ಕ್ರೈಮ್ ನ್ಯೂಸ್

ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ..!   

(ನ್ಯೂಸ್ ಕಡಬ) newskadaba.com  ಬಾಗಲಕೋಟೆ, ಜ.12. ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಮ್ಮಾಪುರ ಗ್ರಾಮದಲ್ಲಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರೇಖಾ(28) ಮಕ್ಕಳಾದ ಸನ್ನಿಧಿ (7), ಸಮೃದ್ಧಿ (5), ಶ್ರೀನಿಧಿ (2)ಗೆ ವಿಷವುಣಿಸಿ ತಾವು ಕೂಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ‌. ಘಟನೆಯಲ್ಲಿ ನಾಲ್ವರು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರೇಖಾ ಮಾನಸಿಕ ಸಮಸ್ಯೆ ಕೂಡ ಹೊಂದಿದ್ದು, ಈ‌ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ […]

ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ..!    Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 62 ಮಕ್ಕಳು ನಾಪತ್ತೆ..!

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.11. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಐದು ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಮಕ್ಕಳ ಕಲ್ಯಾಣ ಸಮಿತಿಯ ಮಾಹಿತಿಯ ಪ್ರಕಾರ 2022ರಲ್ಲಿ 33 ಹುಡುಗಿಯರು ಸೇರಿದಂತೆ ಒಟ್ಟು 62 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 60 ಮಂದಿಯನ್ನು ಪೊಲೀಸರು ಗುರುತಿಸಿದ್ದು, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗಿದೆ.   ಬಾಲಾಪರಾಧಿ ನ್ಯಾಯ ಮಂಡಳಿ ಮತ್ತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 62 ಮಕ್ಕಳು ನಾಪತ್ತೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೈ-ಕಾಲು ಕಟ್ಟಿ ಹಾಕಿ ದರೋಡೆ ➤ 6 ಮಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಮನೆಯಲ್ಲಿ ಒಂಟಿಯಾಗಿದ್ದ ವೈದ್ಯೆಯ ತಾಯಿಯ ಕೈ-ಕಾಲು ಕಟ್ಟಿ ದರೋಡೆ ಮಾಡಿರುವ ಪ್ರಕರಣವನ್ನು ಭೇದಿಸಿರುವ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು, ತಂದೆ-ಮಗ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತರನ್ನು ಒಡಿಸ್ಸಾ ಮೂಲದ ಜ್ಞಾನರಂಜನ್‌ ನಾಥ್‌ ಅಲಿಯಾಸ್‌ ಬಾಪಿ(36), ಶ್ರೀಕಾಂತ್‌ ದಾಶ್‌(40), ಸುಭಾಷ್‌ ಬಿಸ್ವಾಲ್‌(41), ಬಿಷ್ಣು ಮೋಹನ್‌ ಖಟುವಾ(35), ಬಿಷ್ಣು ಚರಣ್‌ ಬೆಹೆರಾ(61) ಹಾಗೂ ಸುದಾಂಶು ಬೆಹೆರಾ(21) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 3.50 ಲಕ್ಷ

ಕೈ-ಕಾಲು ಕಟ್ಟಿ ಹಾಕಿ ದರೋಡೆ ➤ 6 ಮಂದಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಗಂಡ-ಹೆಂಡತಿಯಿಂದ ಲಕ್ಷಾಂತರ ರೂಪಾಯಿ ವಂಚನೆ..!!

(ನ್ಯೂಸ್ ಕಡಬ)newskadaba.com  ಬೀದರ್, ಜ.11. ಬೀದರ್ ಮೂಲದ ಸಂಜಯ್ ಶಂಭು ಕೊಲ್ಹಾರ್ ಹಾಗೂ ಪ್ರೇರಣಾ ದಂಪತಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 38 ಲಕ್ಷದ 76 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡು ವಂಚನೆ ಮಾಡಿದ್ದಾರೆ ಘಟನೆ ಬೆಳಕಿಗೆ ಬಂದಿದೆ. ಲಿಂಗಸೂಗೂರು ಪಟ್ಟಣದ ನಿವಾಸಿಯಾಗಿರುವ ಸರಳಾಕ್ಷ ಎನ್ನುವವರಿಗೆ ಸಂಬಂಧಿಕರೆಂದು ಸಂಜಯ್ ಶಂಭು ಕೊಲ್ಹಾರ್ ಹಾಗೂ ಪ್ರೇರಣಾ ದಂಪತಿ ಪರಿಚಯವಾಗಿದೆ. ಸರಳಾಕ್ಷ ಎನ್ನುವವರ ಪತ್ನಿಗೆ ಪ್ರೇರಣಾ ದೂರು ಸಂಬಂಧಿಯಾಗಿದ್ದರು. ಪ್ರೇರಣಾ ಮೂಲಕ ಆತನ ಪತಿ ಸಂಜಯ್ ಶಂಭು ಪರಿಚಯವಾಗಿ

