ಕ್ರೈಮ್ ನ್ಯೂಸ್

ಅಂಗಡಿಯೊಂದಕ್ಕೆ ತಗುಲಿದ ಬೆಂಕಿ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜ.10.  ಪೇಂಟ್ಸ್ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಡಿಕೇರಿಯ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯ ಬಳಿ ಮಂಗಳವಾರದಂದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕಪಡೆಯ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಲು ಯತ್ನಿಸಿದಾಗ ನೀರು ಖಾಲಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಧಗಧಗಿಸುತ್ತಿತ್ತು, ಸದ್ಯ ಗ್ರಾಮ ಪಂಚಾಯಿತಿ ನೀರಿನ ವ್ಯವಸ್ಥೆ ಮಾಡಿದೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹರಡುವ ಭೀತಿ ಮೂಡಿದೆ ಎನ್ನಲಾಗಿದೆ.

ಅಂಗಡಿಯೊಂದಕ್ಕೆ ತಗುಲಿದ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಸಿಯೂದಲ್ಲಿ ಹಾವು; ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ…!!

(ನ್ಯೂಸ್ ಕಡಬ) newskadaba.com ಕೋಲ್ಕತ್ತ, ಜ. 10.  ಹಾವು ಬಿದ್ದ ಬಿಸಿಯೂಟ ಸೇವಿಸಿ 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಕೋಲ್ಕತ್ತದ ಬಿರ್ಭೂಮ್ ಜಿಲ್ಲೆಯ ಮಯೂರೇಶ್ವರ ಬ್ಲಾಕ್ ನ ಪ್ರಾಥಮಿಕ ಶಾಲೆಯಲ್ಲಿ ವರದಿಯಾಗಿದೆ. ಬೇಳೆ ತುಂಬಿದ್ದ ಕಂಟೈನರ್ ವೊಂದರಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಬಿಸಿಯೂಟ ತಯಾರಿಸಿದ್ದ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ. ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರಿಂದ ಮಕ್ಕಳನ್ನು ತಕ್ಷಣವೇ ರಾಂಪುರ್ ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ

ಬಿಸಿಯೂದಲ್ಲಿ ಹಾವು; ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ…!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ➤ ಕರಾವಳಿ ಪೊಲೀಸ್ ಠಾಣೆಯ ವಾಹನ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 09. ರೈಲು ಢಿಕ್ಕಿ ಹೊಡೆದ ಪರಿಣಾಮ ಕರಾವಳಿ ಪೊಲೀಸ್ ಠಾಣೆಯ ವಾಹನ ಚಾಲಕನೋರ್ವ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಮೃತರನ್ನು ಕುಂಬಳೆ ಕರಾವಳಿ ಪೊಲೀಸ್ ಠಾಣೆಯ ವಾಹನ ಚಾಲಕ ಉಣ್ಣಿ ಕೃಷ್ಣನ್(28) ಎಂದು ಗುರುತಿಸಲಾಗಿದೆ. ಇವರು ಉಪ್ಪಳ ರೈಲು ನಿಲ್ದಾಣದಲ್ಲಿ ಇಳಿದು ಮುಸೋಡಿಯಲ್ಲಿರುವ ಕರಾವಳಿ ಪೊಲೀಸ್ ಠಾಣೆಗೆ ರೈಲು ಹಳಿಯ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು

ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ➤ ಕರಾವಳಿ ಪೊಲೀಸ್ ಠಾಣೆಯ ವಾಹನ ಚಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ದಾವುದ್ ಇಬ್ರಾಹಿಂ ಗೆ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ➤ ಮೂವರು ಉದ್ಯಮಿಗಳಿಗೆ 10 ವರ್ಷ ಜೈಲು!

