊಟೇಲೊಂದರ ಎದುರು ನಿಲ್ಲಿಸಲಾಗಿದ್ದ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜೀಪು ಚಾಲಕ ವಿಪರೀತ ಕುಡಿದು

ಸುಳ್ಯ: ಮದ್ಯ ಸೇವಿಸಿ ಜೀಪು ಚಲಾಯಿಸಿದ ಚಾಲಕ ➤ ವಾಹನಗಳು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಏಜೆಂಟ್ ಹಾಗೂ ಬಸ್ ಚಾಲಕನ ನಡುವೆ ಹೊಡೆದಾಟ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 02. ಸಮಯದ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಬಸ್ ನ ಏಜೆಂಟ್ ಹಾಗೂ ಬಸ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ ನಡೆದ ಘಟನೆ ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ.   ಖಾಸಗಿ ಬಸ್ ನ ಎಜೆಂಟ್ ಜಯ ಕೊಟ್ಟಾರಿ ಮತ್ತು ಬಸ್ ಚಾಲಕ ಅಬ್ಬಾಸ್ ಎಂಬವರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ವಾಗ್ವಾದ ನಡೆದಿದ್ದು, ಬಳಿಕ ಅದು ತಾರಕಕ್ಕೇರಿ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ

ಕ್ಷುಲ್ಲಕ ಕಾರಣಕ್ಕೆ ಏಜೆಂಟ್ ಹಾಗೂ ಬಸ್ ಚಾಲಕನ ನಡುವೆ ಹೊಡೆದಾಟ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top