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಗಂಡ-ಹೆಂಡತಿಯಿಂದ ಲಕ್ಷಾಂತರ ರೂಪಾಯಿ ವಂಚನೆ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ಮರಳು ಸಾಗಾಣಿಕೆ ➤ ಟ್ರ್ಯಾಕ್ಟರ್ ವಶಕ್ಕೆ..!!

(ನ್ಯೂಸ್ ಕಡಬ) newskadaba.com ಸಿರುಗುಪ್ಪ, ಜ.11.  ಅಕ್ರಮವಾಗಿ ಮರಳುನ್ನು ಸಾಗಿಸುತಿದ್ದ ಟ್ರ್ಯಾಕ್ಟರ್ ವಾಹನವೊಂದನ್ನು ಅಧಿಕಾರಿಗಳು ವಶಪಡಿಸಿಕೊಂಡರುವ ಘಟನೆ ಸಿರುಗುಪ್ಪಬಳಿ ವರದಿಯಾಗಿದೆ. ವ್ಯವಹಾರಕ್ಕಾಗಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆಯಲ್ಲಿ ತೊಡಗಿವೆ ಎಂಬ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಟ್ರ್ಯಾಕ್ಟರ್ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಮರಳು ಸಾಗಾಣಿಕೆ ➤ ಟ್ರ್ಯಾಕ್ಟರ್ ವಶಕ್ಕೆ..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಫೀ ಉಲ್ಲಾ ಅರೆಸ್ಟ್..!!

(ನ್ಯೂಸ್ ಕಡಬ) newskadaba.com ಕೋಲಾರ, ಜ.11.   ಕಾಮುಕನೊಬ್ಬ ಕರುವಿನ ಮೇಲೆ ಕೀಚಕತನ ಮೆರೆದಿರುವ ವಿಲಕ್ಷಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿಯನ್ನು ಶಫೀ ಉಲ್ಲಾ ಎಂದು ಗುರುತಿಸಲಾಗಿದೆ. ರಾಮರೆಡ್ಡಿ ಎಂಬುವವರಿಗೆ ಸೇರಿದ ಕರುವಿನ  ಮೇಲೆ ಶಫೀ ಉಲ್ಲಾ ಎನ್ನುವ ಕಾಮುಕ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.  ಈ ಹಿಂದೆ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದ ಶಫೀ ಉಲ್ಲಾ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಆ ವೇಳೆ ಗ್ರಾಮಸ್ಥರೇ ಬೈದು ಬುದ್ಧಿ

ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಫೀ ಉಲ್ಲಾ ಅರೆಸ್ಟ್..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ನಿಂದ ಆಯತಪ್ಪಿ ಬಸ್ ಕೆಳಗೆ ಬಿದ್ದು ವಿದ್ಯಾರ್ಥಿ ಮೃತ್ಯು..!!!

(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ.11.  ಬಿಪಿಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೈಕ್ ನಿಂದ ಆಯತಪ್ಪಿ ಅದೇ ಕಾಲೇಜಿನ ಬಸ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಹನುಮಾನ್ ನಗರದ ಪ್ರಶಾಂತ್ (18) ಎಂದು ಗುರುತಿಸಲಾಗಿದೆ. ಕಾಲೇಜ್ ಮುಗಿದ ನಂತರ ಆತ ಬೈಕ್ ತೆಗೆದುಕೊಂಡು ಹೊರಟಿದ್ದ. ಅನಂತಪುರಂ ರಸ್ತೆಯ ಶಾಂತಿನಿಕೇತನ ಶಾಲೆಯ ಬಳಿ ಹೋಗುವಾಗ ಆಯತಪ್ಪಿ ಬೈಕ್ ನಿಂದ ಬಸ್ ಕೆಳಗೆ ಬಿದ್ದಿದ್ದಾನೆ. ಬಸ್ ಆತನ ತಲೆಯ ಮೇಲೆ ಹರಿದಿದೆ

ಬೈಕ್ ನಿಂದ ಆಯತಪ್ಪಿ ಬಸ್ ಕೆಳಗೆ ಬಿದ್ದು ವಿದ್ಯಾರ್ಥಿ ಮೃತ್ಯು..!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ..!