ನ್ಯೂಸ್ ಕಡಬ) newskadaba.com, ಮುಂಬೈ ಜ. 9.  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಸಹಚರರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ನೀಡಿದ ಪ್ರಕರಣದಲ್ಲಿ ಉದ್ಯಮಿ ಜೆ.ಎಂ. ಜೋಶಿ ಮತ್ತು ಇಬ್ಬರಿಗೆ ಇಲ್ಲಿನ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜೋಶಿ,ಅನ್ಸಾರಿ, ಜಮೀರುದ್ದೀನ್ ಮತ್ತು ಫಾರುಖ್ ಮನ್ಸೂರಿ ಅವರನ್ನು ಅರೋಪಿಗಳು ಎಂದು ಪರಿಗಣಿಸಿದೆ. ಅರೋಪಿಗಳಿಗೆ ಹಣಕಾಸು ವಿಚಾರದಲ್ಲಿ ಈ

➤ ದಾವುದ್ ಇಬ್ರಾಹಿಂ ಗೆ ಗುಟ್ಕಾ ಉತ್ಪಾದಕ ಘಟಕ ಸ್ಥಾಪಿಸಲು ನೆರವು ➤ ಮೂವರು ಉದ್ಯಮಿಗಳಿಗೆ 10 ವರ್ಷ ಜೈಲು! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ ➤ ಮೂವರು ಮೃತ್ಯು..!!

(ನ್ಯೂಸ್ ಕಡಬ) newskadaba.com ತೆಲಂಗಾಣ, ಜ.09.  ಗುಮ್ಮಡಿಲ ಕೈಗಾರಿಕಾ ಪ್ರದೇಶದ ಮೈಲನ್ ಕೆಮಿಕಲ್ ಇಂಡಸ್ಟ್ರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ತೆಲಂಗಾಣದಲ್ಲಿ ಎಂದು ವರದಿ ತಿಳಿಸಿದೆ. ಮೃತರನ್ನು ಪಶ್ಚಿಮ ಬಂಗಾಳದ ಪರಿತೋಷ್ ಮೆಹ್ತಾ (46), ಬಿಹಾರದ ರಂಜಿತ್ ಕುಮಾರ್ (27) ಮತ್ತು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸಹಾಯಕ ವ್ಯವಸ್ಥಾಪಕ ಲೋಕೇಶ್ವರ್ ರಾವ್ (38) ಎಂದು ಗುರುತಿಸಲಾಗಿದೆ. ಘಟಕದಲ್ಲಿದ್ದ ಇತರ ಕಾರ್ಮಿಕರು ಬೆಂಕಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ

ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ ➤ ಮೂವರು ಮೃತ್ಯು..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್‌ಗೆ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಢಿಕ್ಕಿ ➤ ಇಬ್ಬರು ಮೃತ್ಯು..!!

(ನ್ಯೂಸ್ ಕಡಬ) newskadaba.com ಚೆನ್ನೈ, ಜ.09. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಕರ್ನಾಟಕ ಗಡಿಭಾಗದ ಕೃಷ್ಣಗಿರಿಯಲ್ಲಿ ಈ ಘಟನೆ ವರದಿಯಾಗಿದೆ. ದ್ವಿಚಕ್ರ ವಾಹನಕ್ಕೆ ಗುದ್ದಿದ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ತಗುಲಿದ್ದು, ಬಸ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿರುವಿನಲ್ಲಿ ಬೈಕ್ ಚಲಿಸುತ್ತಿದ್ದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎಂದು ಮೂಲಗಳು ಐಎಎನ್‌ಎಸ್‌ಗೆ

ಬೈಕ್‌ಗೆ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಢಿಕ್ಕಿ ➤ ಇಬ್ಬರು ಮೃತ್ಯು..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೊಂದು ತಿರುವು ➤  ಶ್ರೀಜಾನ್‌ ಡ್ರಗ್ಸ್‌ ವ್ಯಸನಿಯೆಂದು ಆರೋಪಿಸಿದ ತುನಿಷಾ ತಾಯಿ

