ಸಾಹಿತ್ಯ ಸಮ್ಮೇಳನಕ್ಕೆಂದು ಬಂದಿದ್ದ ಶಿಕ್ಷಕ ಹೃದಯಾಘಾತದಿಂದಾಗಿ ಮೃತ್ಯು

 (ನ್ಯೂಸ್ ಕಡಬ) newskadaba.com ಹಾವೇರಿ, ಜ.07.   86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಬಂದ ಶಿಕ್ಷಕ ಹೃದಯಾಘಾತದಿಂದಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಯಲ್ಲಿ ವರದಿಯಾಗಿದೆ.

ಮೃತ ಶಿಕ್ಷಕನನ್ನು ಸಂಗನಗೌಡರ (34) ಎಂದು ಗುರುತಿಸಲಾಗಿದೆ.

ಹಾವೇರಿಯ ಅಶ್ವಿನಿ ನಗರದ ಗೆಳಯರ ಬಳಗ ಶಾಲೆಯಲ್ಲಿ ಶಿಕ್ಷಕ  ಸಂಗನಗೌಡರ ವಾಸ್ತವ್ಯ ಹೂಡಿದ್ದರು, ಹೃದಯಾಘಾತವಾದ  ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಅದ್ರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಶಿಕ್ಷಕ ಸಂಗನಗೌಡರವರು ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆಯ ಮತ್ತಿಕೇರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

Scroll to Top