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.11. ಮಂಗಳೂರಿನ ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಸಂಘಟನೆ ಮುತ್ತಿಗೆ ಹಾಕಿದ್ದು, ರಿಕ್ರಿಯೇಶನ್ ಕ್ಲಬ್‌ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಜೂಜು ಕೇಂದ್ರಗಳಿಗೆ ಮುತ್ತಿಗೆ ಹಾಕಿ ಬೀಗ ಜಡಿದಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ದಿನೇ ದಿನೇ ಸ್ಕಿಲ್ ಗೇಮ್, ವಿಡಿಯೋ ಗೇಮ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ ಕ್ಲಬ್‌ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿಪಡೆಯುತ್ತಿದೆ. ನಗರದ ಸಣ್ಣ

ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೊಪ್ಪಳ ಶಾಸಕ ದಢೇಸೂಗೂರವರ ಕಾರು ಢಿಕ್ಕಿ ➤ ವೃದ್ಧೆ ಮೃತ್ಯು..!!!

(ನ್ಯೂಸ್ ಕಡಬ) newskadaba.com ಧಾರವಾಡ, ಜ.11.  ಶಾಸಕ ಬಸವರಾಜ ದಢೇಸೂಗೂರು ಅವರಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರದಂದು ಧಾರವಾಡ ಜಿಲ್ಲೆಯ ಮೈಲಾಪುರ ಕ್ರಾಸ್‌ ಬಳಿ ನವರದಿಯಾಗಿದೆ. ಮೃತರನ್ನು ಮರಿಯಮ್ಮ ನಾಯಕ(70) ಎಂದು ಗುರುತಿಸಲಾಗಿದೆ. ಮೈಲಾಪುರ ಕ್ರಾಸ್‌ ಬಳಿಯ ಬಸ್‌ ನಿಲ್ದಾಣದಿಂದ ರಸ್ತೆ ದಾಟುತ್ತಿದ್ದಾಗ ಶಾಸಕರಿದ್ದ ಕಾರು ದಿಢೀರ್‌ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ವೃದ್ಧೆಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಶಾಸಕರು ತಕ್ಷಣ ಮರಿಯಮ್ಮರನ್ನು

ಕೊಪ್ಪಳ ಶಾಸಕ ದಢೇಸೂಗೂರವರ ಕಾರು ಢಿಕ್ಕಿ ➤ ವೃದ್ಧೆ ಮೃತ್ಯು..!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವೇಶ್ಯಾವಾಟಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ  ➤ ಐಷಾರಾಮಿ ಜೀವನಕ್ಕಾಗಿ ವೃತ್ತಿ ಆಯ್ಕೆ..!

(ನ್ಯೂಸ್ ಕಡಬ)newskadaba.com  ಹೈದರಾಬಾದ್, ಜ.11. ದೇಶದಲ್ಲಿ ಐಟಿ-ಬಿಟಿ, ಸ್ಟಾರ್ಟ್‌ ಅಪ್‌, ಶ್ರೀಮಂತಿಕೆ, ಉದ್ಯಮಗಳ ಬೆಳವಣಿಗೆ, ಜಿಎಸ್‌ಟಿ ಪಾವತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ವೇಶ್ಯಾವಾಟಿಕೆಯಲ್ಲಿಯೂ ಮುಂಚೂಣಿಯಲ್ಲಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಆಧುನಿಕ ಸಮಾಜ ಬೆಳೆದಂತೆ ಅಪರಾಧ ಕೃತ್ಯ, ವೇಶ್ಯಾವಾಟಿಕೆ ಮತ್ತು ಮೋಸದ ಪ್ರಕರಣಗಳೂ ಹೆಚ್ಚಾಗುತ್ತಿವೆ. ದೇಶದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಸಂಸ್ಥೆಗಳು, ಈಗ ವೇಶ್ಯಾವಾಟಿಕೆ ನಡೆಯುವ ಬಗ್ಗೆಯೂ ಸಮೀಕ್ಷೆಯನ್ನು ಮಾಡಿ ಬಹರಂಗಪಡಿಸಿವೆ. ಈ ವೇಳೆ ವೇಶ್ಯಾವಾಟಿಕೆ ನಡೆದ ಘಟನೆಗಳು, ಪೊಲೀಸರು ದಾಳಿ

ವೇಶ್ಯಾವಾಟಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ  ➤ ಐಷಾರಾಮಿ ಜೀವನಕ್ಕಾಗಿ ವೃತ್ತಿ ಆಯ್ಕೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top