(ನ್ಯೂಸ್ ಕಡಬ)newskadaba.com ನವದೆಹಲಿ, ಜ. 09. ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಚಿತ್ರೀಕರಣ ಮಾಡುತ್ತಿದ್ದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀಜಾನ್ ಕುಟುಂಬ ಪ್ರೆಸ್‌ಮೀಟ್‌ ಹಮ್ಮಿಕೊಳ್ಳು ಮೂಲಕ ತುನಿಷಾ ಸಾವಿನ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು. ಆದರೆ ಅವರ ಹೇಳಿಕೆಗಳಲ್ಲಿ ಹಲವಾರು ಆರೋಪಗಳು ವೈರಲ್ ಅಗುತ್ತಿದೆ. ಕೆಲವೊಂದು ಸತ್ಯ ಕೆಲವೊಂದು ಸುಳ್ಳುಗಳ ಬಗ್ಗೆ ತುನಿಷಾ ತಾಯಿ ವನಿತಾ ಶರ್ಮಾ ಹೇಳಿಕೊಂಡಿದ್ದಾರೆ. ನನ್ನ ಪ್ರಕಾರ ಶ್ರೀಜಾನ್ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದ

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೊಂದು ತಿರುವು ➤  ಶ್ರೀಜಾನ್‌ ಡ್ರಗ್ಸ್‌ ವ್ಯಸನಿಯೆಂದು ಆರೋಪಿಸಿದ ತುನಿಷಾ ತಾಯಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈಲಿಗೆ ಸಿಲುಕಿ ಮೂವರ ಮೃತದೇಹಗಳು ಛಿದ್ರಛಿದ್ರ..!!!

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ , ಜ.09.  ರೈಲ್ವೆ ಹಳಿ ಮೇಲೆ ಮೂವರ ಮೃತದೇಹಗಳು ಛಿದ್ರಛಿದ್ರ ವಾಗಿ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ವರದಿಯಾಗಿದೆ. ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇಲ್ಲವೇ ಯಾರೋ ಕೊಲೆ ಮಾಡಿ ಶವಗಳನ್ನು ರೈಲ್ವೆ ಹಳಿ ಮೇಲೆ ಎಸೆದಿರಬಹುವುದು ಎಂದು ಶಂಕೆ ವ್ಯಕ್ತವಾಗಿದೆ. ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರು ಗುರುತು ಸಿಗದಷ್ಟು ಮೃತದೇಹಗಳು ಛಿದ್ರವಾಗಿದೆ ಎಂದು ತಿಳಿದುಬಂದಿದೆ. ಸುದ್ದಿ

ರೈಲಿಗೆ ಸಿಲುಕಿ ಮೂವರ ಮೃತದೇಹಗಳು ಛಿದ್ರಛಿದ್ರ..!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಲ್ಪೆಯ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ..!!!

(ನ್ಯೂಸ್ ಕಡಬ) newskadaba.com ಉಡುಪಿ, ಜ.09.  ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯ ಕಾರ್ತಿಕ್ ಲಾಡ್ಜ್ ನಲ್ಲಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಮುಂಬೈ ನಿವಾಸಿ ರಘುರಾಮ್ ಎಂದು ಗುರುತಿಸಲಾಗಿದೆ. ರಾತ್ರಿ ರೂಮ್ ಸೇರಿದವರು ಮತ್ತೆ ಹೊರಬಾರದ ಹಿನ್ನೆಲೆಯಲ್ಲಿ  ಹೋಟೆಲ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.

ಮಲ್ಪೆಯ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ..!!! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲಿನ ಗುಂಡಿನ ದಾಳಿ ಪ್ರಕರಣ ➤  ಮೂವರು ಅರೆಸ್ಟ್..!

(ನ್ಯೂಸ್ ಕಡಬ)newskadaba.com  ಬೆಳಗಾವಿ, ಜ.09. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ಅಭಿಜಿತ್ ಭಾತ್ಕಂಡೆ, ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾಮ್​ ಎಂದು ಗುರುತಿಸಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಬಂಧನವನ್ನು ಖಚಿತಪಡಿಸಿದ್ದಾರೆಂದು ವರದಿ ತಿಳಿಸಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿ ಕಳೆದ ರಾತ್ರಿ ಬೈಕ್ ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.ದಾಳಿಯಲ್ಲಿ ರವಿ ಹಾಗೂ ಕಾರು ಚಾಲಕ ಮನೋಜ್ ದೇಸೂರಕರ್

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲಿನ ಗುಂಡಿನ ದಾಳಿ ಪ್ರಕರಣ ➤  ಮೂವರು ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top