ಪೂಜಾ ಸಾಮಗ್ರಿ ಗೋದಾಮಿಗೆ ತಗುಲಿದ ಬೆಂಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.09.   ಪೂಜಾ ಸಾಮಗ್ರಿ ಗೋದಾಮಿ​​ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಂಗಳೂರಿನ ಬಸವನಗುಡಿಯ ಡಿವಿಜಿ ರಸ್ತೆ ಬಳಿ ವರದಿಯಾಗಿದೆ.

ಪೂಜಾ ಸಾಮಾಗ್ರಿಗಳಿದ್ದ ಸತೀಶ್ ಸ್ಟೋರ್‌ ಎಂಬ ಗೋದಾಮಿ​ಗೆ ದಿಢೀರ್​ ಬೆಂಕಿ ತಗುಲಿದೆ ಎನ್ನಲಾಗಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಗೋದಾಮಿನಲ್ಲಿ ಕರ್ಪೂರ, ಊದಿನ ಕಡ್ಡಿ , ದೀಪದ ಎಣ್ಣೆ ಇದ್ದವು, ಇದರಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ ಎನ್ನಲಾಗಿದೆ.

ಗೋದಾಮಿನಲ್ಲಿ ಬೆಂಕಿ​ ಹೊತ್ತಿ ಉರಿಯುವುದಕ್ಕೆ ಆರಂಭವಾಗುತ್ತಿದ್ದಂತೆಯೇ ಅಕ್ಕಪಕ್ಕದ ಮೆನೆಯವರೆಲ್ಲಾ ಗಾಬರಿಯಾಗಿ ಹೊರ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಯುತ್ತಿದ್ದಂತೆ ಮೂರು ಅಗ್ನಿ ಶಾಮಕ‌ ವಾಹನಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ವು. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನ ನಂದಿಸೋಕೆ ಸಿಬ್ಬಂದಿ ಹರಸಾಹಸ ಪಟ್ಟರು. ಒಂದು‌ ಗಂಟೆಗಳ ಸತತ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಿದರು ಎನ್ನಲಾಗಿದೆ. ಶಾರ್ಟ್​​ ಸರ್ಕ್ಯೂಟ್​​ನಿಂದಾಗಿ ಗೋದಾಮಿ​​ಗೆ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.

Scroll to Top